ಶಿಖರ್ ಧವನ್‌ರನ್ನ ಕೊನೆಯ ಕ್ಷಣದಲ್ಲಿ ನಾಯಕತ್ವದಿಂದ ಕೆಳಗಿಳಿಸಿದ್ದು ತಪ್ಪು: ಮೊಹಮ್ಮದ್ ಕೈಫ್

ಟೀಂ ಇಂಡಿಯಾ ಮಾಜಿ ಆಟಗಾರ ಮೊಹಮ್ಮದ್ ಕೈಫ್, ಜಿಂಬಾಬ್ವೆ ಪ್ರವಾಸದಲ್ಲಿ ಟೀಂ ಇಂಡಿಯಾ ನಾಯಕತ್ವದಿಂದ ಶಿಖರ್ ಧವನ್‌ರನ್ನ ಬದಲಾಯಿಸಿದ್ದರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊನೆಯ ಕ್ಷಣದಲ್ಲಿ ಶಿಖರ್ ಧವನ್ ಬದಲಿಗೆ ಕೆ.ಎಲ್ ರಾಹುಲ್ ನಾಯಕರಾಗಿ ಆಯ್ಕೆಯಾಗಿದ್ದಾರೆ.
ಆಗಸ್ಟ್ 18ರಿಂದ ಪ್ರಾರಂಭಗೊಳ್ಳಲಿರುವ ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಗೆ ಶಿಖರ್ ಧವನ್‌ರನ್ನ ನಾಯಕರನ್ನಾಗಿ ನೇಮಿಸಲಾಗಿತ್ತು. ಆದ್ರೆ ಕೆ.ಎಲ್ ಫಿಟ್ನೆಸ್ ಟೆಸ್ಟ್ ಪಾಸ್ ಆದ ಬಳಿಕ ದಿಢೀರನೆ ಬಿಸಿಸಿಐ ಮ್ಯಾನೇಜ್‌ಮೆಂಟ್ ನಾಯಕತ್ವ ಬದಲಿಸಿದೆ.

ಜಿಂಬಾಬ್ವೆ ಪ್ರವಾಸಕ್ಕೆ ಕೊನೆಯ ಕ್ಷಣದಲ್ಲಿ ರಾಹುಲ್ ಆಯ್ಕೆ
ಈಗಾಗಲೇ ಗಾಯಾಳುವಾಗಿ ಅನೇಕ ಕ್ರಿಕೆಟ್ ಸರಣಿಗಳನ್ನ ಕಳೆದುಕೊಂಡಿರುವ ಕನ್ನಡಿಗ ಕೆ.ಎಲ್ ರಾಹುಲ್ ಜಿಂಬಾಬ್ವೆ ಪ್ರವಾಸಕ್ಕೂ ಆಡೋದು ಅನುಮಾನವಾಗಿತ್ತು. ಆದ್ರೆ ಕೊನೆಯ ಕ್ಷಣದಲ್ಲಿ ಎನ್‌ಸಿಎನಲ್ಲಿ ಫಿಟ್ನೆಸ್ ಪಾಸ್ ಆದ ರಾಹುಲ್‌ರನ್ನ ಜಿಂಬಾಬ್ವೆ ಪ್ರವಾಸಕ್ಕೆ ಆಟಗಾರನನ್ನಾಗಿ ಅಷ್ಟೇ ಅಲ್ಲದೆ ನಾಯಕನಾಗಿಯೂ ಸೇರ್ಪಡೆಗೊಂಡಿದ್ದು ಸಾಕಷ್ಟು ಚರ್ಚೆಗೆ ಎಡೆಮಾಡಿತು.
ತವರಿನಲ್ಲಿ ದಕ್ಷಿಣ ಆಫ್ರಿಕಾ ಟಿ20 ಸರಣಿಗೂ ಮುನ್ನ ಇಂಜ್ಯುರಿಯಿಂದ ತಂಡದಿಂದ ಹೊರಬಿದ್ದ ರಾಹುಲ್ ಐರ್ಲೆಂಡ್, ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟಿ20, ಏಕದಿನ ಸರಣಿಗಳನ್ನ ಮಿಸ್ ಮಾಡಿಕೊಂಡರು.
ಸೂರ್ಯಕುಮಾರ್ ಅನ್ನು ಇಷ್ಟು ಬೇಗ ಎಬಿಡಿಗೆ ಹೋಲಿಸಬೇಡಿ: ಸಲ್ಮಾನ್ ಬಟ್

ನಾಯಕನಾಗಿ ಒಬ್ಬ ಆಯ್ಕೆ ಆದ್ಮೇಲೆ ಬದಲಾಯಿಸುವುದು ಸರಿಯಲ್ಲ!
ಫಸ್ಟ್ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಒಬ್ಬ ಆಟಗಾರ ನಾಯಕನಾಗಿ ಆಯ್ಕೆಗೊಂಡ ಬಳಿಕ ಆತನನ್ನು ಕೊನೆಯ ಕ್ಷಣದಲ್ಲಿ ಬದಲಾಯಿಸುವುದು ಸರಿಯಲ್ಲ ಎಂದಿದ್ದಾರೆ.
'' ನಾಯಕತ್ವ ಬದಲಾವಣೆ ವಿಚಾರವನ್ನ ತಪ್ಪಿಸಬಹುದಿತ್ತು. ಕೆ.ಎಲ್ ರಾಹುಲ್ ಮೆಡಿಕಲ್ ರಿಪೋರ್ಟ್ ತಡವಾಗಿ ಬಂದಿತು ಮತ್ತು ಸಂವಹನ ಕೊರತೆಯಾಗಿದೆ. ಈ ಸರಣಿಯಲ್ಲಿ ಶಿಖರ್ ಧವನ್ ನಾಯಕತ್ವದಡಿಯಲ್ಲಿಯೇ ಕೆ.ಎಲ್ ರಾಹುಲ್ ಆಡಿದ್ದರೆ ಏನೂ ತೊಂದರೆಯಾಗುತ್ತಿರಲಿಲ್ಲ. ಒಬ್ಬ ನಾಯಕನಾಗಿ ಆಯ್ಕೆಯಾದ ಮೇಲೆ ಆತ ನಾಯಕನಾಗಿಯೇ ಸರಣಿಯನ್ನ ಮುಗಿಸಬೇಕು. ಧವನ್ ವಿಚಾರದಲ್ಲಿ ಹೀಗೆ ಮಾಡಿದ್ದು ಸರಿಯಲ್ಲ'' ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.
ಒಂದಲ್ಲಾ ಎರಡಲ್ಲ ಮೂರು ಬಾರಿ ಈ ಬಾರಿಯ ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗಲಿವೆ ಭಾರತ ಮತ್ತು ಪಾಕ್!

ಶಿಖರ್ ಧವನ್ ಬಳಿ ಸಾಕಷ್ಟು ಕ್ರಿಕೆಟ್ ಬಾಕಿ ಇದೆ: ಕೈಫ್
ಮೊಹಮ್ಮದ್ ಕೈಫ್ ಭಾರತದ ಅನುಭವಿ ಓಪನರ್ ಕುರಿತು ಮತ್ತಷ್ಟು ಮಾತನಾಡಿದ್ದು, ನನ್ನ ಪ್ರಕಾರ ಕೇವಲ ಏಕದಿನ ಕ್ರಿಕೆಟ್ ಅಷ್ಟೇ ಅಲ್ಲದೆ ಶಿಖರ್ ಧವನ್ ಟೀಂ ಇಂಡಿಯಾ ಪರ ಮತ್ತಷ್ಟು ಪಂದ್ಯಗಳನ್ನ ಆಡುವ ಸಾಮರ್ಥ್ಯ ಹೊಂದಿದ್ದಾರೆ ಎಂದಿದ್ದಾರೆ.
'' ಕೇವಲ ಒಂದು ಫಾರ್ಮೆಟ್‌ಗಷ್ಟೇ ಭಾರತಕ್ಕೆ ಆಯ್ಕೆಯಾಗುವ ಶಿಖರ್ ಧವನ್ ಬಳಿ ಇನ್ನು ಸಾಕಷ್ಟು ಕ್ರಿಕೆಟ್ ಆಡುವುದು ಬಾಕಿ ಇದೆ. ಆತ ಐಪಿಎಲ್‌ನಲ್ಲಿ ಸಾಕಷ್ಟು ರನ್‌ಗಳಿಸಿದ್ದರೂ ಸಹ, ಕೇವಲ ಏಕದಿನ ಕ್ರಿಕೆಟ್‌ಗೆ ಮಾತ್ರ ಆಯ್ಕೆಯಾಗುತ್ತಿರುವುದು ನನಗೆ ಆಶ್ಚರ್ಯ ಮೂಡಿಸಿದೆ'' ಎಂದು ಕೈಫ್ ಇದೇ ವೇಳೆಯಲ್ಲಿ ತಿಳಿಸಿದ್ದಾರೆ.
'' ಆತ ಉತ್ತಮ ಟಿ20 ಆಟಗಾರನೂ ಸಹ ಆಗಿದ್ದು, ಟೆಸ್ಟ್ ಕೂಡ ಆಡಬಲ್ಲರು. ಖರ್ ಧವನ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಯಾವಾಗ ಒಟ್ಟಾಗಿ ಆಡಿದಾಗಲೂ ಭಾರತವು ಯಶಸ್ಸನ್ನು ಕಂಡಿದೆ'' ಎಂದು ಕೈಫ್ ಮಾತನ್ನು ಸೇರಿಸಿದ್ದಾರೆ.
ಆಗಸ್ಟ್ 18ರಿಂದ ಭಾರತವು ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಜಿಂಬಾಬ್ವೆ ತಂಡವನ್ನ ಎದುರಿಸಲಿದೆ. ಹರಾರೆ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ನಡೆಯಲಿರುವ ಏಕದಿನ ಟೂರ್ನಿಯಲ್ಲಿ ಕೊಹ್ಲಿ, ರೋಹಿತ್, ಬುಮ್ರಾ, ಹರ್ಷಲ್ ಪಟೇಲ್, ಶಮಿ ಸೇರಿದಂತೆ ಹಲವು ಸ್ಟಾರ್ ಆಟಗಾರರು ಹೊರಗುಳಿದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications