
ಹಾರ್ದಿಕ್ ಪಾಂಡ್ಯ ಆಲ್‌ರೌಂಡರ್ ಆಟ , ಸರಣಿ ಶ್ರೇಷ್ಟ
ಮೂರನೇ ಏಕದಿನ ಪಂದ್ಯದಲ್ಲಿ ರಿಷಭ್ ಪಂತ್ ಅಜೇಯ ಶತಕ ಸಿಡಿಸಿ ತಂಡವನ್ನ ಗೆಲುವಿನ ದಡ ತಲುಪಿಸಿದ್ರೆ, ಪಂತ್ ಜೊತೆಗೂಡಿದ ಹಾರ್ದಿಕ್ ಪಾಂಡ್ಯ ಕೂಡ ಜವಾಬ್ದಾರಿಯುತ ಆಟವಾಡಿದರು. 55 ಎಸೆತಗಳಲ್ಲಿ 71ರನ್ ಕಲೆಹಾಕಿದ ಪಾಂಡ್ಯ ಇನ್ನಿಂಗ್ಸ್‌ನಲ್ಲಿ 10 ಬೌಂಡರಿಗಳಿದ್ದವು. ಐದನೇ ವಿಕೆಟ್‌ಗೆ 133ರನ್‌ಗಳ ಜೊತೆಯಾಟವಾಡಿದ ಈ ಜೋಡಿ ಭರ್ಜರಿ ಪ್ರದರ್ಶನ ನೀಡಿತು.
ಇದಕ್ಕೂ ಮೊದಲು ಬೌಲಿಂಗ್‌ನಲ್ಲೂ ಮಿಂಚಿದ್ದ ಹಾರ್ದಿಕ್ ಏಕದಿನ ವೃತ್ತಿಜೀವನದಲ್ಲಿ ಬೆಸ್ಟ್ ಬೌಲಿಂಗ್ ಪ್ರದರ್ಶನ ನೀಡಿದರು. 7 ಓವರ್‌ಗಳಲ್ಲಿ 3 ಮೇಡನ್ ಓವರ್ ಸಹಿತ 24ರನ್ ನೀಡಿ 4 ಪ್ರಮುಖ ನಾಲ್ಕು ವಿಕೆಟ್ ಕಬಳಿಸಿದರು. ಜೇಸನ್ ರಾಯ್, ಬೆನ್ ಸ್ಟೋಕ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಜೋಸ್ ಬಟ್ಲರ್‌ರಂತಹ ಅಪಾಯಕಾರಿ ಇಂಗ್ಲೆಂಡ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳನ್ನು ಔಟ್ ಮಾಡುವಲ್ಲಿ ಸಮರ್ಥರಾದರು. ಜೊತೆಗೆ ಇಂಗ್ಲೆಂಡ್ ಸ್ಕೋರ್‌ಬೋರ್ಡ್ ಅನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದ್ರು.
ಈ ಏಕದಿನ ಸರಣಿಯಲ್ಲಿ 100 ರನ್ ಹಾಗೂ 6 ವಿಕೆಟ್ ಪಡೆದ ಹಾರ್ದಿಕ್ ಪಾಂಡ್ಯ ಸರಣಿ ಶ್ರೇಷ್ಠರಾದರು
ರವಿಶಾಸ್ತ್ರಿಗೆ ಕ್ರಿಕೆಟ್ ಮೈದಾನದಲ್ಲೇ ಶಾಂಪೈನ್ ಬಾಟಲ್ ಗಿಫ್ಟ್ ನೀಡಿದ ರಿಷಭ್ ಪಂತ್: Video

ಹಾರ್ದಿಕ್ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಕಪಿಲ್ ದೇವ್ ದಾಖಲೆ ಮುರಿಯಬಹುದು
ಟೀಂ ಇಂಡಿಯಾ ಮಾಜಿ ಆಟಗಾರ ವಾಸಿಂ ಜಾಫರ್ ಪ್ರಕಾರ ಹಾರ್ದಿಕ್ ಪಾಂಡ್ಯ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಕಪಿಲ್ ದೇವ್ ದಾಖಲೆಯನ್ನ ಮುರಿಯಬಹುದು ಎಂದು ಅಂದಾಜಿಸಿದ್ದಾರೆ.
ಹಾರ್ದಿಕ್ ತಮ್ಮ ಪ್ರದರ್ಶನವನ್ನು ಹೀಗೆಯೇ ಐದು ವರ್ಷಗಳ ಕಾಲ ಮುಂದುವರಿಸಿದ್ರೆ, ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ (ಏಕದಿನ ಫಾರ್ಮೆಟ್) ಕಪಿಲ್ ದಾಖಲೆ ಮುರಿಯುವ ಅವಕಾಶವಿದೆ ಎಂದಿದ್ದಾರೆ. ಕಳೆದ ಟಿ20 ವಿಶ್ವಕಪ್‌ನಲ್ಲಿ ಹೀನಾಯ ಪ್ರದರ್ಶನ ತೋರಿದ ಬಳಿಕ ಬರೋಡಾ ಆಲ್‌ರೌಂಡರ್ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ.
ಐಪಿಎಲ್ 2022ರ ಸೀಸನ್‌ನಲ್ಲಿ ಗುಜರಾತ್ ಟೈಟನ್ಸ್ ತಂಡವನ್ನ ಮುನ್ನಡೆಸಿದ ಪಾಂಡ್ಯ, ಚೊಚ್ಚಲ ಸೀಸನ್‌ನಲ್ಲೇ ಚಾಂಪಿಯನ್ ಆಗಿ ಹೊರಹೊಮ್ಮಿದರು.
SL vs PAK 1st Test: ಶ್ರೀಲಂಕಾ ಬ್ಯಾಟಿಂಗ್ ಅಬ್ಬರ, 333 ರನ್‌ಗಳ ಮುನ್ನಡೆ

ಹಾರ್ದಿಕ್ ಪಾಂಡ್ಯ ಇನ್ನೂ 5-7 ವರ್ಷಗಳ ಕಾಲ ಹೀಗೆಯೇ ಬೌಲಿಂಗ್ ಮಾಡಬೇಕು
ಕಪಿಲ್ ದೇವ್ ದಾಖಲೆ ಮುರಿಯು ಅವಕಾಶ ಹಾರ್ದಿಕ್ ಪಾಂಡ್ಯಗೆ ಇದೆಯೇ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಪೋ ಪ್ರಶ್ನೆಗೆ ಉತ್ತರಿಸಿದ ವಾಸಿಂ ಜಾಫರ್
"ಹೌದು. ಅವರು ಖಂಡಿತವಾಗಿಯೂ ಸಾಮರ್ಥ್ಯವನ್ನು ಹೊಂದಿದ್ದಾರೆ (ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿಯುವ). ಕಪಿಲ್ ದೇವ್ ಬಹಳ ದೊಡ್ಡ ಕ್ರಿಕೆಟಿಗ. ಇಷ್ಟು ಬೇಗ ತೀರ್ಮಾನಕ್ಕೆ ಬರುವುದು ಕಷ್ಟ. ಆದರೆ ಅವನು ಹೀಗೆಯೇ ಬೌಲಿಂಗ್ ಮಾಡುತ್ತಿದ್ದರೆ ಸಾಧ್ಯವಾಗಬಹುದು. ಅವರು ಈಗಾಗಲೇ ಬ್ಯಾಟಿಂಗ್ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ಇನ್ನೂ 5-7 ವರ್ಷಗಳ ಕಾಲ ಆಡಿದರೆ, ಕಪಿಲ್ ಅವರ ದಾಖಲೆಯನ್ನು ತಲುಪಬಹುದು'' ಎಂದು ಜಾಫರ್ ಹೇಳಿದ್ದಾರೆ.
IND vs ENG: ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದು ಧೋನಿ, ಅಜರುದ್ದೀನ್ ಸಾಲಿಗೆ ಸೇರಿದ ರೋಹಿತ್ ಶರ್ಮಾ

ಹಾರ್ದಿಕ್ ಪಾಂಡ್ಯ ಮತ್ತು ಕಪಿಲ್ ದೇವ್ ಅಂಕಿ-ಅಂಶಗಳ ಹೋಲಿಕೆ
ಏಕದಿನ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಕಪಿಲ್ ದೇವ್ ಅಂಕಿ ಅಂಶಗಳನ್ನು ಇಲ್ಲಿ ಹೋಲಿಕೆ ಮಾಡಿ ತಿಳಿಸಲಾಗಿದೆ.
ಹಾರ್ದಿಕ್ ಪಾಂಡ್ಯ ಇದುವರೆಗೆ 66 ಏಕದಿನ ಪಂದ್ಯಗಳಲ್ಲಿ 33.80 ಸರಾಸರಿಯಲ್ಲಿ 1386 ರನ್ ಕಲೆಹಾಕಿದ್ದಾರೆ. ಜೊತೆಗೆ ಬೌಲಿಂಗ್‌ನಲ್ಲಿ 38.69ರ ಸರಾಸರಿಯಲ್ಲಿ 63 ವಿಕೆಟ್ ಪಡೆದಿದ್ದಾರೆ. ಇವರ ವೃತ್ತಿ ಜೀವನದ ಬೆಸ್ಟ್ 7 ಓವರ್‌ಗಳಲ್ಲಿ 3 ಮೇಡನ್ ಓವರ್ ಸಹಿತ 24ರನ್ ನೀಡಿ 4 ವಿಕೆಟ್ ಕಬಳಿಸಿದ್ದಾರೆ.
ಕಪಿಲ್ ದೇವ್ 225 ಏಕದಿನ ಪಂದ್ಯಗಳಲ್ಲಿ 27.45ರ ಬೌಲಿಂಗ್ ಸರಾಸರಿಯಲ್ಲಿ 253 ವಿಕೆಟ್ ಕಬಳಿಸಿದ್ದು, 23.79ರ ಬ್ಯಾಟಿಂಗ್ ಸರಾಸರಿಯಲ್ಲಿ 3,783ರನ್ ಕಲೆಹಾಕಿದ್ದಾರೆ.
ಆದ್ರೆ ಕಪಿಲ್ ದೇವ್ ದಾಖಲೆ ಮುರಿಯಲು ಹಾರ್ದಿಕ್ ಇನ್ನೂ ಬಹಳ ದೂರ ಸಾಗಬೇಕಾಗಿದೆ. ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ತೆಗೆದುಕೊಂಡಿರುವ ಹಾರ್ದಿಕ್ ಟಿ20 ಸರಣಿಗೆ ಮರಳಲಿದ್ದಾರೆ.


Click it and Unblock the Notifications












