Ind vs Nz 2nd T20: ಪಿಚ್ ರಿಪೋರ್ಟ್, ಹೆಡ್ ಟು ಹೆಡ್ ರೆಕಾರ್ಡ್, ಸಂಭಾವ್ಯ ಪ್ಲೇಯಿಂಗ್ 11

ಟಿ20 ವಿಶ್ವಕಪ್ ಬಳಿಕ ನ್ಯೂಜಿಲೆಂಡ್ ಪ್ರವಾಸ ಕೈಗೊಂಡಿರುವ ಟೀಂ ಇಂಡಿಯಾ, ಗೆಲುವಿಗಾಗಿ ಹಾತೊರೆಯುತ್ತಿದ್ದು, ವೆಲ್ಲಿಂಗ್ಟನ್‌ನಲ್ಲಿ ನಡೆಯಬೇಕಿದ್ದ ಮೊದಲ ಟಿ20 ಪಂದ್ಯವು ಮಳೆಯಲ್ಲಿ ಕೊಚ್ಚಿ ಹೋದ ಬಳಿಕ ಎರಡನೇ ಟಿ20 ಪಂದ್ಯಕ್ಕೆ ಸಜ್ಜಾಗಿದೆ. ನವೆಂಬರ್ 20ರಂದು ಮೌಂಟ್ ಮೌಂಗನ್ಯುಯಿಯ ಬೇ ಓವಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯರನ್ನು ಎದುರಿಸಲಿದೆ.
ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಸಂಪೂರ್ಣ ಯುವ ಪಡೆಯನ್ನು ಹೊಂದಿರುವ ಟೀಂ ಇಂಡಿಯಾ ಹೊಸ ಹುರುಪಿನಿಂದ ಕೂಡಿದ್ದು, ಮುಂಬರುವ ಟಿ20 ವಿಶ್ವಕಪ್ ದೃಷ್ಟಿಯಿಂದ ಈಗಿನಿಂದಲೇ ಒಂದೊಂದೇ ಗೆಲುವಿನ ಹೆಜ್ಜೆಯನ್ನಿಡಲು ರೆಡಿಯಾಗಿದೆ. ಮತ್ತೊಂದೆಡೆ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತವರಿನಲ್ಲಿ ಗೆಲ್ಲುವ ಫೇವರಿಟ್ ಆಗಿದೆ.

ಎರಡನೇ ಪಂದ್ಯಕ್ಕೂ ಮಳೆ ಭೀತಿ!
ಮೊದಲ ಟಿ20 ಪಂದ್ಯವು ಮಳೆಯಲ್ಲಿ ಕೊಚ್ಚಿ ಹೋದ ಬಳಿಕ ಮೌಂಟ್ ಮೌಂಗನ್ಯುಯಿಯಲ್ಲಿ ನಡೆಯಬೇಕಿರುವ ಎರಡನೇ ಟಿ20 ಪಂದ್ಯಕ್ಕೂ ಮಳೆ ಭೀತಿ ಎದುರಾಗಿದೆ. ಈಗಾಗಲೇ ಬೇ ಓವಲ್ ಮೈದಾನ ತಲುಪಿರುವ ಟೀಂ ಇಂಡಿಯಾ ಪಂದ್ಯ ಪೂರ್ವ ಅಭ್ಯಾಸಕ್ಕೆ ಮಳೆ ಅಡ್ಡಿಪಡಿಸಿದೆ.
ಭಾನುವಾರ ನಡೆಯಲಿರುವ ಪಂದ್ಯಕ್ಕೂ ಹವಾಮಾನ ವರದಿ ಪ್ರಕಾರ ಮಳೆ ಅಡ್ಡಿಪಡಿಸುವ ಸಾಧ್ಯತೆಯಿದೆ. ಆದ್ರೆ ಎಷ್ಟು ಪ್ರಮಾಣದಲ್ಲಿ ಮಳೆ ಸುರಿಯಲಿದೆ, ಮಳೆ ಬರುವ ಸಾಧ್ಯತೆ ಎಷ್ಟಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಭಾರತದೆದುರು ಕಳೆದ 8 ಪಂದ್ಯಗಳನ್ನ ಸೋತಿರುವ ನ್ಯೂಜಿಲೆಂಡ್
ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ತಂಡವು ಭಾರತದ ಎದುರು ಕೆಟ್ಟ ದಾಖಲೆಯನ್ನು ಹೊಂದಿದೆ. ಚುಟುಕು ಕ್ರಿಕೆಟ್ ಫಾರ್ಮೆಟ್‌ನಲ್ಲಿ, ದ್ವಿಪಕ್ಷೀಯ ಸರಣಿಯಲ್ಲಿ ಭಾರತದೆದುರು ಕಳೆದ 8 ಪಂದ್ಯಗಳನ್ನ ಸೋತಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಆದ್ರೆ ಎರಡನೇ ಟಿ20 ಪಂದ್ಯದಲ್ಲಿ ಈ ಹಂತವನ್ನು ದಾಟಿ ಗೆಲುವಿನ ಆರಂಭ ಪಡೆಯಲು ಕಿವೀಸ್ ಸಜ್ಜಾಗಿದೆ.
ಭಾರತ ಮತ್ತು ನ್ಯೂಜಿಲೆಂಡ್ ಇದುವರೆಗೆ 21 ಟಿ20 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಭಾರತ 11 ಪಂದ್ಯವನ್ನು ಜಯಿಸಿದ್ರೆ, ನ್ಯೂಜಿಲೆಂಡ್ 09 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. 1 ಪಂದ್ಯವು ಫಲಿತಾಂಶವಿಲ್ಲದೆ ಕೊನೆಗೊಂಡಿದೆ.
ಚೇತನ್ ಶರ್ಮಾ ವಜಾ; ಭಾರತ ಕ್ರಿಕೆಟ್ ತಂಡದ ರಾಷ್ಟ್ರೀಯ ಆಯ್ಕೆಗಾರರ ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ ಬಿಸಿಸಿಐ

ಪಿಚ್ ರಿಪೋರ್ಟ್
ಮೌಂಟ್ ಮೌಂಗನ್ಯುಯಿಯ ಬೇ ಓವಲ್ ಮೈದಾನವು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು, ಈ ಪಿಚ್‌ನಲ್ಲಿ ಬ್ಯಾಟಿಂಗ್ ಮಾಡಲು ಬ್ಯಾಟರ್‌ಗಳು ಹೆಚ್ಚು ಖುಷಿ ಪಡಲಿದ್ದಾರೆ. ಏಕೆಂದರೆ ಈ ಪಿಚ್‌ನ ಇತಿಹಾಸ ತಿರುವಿಹಾಕಿದ್ರೆ, ದೊಡ್ಡ ಮೊತ್ತದ ರನ್‌ಗಳು ಹರಿದು ಬಂದಿರುವ ಉದಾಹರಣೆಯನ್ನು ಕಾಣಬಹುದು.
ಈ ಗ್ರೌಂಡ್‌ನಲ್ಲಿ ಚಿಕ್ಕದಾದ ಬೌಂಡರಿಗಳು ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚು ನೆರವಾಗಿದೆ. ಬೌಲರ್‌ಗಳು ಸಣ್ಣ ತಪ್ಪು ಮಾಡಿದರು ಚೆಂಡು ಬೌಂಡರಿ ಗೆರೆ ದಾಟಲಿದೆ. ಅದ್ರಲ್ಲೂ ಪ್ರಮುಖವಾಗಿ ಸ್ಪಿನ್ನರ್‌ಗಳಿಗೆ ದೊಡ್ಡ ಸವಾಲಾಗಿದೆ.
IND vs NZ: ರಿಷಬ್ ಪಂತ್ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಆಕಾಶ್ ಚೋಪ್ರಾ

ಭಾರತ ಮತ್ತು ನ್ಯೂಜಿಲೆಂಡ್ ಸಂಭಾವ್ಯ ಪ್ಲೇಯಿಂಗ್ 11
ನ್ಯೂಜಿಲೆಂಡ್ ಪ್ಲೇಯಿಂಗ್ 11: ಫಿನ್ ಅಲೆನ್, ಡೆವೊನ್ ಕಾನ್ವೆ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಗ್ಲೆನ್ ಫಿಲಿಪ್ಸ್, ಡೆರಿಲ್ ಮಿಚೆಲ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಲ್ಯೂಕಿ ಫರ್ಗುಸನ್, ಟಿಮ್ ಸೌಥಿ, ಇಶ್ ಸೋದಿ, ಆ್ಯಡಂ ಮಿಲ್ನೆ
ಟೀಂ ಇಂಡಿಯಾ ಪ್ಲೇಯಿಂಗ್ 11: ಶುಭಮನ್ ಗಿಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್, ಯುಜವೇಂದ್ರ ಚಹಾಲ್, ಅರ್ಷ್‌ದೀಪ್ ಸಿಂಗ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications