ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಒಂದಲ್ಲಾ ಎರಡಲ್ಲ ಮೂರು ಬಾರಿ ಈ ಬಾರಿಯ ಏಷ್ಯಾಕಪ್‌ನಲ್ಲಿ ಮುಖಾಮುಖಿಯಾಗಲಿವೆ ಭಾರತ ಮತ್ತು ಪಾಕ್!

India vs Pakistan: India and Pakistan likely to face each other for 3 times in Asia Cup 2023

ಇದೇ ತಿಂಗಳ ಅಂತಿಮ ವಾರದಲ್ಲಿ ಬಹುನಿರೀಕ್ಷಿತ ಏಷ್ಯಾಕಪ್ ಟೂರ್ನಿ ಆರಂಭವಾಗಲಿದೆ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಈ ಟೂರ್ನಿ 2020ರಲ್ಲಿಯೇ ನಡೆಯಬೇಕಿತ್ತು. ಇನ್ನು ಆ ಸಮಯದಲ್ಲಿ ಕೊರೊನಾ ಸೋಂಕಿನ ಅಡ್ಡಿಯುಂಟಾಗಿ ಮುಂದೂಡಲ್ಪಟ್ಟ ಏಷ್ಯಾಕಪ್ ಟೂರ್ನಿಯ ಆತಿಥ್ಯವನ್ನು ಶ್ರೀಲಂಕಾ ವಹಿಸಬೇಕಿತ್ತು. ಆದರೆ ಶ್ರೀಲಂಕಾ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಕಾರಣ ಟೂರ್ನಿಯನ್ನು ಯುಎಇಗೆ ಸ್ಥಳಾಂತರಿಸಲಾಗಿದ್ದು, ಆಗಸ್ಟ್ 27ರಂದು ನಡೆಯಲಿರುವ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ಪಂದ್ಯದ ಮೂಲಕ ಟೂರ್ನಿ ಆರಂಭಗೊಳ್ಳಲಿದೆ.

ರೋಹಿತ್ ತಂಡದಿಂದ ಹೊರಗುಳಿದು ಬೇರೆಯವರು ನಾಯಕರಾದರೆ ಅನುಕೂಲವಿದೆ ಎಂದ ಗಂಗೂಲಿ!ರೋಹಿತ್ ತಂಡದಿಂದ ಹೊರಗುಳಿದು ಬೇರೆಯವರು ನಾಯಕರಾದರೆ ಅನುಕೂಲವಿದೆ ಎಂದ ಗಂಗೂಲಿ!

ಇನ್ನು ಏಷ್ಯಾಕಪ್ ಟೂರ್ನಿಯ ಪ್ರಮುಖಾಕರ್ಷಣೆಯಾಗಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಆಗಸ್ಟ್ 28ರಂದು ನಡೆಯಲಿದ್ದು, ಈ ಪಂದ್ಯದ ಟಿಕೆಟ್‌ಗಳು ಈಗಾಗಲೇ ಸೋಲ್ಡ್ ಔಟ್ ಆಗಿದ್ದು, ಟಿಕೆಟ್ ಸಿಗದ ಸಾವಿರಾರು ಅಭಿಮಾನಿಗಳು ನಿರಾಸೆಗೊಳಗಾಗಿದ್ದಾರೆ. ಆದರೆ, ಈ ಕುರಿತಾಗಿ ಅಭಿಮಾನಿಗಳಿಗೆ ಖುಷಿ ಸುದ್ದಿಯಿದ್ದು, ಈ ಬಾರಿಯ ಏಷ್ಯಾಕಪ್ ಟೂ ರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಕನಿಷ್ಠವೆಂದರೂ ಎರಡು ಬಾರಿ ಮುಖಾಮುಖಿಯಾಗುವುದು ಖಚಿತ ಎನ್ನಬಹುದು. ಹೀಗಾಗಿ ಭಾರತ ಮತ್ತು ಪಾಕ್ ನಡುವಿನ ಲೀಗ್ ಹಂತದ ಪಂದ್ಯದ ಟಿಕೆಟ್ ದೊರಕದ ಅಭಿಮಾನಿಗಳು ನಂತರದ ದಿನಗಳಲ್ಲಿ ನಡೆಯಬಹುದಾದ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯದ ಟಿಕೆಟ್ ಪಡೆದುಕೊಳ್ಳಲು ಯತ್ನಿಸಬಹುದಾಗಿದೆ.

