Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs Eng 3rd T20: ಪಂದ್ಯದ ಪ್ರೆಡಿಕ್ಷನ್, ಡ್ರೀಂ ಟೀಮ್, ಪ್ಲೇಯಿಂಗ್ 11, ಫ್ಯಾಂಟೆಸಿ ಕ್ರಿಕೆಟ್ ಟಿಪ್ಸ್‌

England vs India

ಮೊದಲ ಟಿ20 ಪಂದ್ಯದಲ್ಲಿ 50 ರನ್ ಹಾಗೂ ಎರಡನೇ ಟಿ20 ಪಂದ್ಯದಲ್ಲಿ 49ರನ್‌ಗಳ ಗೆಲುವು ಸಾಧಿಸಿದ ಬಳಿಕ ಟೀಂ ಇಂಡಿಯಾ ಭಾನುವಾರ ಮೂರನೇ ಟಿ20 ಪಂದ್ಯವನ್ನು ಆಡಲು ಸಜ್ಜಾಗಿದೆ. ಎಡ್ಜ್‌ಬಾಸ್ಟನ್‌ ಕ್ರಿಕೆಟ್ ಗ್ರೌಂಡ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸುಲಭವಾಗಿ ಗೆದ್ದು ಈಗಾಗಲೇ ಸರಣಿ ಜಯಿಸಿರುವ ರೋಹಿತ್ ಪಡೆ ಕ್ಲೀನ್ ಸ್ವೀಪ್ ಮಾಡುವ ಗುರಿಯನ್ನ ಹೊಂದಿದೆ.

ಎರಡನೇ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ 8 ವಿಕೆಟ್ ನಷ್ಟಕ್ಕೆ 170 ರನ್ ಕಲೆಹಾಕಿತು. ರವೀಂದ್ರ ಜಡೇಜಾ ಅಜೇಯ 46ರನ್ ಕಲೆಹಾಕಿ ತಂಡಕ್ಕೆ ಆಧಾರವಾದ್ರು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಭಾರತದ ಬಿಗು ಬೌಲಿಂಗ್ ದಾಳಿಗೆ ತತ್ತರಿಸಿ ಹೋಗಿ 17 ಓವರ್‌ಗಳಲ್ಲಿ 121ರನ್‌ಗಳಿಗೆ ಆಲೌಟ್ ಆದ್ರು. ಪರಿಣಾಮ ಭಾರತ 49 ರನ್‌ಗಳಿಂದ ಗೆದ್ದು ಬೀಗಿತು.

ಪಿಚ್ ರಿಪೋರ್ಟ್‌ ಮತ್ತು ಹವಾಮಾನ

ಪಿಚ್ ರಿಪೋರ್ಟ್‌ ಮತ್ತು ಹವಾಮಾನ

ಟ್ರೆಂಟ್‌ಬಿಡ್ಜ್‌ನ ನಾಟಿಂಗ್‌ಹ್ಯಾಮ್‌ ಕ್ರಿಕೆಟ್ ಗ್ರೌಂಡ್ ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು, ಮೂರನೇ ಟಿ20 ಪಂದ್ಯದಲ್ಲೂ ಉತ್ತಮ ರನ್ ಹರಿದು ಬರುವ ನಿರೀಕ್ಷೆ ಇದೆ. ಸ್ಪಿನ್ನರ್‌ಗಳಿಗಿಂತ ಪೇಸರ್‌ಗಳು ಹೆಚ್ಚು ವಿಕೆಟ್ ಕಬಳಿಸುವ ಸಾಧ್ಯತೆಯಿದ್ದು, ಪಂದ್ಯದಲ್ಲಿ ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳ ಪಾತ್ರವೂ ಬಹುಮುಖ್ಯವಾಗಿದೆ. ಈ ಪಿಚ್‌ನಲ್ಲಿ ಮೊದಲ ಇನ್ನಿಂಗ್ಸ್‌ ಸರಾಸರಿ ಸ್ಕೋರ್ 178ರನ್ ಆಗಿದೆ.

ಇಲ್ಲಿನ ಹವಾಮಾನ 19 ಡಿಗ್ರಿ ಸೆಲ್ಸಿಯಸ್‌ನಷ್ಟಿರಲಿದ್ದು, ಹ್ಯುಮಿಡಿಟಿ ಶೇಕಡಾ 65ರಷ್ಟಿರಲಿದ್ದು ಮತ್ತು 10km/hr ಗಾಳಿ ಬೀಸಲಿದೆ. ಪ್ರಸ್ತುತ ಇಲ್ಲಿ ಮಳೆ ಬರುವ ಯಾವುದೇ ಅಂದಾಜು ಇಲ್ಲದಿದ್ದರೂ, ಇಂಗ್ಲೆಂಡ್ ವಾತಾವರಣವು ಯಾವಾಗ ಬೇಕಾದರೂ ಬದಲಾಗಬಹುದು. ಪಂದ್ಯವು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ನಡೆಯಲಿದೆ.

ಮತ್ತೊಮ್ಮೆ ಕೆಟ್ಟದಾಗಿ ಔಟಾದ ವಿರಾಟ್ ಕೊಹ್ಲಿ: ಇನ್ನೆಷ್ಟು ಚಾನ್ಸ್ ಕೊಡಬೇಕು ಎಂದ ನೆಟ್ಟಿಗರು!

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11

ಭಾರತ:
ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ದಿನೇಶ್‌ ಕಾರ್ತಿಕ್, ಹರ್ಷಲ್ ಪಟೇಲ್ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಯುಜವೇಂದ್ರ ಚಹಾಲ್


ಇಂಗ್ಲೆಂಡ್:
ಜೇಸನ್ ರಾಯ್, ಜೋಸ್ ಬಟ್ಲರ್ (ನಾಯಕ ಮತ್ತು ವಿಕೆಟ್ ಕೀಪರ್), ಡೇವಿಡ್ ಮಲನ್, ಲಿಯಾಮ್ ಲಿವಿಂಗ್‌ಸ್ಟೋನ್‌, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಸ್ಯಾಮ್ ಕರ್ರನ್, ಡೇವಿಡ್ ವಿಲ್ಲಿ, ಕ್ರಿಸ್ ಜೋರ್ಡಾನ್, ರಿಚರ್ಡ್ ಗ್ಲೀಸನ್, ಮ್ಯಾಟ್ ಪಾರ್ಕಿನ್ಸನ್

IND vs ENG: ಭಾರತದಿಂದ ಉತ್ಕೃಷ್ಟ ದರ್ಜೆಯ ಪ್ರದರ್ಶನ: ಹೊಗಳಿದ ಮೈಕಲ್ ವಾನ್

ಫ್ಯಾಂಟೆಸಿ ಡ್ರೀಂ ಟೀಮ್ 1

ಫ್ಯಾಂಟೆಸಿ ಡ್ರೀಂ ಟೀಮ್ 1

ನಾಯಕ- ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ

ಉಪನಾಯಕ - ಮೊಯಿನ್ ಅಲಿ, ಜಾಸ್ ಬಟ್ಲರ್

ಕೀಪರ್ - ಜೋಸ್ ಬಟ್ಲರ್, ರಿಷಭ್ ಪಂತ್

ಬ್ಯಾಟ್ಸ್‌ಮನ್‌ಗಳು - ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಡೇವಿಡ್ ಮಲನ್

ಆಲ್‌ರೌಂಡರ್ಸ್‌-ಮೊಯೀನ್ ಅಲಿ (ಉಪನಾಯಕ), ಹಾರ್ದಿಕ್ ಪಾಂಡ್ಯ (ನಾಯಕ)

ಬೌಲರ್ಸ್ - ಯುಜವೇಂದ್ರ ಚಹಾಲ್, ಜಸ್ಪ್ರಿತ್ ಬುಮ್ರಾ, ಕ್ರಿಸ್ ಜೋರ್ಡಾನ್, ರಿಚರ್ಡ್ ಗ್ಲೀಸನ್

ಫ್ಯಾಂಟೆಸಿ ಡ್ರೀಂ ಟೀಮ್ 2

ಫ್ಯಾಂಟೆಸಿ ಡ್ರೀಂ ಟೀಮ್ 2

ಕೀಪರ್ - ಜೋಸ್ ಬಟ್ಲರ್ (ಉಪನಾಯಕ), ರಿಷಬ್ ಪಂತ್

ಬ್ಯಾಟ್ಸ್‌ಮನ್‌ಗಳು - ರೋಹಿತ್ ಶರ್ಮಾ (ನಾಯಕ), ಸೂರ್ಯಕುಮಾರ್ ಯಾದವ್, ಲಿಯಾಮ್ ಲಿವಿಂಗ್‌ಸ್ಟೋನ್

ಆಲ್‌ರೌಂಡರ್‌ಗಳು - ರವೀಂದ್ರ ಜಡೇಜಾ, ಮೊಯಿನ್ ಅಲಿ, ಹಾರ್ದಿಕ್ ಪಾಂಡ್ಯ

ಬೌಲರ್‌ಗಳು - ಯುಜವೇಂದ್ರ ಚಹಾಲ್, ಜಸ್ಪ್ರೀತ್ ಬುಮ್ರಾ, ಕ್ರಿಸ್ ಜೋರ್ಡಾನ್

Dhoni Ind vs Eng ಪಂದ್ಯ ಮುಗಿದಾಗ ನಂತರ ಡ್ರೆಸ್ಸಿಂಗ್ ರೂಮ್‌‌ಗೆ ಭೇಟಿ ನೀಡಿದರು | *Cricket | OneIndia Kannada
ಪಂದ್ಯದ ಪ್ರೆಡಿಕ್ಷನ್ ಮತ್ತು ಡ್ರೀಂ ಟೀಮ್ ಕಾಂಬಿನೇಷನ್

ಪಂದ್ಯದ ಪ್ರೆಡಿಕ್ಷನ್ ಮತ್ತು ಡ್ರೀಂ ಟೀಮ್ ಕಾಂಬಿನೇಷನ್

ಈ ಆಟಕ್ಕೆ ಅತ್ಯುತ್ತಮವಾಗಿ ಸೂಚಿಸಲಾದ ಫ್ಯಾಂಟಸಿ/Dream11 ಕಾಂಬಿನೇಷ್ 2-3-24 ಆಗಿದೆ. ಎರಡೂ ತಂಡಗಳು ಕಾಂಬಿನೇಷನ್ ನೋಡಿದ್ರೆ, ಟೀಂ ಇಂಡಿಯಾ ಈ ಪಂದ್ಯವನ್ನೂ ಗೆಲ್ಲುವ ಅವಕಾಶ ಹೆಚ್ಚಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡವು ಗೆಲ್ಲುವ ಅವಕಾಶ ಹೆಚ್ಚಿದ್ದು, ಹಾರ್ದಿಕ್ ಪಾಂಡ್ಯ ಮತ್ತು ಜಾಸ್ ಬಟ್ಲರ್ ಮತ್ತು ಮೊಯಿನ್ ಅಲಿ ಪ್ರಮುಖ ಆಯ್ಕೆಯಾಗಿದ್ದಾರೆ.

Story first published: Sunday, July 10, 2022, 11:39 [IST]
Other articles published on Jul 10, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+