Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ICC ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌: 100 ವಿಕೆಟ್ ಪಡೆದ ವಿಶ್ವದ ಮೊಟ್ಟ ಮೊದಲ ಬೌಲರ್ ಆರ್. ಅಶ್ವಿನ್

R Ashwin

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯ ಬಳಿಕ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ವಿಶೇಷ ದಾಖಲೆಯೊಂದನ್ನ ತನ್ನ ಹೆಸರಿಗೆ ಸೇರಿಸಿಕೊಂಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ (WTC) ಇತಿಹಾಸದಲ್ಲಿ 100 ವಿಕೆಟ್ ಪಡೆದ ಮೊಟ್ಟ ಮೊದಲ ಬೌಲರ್ ಎಂಬ ಸಾಧನೆಯನ್ನ ಅಶ್ವಿನ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ 35 ವರ್ಷದ ರವಿಚಂದ್ರನ್ ಅಶ್ವಿನ್ ಈ ಮೈಲುಗಲ್ಲನ್ನ ತಲುಪಿದ್ದಾರೆ. ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಶ್ರೀಲಂಕಾವನ್ನ ಮೂರೇ ದಿನದಲ್ಲಿ ಸೋಲಿಸುವ ಮೂಲಕ 238 ರನ್‌ಗಳ ಬೃಹತ್ ಗೆಲುವು ಸಾಧಿಸಿತು. ಇದು ರೋಹಿತ್ ಶರ್ಮಾ ನಾಯಕತ್ವದ ಮೊದಲ ಟೆಸ್ಟ್ ಸರಣಿಯಾಗಿದ್ದು, 2-0 ಅಂತರದಲ್ಲಿ ಟೀಂ ಇಂಡಿಯಾ ಸರಣಿ ಗೆದ್ದಿದೆ.

ಟೆಸ್ಟ್ ಸರಣಿಯಲ್ಲಿ ಗರಿಷ್ಠ ವಿಕೆಟ್ ಟೇಕರ್ ಅಶ್ವಿನ್

ಟೆಸ್ಟ್ ಸರಣಿಯಲ್ಲಿ ಗರಿಷ್ಠ ವಿಕೆಟ್ ಟೇಕರ್ ಅಶ್ವಿನ್

ಆರ್. ಅಶ್ವಿನ್ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗರಿಷ್ಠ ವಿಕೆಟ್ ಟೇಕರ್ ಆಗಿ ಗುರುತಿಸಿಕೊಂಡರು. ಶ್ರೀಲಂಕಾ ವಿರುದ್ಧ 4 ಇನ್ನಿಂಗ್ಸ್‌ಗಳಲ್ಲಿ ಒಟ್ಟು 12 ವಿಕೆಟ್ ಕಬಳಿಸುವ ಮೂಲಕ ಮಿಂಚಿದರು. 15.08ರ ಬೌಲಿಂಗ್‌ ಸರಾಸರಿಯಲ್ಲಿ ವಿಕೆಟ್ ಪಡೆದಿದ್ದು, 2.61 ಎಕಾನಮಿಯಲ್ಲಿ ಬೌಲಿಂಗ್ ಮಾಡಿದ್ದಾರೆ. ಇವರ ಬೆಸ್ಟ್ ಬೌಲಿಂಗ್ 4/47 ಆಗಿದೆ.

ಅಶ್ವಿನ್ ಬೆಂಗಳೂರು ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದ್ರು. ವಿಶ್ವದ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದವರ ಸಾಲಿನಲ್ಲಿ ದಕ್ಷಿಣ ಆಫ್ರಿಕಾದ ಡೇಲ್‌ ಸ್ಟೇನ್‌ರನ್ನ ಹಿಂದಿಕ್ಕಿ 8ನೇ ಸ್ಥಾನಕ್ಕೇರಿದ್ದಾರೆ.

ಪ್ರಸ್ತುತ ರವಿಚಂದ್ರನ್ ಅಶ್ವಿನ್ 86 ಟೆಸ್ಟ್ ಪಂದ್ಯಗಳಲ್ಲಿ ಬರೋಬ್ಬರಿ 442 ವಿಕೆಟ್ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 800, ಶೇನ್ ವಾರ್ನ್ 708, ಜೇಮ್ಸ್ ಆ್ಯಂಡರ್ಸನ್ 640, ಅನಿಲ್ ಕುಂಬ್ಳೆ 619, ಗ್ಲೆನ್ ಮೆಗ್ರಾಥ್ 563, ಸ್ಟುವರ್ಟ್ ಬ್ರಾಡ್ 537, ಕರ್ಟ್ಲಿ ವಾಶ್ 519 ವಿಕೆಟ್ ಪಡೆದಿದ್ದಾರೆ. ಇನ್ನು ಪ್ರಸ್ತುತ ಆಡುತ್ತಿರುವ ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸಸ್ ಹಾಗೂ ಸ್ಟುವರ್ಟ್ ಬ್ರಾಡ್‌ ನಂತರದ ಸ್ಥಾನದಲ್ಲಿ ಅಶ್ವಿನ್ ಇದ್ದಾರೆ.