ಭಾರತ vs ಜಿಂಬಾಬ್ವೆ: ಇತ್ತಂಡಗಳ ನಡುವಿನ ಏಕದಿನ ಮುಖಾಮುಖಿಯಲ್ಲಿ ಭಾರತ ಎಷ್ಟು ಪಂದ್ಯ ಗೆದ್ದಿದೆ?ಭಾರತ vs ಜಿಂಬಾಬ್ವೆ: ಇತ್ತಂಡಗಳ ನಡುವಿನ ಏಕದಿನ ಮುಖಾಮುಖಿಯಲ್ಲಿ ಭಾರತ ಎಷ್ಟು ಪಂದ್ಯ ಗೆದ್ದಿದೆ?

ಅಷ್ಟೇ ಅಲ್ಲದೇ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಒಟ್ಟು ಮೂರು ಬಾರಿ ಸೆಣಸಾಡುವ ಸಾಧ್ಯತೆಗಳಿದ್ದು, ಇದು ಹೇಗೆ ಸಾಧ್ಯ ಎಂಬುದರ ಕುರಿತಾದ ಮಾಹಿತಿ ಈ ಕೆಳಕಂಡಂತಿದೆ.

ಮೂರು ಬಾರಿ ಮುಖಾಮುಖಿಯಾಗಬಹುದು ಭಾರತ, ಪಾಕ್

ಮೂರು ಬಾರಿ ಮುಖಾಮುಖಿಯಾಗಬಹುದು ಭಾರತ, ಪಾಕ್

ಮೊದಲನೆಯದಾಗಿ ಎ ಗುಂಪಿನಲ್ಲಿರುವ ಭಾರತ ಮತ್ತು ಪಾಕಿಸ್ತಾನ ತಂಡಗಳು ಆಗಸ್ಟ್ 28ರಂದು ನಡೆಯಲಿರುವ ಗ್ರೂಪ್ ಹಂತದ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಇನ್ನು ಈ ಗ್ರೂಪ್ ಹಂತದಲ್ಲಿ ಟಾಪ್ ಎರಡು ಸ್ಥಾನಗಳನ್ನು ಪಡೆದುಕೊಳ್ಳುವ ತಂಡಗಳು ಸೂಪರ್ 4 ಸುತ್ತಿಗೆ ಅರ್ಹತೆ ಪಡೆದುಕೊಳ್ಳಲಿದ್ದು, ಸೂಪರ್ 4 ಸುತ್ತಿನಲ್ಲಿ ತನ್ನ ಗುಂಪಿನಿಂದ ಬಂದ ತಂಡದ ಜತೆ ಹಾಗೂ ಬೇರೆ ಗುಂಪಿನಿಂದ ತಂಡಗಳ ಜತೆ ಸೆಣಸಾಟ ನಡೆಸಲಿವೆ. ಈ ಮೂಲಕ ಭಾರತ ಮತ್ತು ಪಾಕ್ ತಮ್ಮ ಗುಂಪಿನ್ ಟಾಪ್ ಎರಡು ತಂಡಗಳಾದರೆ ಸೂಪರ್ 4 ಪಂದ್ಯಗಳಲ್ಲಿ ಮತ್ತೊಮ್ಮೆ ಮುಖಾಮುಖಿಯಾಗಲಿವೆ. ಇನ್ನು ಈ ಸೂಪರ್ 4 ಹಂತದಲ್ಲಿ ಟಾಪ್ ಎರಡು ಸ್ಥಾನಗಳನ್ನು ಪಡೆದುಕೊಳ್ಳುವ ತಂಡಗಳು ಫೈನಲ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, ಒಂದುವೇಳೆ ಸೂಪರ್ 4ನಲ್ಲಿ ಭಾರತ ಮತ್ತು ಪಾಕ್ ಟಾಪ್ ಎರಡು ಸ್ಥಾನಗಳನ್ನು ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಈ ಮೂಲಕ ಒಟ್ಟು ಮೂರು ಬಾರಿ ಈ ಬಾರಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವ ಸಾಧ್ಯತೆಗಳಿವೆ.

ಟೂರ್ನಿಯ ವೇಳಾಪಟ್ಟಿ

ಟೂರ್ನಿಯ ವೇಳಾಪಟ್ಟಿ

27 ಆಗಸ್ಟ್‌: ಶ್ರೀಲಂಕಾ ವರ್ಸಸ್ ಅಫ್ಘಾನಿಸ್ತಾನ (ದುಬೈ)

28 ಆಗಸ್ಟ್‌: ಭಾರತ ವರ್ಸಸ್ ಪಾಕಿಸ್ತಾನ (ದುಬೈ)

30 ಆಗಸ್ಟ್‌: ಬಾಂಗ್ಲಾದೇಶ ವರ್ಸಸ್ ಅಫ್ಘಾನಿಸ್ತಾನ (ದುಬೈ)

31 ಆಗಸ್ಟ್‌: ಭಾರತ ವರ್ಸಸ್ ಕ್ವಾಲಿಫೈಯರ್ (ದುಬೈ)

1 ಸೆಪ್ಟೆಂಬರ್: ಶ್ರೀಲಂಕಾ ವರ್ಸಸ್ ಬಾಂಗ್ಲಾದೇಶ (ದುಬೈ)

2 ಸೆಪ್ಟೆಂಬರ್: ಪಾಕಿಸ್ತಾನ ವರ್ಸಸ್ ಕ್ವಾಲಿಫೈಯರ್ (ಶಾರ್ಜಾ)

3 ಸೆಪ್ಟೆಂಬರ್: B1 vs B2 (ಶಾರ್ಜಾ)

4 ಸೆಪ್ಟೆಂಬರ್: A1 vs A2 (ದುಬೈ)

6 ಸೆಪ್ಟೆಂಬರ್: A1 vs B1 (ದುಬೈ)

7 ಸೆಪ್ಟೆಂಬರ್: A2 vs B2 (ದುಬೈ)

8 ಸೆಪ್ಟೆಂಬರ್: A1 vs B2 (ದುಬೈ)

9 ಸೆಪ್ಟೆಂಬರ್: B1 vs A2 (ದುಬೈ)

11 ಸೆಪ್ಟೆಂಬರ್: ಫೈನಲ್‌ (ದುಬೈ)

ಭಾರತ ಮತ್ತು ಪಾಕಿಸ್ತಾನ ಸ್ಕ್ವಾಡ್

ಭಾರತ ಮತ್ತು ಪಾಕಿಸ್ತಾನ ಸ್ಕ್ವಾಡ್

ಏಷ್ಯಾಕಪ್ ಟೂರ್ನಿಗೆ ಪ್ರಕಟವಾಗಿರುವ ಭಾರತ ಮತ್ತು ಪಾಕಿಸ್ತಾನ ಸ್ಕ್ವಾಡ್ ಹೀಗಿದೆ

ಭಾರತ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್, ಅವೇಶ್ ಖಾನ್

ಪಾಕಿಸ್ತಾನ: ಬಾಬರ್ ಆಜಮ್ (ನಾಯಕ), ಶಾದಾಬ್ ಖಾನ್, ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಂ ಜೂನಿಯರ್, ನಸೀಮ್ ಶಾ, ಶಾಹೀನ್ ಶಾ ಅಫ್ರಿದಿ, ಶಹನವಾಜ್ ದಹಾನಿ ಮತ್ತು ಉಸ್ಮಾನ್ ದಹಾನಿ

Story first published: Wednesday, August 17, 2022, 12:05 [IST]
Other articles published on Aug 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X