ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧ ರಿಷಭ್ ಅದ್ಭುತ ಶತಕ: ಕೋಚ್ ರಾಹುಲ್ ದ್ರಾವಿಡ್ ಸೆಲೆಬ್ರೆಷನ್ ವೈರಲ್

Rishabh pant

ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐದನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಕಂಬ್ಯಾಕ್ ಆಗಿದೆ. 100 ರನ್‌ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡಿದ್ದ ಭಾರತಕ್ಕೆ ರಿಷಭ್ ಪಂತ್ ಮತ್ತು ರವೀಂದ್ರ ಜಡೇಜಾ ದಾಖಲೆಯ ಜೊತೆಯಾಟ ತಂಡಕ್ಕೆ ಆಧಾರವಾಗಿದೆ.

ಆರನೇ ವಿಕೆಟ್‌ಗೆ 222ರನ್‌ಗಳ ಜೊತೆಯಾಟವಾಡಿದ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಕುಸಿದಿದ್ದ ಟೀಂ ಇಂಡಿಯಾಕ್ಕೆ ನೆರವಾದರು. ಒಂದೆಡೆ ಜಡ್ಡು ತಾಳ್ಮೆಯುತ ಇನ್ನಿಂಗ್ಸ್‌ ಒಂದೆಡೆಯಾದ್ರೆ ರಿಷಭ್ ಪಂತ್ ಅಬ್ಬರದ ಬ್ಯಾಟಿಂಗ್‌ಗೆ ಎಡ್ಜ್‌ಬಾಸ್ಟನ್ ಸ್ಟೇಡಿಯಂ ಸಾಕ್ಷಿಯಾಗಿದೆ.

ರಿಷಭ್ ಪಂತ್ ವೀರೋಚಿತ ಶತಕ, 300ರ ಗಡಿದಾಟಿದ ಭಾರತದ ಸ್ಕೋರ್

ರಿಷಭ್ ಪಂತ್ ವೀರೋಚಿತ ಶತಕ, 300ರ ಗಡಿದಾಟಿದ ಭಾರತದ ಸ್ಕೋರ್

ಯಾರು ತಾನೇ ಊಹಿಸಲು ಸಾಧ್ಯವಿತ್ತು..! 98 ರನ್‌ಗಳಿಸುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡಿದ್ದ ಭಾರತ 300ರ ಗಡಿದಾಟುತ್ತೇ ಎಂದು ಯಾರೂ ಕೂಡ ಅಂದಾಜಿಸಿರಲು ಸಾಧ್ಯವಿಲ್ಲ. ಅಮೋಘ ಆಟವಾಡಿದ ರಿಷಭ್ ಪಂತ್ ಹಾಗೂ ರವೀಂದ್ರ ಜಡೇಜಾ ಆಂಗ್ಲರ ಗರ್ವಭಂಗ ಮಾಡಿದ್ದಂತು ಸುಳ್ಳಲ್ಲ

ಏಕದಿನ ಕ್ರಿಕೆಟ್ ಮಾದರಿಯಂತೆ ಬ್ಯಾಟಿಂಗ್ ಮಾಡಿದ ರಿಷಭ್ ಪಂತ್ 111 ಎಸೆತಗಳಲ್ಲಿ 146 ರನ್ ಕಲೆಹಾಕಿದರು. ಇವರ ಇನ್ನಿಂಗ್ಸ್‌ನಲ್ಲಿ 20 ಬೌಂಡರಿ ಮತ್ತು 4 ಅಮೋಘ ಸಿಕ್ಸರ್‌ಗಳು ಒಳಗೊಂಡಿದ್ದವು. ರಿಷಭ್ ಬ್ಯಾಟಿಂಗ್ ಎಷ್ಟರ ಮಟ್ಟಿಗೆ ಸ್ಫೋಟಕವಾಗಿತ್ತು ಎಂಬುದಕ್ಕೆ ಅವರ ಬ್ಯಾಟಿಂಗ್ ಸ್ಟ್ರೈಕ್‌ರೇಟ್ 131.56 ಸಾಕ್ಷಿಯಾಗಿತ್ತು.

ಭಾರತ vs ಇಂಗ್ಲೆಂಡ್: ಭಾರತದ ದಾಖಲೆ ಬರೆದ ರಿಷಭ್ ಪಂತ್- ರವೀಂದ್ರ ಜಡೇಜಾ ಜೋಡಿ

ಪಂತ್ ಶತಕ ಸಿಡಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದ ದ್ರಾವಿಡ್

ರಿಷಭ್ ಪಂತ್ ಕೇವಲ 89 ಎಸೆತಗಳಲ್ಲಿ ಶತಕದ ಗಡಿ ದಾಟುತ್ತಿದ್ದಂತೆ ಇಡೀ ಕ್ರಿಕೆಟ್ ಲೋಕವೇ ಸಲಾಂ ಹೊಡೆದಿದ್ದು ಸುಳ್ಳಲ್ಲ. ಒಂದೆಡೆ ಐದು ವಿಕೆಟ್ ಉರುಳಿದ್ದ ಟೀಂ ಇಂಡಿಯಾ ಇನ್ನಿಂಗ್ಸ್‌ಗೆ ಮರುಜೀವ ನೀಡಿದ 24 ವರ್ಷದ ಪಂತ್ ಅನೇಕ ದಾಖಲೆಗಳ ಜೊತೆಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಐದನೇ ಬಾರಿಗೆ ಮೂರಂಕಿ ಗಡಿದಾಟಿದ್ದಾರೆ.

ರಿಷಭ್ ಪಂತ್ ಎರಡು ರನ್‌ ಓಡಿ ಶತಕ ದಾಖಲಿಸುತ್ತಿದ್ದಂತೆ ಇಡೀ ಸ್ಟೇಡಿಯಂನ ಅಭಿಮಾನಿಗಳು ಎದ್ದುನಿಂತು ಚಪ್ಪಾಳೆ ಹೊಡೆದರು. ಡಗೌಟ್‌ನಲ್ಲಿದ್ದ ಟೀಂ ಇಂಡಿಯಾ ಆಟಗಾರರು ಅಷ್ಟೇ ಅಲ್ಲದೆ ಮೈದಾನದಲ್ಲಿ ಎದುರಾಳಿ ತಂಡದ ಆಟಗಾರರು ಚಪ್ಪಾಳೆ ಹೊಡೆದಿದ್ದು ಪಂತ್ ಅಮೋಘ ಇನ್ನಿಂಗ್ಸ್‌ಗೆ ಸಾಕ್ಷಿಯಾಗಿತ್ತು.

ಇದೇ ವೇಳೆಯಲ್ಲಿ ತಾನೇ ಶತಕ ಸಿಡಿಸಿದಷ್ಟು ಸಂಭ್ರಮಿಸಿದ ಕೋಚ್ ರಾಹುಲ್ ದ್ರಾವಿಡ್ ಚೇರ್‌ನಿಂದ ಜಿಗಿದು ಸಂಭ್ರಮಿಸಿದ್ದಾರೆ. ರಾಹುಲ್ ದ್ರಾವಿಡ್ ಸಂಭ್ರಮಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರವೀಂದ್ರ ಜಡೇಜಾ ತಾಳ್ಮೆಯುತ ಆಟಕ್ಕೆ ಮೆಚ್ಚಿನ ಕ್ರಿಕೆಟ್ ಲೋಕ

ರವೀಂದ್ರ ಜಡೇಜಾ ತಾಳ್ಮೆಯುತ ಆಟಕ್ಕೆ ಮೆಚ್ಚಿನ ಕ್ರಿಕೆಟ್ ಲೋಕ

ರಿಷಭ್ ಪಂತ್ ಅಬ್ಬರ ಒಂದೆಡೆಯಾದ್ರೆ, ಅಷ್ಟೇ ಉತ್ತಮವಾಗಿ ಜೊತೆಯಾಟ ನೀಡಿದ ಆಲ್‌ರೌಂಡರ್ ರವೀಂದ್ರ ಜಡೇಜಾ ತನ್ನ ಆಯ್ಕೆಯ ಕುರಿತಾಗಿ ಸಮರ್ಥವಾದ ಇನ್ನಿಂಗ್ಸ್‌ ಆಡಿದರು. ಪ್ಲೇಯಿಂಗ್ ಇಲೆವೆನ್‌ನಲ್ಲಿ ರವಿಚಂದ್ರನ್ ಅಶ್ವಿನ್‌ಗೆ ಏಕೆ ಅವಕಾಶ ನೀಡಲಿಲ್ಲ ಎಂದು ಟೀಕೆ ವ್ಯಕ್ತವಾದ ಬೆನ್ನಲ್ಲೇ ಜಡ್ಡು ತನ್ನ ಬೊಂಬಾಟ್ ಇನ್ನಿಂಗ್ಸ್‌ ಮೂಲಕ ಟೀಂ ಇಂಡಿಯಾಗೆ ಆಧಾರವಾಗಿದ್ದಾರೆ.

ಮೊದಲ ದಿನದಾಟದಂತ್ಯಕ್ಕೆ 163 ಎಸೆತಗಳಲ್ಲಿ ಅಜೇಯ 83 ರನ್‌ ಕಲೆಹಾಕಿದರು. 10 ಬೌಂಡರಿಗಳನ್ನ ಸಿಡಿಸುವ ಮೂಲಕ ಮೂಲಕ ಜಡ್ಡು ಎರಡನೇ ದಿನದಾಟಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದು, ಶತಕ ಸಿಡಿಸುವ ಭರವಸೆ ಮೂಡಿಸಿದ್ದಾರೆ.

ಕ್ಯಾಚ್ ಹಿಡಿಯಲು ಹೋದ ಡೇವಿಡ್ ವಾರ್ನರ್ ಗೆ ಬೆಲ್ಸ್ ಎಲ್ಲಿಗೆ ಬಿತ್ತು ನೋಡಿ.. ನರಳಾಡಿದ ವಾರ್ನರ್ | Oneindia Kannada
ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್
ಶುಭಮನ್ ಗಿಲ್, ಚೇತೇಶ್ವರ ಪೂಜಾರ, ಹನುಮ ವಿಹಾರಿ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್(ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ(ನಾಯಕ)


ಇಂಗ್ಲೆಂಡ್ ಪ್ಲೇಯಿಂಗ್ ಇಲೆವೆನ್
ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಒಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್(ನಾಯಕ), ಸ್ಯಾಮ್ ಬಿಲ್ಲಿಂಗ್ಸ್(ವಿಕೆಟ್ ಕೀಪರ್), ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಜೇಮ್ಸ್ ಆಂಡರ್ಸನ್

Story first published: Saturday, July 2, 2022, 18:22 [IST]
Other articles published on Jul 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X