ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಪಾಯಿಂಟ್ಸ್‌ ಅಪ್‌ಡೇಟ್‌: ಐದನೇ ಸ್ಥಾನಕ್ಕೆ ಕುಸಿದ ಪಾಕಿಸ್ತಾನ

Srilanka and pakistan

ಗಾಲೆಯಲ್ಲಿ ನಡೆದ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮುಕ್ತಾಯದ ನಂತರ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23ರ ಪಾಯಿಂಟ್ಸ್ ಟೇಬಲ್ ಅಪ್‌ಡೇಟ್‌ ಆಗಿದೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಲಂಕಾದ ಪ್ರಬಲ ಹೋರಾಟಕ್ಕೆ ತಣ್ಣಗಾದ ಬಾಬರ್ ಅಜಮ್ ತಂಡವು 246ರನ್‌ಗಳ ಹೀನಾಯ ಹೀನಾಯ ಸೋಲನ್ನ ಕಂಡಿದೆ.

ಶ್ರೀಲಂಕಾ ನೀಡಿದ್ದ 500ಕ್ಕೂ ಅಧಿಕ ಟಾರ್ಗೆಟ್‌ ಬೆನ್ನತ್ತಿದ ಪಾಕಿಸ್ತಾನ ಎರಡನೇ ಇನ್ನಿಂಗ್ಸ್‌ನಲ್ಲಿ 261ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಸೋಲನ್ನ ಒಪ್ಪಿಕೊಂಡಿತು. ಈ ಮೂಲಕ ಎರಡು ಪಂದ್ಯಗಳ ಟೆಸ್ಟ್ ಸರಣಿಯು 1-1ರಿಂದ ಸಮಬಲಗೊಂಡಿದೆ.

ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡ ಶ್ರೀಲಂಕಾ

ಮೊದಲ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡ ಶ್ರೀಲಂಕಾ

ಗಾಲೆಯಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಶ್ರೀಲಂಕಾ ಮೊದಲ ಇನ್ನಿಂಗ್ಸ್‌ 378ರನ್ ಕಲೆಹಾಕಿತು. ಓಶಾದ ಫರ್ನಾಂಡೊ, ದಿನೇಶ್ ಚಾಂಡಿಮಲ್, ಡಿಕ್ವೆಲ್ಲಾ ಅರ್ಧಶತಕದ ನೆರವಿನಿಂದ ಶ್ರೀಲಂಕಾ 378ರನ್ ದಾಖಲಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಪಾಕ್ ಕೇವಲ 261ರನ್‌ಗಳಿಗೆ ಆಲೌಟ್ ಆಯಿತು ಮತ್ತು ಪಾಕ್ ಪರ ಆಘಾ ಸಲ್ಮಾನ್ 62ರನ್‌ಗಳಿಸಿದ್ದೇ ಹೆಚ್ಚು.

ಮೊದಲ ಇನ್ನಿಂಗ್ಸ್‌ನಲ್ಲಿ 147ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ ಲಂಕಾ 360ರನ್‌ಗಳನ್ನ ಸೇರಿಸಿತು. ಈ ಮೂಲಕ ಪಾಕಿಸ್ತಾನಕ್ಕೆ ಗುರಿ ಮುಟ್ಟಲಾಗ 507ರನ್‌ಗಳ ಟಾರ್ಗೆಟ್ ನೀಡಿತು. ಮೊದಲ ಟೆಸ್ಟ್‌ನಲ್ಲಿ 342ರನ್‌ ಚೇಸ್‌ ಮಾಡಿದ್ದ ಪಾಕಿಸ್ತಾನ, ಎರಡನೇ ಟೆಸ್ಟ್‌ನಲ್ಲಿ ಅಷ್ಟು ದೊಡ್ಡ ಮೊತ್ತವನ್ನ ಕಲೆಹಾಕುವಲ್ಲಿ ಸಾಧ್ಯವಾಗದೆ 261ರನ್‌ಗಳಿಗೆ ಆಲೌಟ್‌ ಆಗಿದೆ. ಅಂತಿಮ ದಿನದಾಟದಲ್ಲಿ ಬಾಬರ್ ಅಜಮ್ 81ರನ್‌ಗಳ ಏಕಾಂಗಿ ಹೋರಾಟ ವ್ಯರ್ಥಗೊಂಡಿದೆ. ಆತಿಥೇಯ ಲಂಕಾ ಸರಣಿಯನ್ನ 1-1ರಿಂದ ಸಮಬಲಗೊಳಿಸಿದೆ.

ವಿಂಡೀಸ್ ವಿರುದ್ಧ 3-0 ಅಂತರದಲ್ಲಿ ಸರಣಿ ಗೆಲುವು: ಪಾಕ್‌ ವಿರುದ್ಧ ಅಂತರ ಕಾಯ್ದುಕೊಂಡ ಟೀಂ ಇಂಡಿಯಾ

