For Quick Alerts
ALLOW NOTIFICATIONS  
For Daily Alerts
 

SL vs PAK 1st Test: ಶ್ರೀಲಂಕಾ ಬ್ಯಾಟಿಂಗ್ ಅಬ್ಬರ, 333 ರನ್‌ಗಳ ಮುನ್ನಡೆ

Srilanka vs pakistan test

ಗಾಲೆ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯರು ಬೊಂಬಾಟ್ ಬ್ಯಾಟಿಂಗ್ ಪ್ರದರ್ಶನದ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದಾರೆ. ಎರಡನೇ ಇನ್ನಿಂಗ್ಸ್‌ನಲ್ಲಿ ಕುಸಾಲ್ ಮೆಂಡೀಸ್, ದಿನೇಶ್ ಚಾಂಡಿಮಲ್ ಬ್ಯಾಟಿಂಗ್ ನೆರವಿನಿಂದ 300ಕ್ಕೂ ಲೀಡ್ ದಾಖಲಿಸಿದೆ.

ಎರಡನೇ ದಿನದಾಟದಂತ್ಯಕ್ಕೆ ನಾಯಕ ದಿಮುತ್ ಕರುಣರತ್ನೆ ವಿಕೆಟ್ ಕಳೆದುಕೊಂಡು 40ರನ್‌ಗಳ ಮುನ್ನಡೆ ಸಾಧಿಸಿದ್ದ ಶ್ರೀಲಂಕಾ ತಂಡವು ಮೂರನೇ ದಿನದಾಟದಂತ್ಯದಲ್ಲಿ 9 ವಿಕೆಟ್ ನಷ್ಟಕ್ಕೆ 329 ರನ್ ಕಲೆಹಾಕಿದ್ದು 333ರನ್‌ಗಳ ಮುನ್ನಡೆಯನ್ನು ಪಡೆದುಕೊಂಡಿದೆ.

ಫರ್ನಾಂಡೊ , ಕುಸಾಲ್ ಮೆಂಡೀಸ್ ಉತ್ತಮ ಜೊತೆಯಾಟ

ಮೂರನೇ ದಿನದಾಟದಲ್ಲಿ ಆರಂಭದಲ್ಲಿಯೇ ವಿಕೆಟ್ ಕಳೆದುಕೊಳ್ಳುವ ಮೂಲಕ ಎರಡನೇ ಇನ್ನಿಂಗ್ಸ್ ಮುಂದುವರಿಸಿದ ಶ್ರೀಲಂಕಾಗೆ ಓಪನರ್ ಓಶಾಡ ಫರ್ನಾಂಡೊ ಮತ್ತು ಕುಸಾಲ್ ಮೆಂಡೀಸ್ ಆಧಾರವಾದ್ರು. ಮೊಹಮ್ಮದ್ ನವಾಜ್ ಬೌಲಿಂಗ್‌ನಲ್ಲಿ 7 ರನ್‌ಗಳಿಸಿದ್ದ ರಜಿತ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು.

ಮೂರನೇ ವಿಕೆಟ್‌ಗೆ ಉತ್ತಮ ಜೊತೆಯಾಟವಾಡುವ ಮೂಲಕ ಫರ್ನಾಂಡೊ ಮತ್ತು ಕುಸಾಲ್ ಮೆಂಡೀಸ್ ತಂಡದ ಮೊತ್ತವನ್ನ ನೂರರ ಗಡಿದಾಟಿಸಿದ್ರು. ಮಧ್ಯಾಹ್ನ ಊಟದ ವಿರಾಮದ ವೇಳೆಗೆ ಲಂಕಾ ಎರಡು ವಿಕೆಟ್ ನಷ್ಟಕ್ಕೆ 132ರನ್ ಕಲೆಹಾಕಿತು.

ಊಟದ ವಿರಾಮದ ಬಳಿಕ 64 ರನ್‌ಗಳಿಸಿದ್ದ ಒಶಾದ ಫರ್ನಾಂಡೊ ಯಾಸಿರ್ ಶಾಗೆ ವಿಕೆಟ್ ಒಪ್ಪಿಸಿದ್ರು. ಇದ್ರ ಬೆನ್ನಲ್ಲೇ ಏಂಜೆಲೊ ಮ್ಯಾಥ್ಯೂಸ್ ಆಟ 9ರನ್‌ಗೆ ಕೊನೆಗೊಂಡಿತು. ಮೊಹಮ್ಮದ್ ನವಾಜ್ ಬೌಲಿಂಗ್‌ನಲ್ಲಿ ಮ್ಯಾಥ್ಯೂಸ್ ಬಾಬರ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು. ಇದರ ಜೊತೆಗೆ ಉತ್ತಮವಾಗಿ ಆಡ್ತಿದ್ದ ಕುಸಾಲ್ ಮೆಂಡೀಸ್ 76ರನ್‌ಗೆ ಯಾಸಿರ್ ಸ್ಪಿನ್ ದಾಳಿಯಲ್ಲಿ ಬೌಲ್ಡ್ ಆದ್ರು.

ದಿನೇಶ್ ಚಾಂಡಿಮಲ್ ತಾಳ್ಮೆಯುತ ಆಟ, ಶ್ರೀಲಂಕಾಗೆ ಆಧಾರ

ಶ್ರೀಲಂಕಾ ಪರ ಭರ್ಜರಿ ಫಾರ್ಮ್ ಮುಂದುವರಿಸಿರುವ ದಿನೇಶ್ ಚಾಂಡಿಮಲ್ ಲಂಕಾ ತಂಡಕ್ಕೆ ಆಧಾರವಾಗಿದ್ದಾರೆ. ದಿನದಾಟದ ಅಂತ್ಯದವರೆಗೂ ಅಜೇಯರಾಗಿ ಉಳಿದ ಚಾಂಡಿಮಲ್ 121 ಎಸೆತಗಳಲ್ಲಿ ಅಜೇಯ 86ರನ್ ಕಲೆಹಾಕಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 23ನೇ ಅರ್ಧಶತಕ ದಾಖಲಿಸಿದ ಚಾಂಡಿಮಲ್ ಪಂದ್ಯದಲ್ಲಿ ಎರಡನೇ ಅರ್ಧಶತಕ ದಾಖಲಿಸಿದರು.

ಮೂರನೇ ದಿನದಾಟದಂತ್ಯಕ್ಕೆ ಶ್ರೀಲಂಕಾ 9 ವಿಕೆಟ್ ನಷ್ಟಕ್ಕೆ 329 ರನ್ ಕಲೆಹಾಕಿದೆ ಜೊತೆಗೆ 333ರನ್‌ಗಳ ಭರ್ಜರಿ ಮುನ್ನಡೆ ಪಡೆದುಕೊಂಡಿದೆ. ಪಾಕಿಸ್ತಾನ ಪರ ಮೊಹಮ್ಮದ್ ನವಾಜ್ 28 ಓವರ್‌ಗಳಲ್ಲಿ 88ರನ್ ನೀಡಿ 5 ವಿಕೆಟ್ ಕಬಳಿಸಿದರು. ಯಾಸಿರ್ ಶಾ 3, ಹಸನ್ ಅಲಿ 1 ವಿಕೆಟ್ ಪಡೆದರು.

ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡದ ಪ್ಲೇಯಿಂಗ್ ಇಲೆವೆನ್

ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡದ ಪ್ಲೇಯಿಂಗ್ ಇಲೆವೆನ್

ಶ್ರೀಲಂಕಾ:
ಓಷಾದ ಫೆರ್ನಾಂಡೋ, ದಿಮುತ್ ಕರುಣಾರತ್ನೆ(ನಾಯಕ), ಕುಸಾಲ್ ಮೆಂಡಿಸ್, ಏಂಜೆಲೊ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ದಿನೇಶ್ ಚಾಂಡಿಮಲ್, ನಿರೋಶನ್ ಡಿಕ್ವೆಲ್ಲಾ(ವಿಕೆಟ್ ಕೀಪರ್), ರಮೇಶ್ ಮೆಂಡಿಸ್, ಮಹೀಶ್ ತೀಕ್ಷಣ, ಪ್ರಭಾತ್ ಜಯಸೂರ್ಯ, ಕಸುನ್ ರಜಿತಾ

ಬೆಂಚ್: ಪಾತುಮ್ ನಿಸ್ಸಾಂಕ, ಕಮಿಂದು ಮೆಂಡಿಸ್, ಅಸಿತ ಫೆರ್ನಾಂಡೋ, ವಿಶ್ವ ಫೆರ್ನಾಂಡೋ, ಜೆಫ್ರಿ ವಾಂಡರ್ಸೆ, ದುನಿತ್ ವೆಲ್ಲಲಾಗೆ, ದಿಲ್ಶಾನ್ ಮಧುಶಂಕ

ಪಾಕಿಸ್ತಾನ:
ಪಾಕಿಸ್ತಾನ ತಂಡವು ಬಾಬರ್ ಅಜಮ್ ನಾಯಕತ್ವದಲ್ಲಿ ಮುನ್ನಡೆಯುತ್ತಿದ್ದು, ಪ್ರಮುಖ ಸ್ಪಿನ್ನರ್ ಯಾಸಿರ್ ಶಾ ತಂಡಕ್ಕೆ ಕಂಬ್ಯಾಕ್ ಆಗಿರುವುದು ಬಲ ಹೆಚ್ಚಿಸಿದೆ. ತಂಡದ ಪ್ಲೇಯಿಂಗ್ ಇಲೆವೆನ್ ಈ ಕೆಳಗಿದೆ.

ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಅಜರ್ ಅಲಿ, ಬಾಬರ್ ಅಜಮ್(ನಾಯಕ), ಅಘಾ ಸಲ್ಮಾನ್, ಮೊಹಮ್ಮದ್ ರಿಜ್ವಾನ್(ವಿಕೆಟ್ ಕೀಪರ್), ಮೊಹಮ್ಮದ್ ನವಾಜ್, ಯಾಸಿರ್ ಶಾ, ಹಸನ್ ಅಲಿ, ಶಾಹೀನ್ ಅಫ್ರಿದಿ, ನಸೀಮ್ ಶಾ

ಬೆಂಚ್: ಫವಾದ್ ಆಲಂ, ನೌಮನ್ ಅಲಿ, ಹಾರಿಸ್ ರೌಫ್, ಸರ್ಫರಾಜ್ ಅಹ್ಮದ್, ಶಾನ್ ಮಸೂದ್, ಸೌದ್ ಶಕೀಲ್, ಫಹೀಮ್ ಅಶ್ರಫ್

Story first published: Monday, July 18, 2022, 20:54 [IST]
Other articles published on Jul 18, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+