For Quick Alerts
ALLOW NOTIFICATIONS  
For Daily Alerts
 

IPL 2023: SRH ತಂಡದಿಂದ ಹೊರಬಿದ್ದ ಕೇನ್‌ ವಿಲಿಯಮ್ಸನ್‌ ಮೇಲೆ 3 ಫ್ರಾಂಚೈಸಿ ಕಣ್ಣು!

Kane williamson

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 16ನೇ ಸೀಸನ್‌ ಮಿನಿ ಹರಾಜಿಗೆ ಈಗಾಗಲೇ 10 ಫ್ರಾಂಚೈಸಿಗಳು ರೆಡಿಯಾಗಿದ್ದು, ಡಿಸೆಂಬರ್ 23ರಂದು ನಡೆಯಲಿರುವ ಮಿನಿ ಹರಾಜಿಗೂ ಮುನ್ನ ರಿಲೀಸ್ ಮಾಡುವ ಆಟಗಾರರನ್ನು ಮತ್ತು ರೀಟೈನ್ ಮಾಡಿಕೊಂಡ ಆಟಗಾರರನ್ನು ಅಂತಿಮಗೊಳಿಸಿದೆ.

ಇದೇ ಸಾಲಿನಲ್ಲಿ ಸನ್‌ರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿ ಮೂವರು ದುಬಾರಿ ಆಟಗಾರರನ್ನ ಕೈ ಬಿಟ್ಟಿದೆ. ಕಳೆದ ಸೀಸನ್‌ನ ನಾಯಕ ಕೇನ್ ವಿಲಿಯಮ್ಸನ್, ವಿಕೆಟ್ ಕೀಪರ್ ಬ್ಯಾಟರ್ ನಿಕೋಲಸ್ ಪೂರನ್ ಹಾಗೂ ವೇಗದ ಬೌಲಿಂಗ್ ಜೊತೆಗೆ ಸ್ಫೋಟಕ ಆಟವಾಡುವ ಸಾಮರ್ಥ್ಯ ಹೊಂದಿರುವ ರೊಮಾರಿಯೊ ಶೆಫರ್ಡ್‌ರನ್ನು ಸನ್‌ರೈಸರ್ಸ್ ಹೈದ್ರಾಬಾದ್ ತಂಡದಿಂದ ಹೊರಬಿದ್ದಿದ್ದಾರೆ.

ಆದ್ರೆ ಎಸ್‌ಆರ್‌ಎಚ್ ಅಭಿಮಾನಿಗಳಿಗೆ ಬೇಸರದ ವಿಚಾರ ಏನಂದ್ರೆ ಕೇನ್‌ ವಿಲಿಯಮ್ಸನ್ ತಂಡದಿಂದ ಹೊರಬಿದ್ದಿರುವುದು. ಕಳೆದ ಐಪಿಎಲ್ ಸೀಸನ್‌ನಲ್ಲಿ 14 ಕೋಟಿ ರೂಪಾಯಿಗೆ ರೀಟೈನ್ ಆಗಿದ್ದ ಸನ್‌ರೈಸರ್ಸ್ ಹೈದ್ರಾಬಾದ್ ತಂಡದ ನಾಯಕ ಕೇನ್ ವಿಲಿಯಮ್ಸನ್‌ರನ್ನ ಉಳಿಸಿಕೊಳ್ಳಲು ಎಸ್‌ಆರ್‌ಎಚ್‌ ಮನಸ್ಸು ಮಾಡದೇ ಇರುವುದು ಆಶ್ಚರ್ಯಕ್ಕೆ ಕಾರಣವಾಗಿದೆ

IPLನಲ್ಲಿ ಉತ್ತಮ ದಾಖಲೆ ಹೊಂದಿರುವ ಕೇನ್ ವಿಲಿಯಮ್ಸನ್

IPLನಲ್ಲಿ ಉತ್ತಮ ದಾಖಲೆ ಹೊಂದಿರುವ ಕೇನ್ ವಿಲಿಯಮ್ಸನ್

32 ವರ್ಷದ ಕೇನ್ ವಿಲಿಯಮ್ಸನ್ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಶ್ರೀಮಂತ ಕ್ರಿಕೆಟ್ ಲೀಗ್‌ನಲ್ಲಿ ಕೇನ್ 76 ಪಂದ್ಯಗಳನ್ನ ಆಡಿದ್ದು, 126.03 ಸ್ಟ್ರೈಕ್‌ರೇಟ್‌ನಲ್ಲಿ 1667 ರನ್ ಕಲೆಹಾಕಿದ್ದಾರೆ.

