ರಿಕಿ ಪಾಂಟಿಂಗ್ ವಿಶ್ವದಾಖಲೆ ಸರಿಗಟ್ಟಲು, ರೋಹಿತ್‌ಗೆ ಇನ್ನೊಂದೇ ಹೆಜ್ಜೆ

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತದ ಯಶಸ್ವಿ ಪ್ರದರ್ಶನ ಮುಂದುವರಿದಿದೆ. ರೋಹಿತ್ ಲಿಮಿಟೆಡ್ ಓವರ್ ಕ್ಯಾಪ್ಟನ್ ಆದ ಬಳಿಕ ಎಲ್ಲಿಯೂ ಕೂಡ ಎಡವದೆ ತಂಡಕ್ಕೆ ಸತತ ಗೆಲುವನ್ನ ತಂದುಕೊಡುತ್ತಿದ್ದಾರೆ. ಹೀಗಾಗಿಯೇ ಭಾರತವು ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಈಗಾಗಲೇ 2-0ಯಿಂದ ಮುನ್ನಡೆ ಸಾಧಿಸಿದೆ.
ರೋಹಿತ್ ಶರ್ಮಾ ಅವರ ಮಾಂತ್ರಿಕ ಪ್ರದರ್ಶನವು ಭಾರತೀಯ ನಾಯಕನಾಗಿ ಮುಂದುವರೆದಿದೆ. ಮೊದಲ ಪಂದ್ಯದಲ್ಲಿ 50ರನ್‌ಗಳ ಗೆಲುವು, ಎರಡನೇ ಟಿ20 ಪಂದ್ಯದಲ್ಲಿ 50ರನ್‌ಗಳಿಂದ ಭಾರತ ಗೆದ್ದಿದ್ದು, ಮೂರನೇ ಪಂದ್ಯದಲ್ಲೂ ಗೆದ್ದು ವೈಟ್‌ವಾಶ್ ಮಾಡುವ ಗುರಿ ಹೊಂದಿದೆ.

ರಿಕಿ ಪಾಂಟಿಂಗ್ ವಿಶ್ವದಾಖಲೆ ಸರಿಗಟ್ಟುವ ಅವಕಾಶ
ರೋಹಿತ್ ಶರ್ಮಾ ರಿಕಿ ಪಾಂಟಿಂಗ್ ಅವರ ವಿಶ್ವ ದಾಖಲೆಗಳ ಪಕ್ಕದಲ್ಲಿದ್ದಾರೆ. ಕಳೆದ ಟಿ20ಯಲ್ಲಿ ಗೆಲ್ಲುವ ಮೂಲಕ ರೋಹಿತ್ ನಾಯಕನಾಗಿ ಸತತ 19 ಪಂದ್ಯಗಳನ್ನ ಗೆದ್ದಂತಹ ಸಾಧನೆ ಮಾಡಿದ್ದಾರೆ. ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆಯಲಿರುವ ಮೂರನೇ ಪಂದ್ಯವನ್ನೂ ಗೆದ್ದರೆ ರೋಹಿತ್ ಆಸ್ಟ್ರೇಲಿಯಾದ ದಿಗ್ಗಜ ನಾಯಕ ರಿಕಿ ಪಾಂಟಿಂಗ್ ದಾಖಲೆ ಸರಿಗಟ್ಟಲಿದ್ದಾರೆ.
2003 ರಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ಯಾಪ್ಟನ್ ರಿಕಿ ಪಾಂಟಿಂಗ್ ಅವರ 20 ಗೆಲುವುಗಳ ದಾಖಲೆಯನ್ನು ಸಮನಾಗಿರಲು ಸಾಧ್ಯವಾಗುತ್ತದೆ, ಇದು ಪುರುಷರ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ಯಾಪ್ಟನ್ ಆಗಿ ಅತಿ ಹೆಚ್ಚಿನ ಸತತ ಗೆಲುವಾಗಿದೆ.
IND vs ENG: 1 ರನ್ ಗಳಿಸಿ ಕಳಪೆಯಾದ ಕೊಹ್ಲಿ 3ನೇ ಟಿ20ಯಿಂದ ಔಟ್? ಕೊಹ್ಲಿ ಕೊಟ್ಟ ಉತ್ತರವಿದು

ಈಗಾಗಲೇ ಅತಿ ಹೆಚ್ಚು ಪಂದ್ಯ ಗೆದ್ದ ದಾಖಲೆ ಹೊಂದಿರುವ ರೋಹಿತ್
ರೋಹಿತ್ ಈಗಾಗಲೇ ಟಿ 20 ತಂಡದ ನಾಯಕನಾಗಿ ಸತತ ಗೆಲುವುಗಳ ದಾಖಲೆಯೊಂದಿಗೆ ಮುನ್ನಡೆ ಸಾಧಿಸಿದ್ದಾರೆ. ಈ ಗೆಲುವಿನ ಹಾದಿಯು 2019 ರಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತವನ್ನು ನಾಯಕತ್ವ ವಹಿಸಿದಾಗ ಪ್ರಾರಂಭವಾಗಿದ್ದು, ಎಲ್ಲಾ ಸ್ವರೂಪಗಳಾದ್ಯಂತ, ರೋಹಿತ್ ಈಗ ಕ್ಯಾಪ್ಟನ್ ಆಗಿ ಸತತ 19 ಗೆಲುವುಗಳನ್ನು ಹೊಂದಿದ್ದಾರೆ, ಅದರಲ್ಲಿ 14 ಗೆಲುವು ಟಿ20 ಅಂತರಾಷ್ಟ್ರೀಯ ಪಂದ್ಯಗಳಿಂದ ಬಂದಿದೆ.
Ind vs Eng 3rd T20: ಪಂದ್ಯದ ಪ್ರೆಡಿಕ್ಷನ್, ಡ್ರೀಂ ಟೀಮ್, ಪ್ಲೇಯಿಂಗ್ 11, ಫ್ಯಾಂಟೆಸಿ ಕ್ರಿಕೆಟ್ ಟಿಪ್ಸ್

ರೋಹಿತ್ ಶರ್ಮಾ ಟಿ20 ನಾಯಕತ್ವದ ದಾಖಲೆ
ಟೀಂ ಇಂಡಿಯಾ ನಾಯಕನಾಗಿ ರೋಹಿತ್ ಶರ್ಮಾ ಅತ್ಯಮೋಘ ದಾಖಲೆಯನ್ನ ಹೊಂದಿದ್ದಾರೆ. ಇದುವರೆಗೆ 30 ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಭಾರತವನ್ನ ಮುನ್ನಡೆಸಿರುವ ರೋಹಿತ್ ಶರ್ಮಾ 26 ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದು, ಇವರ ನಾಯಕತ್ವದಲ್ಲಿ ಕೇವಲ 4 ಪಂದ್ಯಗಳನ್ನಷ್ಟೇ ಭಾರತ ಸೋತಿದೆ. ಇನ್ನು ಗೆಲುವಿನ ಸರಾಸರಿಯಲ್ಲಿ ರೋಹಿತ್ ಶರ್ಮಾ ಎಲ್ಲರಿಗಿಂತ ಮುಂದಿದ್ದು ಶೇಕಡಾ 86.66ರಷ್ಟು ಸರಾಸರಿ ಹೊಂದಿದ್ದಾರೆ.
ಟೀಂ ಇಂಡಿಯಾ ನಾಯಕನಾಗಿ ವಿರಾಟ್ ಕೊಹ್ಲಿ ಶೇಕಡಾ 64.58ರ ಗೆಲುವಿನ ಸರಾಸರಿಯಲ್ಲಿ 50 ಪಂದ್ಯಗಳಲ್ಲಿ 30 ಗೆಲುವು ಮತ್ತು 16 ಸೋಲು, 2 ಟೈ, 2 ಪಂದ್ಯದಲ್ಲಿ ಯಾವುದೇ ಫಲಿತಾಂಶವಿಲ್ಲ. ಎಂ.ಎಸ್ ಧೋನಿ 59.28ರ ಸರಾಸರಿಯಲ್ಲಿ 72 ಪಂದ್ಯಗಳಲ್ಲಿ 41 ಗೆಲುವು ಮತ್ತು 28 ಸೋಲು, 1 ಟೈ, 2 ಪಂದ್ಯಗಳಲ್ಲಿ ಫಲಿತಾಂಶವಿಲ್ಲ.

ಟಿ20 ಕ್ರಿಕೆಟ್‌ನಲ್ಲಿ 300 ಬೌಂಡರಿ ಸಿಡಿಸಿದ ಮೊದಲ ಭಾರತೀಯ ರೋಹಿತ್
ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ಬೌಂಡರಿ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್ ಆಗಿ ರೋಹಿತ್ ಶರ್ಮಾ ಹೊರಹೊಮ್ಮಿದ್ದಾರೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ರೋಹಿತ್ ಈ ಸಾಧನೆ ಮಾಡಿದ್ದಾರೆ. ಈ ಪಂದ್ಯದಲ್ಲಿ 20 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ ರೋಹಿತ್ 31 ರನ್ ಸಿಡಿಸಿದ್ದು, ಒಟ್ಟಾರೆ ಟಿ20 ಅಂತರಾಷ್ಟ್ರೀಯ ವೃತ್ತಿಜೀವನದಲ್ಲಿ 301 ಬೌಂಡರಿ ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications