
ಉತ್ತಮ ಪ್ರದರ್ಶನ ನೀಡಿದ ಆಶೀಶ್ ನೆಹ್ರಾ
ಆರ್ ಸಿಬಿಯ 4 ವಿಕೆಟ್ ಕಿತ್ತು ಉತ್ತಮ ಪ್ರದರ್ಶನ ನೀಡಿದ ಆಶೀಶ್ ನೆಹ್ರಾ ಅವರು ರಿಲೇ ರೋಸೋ ಅವರನ್ನು ಕ್ಲೀನ್ ಬೋಲ್ಡ್ ಮಾಡಿದ ಮೇಲೆ ಫ್ಲೈಯಿಂಗ್ ಕಿಸ್ ಕೊಟ್ಟು ಪೆವಿಲಿಯನ್ ಗೆ ತೆರಳುವಂತೆ ಸೂಚಿಸಿದರು. ವಿಕೆಟ್ ಪಡೆದ ಮೇಲೆ ನೆಹ್ರಾ ಸಂಭ್ರಮಿಸಿದ್ದು ಹೀಗೆ

ಸೂಪರ್ ಕ್ಯಾಚ್ ಹಿಡಿದ ಡುಫ್ಲೆಸಿಸ್
ಗಾಯಗೊಂಡಿದ್ದರೂ ಮೈದಾನದಲ್ಲಿ ಫೀಲ್ಡಿಂಗ್ ಮಾಡಲು ಇಳಿದ ದಕ್ಷಿಣ ಆಫ್ರಿಕಾದ ಫ್ಲಾಫ್ ಡುಪ್ಲೆಸಿಸ್ ಅವರು ಡೈವ್ ಮಾಡಿ ಉತ್ತಮ ಕ್ಯಾಚ್ ಹಿಡಿದರು. 14ಎಸೆತಗಳಲ್ಲಿ 17 ರನ್ ಗಳಿಸಿದ್ದ ಮನ್ವಿಂದರ್ ಬಿಸ್ಲಾ ಪೆವಿಲಿಯನ್ ಗೆ ತೆರಳಬೇಕಾಯಿತು.

ಎಂಎಸ್ ಧೋನಿ ಪತ್ನಿ ಸಾಕ್ಷಿ ಹಾಜರು
ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪುತ್ರಿ ಝೀವಾ ಜೊತೆಗೆ ಬಂದಿದ್ದ ಸಾಕ್ಷಿ ಸಿಂಗ್ ಅವರು ಚೆನ್ನೈ ಸೂಪರ್ ಕಿಂಗ್ಸ್ ಗೆಲುವಿನ ಸಂಭ್ರಮದಲ್ಲಿ ಪಾಲ್ಗೊಂಡರು.

ಚೆನ್ನೈ ಫೀಲ್ಡಿಂಗ್ ಸೂಪರ್ ಆಗಿತ್ತು
ಈ ಚಿತ್ರದಲ್ಲಿ ಡೈವ್ ಮಾಡಿ ಕ್ಯಾಚ್ ಹಿಡಿದ ಡುಫ್ಲೆಸಿಸ್ ಇರಲಿ, ಬ್ರಾವೋ ಹಿಡಿದ ಕ್ಯಾಚ್ ಇರಲಿ, ಡಿವಿಲೆಯರ್ಸ್ ರನೌಟ್ ಮಾಡಿದ ಧೋನಿ ಇರಲಿ ಎಲ್ಲರೂ ಗೆಲುವಿಗೆ ತಮ್ಮ ಕೊಡುಗೆ ನೀಡಿದರು.

ರನ್ ಚೇಸಿಂಗ್ ಸುಲಭ ಇರಲಿಲ್ಲ
ಚೆನ್ನೈ ಸೂಪರ್ ಕಿಂಗ್ಸ್ ಮೊದಲು ಬ್ಯಾಟ್ ಮಾಡಿ 181/8 ಸ್ಕೋರ್ ಮಾಡಿತು. ರನ್ ನಿಯಂತ್ರಿಸಲು ಆರ್ ಸಿಬಿ ಬೌಲರ್ ಗಳು ಪರದಾಡಿದರು. ರನ್ ಚೇಸಿಂಗ್ ನಲ್ಲೂ ಮೊದಲ 6 ಓವರ್ ನಂತರ ರನ್ ಗಳಿಕೆ ವೇಗ ಹಿಗ್ಗಲಿಲ್ಲ. 154/8 ಸ್ಕೋರ್ ಮಾಡಿ ಸೋಲೊಪ್ಪಿಕೊಂಡಿತು.

ಸುರೇಶ್ ರೈನಾ ಉತ್ತಮ ಆಟ ಪ್ರದರ್ಶನ
ಸುರೇಶ್ ರೈನಾ ಉತ್ತಮ ಆಟ ಪ್ರದರ್ಶಿಸಿ 32 ಎಸೆತಗಳಲ್ಲಿ 4 ಬೌಂದರಿ 6 ಸಿಕ್ಸರ್ ಇದ್ದ 62ರನ್ ಚೆಚ್ಚಿದ್ದು ಆರ್ ಸಿಬಿಗೆ ಕಟಂಕವಾಯಿತು. ಇದಕ್ಕೆ ಪ್ರತಿಯಾಗಿ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ 42 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್ ಇದ್ದ 51 ರನ್ ಗಳಿಸಿದ್ದೆ ಸಾಧನೆಯಾಯಿತು.

ಧೋನಿ ನಾಯಕತ್ವ ಮತ್ತೆ ಮೇಲುಗೈ ಸಾಧಿಸಿತು
ಧೋನಿ ನಾಯಕತ್ವ ಮತ್ತೆ ಮೇಲುಗೈ ಸಾಧಿಸಿತು. ಆಶೀಶ್ ನೆಹ್ರಾ ಅವರನ್ನು ಸರಿಯಾಗಿ ಉಪಯೋಗಿಸಿದರು. ನೆಹ್ರಾ 4-0-10-4 ಮಾರಕ ಬೌಲಿಂಗ್ ಮಾಡಿ ಕಾಟ ಕೊಟ್ಟರು. ಕ್ರಿಸ್ ಗೇಲ್ ಅನುಪಸ್ಥಿತಿ ಆರ್ ಸಿಬಿಯನ್ನು ಕಾಡಿಸಿತು. ಅದಕ್ಕಿಂತ ಹೆಚ್ಚಾಗಿ ವಿಕೆಟ್ ಟೇಕಿಂಗ್ ಬೌಲರ್ ಇಲ್ಲದಿರುವುದು ಟೂರ್ನಿಯುದ್ದಕ್ಕೂ ಕಾಡಲಿದೆ.


Click it and Unblock the Notifications