ಪಾಯಿಂಟ್ಸ್‌ ಟೇಬಲ್‌ನಲ್ಲಿ ಕುಸಿತ ಕಂಡ ಪಾಕಿಸ್ತಾನ

ಪಾಯಿಂಟ್ಸ್‌ ಟೇಬಲ್‌ನಲ್ಲಿ ಕುಸಿತ ಕಂಡ ಪಾಕಿಸ್ತಾನ

ಎರಡನೇ ಟೆಸ್ಟ್ ಪಂದ್ಯದಲ್ಲಿ 246ರನ್‌ಗಳ ಸೋಲಿನ ಮೂಲಕ ಪಾಕಿಸ್ತಾನ ಪಾಯಿಂಟ್ಸ್ ಟೇಬಲ್‌ನಲ್ಲಿ ಐದನೇ ಸ್ಥಾನಕ್ಕೆ ಕುಸಿತ ಕಂಡಿದೆ. ಮತ್ತೊಂದೆಡೆ ಭರ್ಜರಿ ಗೆಲುವಿನೊಂದಿಗೆ ಶ್ರೀಲಂಕಾ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದಿದೆ. ಇದರ ಮಧ್ಯೆ ಭಾರತವು ನಾಲ್ಕನೇ ಸ್ಥಾನದಲ್ಲಿ ಉಳಿದುಕೊಂಡಿದ್ದು, 52.08 ಪರ್ಸಂಟೇಜ್‌ ಹೊಂದಿದೆ.

ಇನ್ನು ಮೊದಲೆರಡು ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಭದ್ರವಾಗಿದ್ದು, ಪಾಯಿಂಟ್ಸ್‌ನಲ್ಲಿ ಕಾಂಗರೂ ಪಡೆ ಎಲ್ಲರಿಗಿಂತ ಮುಂದಿದೆ.

ಶತಕ ಗಳಿಸದೆಯೇ ಸಚಿನ್, ಸೆಹ್ವಾಗ್ ಸಾಲಿಗೆ ಸೇರಿದ ಶುಬ್ಮನ್ ಗಿಲ್!

ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಪಾಯಿಂಟ್ಸ್‌

ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಪಾಯಿಂಟ್ಸ್‌

1. ದಕ್ಷಿಣ ಆಫ್ರಿಕಾ: 71.43% (60 ಪಾಯಿಂಟ್ಸ್‌)

2. ಆಸ್ಟ್ರೇಲಿಯಾ: 70.00% (84 ಪಾಯಿಂಟ್ಸ್‌)

3. ಶ್ರೀಲಂಕಾ: 53.33% (64 ಪಾಯಿಂಟ್ಸ್‌)

4. ಭಾರತ: 52.08% (75 ಪಾಯಿಂಟ್ಸ್‌)

5. ಪಾಕಿಸ್ತಾನ: 51.85% (56 ಪಾಯಿಂಟ್ಸ್‌)

6. ವೆಸ್ಟ್ ಇಂಡೀಸ್: 50.00% (54 ಪಾಯಿಂಟ್ಸ್‌)

7. ಇಂಗ್ಲೆಂಡ್: 33.33% (64 ಪಾಯಿಂಟ್ಸ್‌)

8. ನ್ಯೂಜಿಲೆಂಡ್: 25.93% (28 ಪಾಯಿಂಟ್ಸ್‌)

9. ಬಾಂಗ್ಲಾದೇಶ: 13.33% (16 ಪಾಯಿಂಟ್ಸ್‌)

ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್

ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್

ಶ್ರೀಲಂಕಾ ಪ್ಲೇಯಿಂಗ್ ಇಲೆವೆನ್
ದಿಮುತ್ ಕರುಣಾರತ್ನೆ (ನಾಯಕ), ಓಶಾದ ಫೆರ್ನಾಂಡೊ, ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ದಿನೇಶ್ ಚಾಂಡಿಮಲ್, ಧನಂಜಯ ಡಿ ಸಿಲ್ವಾ, ನಿರೋಶನ್ ಡಿಕ್ವೆಲ್ಲಾ (ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಪ್ರಭಾತ್ ಜಯಸೂರ್ಯ, ದುನಿತ್ ವೆಲ್ಲಲಾಗೆ, ಅಸಿತ ಫೆರ್ನಾಂಡೊ

ಬೆಂಚ್: ಲಕ್ಷಿತಾ ಮಾನಸಿಂಘೆ, ಕಸುನ್ ರಜಿತ, ವಿಶ್ವ ಫೆರ್ನಾಂಡೊ, ಜೆಫ್ರಿ ವಾಂಡರ್ಸೆ, ಕಮಿಂದು ಮೆಂಡಿಸ್, ಪಾತುಂ ನಿಸ್ಸಾಂಕ, ದಿಲ್ಶಾನ್ ಮಧುಶಂಕ

ಪಾಕಿಸ್ತಾನ ಪ್ಲೇಯಿಂಗ್ ಇಲೆವೆನ್
ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್‌), ಫವಾದ್ ಆಲಂ, ಅಘಾ ಸಲ್ಮಾನ್, ಮೊಹಮ್ಮದ್ ನವಾಜ್, ನೌಮನ್ ಅಲಿ, ಯಾಸಿರ್ ಶಾ, ಹಸನ್ ಅಲಿ, ನಸೀಮ್ ಶಾ

ಬೆಂಚ್: ಅಜರ್ ಅಲಿ, ಫಹೀಮ್ ಅಶ್ರಫ್, ಸರ್ಫರಾಜ್ ಅಹ್ಮದ್, ಶಾನ್ ಮಸೂದ್, ಸೌದ್ ಶಕೀಲ್, ಹ್ಯಾರಿಸ್ ರೌಫ್

Story first published: Friday, July 29, 2022, 9:43 [IST]
Other articles published on Jul 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X