ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೇತನ್ ಶರ್ಮಾ ವಜಾ; ಭಾರತ ಕ್ರಿಕೆಟ್ ತಂಡದ ರಾಷ್ಟ್ರೀಯ ಆಯ್ಕೆಗಾರರ ​​ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ ಬಿಸಿಸಿಐ

BCCI Has Invite Applications For The Post Of National Selectors Of The Indian Cricket Team

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಶುಕ್ರವಾರ ಭಾರತ ಹಿರಿಯ ಪುರುಷರ ತಂಡಕ್ಕೆ ರಾಷ್ಟ್ರೀಯ ಆಯ್ಕೆಗಾರರ ​​ಸ್ಥಾನಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ ಎಂದು ಪ್ರಕಟಿಸಿದೆ. ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 28ರ ಸಂಜೆ 6 ಗಂಟೆಗೆ ಕೊನೆಯ ದಿನಾಂಕ ಮತ್ತು ಸಮಯ ಎಂದು ಬಿಸಿಸಿಐ ಹೇಳಿದೆ.

ಪ್ರಸ್ತುತ ಬಿಸಿಸಿಐ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯು ಚೇತನ್ ಶರ್ಮಾ ನೇತೃತ್ವದಲ್ಲಿದ್ದು, ಭಾರತ ಕ್ರಿಕೆಟ್ ತಂಡದ ರಾಷ್ಟ್ರೀಯ ಆಯ್ಕೆಗಾರ ಸಮಿತಿಯ ಮುಖ್ಯಸ್ಥ ಚೇತನ್ ಶರ್ಮಾರನ್ನು ವಜಾಗೊಳಿಸಿದ ನಂತರ ಅರ್ಜಿ ಆಹ್ವಾನಿಸಿದೆ.

ಇನ್ನು'ಈ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಪರಿಗಣಿಸಲು ಕೆಲವು ಮಾನದಂಡಗಳನ್ನು ಪೂರೈಸಬೇಕು' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

IND vs NZ: ಆತನ ಮೇಲೆ ದೊಡ್ಡ ನಿರೀಕ್ಷೆ ಇದೆ; ಶುಭಮನ್ ಗಿಲ್ ಶ್ಲಾಘಿಸಿದ ದಿನೇಶ್ ಕಾರ್ತಿಕ್IND vs NZ: ಆತನ ಮೇಲೆ ದೊಡ್ಡ ನಿರೀಕ್ಷೆ ಇದೆ; ಶುಭಮನ್ ಗಿಲ್ ಶ್ಲಾಘಿಸಿದ ದಿನೇಶ್ ಕಾರ್ತಿಕ್

"ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಏಳು ಟೆಸ್ಟ್ ಪಂದ್ಯಗಳು, 30 ಪ್ರಥಮ ದರ್ಜೆ ಪಂದ್ಯಗಳು ಅಥವಾ 10 ಏಕದಿನ ಮತ್ತು 20 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು," ಎಂದು ತಿಳಿಸಲಾಗಿದೆ. ಅಲ್ಲದೆ, ಅಭ್ಯರ್ಥಿಗಳು ಕನಿಷ್ಠ ಐದು ವರ್ಷಗಳ ಹಿಂದೆ ಕ್ರಿಕೆಟ್‌ನಿಂದ ನಿವೃತ್ತರಾಗಿರಬೇಕು.

ಟಿ20 ವಿಶ್ವಕಪ್‌ನಿಂದ ಭಾರತ ತಂಡವು ಸೆಮಿಫೈನಲ್‌ನಿಂದ ನಿರ್ಗಮಿಸಿದ ನಂತರ ಬಿಸಿಸಿಐ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

BCCI Has Invite Applications For The Post Of National Selectors Of The Indian Cricket Team

ಚೇತನ್ ಶರ್ಮಾ ನೇತೃತ್ವದ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿಯಲ್ಲಿ ಹರ್ವಿಂದರ್ ಸಿಂಗ್, ಸುನಿಲ್ ಜೋಶಿ ಮತ್ತು ದೇಬಾಶಿಶ್ ಮೊಹಂತಿ ಇತರ ಸದಸ್ಯರಾಗಿದ್ದರು.

ಚೇತನ್ ಶರ್ಮಾ ಅವರು ಕೆಲವು ದಿನಗಳ ಹಿಂದೆ ವಿಡಿಯೋ ಪತ್ರಿಕಾಗೋಷ್ಠಿಯ ಮೂಲಕ ನ್ಯೂಜಿಲೆಂಡ್ ಮತ್ತು ಬಾಂಗ್ಲಾದೇಶ ಪ್ರವಾಸಕ್ಕಾಗಿ ಭಾರತ ತಂಡವನ್ನು ಪ್ರಕಟಿಸಿದ್ದರು.

ಅಬೆ ಕುರುವಿಲ್ಲಾ ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸಿದ ನಂತರ ಫೆಬ್ರವರಿ 2022ರಿಂದ ಪಶ್ಚಿಮ ವಲಯದ ಆಯ್ಕೆದಾರರ ಸ್ಥಾನವು ಖಾಲಿಯಾಗಿದ್ದರೆ, ಪೂರ್ವ ವಲಯದ ದೇಬಾಶಿಶ್ ಮೊಹಾಂತಿ ಅವರು ಈ ಹಿಂದೆ ಜೂನಿಯರ್ ತಂಡದ ಆಯ್ಕೆ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರಿಂದ ಅವರ ಅಧಿಕಾರಾವಧಿಯು ಶೀಘ್ರದಲ್ಲೇ ಕೊನೆಗೊಳ್ಳಲಿದೆ.

BCCI Has Invite Applications For The Post Of National Selectors Of The Indian Cricket Team

ಆದಾಗ್ಯೂ ಪೂರ್ವ ವಿಭಾಗದಲ್ಲಿ ಹೆಚ್ಚು ಅರ್ಹ ಟೆಸ್ಟ್ ಕ್ರಿಕೆಟಿಗರು ಇಲ್ಲ, ಅವರಿಗೆ ಈ ಜವಾಬ್ದಾರಿಯನ್ನು ಹಸ್ತಾಂತರಿಸಬಹುದು. ಒಡಿಶಾದ ಮಾಜಿ ಓಪನರ್ ಶಿವಸುಂದರ್ ದಾಸ್ ಮತ್ತು ಬಂಗಾಳದ ದೀಪ್ ದಾಸ್‌ಗುಪ್ತಾ ಅವರ ಹೆಸರುಗಳು ಕೇಳಿಬರುತ್ತಿವೆ.

ಜೂನಿಯರ್ ರಾಷ್ಟ್ರೀಯ ಆಯ್ಕೆಗಾರ ರಣದೇಬ್ ಬೋಸ್ ಕಣದಲ್ಲಿದ್ದಾರೆಂಬ ಸುದ್ದಿಗಳು ಇವೆ. ಆದರೆ ಅವರು ಭಾರತಕ್ಕಾಗಿ ಅಧಿಕೃತ ಪಂದ್ಯಗಳನ್ನು ಆಡಿಲ್ಲ. ಮಾಜಿ ಏಕದಿನ ಆಟಗಾರರಾದ ಬಂಗಾಳದ ಲಕ್ಷ್ಮಿ ರತನ್ ಶುಕ್ಲಾ ಮತ್ತು ಒಡಿಶಾದ ಸಂಜಯ್ ರೌಲ್ ಅರ್ಹರಾಗಿದ್ದಾರೆ. ಪ್ರಸ್ತುತ ಭಾರತದ ವೇಗಿ ಉಮೇಶ್ ಯಾದವ್ ಅವರ ಕೋಚ್ ಸುಬ್ರೋತೊ ಬ್ಯಾನರ್ಜಿ ಕೂಡ ಅಭ್ಯರ್ಥಿಯಾಗಬಹುದಾಗಿದೆ.

ಕಳೆದ ಬಾರಿ ಮಾಜಿ ಕ್ರಿಕೆಟಿಗ ಅಜಿತ್ ಅಗರ್ಕರ್ ಎಲ್ಲಾ ಅರ್ಜಿದಾರರಲ್ಲಿ ಅತ್ಯುತ್ತಮ ಮತ್ತು ಹೆಚ್ಚು ಅಲಂಕರಿಸಿದ CV ಹೊಂದಿದ್ದರು. ಆದರೆ ಅವರ ಸ್ವಂತ ರಾಜ್ಯ ಘಟಕ ಮುಂಬೈ ಕ್ರಿಕೆಟ್ ಅಸೋಸಿಯೇಷನ್‌ನಿಂದ ಆಕ್ಷೇಪಣೆಗಳು ಅಡ್ಡಿಯಾಯಿತು.

ಶುಕ್ರವಾರ, ನವೆಂಬರ್ 18ರಂದು ಬಿಸಿಸಿಐ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ""ಒಟ್ಟು 5 ವರ್ಷಗಳ ಕಾಲ ಕ್ರಿಕೆಟ್ ಸಮಿತಿಯಿಂದ (ಬಿಸಿಸಿಐನ ನಿಯಮಗಳು ಮತ್ತು ನಿಬಂಧನೆಗಳಲ್ಲಿ ವ್ಯಾಖ್ಯಾನಿಸಿರುವಂತೆ) ಸದಸ್ಯರಾಗಿರುವ ಯಾವುದೇ ವ್ಯಕ್ತಿ ಪುರುಷರ ಆಯ್ಕೆಗಾರರ ಸಮಿತಿಗೆ ಸದಸ್ಯನಾಗಲು ಅರ್ಹರಾಗಿರುವುದಿಲ್ಲ."

Story first published: Friday, November 18, 2022, 21:58 [IST]
Other articles published on Nov 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X