ಕುಲ್‌ದೀಪ್ ಯಾದವ್ ಕಾಲೆಳೆದ ಚಹಾಲ್
ಮುಂಬರುವ ಟಿ20 ಸರಣಿ ಹಿನ್ನಲೆಯಲ್ಲಿ ಯುಜವೇಂದ್ರ ಚಹಾಲ್ ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಫೋಟೋವೊಂದನ್ನ ಶೇರ್ ಮಾಡಿದ್ದು, ಕುಲ್‌ದೀಪ್ ಜೊತೆಗಿರುವ ಫೋಟೋವನ್ನು ಹರಿಬಿಟ್ಟಿದ್ದಾರೆ. ಈ ಫೋಟೋಗೆ 'ಏನು ಸಮಾಚಾರ' ಕುಲ್‌ದೀಪ್ ಯಾದವ್ ಎಂದು ನಗುತ್ತಿರುವ ಎಮೋಜಿಯನ್ನು ಪೋಸ್ಟ್ ಮಾಡಿದ್ದಾರೆ.
ಈ ಫೋಟೊವನ್ನ ಗಮನಿಸಿದ್ರೆ, ಇದು ಟೀಂ ಇಂಡಿಯಾ ಆಟಗಾರರ ಫೋಟೋಶೂಟ್ ಎಂದು ತಿಳಿದುಬರುತ್ತದೆ. ಭಾರತ-ನ್ಯೂಜಿಲೆಂಡ್ ಟಿ20 ಸರಣಿ ಹಿನ್ನಲೆಯಲ್ಲಿ ಪೂರ್ವ ಫೋಟೋಶೂಟ್‌ನಲ್ಲಿ ಉಭಯ ತಂಡಗಳು ಭಾಗಿಯಾಗಿವೆ. ಇದರ ಭಾಗವಾಗಿ ಯುಜವೇಂದ್ರ ಚಹಾಲ್ ಮತ್ತು ಕುಲ್‌ದೀಪ್ ಒಟ್ಟಾಗಿ ಫೋಟೋಗೆ ಪೋಸ್ ಕೊಟ್ಟಿದ್ದು, ಈ ವೇಳೆಯಲ್ಲಿ ತಮಾಷೆಯಾಗಿ ಕುಲ್‌ದೀಪ್ ಪೋಸ್ ನೀಡಿದ್ದಾರೆ.
IPL 2023: SRH ತಂಡದಿಂದ ಹೊರಬಿದ್ದ ಕೇನ್ ವಿಲಿಯಮ್ಸನ್ ಮೇಲೆ 3 ಫ್ರಾಂಚೈಸಿ ಕಣ್ಣು!

ಟೀಂ ಇಂಡಿಯಾಗೆ ಮರಳಿದ ಯುಜವೇಂದ್ರ ಚಹಾಲ್
ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್‌ನ 15 ಸದಸ್ಯರ ಸ್ಕ್ವಾಡ್‌ನಲ್ಲಿ ಅವಕಾಶ ಪಡೆದಿದ್ದ ಯುಜವೇಂದ್ರ ಚಹಾಲ್‌ಗೆ ಒಂದು ಪಂದ್ಯದಲ್ಲೂ ಅವಕಾಶ ಸಿಗಲಿಲ್ಲ. ಸೆಮಿಫೈನಲ್ ಪಂದ್ಯದಲ್ಲೂ ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್ ಹಾಗೂ ನಾಯಕ ರೋಹಿತ್ ಶರ್ಮಾ ಅನುಭವಿ ಸ್ಪಿನ್ನರ್ ಅಶ್ವಿನ್ ಮತ್ತು ಅಕ್ಷರ್ ಪಟೇಲ್‌ಗೆ ಮಣೆ ಹಾಕಿತು. ಆದ್ರೆ ಭಾರತ ಎದುರಾಳಿಯ(ಇಂಗ್ಲೆಂಡ್) ಒಂದು ವಿಕೆಟ್ ಪಡೆಯಲಾರದೆ ಭಾರೀ ಮುಖಭಂಗ ಎದುರಿಸಿತು.
ಆದ್ರೀಗ ಬಹಳ ಪಂದ್ಯಗಳ ನಂತರ ಯುಜವೇಂದ್ರ ಚಹಾಲ್ ಮತ್ತು ಕುಲ್‌ದೀಪ್ ಒಟ್ಟಾಗಿ ಕಣಕ್ಕಿಳಿಯಲು ಎದುರು ನೋಡುತ್ತಿದ್ದಾರೆ. ಈಗಿನಿಂದಲೇ ಟೀಂ ಇಂಡಿಯಾ 2024 ಟಿ20 ವಿಶ್ವಕಪ್‌ಗೆ ತಂಡವನ್ನು ಸನ್ನದ್ದಮಾಡಲು ಯೋಜಿಸಿದ್ದು, ನ್ಯೂಜಿಲೆಂಡ್ ವಿರುದ್ಧದ ಮೊದಲ ಹೆಜ್ಜೆಯನ್ನಿಡಲು ಸಜ್ಜಾಗಿದೆ.
IPL 2023: ದುಬಾರಿ ಮೊತ್ತ ಪಡೆದ್ರೂ, ಉತ್ತಮ ಪ್ರದರ್ಶನ ನೀಡದ ಈ 5 ಆಟಗಾರರು ರಿಲೀಸ್!

ಟೀಂ ಇಂಡಿಯಾ ಟಿ20 ಸ್ಕ್ವಾಡ್
ಹಾರ್ದಿಕ್ ಪಾಂಡ್ಯ(ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪನಾಯಕ ಮತ್ತು ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಯುಜವೇಂದ್ರ ಚಹಾಲ್, ಕುಲ್‌ದೀಪ್ ಯಾದವ್, ಅರ್ಷ್‌ದೀಪ್ ಸಿಂಗ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲ್ಲಿಕ್


Click it and Unblock the Notifications












