ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2015:ಅಭಿಮಾನಿಗಳಿಗೆ ಅಗತ್ಯವಾದ ಮಾರ್ಗದರ್ಶಿ

By Mahesh

ಇಂಡಿಯನ್ ಪ್ರಿಮಿಯರ್ ಲೀಗ್ ನ 8ನೇ ಆವೃತ್ತಿ ಏ.8 ರಿಂದ ಮೇ.24ರ ತನಕ ನಡೆಯಲಿದೆ. ಟ್ವೆಂಟಿ 20 ಕದನವನ್ನು ಸ್ವಾಗತಿಸಲು ಅಭಿಮಾನಿಗಳೇ ಸಜ್ಜಾಗಿ. ಒನ್ ಇಂಡಿಯಾದಲ್ಲಿ ಪ್ರತಿ ತಂಡದ ಸಮಗ್ರ ವೇಳಾಪಟ್ಟಿ, ಪಂದ್ಯಗಳ ಫಲಿತಾಂಶ, ಸುದ್ದಿ, ವಿಶ್ಲೇಷಣೆ ಇನ್ನಿತರ ಅಂಕಿ ಅಂಶಗಳು ಪ್ರತಿದಿನ ಅಭಿಮಾನಿಗಳಿಗೆ ಲಭ್ಯವಿರಲಿದೆ.

ಏ.8 ರಂದು ಆರಂಭವಾಗಿ ಮೇ 24 ರಂದು ಐಪಿಎಲ್ 8 ಮುಕ್ತಾಯಗೊಳ್ಳಲಿದೆ. 47 ದಿನಗಳ ಕಾಲ 60 ಪಂದ್ಯಗಳು ಮನರಂಜನೆಯನ್ನು ನೀಡಲಿವೆ. ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಮಾಜಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಎದುರಿಸಲಿದೆ.
[ಐಪಿಎಲ್ 8: 47 ದಿನ, 60 ಪಂದ್ಯ, ಫುಲ್ ಟೈಂ ಟೇಬಲ್]

ಒಟ್ಟು 8 ತಂಡಗಳು: ಕೋಲ್ಕತ್ತಾ ನೈಟ್ ರೈಡರ್ಸ್(ಕೆಕೆಆರ್), ಮುಂಬೈ ಇಂಡಿಯನ್ಸ್ (ಎಂಐ), ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ), ಡೆಲ್ಲಿ ಡೇರ್ ಡೆವಿಲ್ಸ್ (ಡಿಡಿ), ಕಿಂಗ್ಸ್ Xi ಪಂಜಾಬ್ (KXIP), ರಾಜಸ್ಥಾನ್ ರಾಯಲ್ಸ್ (ಆರ್ ಆರ್), ಸನ್ ರೈಸರ್ಸ್ ಹೈದರಾಬಾದ್ (ಎಸ್ ಆರ್ ಎಚ್) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿಬಿ)

ವಿಶ್ವಕಪ್ 2015ರಲ್ಲಿ ಆಡುತ್ತಿರುವ ಟೀಂ ಇಂಡಿಯಾ ಸೇರಲು ವಿಫಲರಾದ ಎಡಗೈ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್ ಅವರು ಮತ್ತೊಮ್ಮೆ ಅತಿ ಹೆಚ್ಚು ಮೊತ್ತ ಸೇಲ್ ಆಗಿದ್ದರು. [ಐಪಿಎಲ್ 8: ಯುವರಾಜ್ ಸ್ಟಾರ್; ಶ್ರೇಯಸ್, ಕಾರ್ಯಪ್ಪ ಅಚ್ಚರಿ]

Here is your complete guide to IPL 2015

ಐಪಿಎಲ್ 2015(ಐಪಿಎಲ್ 8) ಮಾರ್ಗದರ್ಶಿ
* ಮೊದಲ ಪಂದ್ಯ: ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆ ಆರ್) vs ಮುಂಬೈ ಇಂಡಿಯನ್ಸ್ (ಎಂಐ) ಏಪ್ರಿಲ್ 8 (8 PM IST), ಈಡೆನ್ ಗಾರ್ಡನ್ಸ್, ಕೋಲ್ಕತ್ತಾ.
* ಫೈನಲ್: 24ಮೇ (8 PM IST) ಈಡೆನ್ ಗಾರ್ಡನ್ಸ್, ಕೋಲ್ಕತ್ತಾ.
* ಕಳೆದ ಬಾರಿಯ ಚಾಂಪಿಯನ್ : ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆ ಆರ್)

ಐಪಿಎಲ್ 8 ಒಟ್ಟು ಪಂದ್ಯಗಳು: 60
ಪಂದ್ಯಗಳ ಒಟ್ಟು ದಿನ: 47. [8 ತಂಡಗಳ ನೂರೆಂಟು ಆಟಗಾರರು]

ಲೈವ್ ಎಲ್ಲಿ ಪ್ರಸಾರವಾಗುತ್ತದೆ: ಸೋನಿ ಮ್ಯಾಕ್ಸ್ ಹಾಗೂ ಸೋನಿ ಸಿಕ್ಸ್.

ಪಂದ್ಯ ಶುರುವಾಗುವ ಸಮಯ: 4PM IST ಹಾಗೂ 8PM IST.

ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಆಟಗಾರ: ಯುವರಾಜ್ ಸಿಂಗ್, ಡೆಲ್ಲಿ ಡೇರ್ ಡೆವಿಲ್ಸ್ (ಡಿಡಿ) -165 ಕೋಟಿ ರು.

ಪ್ರಶಸ್ತಿ ಮೊತ್ತ: ವಿನ್ನರ್ -15 ಕೋಟಿ ರು; ರನ್ನರ್ : 10 ಕೋಟಿ ರು.
ಪ್ರಶಸ್ತಿಗಳು: ಆರೇಂಜ್ ಕ್ಯಾಪ್ (ಹೆಚ್ಚು ರನ್ ಗಳಿಸಿದವರಿಗೆ) ; ಪರ್ಪಲ್ ಕ್ಯಾಪ್ (ಹೆಚ್ಚು ವಿಕೆಟ್ ಪಡೆದವರಿಗೆ) ಅತ್ಯಂತ ಶ್ರೇಷ್ಠ ಆಟಗಾರ, ಫೇರ್ ಪ್ಲೇ, ಉದಯೋನ್ಮುಖ ಆಟಗಾರ, ಟೂರ್ನಮೆಂಟ್ ನ ಉತ್ತಮ ಕ್ಯಾಚ್

KKR

12 ಮೈದಾನಗಳು: [ಬೆಳಗಾವ್ಯಾಗ ಐಪಿಎಲ್ 8 ಮ್ಯಾಚ್ ಪುಕ್ಶೇಟಿ ನೋಡ್ರಿ!]
* ಈಡನ್ ಗಾರ್ಡನ್ಸ್ (ಕೊಲ್ಕತ್ತಾ),
* ಎಂ ಚಿನ್ನಸ್ವಾಮಿ ಕ್ರೀಡಾಂಗಣ (ಬೆಂಗಳೂರು),
* ಎಂಎ ಚಿದಂಬರಂ ಸ್ಟೇಡಿಯಂ (ಚೆನ್ನೈ),
* ಫಿರೋಜ್ ಶಾ ಕೋಟ್ಲಾ (ದೆಹಲಿ),
* ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಸ್ಟೇಡಿಯಂ (ಹೈದರಾಬಾದ್)
* ಎಂಸಿಎ ಅಂತಾರಾಷ್ಟ್ರೀಯ ಸ್ಟೇಡಿಯಂ (ಪುಣೆ)
* ವಾಂಖೆಡೆ ಸ್ಟೇಡಿಯಂ (ಮುಂಬೈ)
* ಬ್ರಬೋರ್ನ್ ಮೈದಾನ (ಮುಂಬೈ)
* ಸರ್ದಾರ್ ಪಟೇಲ್ ಸ್ಟೇಡಿಯಂ (ಅಹಮದಾಬಾದ್)
* ಪಿಸಿಎ ಸ್ಟೇಡಿಯಂ (ಮೊಹಾಲಿ)
* ಎಸಿಎ-ವಿಡಿಸಿಎ ಸ್ಟೇಡಿಯಂ (ವಿಶಾಖಪಟ್ಟಣಂ)
* ಚತ್ತೀಸ್ ಗಢ ಅಂತಾರಾಷ್ಟ್ರೀಯ ಸ್ಟೇಡಿಯಂ (ರಾಯ್ ಪುರ)

8 ತಂಡಗಳ ನಾಯಕರು:
* ಸಿಎಸ್ ಕೆ: ಎಂಎಸ್ ಧೋನಿ(ಭಾರತ)
* ಡಿಡಿ: ಜೆಪಿ ಡುಮಿನಿ (ದಕ್ಷಿಣ ಆಫ್ರಿಕಾ)
* KXIP: ಜಾರ್ಜ್ ಬೈಲಿ (ಆಸ್ಟ್ರೇಲಿಯಾ)
* ಕೆಕೆಆರ್ : ಗೌತಮ್ ಗಂಭೀರ್ (ಭಾರತ)
* ಎಂಐ: ರೋಹಿತ್ ಶರ್ಮ (ಭಾರತ)
* ಆರ್ ಸಿಬಿ: ವಿರಾಟ್ ಕೊಹ್ಲಿ (ಭಾರತ)
* ಆರ್ ಆರ್ : ಶೇನ್ ವಾಟ್ಸನ್ (ಆಸ್ಟ್ರೇಲಿಯಾ)
* ಎಸ್ ಆರ್ ಎಚ್: ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)

your complete guide to IPL 2015

8 ತಂಡಗಳ ಕೋಚ್ ಗಳು
* ಸಿಎಸ್ ಕೆ: ಸ್ಟೀಫನ್ ಫ್ಲೆ ಮಿಂಗ್ (ನ್ಯೂಜಿಲೆಂಡ್)
* ಡಿಡಿ: ಗ್ಯಾರಿ ಕರ್ಸ್ಟನ್ (ದಕ್ಷಿಣ ಆಫ್ರಿಕಾ)
* KXIP: ಸಂಜಯ್ ಬಂಗಾರ್ (ಭಾರತ)
* ಕೆಕೆಆರ್ : ಟ್ರೆವರ್ ಬೇಲಿಸ್ (ಆಸ್ಟ್ರೇಲಿಯಾ)
* ಎಂಐ: ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ)
* ಆರ್ ಸಿಬಿ: ಡೇನಿಯಲ್ ವೆಟ್ಟೋರಿ (ನ್ಯೂಜಿಲೆಂಡ್)
* ಆರ್ ಆರ್ :ಪ್ಯಾಡಿ ಆಪ್ಟನ್ (ದಕ್ಷಿಣ ಆಫ್ರಿಕಾ)
* ಎಸ್ ಆರ್ ಎಚ್: ಟಾಮ್ ಮೂಡಿ (ಆಸ್ಟ್ರೇಲಿಯಾ)

ಅಧಿಕೃತ ಟ್ವಿಟ್ಟರ್ ಐಡಿ: @IPL
ಅಧಿಕೃತ ಹ್ಯಾಶ್ ಟಾಗ್ : #PepsiIPL

ಹಳೆ ಚಾಂಪಿಯನ್ಸ್
* 2008: ರಾಜಸ್ಥಾನ್ ರಾಯಲ್ಸ್
* 2009: ಡೆಕ್ಕನ್ ಚಾರ್ಜರ್ಸ್
* 2010: ಚೆನ್ನೈ ಸೂಪರ್ ಕಿಂಗ್ಸ್
* 2011: ಚೆನ್ನೈ ಸೂಪರ್ ಕಿಂಗ್ಸ್
* 2012: ಕೋಲ್ಕತ್ತಾ ನೈಟ್ ರೈಡರ್ಸ್
* 2013: ಮುಂಬೈ ಇಂಡಿಯನ್ಸ್
* 2014: ಕೋಲ್ಕತ್ತಾ ನೈಟ್ ರೈಡರ್ಸ್

ಒನ್ ಇಂಡಿಯಾ ಸುದ್ದಿ

Story first published: Wednesday, January 3, 2018, 10:02 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X