ಐಪಿಎಲ್ 2022: ಪುನೀತ್ ಜೇಮ್ಸ್ ಅವತಾರದಲ್ಲಿ ಮಿಂಚಿದ ಆರ್‌ಸಿಬಿ ನೂತನ ನಾಯಕ ಫಾಫ್ ಡು ಪ್ಲೆಸಿಸ್

WTC ಇತಿಹಾಸದಲ್ಲಿ 100 ವಿಕೆಟ್ ಪಡೆದ ಮೊದಲ ಬೌಲರ್

WTC ಇತಿಹಾಸದಲ್ಲಿ 100 ವಿಕೆಟ್ ಪಡೆದ ಮೊದಲ ಬೌಲರ್

ರವಿಚಂದ್ರನ್ ಅಶ್ವಿನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ 100 ವಿಕೆಟ್ ಪಡೆದ ಮೊದಲ ಎಂಬ ಕೀರ್ತಿಗೆ ಪಾರ್ತರಾಗಿದ್ದಾರೆ. ಚೊಚ್ಚಲ ವಿಶ್ವ ಚಾಂಪಿಯನ್‌ಶಿಪ್ ಸೈಕಲ್‌ನಲ್ಲಿ ಅಶ್ವಿನ್ 71 ವಿಕೆಟ್ ಪಡೆದಿದ್ದರು.

ಪ್ರಸ್ತುತ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ 2021-23 ಸೈಕಲ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದಿರುವ ರವಿಚಂದ್ರನ್ ಅಶ್ವಿನ್, ಡಬ್ಲ್ಯುಟಿಸಿ ಇತಿಹಾಸದಲ್ಲಿ 29 ವಿಕೆಟ್‌ ಗಳನ್ನ ಕಬಳಿಸಿ ಒಟ್ಟು 100 ವಿಕೆಟ್ ಪಡೆದಿದ್ದಾರೆ.

ಅಶ್ವಿನ್ ಕೇವಲ 21 ಟೆಸ್ಟ್ ಪಂದ್ಯಗಳಲ್ಲಿ 100 ವಿಕೆಟ್ ಪಡೆದಿದ್ದು, 19.66ರ ಬೌಲಿಂಗ್ ಸರಾಸರಿ ಮತ್ತು 2.50 ಎಕಾನಮಿ ಹೊಂದಿದ್ದಾರೆ. ಇದರ ಜೊತೆಗೆ 4 ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ.

ಐಪಿಎಲ್ 2022: ಬಾಂಗ್ಲಾದೇಶ ಟೆಸ್ಟ್ ಸರಣಿಗೆ ಕೈ, ಐಪಿಎಲ್‌ಗೆ ಜೈ ಎಂದ ದ. ಆಫ್ರಿಕಾ ಕ್ರಿಕೆಟಿಗರು!

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್

100-ರವಿಚಂದ್ರನ್ ಅಶ್ವಿನ್
93- ಪ್ಯಾಟ್ ಕಮ್ಮಿನ್ಸ್
83- ಸ್ಟುವರ್ಟ್ ಬ್ರಾಡ್
80- ಟಿಮ್ ಸೌಥಿ
75- ನಾಥನ್ ಲಿಯಾನ್
74- ಜಸ್ಪ್ರೀತ್ ಬುಮ್ರಾ
70- ಮೊಹಮ್ಮದ್ ಶಮಿ
68- ಶಾಹೀನ್ ಶಾ ಆಫ್ರಿದಿ
68- ಕಗಿಸೊ ರಬಾಡ
66- ಮಿಚೆಲ್ ಸ್ಟಾರ್ಕ್

ಪ್ರತಿ ಬಾಲ್ ಎಸೆಯಲು ಈ ಬೌಲರ್‌ಗಳು ಗಳಿಸುವ ಹಣ ಎಷ್ಟು | Oneindia Kannada

Story first published: Wednesday, March 16, 2022, 11:51 [IST]
Other articles published on Mar 16, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+