ನಾನು BCCI ಸೇರಿದಾಗ 40 ಕೋಟಿ ಇದ್ದ ಬ್ಯಾಲೆನ್ಸ್, ಬ್ಯಾನ್ ಆಗುವ ವೇಳೆಗೆ 47,480 ಕೋಟಿ ಆಗಿತ್ತು: ಲಲಿತ್ ಮೋದಿ

ಬಾಲಿವುಡ್ ನಟಿ ಸುಶ್ಮಿತಾ ಸೇನ್ ಜೊತೆಗಿನ ಡೇಟಿಂಗ್ ವಿಚಾರವನ್ನು ಅಧಿಕೃತವಾಗಿ ತಿಳಿಸಿದ್ದ ಬೆನ್ನಲ್ಲೇ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಸುಶ್ಮಿತಾ ಹಾಗೂ ಲಲಿತ್ ಮೋದಿ ಮದುವೆಯಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವದಂತಿಗಳು ಹರಿದಾಟಿದ ಬೆನ್ನಲ್ಲಿ ಟ್ವೀಟ್ ಮಾಡಿದ ಲಲಿತ್ ಮೋದಿ ನಾವಿಬ್ಬರೂ ಡೇಟಿಂಗ್ ನಡೆಸುತ್ತಿದ್ದೇವೆ, ಶೀಘ್ರದಲ್ಲೇ ಮದುವೆಯಾಗಲಿದ್ದೇವೆ ಎಂದಿದ್ದರು.
ಆದ್ರೆ ಇದರ ಬೆನ್ನಲ್ಲೇ ಲಲಿತ್ ಮೋದಿ ವಿರುದ್ಧ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಲಲಿತ್ ಮೋದಿ ವಂಚಕ, ಲಂಚಕೋರ ಎಂಬೆಲ್ಲಾ ಟೀಕೆಗಳನ್ನ ನೆಟ್ಟಿಗರು ಮಾಡಿದ್ದರು. ಆದ್ರೆ ಈ ಎಲ್ಲಾ ಆರೋಪಗಳಿಗೆ ಲಲಿತ್ ಮೋದಿ 500 ಪದಗಳ ಮೂಲಕ ಉತ್ತರ ನೀಡಿದ್ದಾರೆ. ತಾನು ಯಾರು, ತನ್ನ ಹಿನ್ನಲೆ ಏನು ಎಂಬುದನ್ನ ನೆನಪಿಸಿದ್ದಾರೆ. ಜೊತೆಗೆ ಬಿಸಿಸಿಐ ತನ್ನಿಂದ ಹೇಗೆ ಬೆಳೆದು ನಿಂತಿತು ಎಂಬುದನ್ನ ಮನವರಿಕೆ ಮಾಡಿದ್ದಾರೆ.

ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಲಲಿತ್ ಮೋದಿ ತಿರುಗೇಟು
ತನ್ನ ಇನ್‌ಸ್ಟಾಗ್ರಾಮ್ ಮೂಲಕ ನೆಟ್ಟಿಗರ ಟೀಕೆಗಳಿಗೆ ತಿರುಗೇಟು ನೀಡಿರುವ ಲಲಿತ್ ಮೋದಿ, ಟೀಕೆಗಳಿಗೆ ತಿರುಗೇಟು ನೀಡಿದ್ದಾರೆ. ಇದೇ ವೇಳೆ ತಾನು ಬಿಸಿಸಿಐ ಸೇರಿದ ಬಳಿಕ ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಯ ಬ್ಯಾಂಕ್ ಬ್ಯಾಲೆನ್ಸ್ ಹೇಗೆ ಬೆಳೆಯಿತು ಎಂಬುದನ್ನ ಸಹ ತಿಳಿಸಿದ್ದಾರೆ.

40 ಕೋಟಿ ಇದ್ದ ಬ್ಯಾಲೆನ್ಸ್ 47,480 ಕೋಟಿ ಆಗಿದೆ!
ಲಲಿತ್ ಮೋದಿ ಹೇಳುವ ಪ್ರಕಾರ ಆತ ಬಿಸಿಸಿಐ ಸೇರಿದ್ದ ವೇಳೆಯಲ್ಲಿ ಬಿಸಿಸಿಐ ಬ್ಯಾಂಕ್ ಬ್ಯಾಲೆನ್ಸ್ ಕೇವಲ 40 ಕೋಟಿಯಷ್ಟಿತ್ತು ಎಂದಿದ್ದಾರೆ. ಆದ್ರೆ ಅದೇ ಅವರು ಬ್ಯಾನ್ ಆಗುವ ವೇಳೆಗೆ ಬಿಸಿಸಿಐ ಖಜಾನೆ 47,680 ಕೋಟಿ ರೂಪಾಯಿಗೆ ತಲುಪಿತು ಎಂದು ಹೇಳಿಕೆ ನೀಡಿರುವುದು ಆಶ್ಚರ್ಯ ಮೂಡಿಸಿದೆ.
''ನಾನು ಬಿಸಿಸಿಐಗೆ ಸೇರಿದಾಗ ಬ್ಯಾಂಕ್‌ನಲ್ಲಿ 40 ಕೋಟಿ ಇತ್ತು. ನಾನು ನವೆಂಬರ್ 29, 2005 ರಂದು ಬಿಸಿಸಿಐಸೇರಿಕೊಂಡೆ. ನನ್ನನ್ನು ಬ್ಯಾನ್ ಮಾಡಿದಾಗ ಬ್ಯಾಂಕ್‌ನಲ್ಲಿ ಏನಿತ್ತು ಎಂದು ಊಹಿಸಿ 47,680 ಕೋಟಿಗಳು." ಎಂದು ಲಲಿತ್ ಮೋದಿ ತಿಳಿಸಿದ್ದಾರೆ.
ಇದರ ಜೊತೆಗೆ ತಾನು ಎಂದಿಗೂ ಯಾರಿಂದಲೂ ಲಂಚ ಪಡೆದಿಲ್ಲ ಎಂದು ಹೇಳಿರುವ ಲಲಿತ್ ಮೋದಿ, ಸರ್ಕಾರದಿಂದ ಯಾವುದೇ ಸಹಾಯವನ್ನು ಪಡೆದಿಲ್ಲ ಎಂದಿದ್ದಾರೆ. ಜೊತೆಗೆ ತಾನು ಡೈಮಂಡ್ ಸ್ಪೂನ್‌ನೊಂದಿಗೆ ಹುಟ್ಟಿ ಬಂದವನು ಎಂದಿದ್ದಾರೆ.
6 ಸಿಕ್ಸರ್‌ಗಳನ್ನು ಬಾರಿಸಿದ್ರೂ ಪರವಾಗಿಲ್ಲ, ನನಗೆ ವಿಕೆಟ್ ಸಿಗುವುದೇ ಮುಖ್ಯ: ಹಾರ್ದಿಕ್ ಪಾಂಡ್ಯ
10 ಫೋಟೋಗಳ ಜೊತೆಗೆ ತನ್ನ ಹಿನ್ನಲೆಯನ್ನು ತಿಳಿಸಿದ ಲಲಿತ್ ಮೋದಿ
ಇನ್‌ಸ್ಟಾಗ್ರಾಮ್ ಅಧಿಕೃತ ಖಾತೆಯ ಮೂಲಕ 10 ಫೋಟೊಗಳನ್ನ ಶೇರ್ ಮಾಡಿರುವ ಲಲಿತ್ ಮೋದಿ ತನ್ನ ಹಿನ್ನಲೆ ಏನು ಎಂಬುದಕ್ಕೆ ಜಗಕ್ಕೆ ಸಾರಿದ್ದಾರೆ. ಈ ಪೋಟೋಗಳಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ದಲೈ ಲಾಮಾ ಸೇರಿದಂತೆ ಅನೇಕ ಖ್ಯಾತ ನಾಮರ ಜೊತೆಗೆ ಲಲಿತ್ ಮೋದಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳ ಜೊತೆಗೆ 500 ಪದಗಳ ಪ್ರಕಟಣೆಯನ್ನು ಸಹ ನೀಡಿದ್ದು ಟೀಕೆಗಳಿಗೆ ಉತ್ತರಿಸಿದ್ದಾರೆ.
"ನಾನು "ಡೈಮಂಡ್ ಸ್ಪೂನ್"ನೊಂದಿಗೆ ಹುಟ್ಟಿದ್ದೇನೆ, ನಾನು ಲಂಚವನ್ನು ತೆಗೆದುಕೊಂಡಿಲ್ಲ ಅಥವಾ ಇದುವರೆಗೆ ಅಗತ್ಯವಿರಲಿಲ್ಲ. ಕನಿಷ್ಠ ನಾನು ಹಣವನ್ನು ಖರೀದಿಸಲು #ರಾಯಬಹದುರ್ಗಜರಮಲ್ಮೋದಿ ಅವರ ಹಿರಿಯ ಮೊಮ್ಮಗ ಎಂಬುದನ್ನು ನೀವು ಮರೆಯಬೇಡಿ. ತೆಗೆದುಕೊಂಡಿಲ್ಲ (sic)" ಎಂದು ಲಲಿತ್ ಬರೆದಿದ್ದಾರೆ.
ಐಪಿಎಲ್ ಮೊದಲ ಅಧ್ಯಕ್ಷರಾಗಿರುವ ಲಲಿತ್ ಮೋದಿ ಸುಶ್ಮಿತಾ ಸೇನ್ ಜೊತೆಗಿನ ಡೇಟಿಂಗ್ ವಿಚಾರವನ್ನು ಜುಲೈ 15ರಂದು ತಿಳಿಸಿದ ಬಳಿಕ ಸಾಕಷ್ಟು ಟ್ರೆಂಡಿಂಗ್ ನಲ್ಲಿದ್ದಾರೆ.
IND vs ENG: ಮತ್ತೆ ನಿರಾಸೆ ಮೂಡಿಸಿದ ವಿರಾಟ್ ಕೊಹ್ಲಿ; ಹೀಗಾದರೆ ಭವಿಷ್ಯದ ಕಥೆಯೇನು?
ನಾವೀನ್ನೂ ಡೇಟಿಂಗ್‌ನಲ್ಲಿದ್ದೇವೆ, ಮದುವೆಯಾಗುತ್ತೇವೆ!
ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಹಾಗೂ ನಟಿ ಸುಶ್ಮಿತಾ ಸೇನ್ ವಿಚಾರ ಯಾವಾಗ ಹೆಚ್ಚು ಸುದ್ದಿಯಾಗತೊಡಗಿತೋ, ತಡಮಾಡದೇ ಬಿಸಿಸಿಐ ಮಾಜಿ ಅಧ್ಯಕ್ಷ ಲಲಿತ್ ಮೋದಿ ಸುಶ್ಮಿತಾ ಸೇನ್ ಜೊತೆಗಿನ ಫೋಟೋಗಳನ್ನ ಶೇರ್ ಮಾಡುವ ಮೂಲಕ, ನಾವಿನ್ನೂ ಡೇಟಿಂಗ್ ಮಾಡುತ್ತಿದ್ದೇವೆ. ಮದುವೆಯೂ ಕೂಡ ಒಂದು ದಿನ ನಡೆಯಲಿದೆ ಎಂದು ಸ್ಪಷ್ಟನೆ ನೀಡಿದ್ದರು. ಈ ಟ್ವೀಟ್ ಅನ್ನು ನೋಡಿದ ನೆಟ್ಟಿಗರು ಆಶ್ಚರ್ಯಗೊಂಡಿದ್ದಷ್ಟೇ ಅಲ್ಲದೆ ಸಾಕಷ್ಟು ಟ್ವೀಟ್ ಮಾಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications