ವಿದಾಯದ ಪಂದ್ಯವನ್ನಾಡಲು ಅವಕಾಶ ನೀಡದಿರುವುದು ಬೇಸರ ತರಿಸಿದೆ: ಎಸ್. ಶ್ರೀಶಾಂತ್

ಇತ್ತೀಚೆಗಷ್ಟೇ ಕೇರಳ ವೇಗಿ ಎಸ್. ಶ್ರೀಶಾಂತ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ಭಾರತದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿದ್ದ ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಸಿಲುಕಿದ ಬಳಿಕ ಅವರ ಕ್ರಿಕೆಟ್ ಕೆರಿಯರ್ ಸಂಪೂರ್ಣ ಹಾಳಾಯಿತು.
ಅಜೀವ ಕ್ರಿಕೆಟ್ ನಿಷೇಧ ಎದುರಿಸಿದ್ದ ಎಸ್. ಶ್ರೀಶಾಂತ್ ಏಳು ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಕೊನೆಗೂ ಗೆದ್ದರು. ಆದ್ರೆ ಅವರು ಮತ್ತೆ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಬೇಕೆಂಬ ಕನಸನ್ನ ನನಸು ಮಾಡಿಕೊಳ್ಳಲು ವಿಫಲರಾದ್ರು.

ಐಪಿಎಲ್‌ನಲ್ಲಿ ಅನ್‌ಸೋಲ್ಡ್ ಆದ ಬಳಿಕ ಕ್ರಿಕೆಟ್ ನಿವೃತ್ತಿ
ಶ್ರೀಶಾಂತ್ ಕೇರಳ ಪರ ಆಡಿದ ನಂತರ ಐಪಿಎಲ್‌ಗೆ ಮರಳಲು ವಿಫಲವಾದ ನಂತರ ನಿವೃತ್ತಿ ಘೋಷಿಸಿದರು. ಗುಜರಾತ್ ವಿರುದ್ಧದ ರಣಜಿ ಪಂದ್ಯಕ್ಕೂ ಮುನ್ನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ನಿವೃತ್ತಿ ಘೋಷಿಸಿದ್ದರು.
ಮೇಘಾಲಯ ವಿರುದ್ಧ ಶ್ರೀಶಾಂತ್ ಕೊನೆಯ ಎರಡು ರಣಜಿ ವಿಕೆಟ್ ಪಡೆದರು. ಮೇಘಾಲಯ ವರ್ಸಸ್ ಕೇರಳ ರಣಜಿ ಪಂದ್ಯದಲ್ಲಿ ಆರ್ಯನ್ ಬೋರಾ ಅವರ ವಿಕೆಟ್ ಪಡೆದ ಬೆನ್ನಲ್ಲೇ ಶ್ರೀಶಾಂತ್ ಮುಂದಿನ ಎಸೆತದಲ್ಲಿ ಚೆಂಗಮ್ ಸಂಗ್ಮಾ ಅವರನ್ನ ಗೋಲ್ಡನ್ ಡಕೌಟ್ ಮಾಡಿದರು. ಈ ಮೂಲಕ ಶ್ರೀ 11.4 ಓವರ್‌ಗಳಲ್ಲಿ ಶ್ರೀಶಾಂತ್ ಎರಡು ಮೇಡನ್ ಸೇರಿದಂತೆ ಕೇವಲ 40 ರನ್ ನೀಡಿ ಎರಡು ವಿಕೆಟ್ ಪಡೆದಿದ್ದರು. ಎರಡನೇ ಇನ್ನಿಂಗ್ಸ್‌ನಲ್ಲಿ ಯಾವುದೇ ವಿಕೆಟ್ ಪಡೆಯದೆ 57 ರನ್ ನೀಡಿದ್ದರು.

ಫೇರ್‌ವೆಲ್ ಮ್ಯಾಚ್ ಸಿಗಲಿಲ್ಲವೆಂಬ ಕೊರಗು ನಿರಂತರ
ತನಗೆ ಅರ್ಹವಾದ ನಿವೃತ್ತಿ ಪಂದ್ಯವನ್ನ ನಿರಾಕರಿಸಲಾಗಿದೆ ಎಂಬ ಆರೋಪವನ್ನು ಶ್ರೀಶಾಂತ್ ಈಗ ಹೊರಹಾಕಿದ್ದಾರೆ. ಗುಜರಾತ್ ವಿರುದ್ಧದ ರಣಜಿ ಟ್ರೋಫಿ ಪಂದ್ಯದ ನಂತರ ನಿವೃತ್ತಿಯಾಗುವುದಾಗಿ ಕೇರಳ ಕ್ರಿಕೆಟ್ ಸಂಸ್ಥೆಗೆ ತಿಳಿಸಿದ್ದರೂ ಪಂದ್ಯಕ್ಕೆ ಪರಿಗಣಿಸಲಾಗಿಲ್ಲ ಎಂದು ಶ್ರೀಶಾಂತ್ ಮನೋರಮಾಗೆ ತಿಳಿಸಿದ್ದಾರೆ.
ರಣಜಿ ಟ್ರೋಫಿಯಲ್ಲಿ ಗುಜರಾತ್ ವಿರುದ್ಧ ಆಡಲು ಎದುರು ನೋಡುತ್ತಿದ್ದೆ. ಈ ಪಂದ್ಯದ ನಂತರ ನಾನು ನಿವೃತ್ತಿ ಘೋಷಿಸುತ್ತೇನೆ ಎಂದು ಪಂದ್ಯ ಪೂರ್ವ ತಂಡದ ಸಭೆಯಲ್ಲೂ ಸ್ಪಷ್ಟಪಡಿಸಿದ್ದೆ, ಅಲ್ಲದೆ ನಾನು ವಿದಾಯ ಪಂದ್ಯಕ್ಕೆ ಅರ್ಹನಾಗಿದ್ದೆ ಎಂದು ಶ್ರೀಶಾಂತ್ ಮನೋರಮಾ ಸಂದರ್ಶನದಲ್ಲಿ ಹೇಳಿದರು.
ಐಪಿಎಲ್ 2022: ಅನ್‌ಸೋಲ್ಡ್ ಆದ ಈ 5 ಪ್ರಮುಖ ಬೌಲರ್‌ಗಳಿಗೆ ಇನ್ನೂ ಇದೆ ಐಪಿಎಲ್ ಪ್ರವೇಶಿಸುವ ಅವಕಾಶ

ಬಹಳ ಸಮಯದಿಂದ ನಿವೃತ್ತಿ ಕುರಿತು ಯೋಚಿಸುತ್ತಿದ್ದ ಶ್ರೀ
ಶ್ರೀಶಾಂತ್ ನಿವೃತ್ತಿ ನಿರ್ಧಾರವನ್ನು ತಕ್ಷಣವೇ ತೆಗೆದುಕೊಂಡಿಲ್ಲ ಮತ್ತು ಅದರ ಬಗ್ಗೆ ಬಹಳ ಸಮಯದಿಂದ ಯೋಚಿಸುತ್ತಿದ್ದೇನೆ ಎಂದು ಹೇಳಿದ್ದಾರೆ.
''ಮೂರು ತಿಂಗಳಿನಿಂದ ನಿವೃತ್ತಿಯ ಬಗ್ಗೆ ಯೋಚಿಸುತ್ತಿದ್ದೆ. ಕೊನೆಗೆ ಅವರು ಕೇರಳದ ಪರವಾಗಿ ಆಡಲು ಮತ್ತೆ ಸಾಧ್ಯವಾಯಿತು. ಆದರೆ ಐಪಿಎಲ್‌ನಲ್ಲಿ ಹರಾಜು ಪಟ್ಟಿಯಿಂದ ಕೈಬಿಡಲಾಯಿತು. ಇದು ತುಂಬಾ ನಿರಾಶಾದಾಯಕವಾಗಿತ್ತು. ಇದರೊಂದಿಗೆ ನಿವೃತ್ತಿಯಾಗಲು ನಿರ್ಧರಿಸಲಾಗಿದೆ'' ಎಂದು ಶ್ರೀಶಾಂತ್ ಹೇಳಿದ್ದಾರೆ.
ಕುಲ್‌ದೀಪ್ ಯಾದವ್‌ನನ್ನ ತಂಡದಿಂದ ಕೈ ಬಿಟ್ಟಿಲ್ಲ: ವಿಶ್ರಾಂತಿ ಅಷ್ಟೇ ಎಂದ ಜಸ್ಪ್ರೀತ್ ಬುಮ್ರಾ

ಕ್ರಿಕೆಟ್ ವೃತ್ತಿಜೀವನವನ್ನ ಮುಂದುವರಿಸುವ ಆಶಯ
ಕ್ರಿಕೆಟಿಗನಾಗಿ ತನ್ನ ವೃತ್ತಿಜೀವನವನ್ನು ಕೊನೆಗೊಳಿಸಿದರೂ ಕ್ರಿಕೆಟ್ ವೃತ್ತಿಜೀವನವನ್ನು ಮುಂದುವರಿಸಲು ಬಯಸುತ್ತೇನೆ ಎಂದು ಶ್ರೀಶಾಂತ್ ಬಹಿರಂಗಪಡಿಸಿದ್ದಾರೆ. ಅವರು ಕೋಚ್ ಮತ್ತು ಕಾಮೆಂಟೇಟರ್ ಆಗಿ ಮುಂದುವರಿಯಲು ಬಯಸುತ್ತೇನೆ ಎಂದು ಹೇಳಿದರು. ಜೊತೆಗೆ ಚಿತ್ರರಂಗದತ್ತ ಹೆಚ್ಚಿನ ಗಮನ ಹರಿಸಲು ಮುಂದಾಗಿದ್ದೇನೆ ಎಂದರು. ಶ್ರೀಶಾಂತ್ ಅವರು ಕನ್ನಡ ಚಿತ್ರವೊಂದರಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ತಮಿಳು ಚಿತ್ರ ಏಪ್ರಿಲ್‌ನಲ್ಲಿ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ.

ಕ್ರಿಕೆಟ್ ಅಕಾಡೆಮಿ ಪ್ರಾರಂಭಕ್ಕೂ ಶ್ರೀ ಯೋಜನೆ
ಕ್ರಿಕೆಟ್ ಅಕಾಡೆಮಿ ಆರಂಭಿಸುವ ಬಗ್ಗೆಯೂ ಶ್ರೀಶಾಂತ್ ಮಾತನಾಡಿದರು. ಕರ್ನಾಟಕದ ಕೊಲ್ಲೂರು ಮೂಕಾಂಬಿಕಾದಲ್ಲಿ ತಮ್ಮ ಮೊದಲ ಕ್ರಿಕೆಟ್ ಅಕಾಡೆಮಿ ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದೆ ಎಂದು ಶ್ರೀಶಾಂತ್ ಹೇಳಿದ್ದಾರೆ. ಈಗಲೂ 132ಕ್ಕೂ ಅಧಿಕ ವೇಗದಲ್ಲಿ ಬೌಲಿಂಗ್ ಮಾಡಬಲ್ಲೆ ಮತ್ತು ಯಾವುದೇ ಯುವ ಆಟಗಾರನ ವೇಗಕ್ಕೆ ತಕ್ಕಂತೆ ನಿಲ್ಲಬಲ್ಲೆ ಎಂದು ಶ್ರೀಶಾಂತ್ ಹೇಳಿದ್ದಾರೆ. ಅವರು ಭಾರತಕ್ಕಾಗಿ ಆಡಿದ ನಂತರ, ಕೇರಳ ಕ್ರಿಕೆಟ್‌ನಿಂದ ಸುಮಾರು 25 ವೇಗಿಗಳು ಹೊರಹೊಮ್ಮಿದರು. ಇಷ್ಟೊಂದು ವೇಗದ ಬೌಲರ್‌ಗಳಿಗೆ ಸ್ಫೂರ್ತಿ ತುಂಬಲು ಸಾಧ್ಯವಾಗಿರುವುದು ಸಂತಸ ತಂದಿದೆ ಎಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications