Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs Eng 5th Test: ಅಮೋಘ ಶತಕ ದಾಖಲಿಸಿದ ರವೀಂದ್ರ ಜಡೇಜಾ ದಾಖಲೆ

Ravindra jadeja

ಎಡ್ಜ್‌ಬಾಸ್ಟನ್‌ ಸ್ಟೇಡಿಯಂನಲ್ಲಿ ಮರುನಿಗದಿಯಾದ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಲ್‌ರೌಂಡರ್ ರವೀಂದ್ರ ಜಡೇಜಾ ಅಮೋಘ ಶತಕ ದಾಖಲಿಸಿದ್ದಾರೆ. ಮೊದಲ ದಿನದಾಟದಲ್ಲಿ ರಿಷಭ್ ಪಂತ್ ಜೊತೆಗೆ ದ್ವಿಶತಕದ ಜೊತೆಯಾಟವಾಡಿದ್ದ ಜಡ್ಡು, ಎರಡನೇ ದಿನದಾಟದಲ್ಲಿ ತನ್ನ ಆಟವನ್ನು ಮುಂದುವರಿಸಿ ಮೂರಂಕಿ ಗಡಿ ದಾಟಿದ್ದಾರೆ.

ಮೊದಲ ದಿನದಾಟದಲ್ಲಿ ರಿಷಭ್ ಪಂತ್ ಅಬ್ಬರ ಒಂದೆಡೆಯಾದ್ರೆ, ಅಷ್ಟೇ ಉತ್ತಮವಾಗಿ ಜೊತೆಯಾಟ ನೀಡಿದ ಆಲ್‌ರೌಂಡರ್ ರವೀಂದ್ರ ಜಡೇಜಾ ತನ್ನ ಆಯ್ಕೆಯ ಕುರಿತಾಗಿ ಸಮರ್ಥವಾದ ಇನ್ನಿಂಗ್ಸ್‌ ಆಡಿದರು. ಪ್ಲೇಯಿಂಗ್ ಇಲೆವೆನ್‌ನಲ್ಲಿ ರವಿಚಂದ್ರನ್ ಅಶ್ವಿನ್‌ಗೆ ಏಕೆ ಅವಕಾಶ ನೀಡಲಿಲ್ಲ ಎಂದು ಟೀಕೆ ವ್ಯಕ್ತವಾದ ಬೆನ್ನಲ್ಲೇ ಜಡ್ಡು ತನ್ನ ಬೊಂಬಾಟ್ ಇನ್ನಿಂಗ್ಸ್‌ ಮೂಲಕ ಟೀಂ ಇಂಡಿಯಾಗೆ ಆಧಾರವಾದರು. ಅಲ್ಲದೆ ಇದೀಗ ಟೆಸ್ಟ್ ಕ್ರಿಕೆಟ್‌ನಲ್ಲಿ ಮೂರನೇ ಶತಕವನ್ನು ದಾಖಲಿಸಿದ್ದಾರೆ.

ರವೀಂದ್ರ ಜಡೇಜಾ ಶತಕದ ಸಾಧನೆ

ಆಲ್‌ರೌಂಡರ್ ರವೀಂದ್ರ ಜಡೇಜಾ 183ನೇ ಎಸೆತಗಳಲ್ಲಿ ಶತಕ ದಾಖಲಿಸುವ ಮೂಲಕ ಅಮೋಘ ಇನ್ನಿಂಗ್ಸ್‌ ಪ್ರದರ್ಶಿಸಿದರು. ಜಡೇಜಾ 92 ರನ್‌ಗಳಿಸಿದ್ದಾಗ ಮ್ಯಾಟಿ ಪಾಟ್ಸ್‌ ಬೌಲಿಂಗ್‌ನಲ್ಲಿ ಸಿಕ್ಕ ಜೀವದಾನವನ್ನ ಬಳಿಸಿಕೊಂಡ ಜಡ್ಡು ಸತತ ಎರಡು ಬೌಂಡರಿ ದಾಖಲಿಸಿ ಶತಕ ದಾಖಸಿದರು. ಜಡೇಜಾ ಇನ್ನಿಂಗ್ಸ್‌ನಲ್ಲಿ 13 ಬೌಂಡರಿಗಳು ಸಹ ಒಳಗೊಂಡಿವೆ.

ಮೊದಲ ದಿನದಾಟದಂತ್ಯಕ್ಕೆ 163 ಎಸೆತಗಳಲ್ಲಿ ಅಜೇಯ 83 ರನ್‌ ಕಲೆಹಾಕಿದ್ದ ಜಡ್ಡು 13 ರನ್‌ಗಳ ದಾಖಲಿಸಿ ಇಂದು ಶತಕ ದಾಖಲಿಸಿದ ಸಾಧನೆ ಮಾಡಿದ್ದಾರೆ. ಈ ಮೂಲಕ ರಿಷಭ್ ಪಂತ್ ಜೊತೆಗೆ ಶತಕಧಾರಿಯಾಗಿದ್ದಾರೆ.

120 ವರ್ಷಗಳಲ್ಲಿ ಇದೇ ಮೊದಲು!: ಸ್ಪೋಟಕ ಶತಕ ಸಿಡಿಸಿ ಪಂತ್ ಮುರಿದ ದಾಖಲೆ ಒಂದೆರಡಲ್ಲ!

ಒಂದೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ ಟೀಂ ಇಂಡಿಯಾದ ಇಬ್ಬರು ಎಡಗೈ ಬ್ಯಾಟ್ಸ್‌ಮನ್‌ಗಳು

ಒಂದೇ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ ಟೀಂ ಇಂಡಿಯಾದ ಇಬ್ಬರು ಎಡಗೈ ಬ್ಯಾಟ್ಸ್‌ಮನ್‌ಗಳು

ಈ ಪಂದ್ಯದ ವಿಶೇಷ ಅಂದ್ರೆ ಇಬ್ಬರು ಎಡಗೈ ಬ್ಯಾಟ್ಸ್‌ಮನ್‌ಗಳು ಶತಕ ಸಿಡಿಸಿರುವುದಾಗಿದೆ. ರಿಷಭ್ ಪಂತ್ 146ರನ್‌ಗಳಿಸಿ ಔಟಾದ್ರೆ, ಜಡ್ಡು ಶತಕ ಸಿಡಿಸಿ ಅಜೇಯರಾಗಿ ಆಟ ಮುಂದುವರಿಸಿದ್ದಾರೆ. ಟೀಂ ಇಂಡಿಯಾ ಪರ ಹೀಗೆ ಒಂದೇ ಇನ್ನಿಂಗ್ಸ್‌ನಲ್ಲಿ ಶತಕ ದಾಖಲಿಸಿದ ಇಬ್ಬರು ಎಡಗೈ ಬ್ಯಾಟರ್‌ಗಳನ್ನ ಈ ಕೆಳಗೆ ಕಾಣಬಹುದು.

ಎಸ್ ರಮೇಶ್ (110) ಮತ್ತು ಎಸ್ ಗಂಗೂಲಿ (125) ವಿರುದ್ಧ ನ್ಯೂಜಿಲೆಂಡ್, ಅಹಮದಾಬಾದ್ 1999
ಎಸ್ ಗಂಗೂಲಿ (239) ಮತ್ತು ಯುವರಾಜ್ (169) ವಿರುದ್ಧ ಪಾಕಿಸ್ತಾನ, ಬೆಂಗಳೂರು 2007
ರಿಷಭ್ ಪಂತ್ (146) ಮತ್ತು ರವೀಂದ್ರ ಜಡೇಜಾ (100*) ವಿರುದ್ಧ ಇಂಗ್ಲೆಂಡ್, ಬರ್ಮಿಂಗ್‌ಹ್ಯಾಮ್‌ 2022 *

ಇಂಗ್ಲೆಂಡ್ ವಿರುದ್ಧ ರಿಷಭ್ ಅದ್ಭುತ ಶತಕ: ಕೋಚ್ ರಾಹುಲ್ ದ್ರಾವಿಡ್ ಸೆಲೆಬ್ರೆಷನ್ ವೈರಲ್

Cheteshwar Pujara ಅವರ ವಿರುದ್ಧ ಅಭಿಮಾನಿಗಳ ಆಕ್ರೋಶ | *Cricket | OneIndia Kannada
ಕ್ಯಾಲೆಂಡರ್ ವರ್ಷದಲ್ಲಿ ಏಳನೇ ಕ್ರಮಾಂಕದಲ್ಲಿ ಎರಡು ಶತಕ ದಾಖಲಿಸಿದ ಬ್ಯಾಟರ್

ಕ್ಯಾಲೆಂಡರ್ ವರ್ಷದಲ್ಲಿ ಏಳನೇ ಕ್ರಮಾಂಕದಲ್ಲಿ ಎರಡು ಶತಕ ದಾಖಲಿಸಿದ ಬ್ಯಾಟರ್

ರವೀಂದ್ರ ಜಡೇಜಾ ಶತಕ ದಾಖಲಿಸುವ ಮೂಲಕ ಮತ್ತೊಂದು ಸಾಧನೆ ಮಾಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನ ಕ್ಯಾಲೆಂಡರ್ ಇಯರ್‌ನಲ್ಲಿ ಟೀಂ ಇಂಡಿಯಾ ಪರ ಏಳು ಮತ್ತು ಅದಕ್ಕಿಂತ ಕೆಳಕ್ರಮಾಂಕದಲ್ಲಿ ಎರಡು ಶತಕ ದಾಖಲಿಸಿದ ನಾಲ್ಕನೇ ಆಟಗಾರ ಎಂಬ ಸಾಧನೆ ಮಾಡಿದ್ದಾರೆ. ಈ ಸಾಲಿನಲ್ಲಿ ದಿಗ್ಗಜ ಆಟಗಾರರೇ ಇದ್ದು ಜಡ್ಡು ಕೂಡ ಹೆಸರು ಮಾಡಿದ್ದಾರೆ.

ಈ ಮೊದಲು ಕಪಿಲ್ ದೇವ್ 1986ರಲ್ಲಿ, ಎಂ.ಎಸ್‌ ಧೋನಿ 2009, ಹರ್ಭಜನ್ ಸಿಂಗ್ 2010ರಲ್ಲಿ ಮತ್ತು ಈಗ ರವೀಂದ್ರ ಜಡೇಜಾ ಏಳನೇ ಕ್ರಮಾಂಕದಲ್ಲಿ ಎರಡು ಶತಕ ದಾಖಲಿಸಿದ್ರು.

Story first published: Saturday, July 2, 2022, 18:20 [IST]
Other articles published on Jul 2, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+