Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ರವಿಶಾಸ್ತ್ರಿಗೆ ಕ್ರಿಕೆಟ್ ಮೈದಾನದಲ್ಲೇ ಶಾಂಪೈನ್ ಬಾಟಲ್ ಗಿಫ್ಟ್‌ ನೀಡಿದ ರಿಷಭ್ ಪಂತ್: Video

Rishabh Pant

ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್ ನಡೆದ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಟೀಂ ಇಂಡಿಯಾವನ್ನ ಗೆಲುವಿನ ದಡ ತಲುಪಿಸಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್‌ಗೆ ಪ್ರಶಂಸೆಯ ಸುರಿಮಳೆಯೇ ಹರಿದುಬಂದಿದೆ. ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ರಿಷಭ್ ಪಂತ್ ಮಿಂಚಿನ ಆಟವಾಡಿ ಭಾರತಕ್ಕೆ ಅವಿಸ್ಮರಣೀಯ ಸರಣಿ ಗೆಲುವನ್ನ ತಂದುಕೊಟ್ಟಿದ್ದಾರೆ.

260ರನ್ ಟಾರ್ಗೆಟ್ ಬೆನ್ನತ್ತಿದ್ದ ರಿಷಭ್ ಪಂತ್ ಇಂಗ್ಲೆಂಡ್ ನೀಡಿದ್ದ 260ರನ್‌ಗಳ ಗುರಿಯನ್ನ ಬೆನ್ನತ್ತಿದ್ದ ಟೀಂ ಇಂಡಿಯಾ ಟಾಪ್‌ ಆರ್ಡರ್ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ ಒತ್ತಡಕ್ಕೆ ಸಿಲುಕಿತ್ತು. ಆದ್ರೆ ಐದನೇ ವಿಕೆಟ್‌ಗೆ ಜೊತೆಯಾದ ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಶತಕದ ಜೊತೆಯಾಟದ ಮೂಲಕ ಕುಸಿದ ತಂಡವನ್ನ ಮೇಲೆತ್ತಿದರು.

ಗೆಲುವಿನ ಶತಕ ದಾಖಲಿಸಿದ ರಿಷಭ್ ಪಂತ್

ಗೆಲುವಿನ ಶತಕ ದಾಖಲಿಸಿದ ರಿಷಭ್ ಪಂತ್

ಟೆಸ್ಟ್‌ ಕ್ರಿಕೆಟ್‌ನಂತೆ ಲಿಮಿಟೆಡ್ ಓವರ್ ಕ್ರಿಕೆಟ್‌ನಲ್ಲಿ ತನ್ನ ಭದ್ರವಾದ ನೆಲೆಯೂರುವಲ್ಲಿ ವಿಫಲಗೊಂಡಿದ್ದ ರಿಷಭ್ ಪಂತ್, ತಾನೆಷ್ಟು ಡೇಂಜರಸ್ ಬ್ಯಾಟರ್ ಹಾಗೂ ತಂಡಕ್ಕೆ ಎಷ್ಟು ಕೊಡುಗೆ ನೀಡಬಲ್ಲೇ ಎಂಬುದನ್ನ ಓಲ್ಡ್‌ ಟ್ರಾಫರ್ಡ್ ಅಂಗಳದಲ್ಲಿ ಸಾಭೀತು ಪಡಿಸಿದ್ದಾರೆ.

72 ರನ್‌ಗಳಿಗೆ 4 ವಿಕೆಟ್ ಕಳೆದುಕೊಡಿದ್ದ ಟೀಂ ಇಂಡಿಯಾಗೆ ರಿಷಭ್ ಪಂತ್ ಮತ್ತು ಆಲ್‌ರೌಂಡರ್ ಹಾರ್ದಿಕ್‌ ಪಾಂಡ್ಯ ಆಧಾರವಾದ್ರು. ಅದ್ರಲ್ಲೂ ರಿಷಭ್ ಪಂತ್ ಅತ್ಯದ್ಭುತವಾದ ಬ್ಯಾಟಿಂಗ್ ಪ್ರದರ್ಶಿಸಿದರು. 113 ಎಸೆತಗಳಲ್ಲಿ ಅಜೇಯ 125 ರನ್ ಕಲೆಹಾಕಿದ ರಿಷಭ್ ಇನ್ನಿಂಗ್ಸ್‌ನಲ್ಲಿ 16 ಬೌಂಡರಿ, 2 ಸಿಕ್ಸರ್ ಒಳಗೊಂಡಿದ್ದವು. ಇಂಗ್ಲೆಂಡ್ ಬೌಲರ್‌ಗಳಿಗೆ ಎಲ್ಲಿಯೂ ಅವಕಾಶ ನೀಡದ ಪಂತ್ ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದು ತಂಡಕ್ಕೆ ಗೆಲುವು ತಂದಿಟ್ಟರು.

IND vs ENG: ಇಂಗ್ಲೆಂಡ್ ವಿರುದ್ಧ ಸರಣಿ ಗೆದ್ದ ನಂತರ ಬಿಸಿಸಿಐ ಅಧ್ಯಕ್ಷ ಗಂಗೂಲಿ ಪ್ರತಿಕ್ರಿಯೆ ಏನಿತ್ತು?

ರವಿಶಾಸ್ತ್ರಿಗೆ ಪಂದ್ಯ ಶ್ರೇಷ್ಟ ಪ್ರಶಸ್ತಿಯ ಪಡೆದ ಶಾಂಪೈನ್‌ ಗಿಫ್ಟ್‌

ಏಕದಿನ ಕ್ರಿಕೆಟ್‌ ಚೊಚ್ಚಲ ಶತಕವನ್ನ ಸಿಡಿಸುವ ಮೂಲಕ ತಂಡಕ್ಕೆ ಸ್ಮರಣೀಯ ಗೆಲುವು ತಂದುಕೊಟ್ಟ ರಿಷಭ್ ಪಂತ್‌ಗೆ ಪ್ರಶಸ್ತಿಯ ಜೊತೆಗೆ ಶಾಂಪೈನ್ ಅನ್ನು ಗಿಫ್ಟ್‌ ನೀಡಲಾಗಿತ್ತು. ಪ್ರಶಸ್ತಿ ಸ್ವೀಕರಿಸಿದ ಬಳಿಕ ಅದೇ ಮೈದಾನದಲ್ಲಿ ಕಾಮೆಂಟೇಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿಯನ್ನು ಮಾತನಾಡಿಸಲು ತೆರಳಿದ ರಿಷಭ್ ಪಂತ್ ಶಾಂಪೈನ್ ಅನ್ನು ಮಾಜಿ ಕೋಚ್‌ಗೆ ಗಿಫ್ಟ್ ನೀಡುವ ಮೂಲಕ ಅಭಿಮಾನಿಗಳಿಂದ ಚಪ್ಪಾಳೆ ಗಿಟ್ಟಿಸಿದರು.

ರವಿಶಾಸ್ತ್ರಿ ನೇರವಾಗಿ ಪಂತ್ ಬಳಿ ತೆರಳಿ ಅಮೋಘ ಇನ್ನಿಂಗ್ಸ್‌ಗೆ ಶುಭಾಶಯ ತಿಳಿಸಿದರು. ಇದೇ ವೇಳೆಯಲ್ಲಿ ರಿಷಭ್ ಪಂತ್ ಶಾಂಪೈನ್ ಗಿಫ್ಟ್‌ ನೀಡುವ ಮೂಲಕ ರವಿಶಾಸ್ತ್ರಿಗೆ ಆತ್ಮೀಯ ಗೌರವ ಸಲ್ಲಿಸಿದರು.

ನಾನು BCCI ಸೇರಿದಾಗ 40 ಕೋಟಿ ಇದ್ದ ಬ್ಯಾಲೆನ್ಸ್‌, ಬ್ಯಾನ್ ಆಗುವ ವೇಳೆಗೆ 47,480 ಕೋಟಿ ಆಗಿತ್ತು: ಲಲಿತ್ ಮೋದಿ

8 ವರ್ಷದ ಬಳಿಕ ಇಂಗ್ಲೆಂಡ್‌ನಲ್ಲಿ ಸರಣಿ ಜಯಿಸಿದ ಭಾರತ

8 ವರ್ಷದ ಬಳಿಕ ಇಂಗ್ಲೆಂಡ್‌ನಲ್ಲಿ ಸರಣಿ ಜಯಿಸಿದ ಭಾರತ

ರೋಹಿತ್ ಶರ್ಮಾ ನಾಯಕತ್ವದಲ್ಲಿ ಮುನ್ನಡೆದ ಟೀಂ ಇಂಡಿಯಾ ಟಿ20 ಸರಣಿಯಂತೆ, ಮೂರು ಪಂದ್ಯಗಳ ಏಕದಿನ ಸರಣಿಯನ್ನು 2-1 ಅಂತರದಲ್ಲಿ ಗೆಲ್ಲುವ ಮೂಲಕ ಸ್ಮರಣೀಯ ಗೆಲುವು ದಾಖಲಿಸಿತು. ಈ ಮೂಲಕ ಸುಮಾರು 8 ವರ್ಷಗಳ ಬಳಿಕ ಭಾರತ ಟ್ರೋಫಿಯನ್ನ ಗೆದ್ದು ಬೀಗಿದೆ.

ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡವನ್ನ 110ರನ್‌ಗಳಿಗೆ ಆಲೌಟ್ ಮಾಡಿದ ಬಳಿಕ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದ್ದ ಟೀಂ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲಿ ಮುಗ್ಗರಿಸಿತು. ಲಾರ್ಡ್ಸ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 100 ರನ್‌ಗಳ ಗೆಲುವು ದಾಖಲಿಸಿತು. ಇದಾದ ಬಳಿಕ ಮೂರನೇ ಏಕದಿನ ಪಂದ್ಯದಲ್ಲಿ ಕಂಬ್ಯಾಕ್ ಮಾಡಿದ ಭಾರತ 260ರನ್ ಬೆನ್ನತ್ತಿ ಐದು ವಿಕೆಟ್‌ಗಳ ಗೆಲುವು ಸಾಧಿಸಿತು.

Story first published: Monday, July 18, 2022, 18:11 [IST]
Other articles published on Jul 18, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+