ಚಿತ್ರಗಳಲ್ಲಿ ನೋಡಿ ಸುರೇಶ್ ರೈನಾ ವೆಡ್ಸ್ ಪ್ರಿಯಾಂಕಾ
ನವದೆಹಲಿ, ಏ.4: ಸ್ಫುರದ್ರೂಪಿ ಆಟಗಾರ ಸುರೇಶ್ ರೈನಾ ಅವರು ಬಾಲ್ಯದ ಗೆಳತಿ ಪ್ರಿಯಾಂಕಾ ಚೌಧುರಿ ಅವರನ್ನು ವರಿಸಿದ್ದಾರೆ. ದೆಹಲಿಯ ಲೀಲಾ ಪ್ಯಾಲೇಸ್ ಹೋಟೆಲ್ ನಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಪಂಜಾಬಿ ಸಂಪ್ರದಾಯದಂತೆ ಮದುವೆ ನಡೆದು ನಂತರ ಭರ್ಜರಿಯಾಗಿ ಆರತಕ್ಷತೆ ಕಾರ್ಯಕ್ರಮ ಇಟ್ಟುಕೊಂಡಿದ್ದರು.
ಮದುವೆಗೂ ಮುನ್ನ ನಡೆದ ರೈನಾ ಅವರ ಬ್ಯಾಚುಲರ್ ಪಾರ್ಟಿ ಸಕತ್ ಜೋರಾಗಿತ್ತು. ನಂತರ ಮದುವೆಗೆ ವಿವಿಧ ಕ್ಷೇತ್ರಗಳಿಂದ ಬಂದಿದ್ದ ಗಣ್ಯರು, ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಟೀಂ ಇಂಡಿಯಾದ ಕೆಲ ಆಟಗಾರರು, ಬಾಲಿವುಡ್ ನಟ, ನಟಿಯರು ಸಂಭ್ರಮದಲ್ಲಿ ಜೊತೆಗೂಡಿದರು.[ಬ್ಯಾಚುಲರ್ ಪಾರ್ಟಿ ಸಕತ್ ಬೊಂಬಾಟ್]
ಗಾಜಿಯಾಬಾದಿನಲ್ಲಿ ಬಿ.ಟೆಕ್ ಓದಿರುವ ಪ್ರಿಯಾಂಕಾ ಅವರು ವೃತ್ತಿಯಿಂದ ಬ್ಯಾಂಕರ್ ಆಗಿದ್ದು ನೆದರ್ಲೆಂಡ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರೈನಾ- ಪ್ರಿಯಾಂಕಾ ಇಬ್ಬರು ಹನಿಮೂನ್ ಗೆ ಇಟಲಿಯ ಮಿಲಾನ್ ಗೆ ತೆರಳಲಿದ್ದಾರೆ. ಅದರೆ, ಏ.8ರೊಳಗೆ ರೈನಾ ಅವರು ವಾಪಸ್ ಬರಲಿದ್ದಾರೆ. ಪ್ರಿಯಾಂಕಾ ಅವರು ಹಾಲೆಂಡ್ ಗೆ ಹೋಗುತ್ತಾರೆ.[ಪೂರ್ವ ತಯಾರಿ ಚಿತ್ರಗಳು]
ಪಂಜಾಬಿ ಸಂಪ್ರದಾಯದಂತೆ ರೋಕಾ, ಥಾಕಾ ನಂತರ ಕುರ್ಮಾಯಿ, ಛುನ್ನಿ ಸಮಾರಂಭಗಳು ನಡೆಸಲಾಯಿತು. ಭರ್ಜರಿ ಭೋಜನ ಕೂಟ ಅತಿಥಿಗಳ ಮನಸೆಳೆಯಿತು. ಆರತಕ್ಷತೆಯ ಚಿತ್ರಗಳು ಇಲ್ಲಿವೆ..

