ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs NZ: ರಿಷಬ್ ಪಂತ್ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಆಕಾಶ್ ಚೋಪ್ರಾ

 IND vs NZ: Know What Aakash Chopra Said About Rishabh Pant Batting Order

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡದ ಆರಂಭಿಕ ಜೋಡಿ ಯಾರಾಗಬೇಕು ಎಂದು ಸಾಕಷ್ಟು ಚರ್ಚೆಯಾಗುತ್ತಿದೆ. ರಿಷಬ್ ಪಂತ್ ಆರಂಭಿಕರಾಗಿ ಕಣಕ್ಕಿಳಿಯಬೇಕು ಎಂದು ಹಲವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಭಾರತದ ಮಾಜಿ ಕ್ರಿಕೆಟರ್ ಆಕಾಶ್ ಚೋಪ್ರಾ ಮಾತ್ರ ಈ ಅಭಿಪ್ರಾಯವನ್ನು ಪ್ರಶ್ನಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿರುವ ರಿಷಬ್ ಪಂತ್ ಐಪಿಎಲ್‌ನಲ್ಲಿ ಕೂಡ ಆರಂಭಿಕರಾಗಿ ಆಡಿದ ಅನುಭವ ಹೊಂದಿಲ್ಲ, ಆದ್ದರಿಂದ ಅವರು, ಭಾರತ ತಂಡದಲ್ಲಿ ಓಪನರ್ ಆಗಲು ಸರಿಯಾದ ಆಯ್ಕೆಯೇ ಎಂದು ಕೇಳಿದ್ದಾರೆ.

FIFA WC 2022: ಪಂಚತಾರ ಹೋಟೆಲ್ ಬಿಟ್ಟು ವಿದ್ಯಾರ್ಥಿ ನಿಲಯದಲ್ಲಿ ತಂಗಿದ್ಯಾಕೆ ಮೆಸ್ಸಿ ನೇತೃತ್ವದ ಅರ್ಜೆಂಟೀನಾ?FIFA WC 2022: ಪಂಚತಾರ ಹೋಟೆಲ್ ಬಿಟ್ಟು ವಿದ್ಯಾರ್ಥಿ ನಿಲಯದಲ್ಲಿ ತಂಗಿದ್ಯಾಕೆ ಮೆಸ್ಸಿ ನೇತೃತ್ವದ ಅರ್ಜೆಂಟೀನಾ?

ಟಿ20 ವಿಶ್ವಕಪ್‌ನಲ್ಲಿ ಸೂಪರ್ 12 ಹಂತದ ಕೊನೆಯ ಪಂದ್ಯ ಜಿಂಬಾಬ್ವೆ ವಿರುದ್ಧ ರಿಷಬ್ ಪಂತ್ ಆಡಿದ್ದರು. ನಂತರ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೂಡ ಅವರು ತಂಡದಲ್ಲಿ ಸ್ಥಾನ ಪಡೆದರು. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದ ಪಂತ್ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು.

ಈಗ ಭಾರತ ನ್ಯೂಜಿಲೆಂಡ್ ವಿರುದ್ಧ 3 ಟಿ20 ಪಂದ್ಯಗಳ ಸರಣಿಯನ್ನು ಆಡುತ್ತಿದೆ. ಮೊದಲನೇ ಪಂದ್ಯ ಮಳೆಯಿಂದಾಗಿ ರದ್ದಾಗಿದ್ದು, ಎರಡನೇ ಪಂದ್ಯ ನವೆಂಬರ್ 20ರಂದು ಭಾನುವಾರ ನಡೆಯಲಿದೆ. ರೋಹಿತ್ ಶರ್ಮಾ ಮತ್ತು ಕೆಎಲ್ ರಾಹುಲ್ ಸರಣಿಯಿಂದ ವಿಶ್ರಾಂತಿ ಪಡೆದಿರುವ ಕಾರಣ ಯಾರು ಆರಂಭಿಕರಾಗಿ ಕಣಕ್ಕಿಳಿಯಬೇಕು ಎನ್ನುವ ಕುತೂಹಲ ಇದೆ.

ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಬೇಡ

ಬ್ಯಾಟಿಂಗ್ ಕ್ರಮಾಂಕದಲ್ಲಿ ಬದಲಾವಣೆ ಬೇಡ

ಆಕಾಶ್ ಚೋಪ್ರಾ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ವಿಡಿಯೋದಲ್ಲಿ, ಭಾರತ ಪರವಾಗಿ ಟಿ20 ಪಂದ್ಯಗಳಲ್ಲಿ ಇಶಾನ್ ಕಿಶಾನ್ ಮತ್ತು ಪೃಥ್ವಿ ಶಾ ಆರಂಭಿಕರಾಗಿ ಕಣಕ್ಕಿಳಿಯಬೇಕು ಎಂದು ಹೇಳಿದ್ದಾರೆ.

"ರಿಷಬ್ ಪಂತ್ ಒಬ್ಬ ಉತ್ತಮ ಬ್ಯಾಟರ್, ಪಂತ್ ಭಾರತ ತಂಡದಲ್ಲಿ ಆರಂಭಿಕ ಆಟಗಾರನಾಗಬೇಕು ಎಂದು ಈಗಾಗಲೇ ಸಾಕಷ್ಟು ಚರ್ಚೆಯಾಗುತ್ತಿದೆ. ಮುಂದಿನ ಪಂದ್ಯದಲ್ಲಿ ಅವರು ಅದನ್ನು ಮಾಡಲೂಬಹುದು. ಆದರೆ, ನೀವು ಯಾರನ್ನಾದರೂ ಆರಂಭಿಕರನ್ನಾಗಿ ಆರಿಸಬೇಕೆಂದಿದ್ದರೆ, ಪೃಥ್ವಿ ಶಾ ಮತ್ತು ಇಶಾನ್‌ ಕಿಶನ್‌ರನ್ನು ಆಯ್ಕೆ ಮಾಡಿಕೊಳ್ಳಿ, ಏಕೆಂದರೆ ಅವರು ಐಪಿಎಲ್‌ನಲ್ಲಿ ಕೂಡ ಆರಂಭಿಕರಾಗಿ ಬ್ಯಾಟಿಂಗ್ ಮಾಡಿದ್ದಾರೆ" ಎಂದು ಹೇಳಿದರು.

ಫಿಫಾ ವಿಶ್ವಕಪ್ 2022: ಚಿನ್ನದ ಬಾಲ್, ಚಿನ್ನದ ಬೂಟ್, ಚಿನ್ನದ ಗ್ಲೌಸ್ ಗೆದ್ದವರ ಪಟ್ಟಿ

 ರಿಷಬ್ ಪಂತ್ ಸ್ಫೋಟಕ ಆಟಗಾರ

ರಿಷಬ್ ಪಂತ್ ಸ್ಫೋಟಕ ಆಟಗಾರ

ರಿಷಬ್ ಪಂತ್ ಡೆಲ್ಲಿ ತಂಡದ ಪರವಾಗಿ ಹೆಚ್ಚಿನ ಸಮಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಅವರು ಅಪರೂಪಕ್ಕೆ ಮಾತ್ರ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಆದಗ್ಯೂ, ರಿಷಬ್ ಪಂತ್ ಆಕ್ರಮಣಕಾರಿ ಆಟಗಾರ ಎಂದು ಆಕಾಶ್ ಚೋಪ್ರಾ ಹೇಳಿದರು. ಬ್ಯಾಟಿಂಗ್ ಕ್ರಮಾಂಕದಲ್ಲಿ ಬಡ್ತಿ ನೀಡಿದರೂ, ಅವರು ವೇಗವಾಗಿ ರನ್ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.

ಸ್ಯಾಮ್ಸನ್ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮಾತು

ಸ್ಯಾಮ್ಸನ್ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಮಾತು

ಸಂಜು ಸ್ಯಾಮ್ಸನ್ ಕೂಡ ಅಗ್ರ ಮೂರು ಕ್ರಮಾಂಕದಲ್ಲಿ ಬ್ಯಾಟ್ ಮಾಡುವ ಆಟಗಾರ ಎಂದು ಹೇಳಿದರು. ಸಂಜು ಸ್ಯಾಮ್ಸನ್ ವೇಗದ ಬೌಲಿಂಗ್‌ಗೆ ಉತ್ತಮವಾಗಿ ಆಡುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಹೇಳಿದರು.

ಲೆಗ್‌ ಸ್ಪಿನ್ ವಿರುದ್ಧ ಮಾತ್ರ ಸ್ಯಾಮ್ಸನ್ ಸ್ವಲ್ಪ ಕಷ್ಟ ಪಡುತ್ತಾರೆ. ಟಿ20 ಮಾದರಿಯಲ್ಲಿ ಸಂಜು ಸ್ಯಾಮ್ಸನ್ ಮೇಲಿನ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರೆ ತಂಡಕ್ಕೆ ಅನುಕೂಲ ಎಂದು ಹೇಳಿದರು.

ಸಂಜು ಸ್ಯಾಮ್ಸನ್ ಇದುವರೆಗೂ 16 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿದ್ದು, 135.15 ಸ್ಟ್ರೈಕ್‌ರೇಟ್‌ನಲ್ಲಿ 296 ರನ್ ಗಳಿಸಿದ್ದಾರೆ. ಆರು ಬಾರಿ ಅಗ್ರ 3 ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದಾಗ 160.47 ಸ್ಟ್ರೈಕ್‌ರೇಟ್‌ನಲ್ಲಿ 138 ರನ್ ಗಳಿಸಿದ್ದಾರೆ.

Story first published: Saturday, November 19, 2022, 14:34 [IST]
Other articles published on Nov 19, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X