ಆರಂಭಿಕ ವಿಕೆಟ್ ಉರುಳಿಸಿದ ಸಂದರ್ಭದಲ್ಲಿ ತಂಡಕ್ಕೆ ನೆರವಾಗುವುದರ ಜೊತೆಗೆ ಜೊತೆಗಾರರು ಸ್ಕೋರ್ ಮಾಡಲು ನೆರವಾಗುವ ಕೇನ್, ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ನಡೆಯಲಿರುವ ಐಪಿಎಲ್ ಮಿನಿ ಹರಾಜಿನಲ್ಲಿ ಫ್ರಾಂಚೈಸಿ ಗಮನ ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೇನ್‌ ವಿಲಿಯಮ್ಸನ್‌ಗಾಗಿ ಯಾವ ತಂಡ ಬಿಡ್ ಮಾಡಬಹುದು ಎಂಬುದರ ಕುರಿತು ಮಾಹಿತಿ ಈ ಕೆಳಗಿದೆ.

IPL 2023: ಕ್ಯಾಪ್ಟನ್ ಕೇನ್‌ ವಿಲಿಯಮ್ಸನ್‌ SRH ತಂಡದಿಂದ ಔಟ್‌: ತಂಡದಲ್ಲಿ ಉಳಿದ ಆಟಗಾರರ ಪಟ್ಟಿ

ಗುಜರಾತ್ ಟೈಟನ್ಸ್

ಗುಜರಾತ್ ಟೈಟನ್ಸ್

ಐಪಿಎಲ್ 2023ರ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡವು ಕೇನ್ ವಿಲಿಯಮ್ಸನ್ ಮೇಲೆ ಕಣ್ಣಿಟ್ಟಿದೆ. ತಂಡದ ಬ್ಯಾಟಿಂಗ್ ಕ್ರಮಾಂಕದಲ್ಲಿ ಮೂರನೇ ಸ್ಥಾನಕ್ಕಾಗಿ ಹಲವು ಪ್ರಯೋಗ ನಡೆಸಿದ್ರೂ ಸಹ ಯಾವುದು ಕ್ಲಿಕ್ ಆಗಲಿಲ್ಲ. ಆರಂಭದಲ್ಲಿ ಆಲ್‌ರೌಂಡರ್ ವಿಜಯ್ ಶಂಕರ್‌ನನ್ನು ಆಡಿಸಿ ಪ್ರಯೋಗ ಮಾಡಿತು. ಆದ್ರೆ ಈ ತಮಿಳುನಾಡು ಆಲ್‌ರೌಂಡರ್ ಮಿಂಚಲು ವಿಫಲಗೊಂಡರು.

ಹಾರ್ದಿಕ್ ಪಾಂಡ್ಯ ಮತ್ತು ಮ್ಯಾಥ್ಯೂ ವೇಡ್ ಆ ಸ್ಥಾನವನ್ನು ತುಂಬಲು ಪ್ರಯತ್ನಿಸಿದ್ರೂ ಸಹ ಇಬ್ಬರಿಗೂ ಸೆಟ್ ಆಗಲಿಲ್ಲ. ಹೀಗಾಗಿ ಕೇನ್‌ ವಿಲಿಯಮ್ಸನ್ ಆ ಜಾಗಕ್ಕೆ ಸೂಕ್ತ ವ್ಯಕ್ತಿ ಎಂಬುದನ್ನು ಗುಜರಾತ್ ಟೈಟನ್ಸ್ ಮನಗಂಡಿದೆ.

ಇನ್ನು ಕೇವಲ ಮೂರನೇ ಕ್ರಮಾಂಕದಲ್ಲಿ ಅಷ್ಟೇ ಅಲ್ಲದೆ ಕೇನ್ ವಿಲಿಯಮ್ಸನ್‌ರನ್ನು ಶುಭಮನ್ ಗಿಲ್‌ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿಸಬಹುದು. ವಿಕೆಟ್ ಕೀಪರ್ ಬ್ಯಾಟರ್ ವೃದ್ದಿಮಾನ್ ಸಾಹಾ ಹೆಚ್ಚು ಸ್ಥಿರತೆ ತೋರಿಸದ ಕಾರಣ ವಿಲಿಯಮ್ಸನ್‌ ಪ್ರಮುಖ ಆಯ್ಕೆಯಾಗಬಹುದು.

ದಿನೇಶ್ ಕಾರ್ತಿಕ್‌ ಅದ್ಭುತ ಆಟಗಾರ, ಅವಕಾಶದ ಬಾಗಿಲು ಮುಚ್ಚಿಲ್ಲ, ತೆರೆದಿದೆ: ಆಯ್ಕೆ ಸಮಿತಿ ಅಧ್ಯಕ್ಷ

ಚೆನ್ನೈ ಸೂಪರ್ ಕಿಂಗ್ಸ್‌

ಚೆನ್ನೈ ಸೂಪರ್ ಕಿಂಗ್ಸ್‌

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಮುನ್ನಡೆಯುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಹೊಸ ನಾಯಕನಿಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದೆ. ರವೀಂದ್ರ ಜಡೇಜಾಗೆ ನಾಯಕತ್ವ ನೀಡಿ ವಿಫಲಗೊಂಡ ಬಳಿಕ ಮಹೇಂದ್ರ ಸಿಂಗ್ ಧೋನಿ ತಂಡದ ನಾಯಕತ್ವಕ್ಕೆ ಮರಳಿದ್ದು ವಿಪರ್ಯಾಸ. ಆದ್ರೆ ಧೋನಿ ಇನ್ನೂ ಹೆಚ್ಚು ಸೀಸನ್‌ ಆಡಲು ಸಾಧ್ಯವಿಲ್ಲ. ಬಹುತೇಕ ಕ್ರಿಕೆಟ್ ಪಂಡಿತರ ಪ್ರಕಾರ 2023ರ ಸೀಸನ್‌ ಧೋನಿಯ ಕೊನೆಯ ಸೀಸನ್ ಆಗಿರಲಿದೆ.

ಹೀಗಾಗಿ ಮಹೇಂದ್ರ ಸಿಂಗ್ ಧೋನಿ ಸ್ಥಾನಕ್ಕೆ ಕೇನ್‌ ವಿಲಿಯಮ್ಸನ್‌ರನ್ನು ಕಾಯ್ದಿರಿಸಲು ಚೆನ್ನೈ ಸೂಪರ್ ಕಿಂಗ್ಸ್‌ ಬಿಡ್‌ನಲ್ಲಿ ಸಾಕಷ್ಟು ಪೈಪೋಟಿ ನಡೆಸಬಹುದು. ಕಳೆದ ಸೀಸನ್‌ನ ಹರಾಜಿನಲ್ಲಿ ಕೇನ್ ವಿಲಿಯಮ್ಸನ್‌ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಪ್ರಯತ್ನ ನಡೆಸಿತು. ಆದ್ರೆ ಮಾಡಿದ ಪ್ರಯತ್ನ ವಿಫಲಗೊಂಡಿತು.

ಆದ್ರೆ ಈ ಬಾರಿ ವಿಲಿಯಮ್ಸನ್ ಅಂತರಾಷ್ಟ್ರೀಯ ಕ್ರಿಕೆಟ್ ಪ್ರದರ್ಶನ ಕುಸಿತ ಕಂಡಿರುವುದರಿಂದ ಕಡಿಮೆ ಬೆಲೆಗೆ ಬಿಕರಿಯಾಗಬಹುದು ಮತ್ತು ಚೆನ್ನೈ ಸೂಪರ್ ಕಿಂಗ್ಸ್‌ ಖರೀದಿಗೆ ಮುಂದಾಗಬಹುದು.

IPL 2023: ದುಬಾರಿ ಮೊತ್ತ ಪಡೆದ್ರೂ, ಉತ್ತಮ ಪ್ರದರ್ಶನ ನೀಡದ ಈ 5 ಆಟಗಾರರು ರಿಲೀಸ್!

ಸನ್‌ರೈಸರ್ಸ್ ಹೈದ್ರಾಬಾದ್

ಸನ್‌ರೈಸರ್ಸ್ ಹೈದ್ರಾಬಾದ್

ಕಳೆದ ಐಪಿಎಲ್ ಸೀಸನ್‌ನಲ್ಲಿ 14 ಕೋಟಿ ರೂಪಾಯಿಗೆ ಸನ್‌ರೈಸರ್ಸ್ ಹೈದ್ರಾಬಾದ್ ತಂಡದಲ್ಲಿದ್ದ ನ್ಯೂಜಿಲೆಂಡ್ ಆಟಗಾರನು ಎಸ್‌ಆರ್‌ಎಚ್‌ ತಂಡದಿಂದ ಹೊರಬೀಳಲು ಪ್ರಮುಖ ಕಾರಣ ದುಬಾರಿ ಬೆಲೆ. ವಿಲಿಯಮ್ಸನ್ ನೀಡಿರುವ ಪ್ರದರ್ಶನಕ್ಕೂ ಮತ್ತು ಆತನಿಗೆ ನೀಡಿರುವ ಮೊತ್ತಕ್ಕೆ ಅಜಗಜಾಂತರ ವ್ಯತ್ಯಾಸವಿದೆ. ಹೀಗಾಗಿ ವಿಲಿಯಮ್ಸನ್‌ರನ್ನು ಹರಾಜಿಗೆ ಬಿಡುವ ಮೂಲಕ ಕಡಿಮೆ ಮೊತ್ತಕ್ಕೆ ಮತ್ತೆ ಖರೀದಿಸುವ ಯೋಜನೆಯನ್ನ ಎಸ್‌ಆರ್‌ಎಚ್ ಹೊಂದಿದೆ.

ಹಾಗೇನಾದ್ರೂ ಆಗಿದ್ದಲ್ಲಿ ಕೇನ್‌ ವಿಲಿಯಮ್ಸನ್‌ರನ್ನು ಮತ್ತೆ ತಂಡದ ನಾಯಕನನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಕಡಿಮೆಯಿದೆ. ವರದಿಗಳ ಪ್ರಕಾರ ಇಂಗ್ಲೆಂಡ್ ತಂಡದ ಬೆನ್‌ ಸ್ಟೋಕ್ಸ್‌ ಮೇಲೆ ಎಸ್‌ಆರ್‌ಎಚ್ ಕಣ್ಣಿಟ್ಟಿದ್ದು, ಸ್ಟೋಕ್ಸ್‌ ಸಿಗದೇ ಹೋದಲ್ಲಿ, ಬ್ಯಾಕ್ ಅಪ್‌ ಆಗಿ ಕೇನ್ ವಿಲಿಯಮ್ಸನ್ ಇರಲಿದ್ದಾರೆ.

ತಂಡದಿಂದ ಡೇವಿಡ್ ವಾರ್ನರ್ ಮತ್ತು ರಶೀದ್ ಖಾನ್‌ನಂತಹ ಆಟಗಾರರು ಹೊರಬಿದ್ದ ಬಳಿಕ, ಫ್ರಾಂಚೈಸಿ ಉಳಿಸಿಕೊಂಡ ಪ್ರಮುಖ ಆಟಗಾರರಲ್ಲಿ ಕೇನ್ ವಿಲಿಯಮ್ಸನ್ ಒಬ್ಬರು. ಹೀಗಾಗಿ ಎಸ್‌ಎರ್‌ಎಚ್‌ ನಾಯಕತ್ವದ ದೃಷ್ಟಿಯಿಂದ ಮತ್ತೆ ಕೇನ್ ವಿಲಿಯಮ್ಸನ್ ಖರೀದಿಗೆ ಮುಂದಾದರೂ ಆಶ್ಚರ್ಯವಿಲ್ಲ.

Story first published: Wednesday, November 16, 2022, 17:56 [IST]
Other articles published on Nov 16, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+