ಸಾಂಪ್ರದಾಯಿಕ ಲುಕ್ ರೈನಾ ಮಿಂಚಿಂಗ್
ಸಾಂಪ್ರದಾಯಿಕ ಲುಕ್ ರೈನಾ ಹಾಗೂ ಪ್ರಿಯಾಂಕಾ ಮಿಂಚುತ್ತಿದ್ದರು. ರೈನಾ ಮದುವೆಗಾಗಿ ಲೀಲಾ ಪ್ಯಾಲೇಸ್ ಹೋಟೆಲ್ ಸುಂದರವಾಗಿ ಸಿಂಗಾರಗೊಂಡಿತ್ತು.

ಸಮಾರಂಭಕ್ಕೆ ಆಗಮಿಸಿದ ಗಣ್ಯರು
ಟೀಂ ಇಂಡಿಯಾ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಪತ್ನಿ ಸಾಕ್ಷಿ, ಎನ್ ಶ್ರೀನಿವಾಸನ್, ಸಿಎಸ್ ಕೆ ಆಟಗಾರರಾದ ಡ್ವಾಯ್ನೆ ಬ್ರಾವೋ, ಮೈಕಲ್ ಹಸ್ಸಿ, ಕೋಚ್ ಸ್ಟೀಫನ್ ಫ್ಲೆಮಿಂಗ್ ಮುಂತಾದವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

ಅತಿಥಿಗಳಿಗೆ ಭರ್ಜರಿ ಔತಣ ಕೂಟ
ಲಕ್ನೋ ಸ್ಪೆಷಲ್ ತುಂಡೆ ಕಬಾಬ್ ಪರಾಠ, ಶಾಮಿ ಕಬಾಬ್, ಗಲಾವತ್ ಕಬಾಬ್, ಮಟನ್ ಕೋರ್ಮಾ, ಮಟನ್ ಬಿರ್ಯಾನಿ ಅಲ್ಲದೆ ಬಗೆಗಿನ ಪಂಜಾಬಿ ಸಿಹಿ ತಿನಿಸುಗಳು, ಮೊಸರಿನ ಖಾದ್ಯಗಳು, ಶಾಖಾಹಾರಿ ಊಟ ಕೂಡಾ ಅತಿಥಿಗಳ ಹೊಟ್ಟೆ ತುಂಬಿಸಿದೆ.

ರೈನಾ -ಪ್ರಿಯಾಂಕಾ ಫ್ಯಾಮಿಲಿ ಫುಲ್ ಖುಷ್
ನಿಶ್ಚಿತಾರ್ಥ,ಮದುವೆ, ಆರತಕ್ಷತೆ ಎಲ್ಲವೂ ಸುಸೂತ್ರವಾಗಿ ಸಾಗಿದ್ದಕ್ಕೆ ಸುರೇಶ್ ರೈನಾ -ಪ್ರಿಯಾಂಕಾ ಕುಟುಂಬ ಸಂತಸ ವ್ಯಕ್ತಪಡಿಸಿದೆ.

ಮೋದಿ ಗೈರು ಹಾಜರಿ ಆದರೆ, ಶುಭ ಹಾರೈಕೆ
ಬೆಂಗಳೂರಿನಲ್ಲಿ ರಾಷ್ಟ್ರೀಯ ಕಾರ್ಯಕಾರಿ ಸಭೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ರೈನಾ ಮದುವೆ ಆರತಕ್ಷತೆಗೆ ಗೈರು ಹಾಜರಾಗಿದ್ದರು. ಅದರೆ, ನೂತನ ದಂಪತಿಗೆ ಶುಭ ಸಂದೇಶ ಕಳಿಸಿದ್ದರು.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಸುರೇಶ್ ರೈನಾ ಮದುವೆಗೆ ಹೊರಟ ಕ್ಷಣ

ರೈನಾ ಜೊತೆ ಧೋನಿ ದಂಪತಿ
ಮಧುಮಗ ರೈನಾ ಜೊತೆ ಸಾಕ್ಷಿ ಧೋನಿ, ಅನುಪಮ್ ಖೇರ್, ಎಂಎಸ್ ಧೋನಿ ಹಾಗೂ ಇರ್ಫಾನ್ ಪಠಾಣ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications