
ಕೇನ್ ವಿಲಿಯಮ್ಸನ್
ಸನ್‌ರೈಸರ್ಸ್ ಹೈದ್ರಾಬಾದ್ ಪ್ರಮುಖ ಆಟಗಾರರನ್ನ ಬಿಡುಗಡೆ ಮಾಡಿದ್ದು, ಡೇವಿಡ್ ವಾರ್ನರ್ ಬಳಿಕ ಎಸ್‌ಆರ್‌ಎಚ್ ತಂಡವನ್ನ ಮುನ್ನಡೆಸಿದ್ದ ನಾಯಕ ಕೇನ್ ವಿಲಿಯಮ್ಸನ್‌ರನ್ನ ರಿಲೀಸ್ ಮಾಡಿದೆ. ಕಳೆದ ಐಪಿಎಲ್ ಸೀಸನ್‌ನಲ್ಲಿ 14 ಕೋಟಿ ರೂಪಾಯಿಗೆ ರೀಟೈನ್ ಆಗಿದ್ದ ಸನ್‌ರೈಸರ್ಸ್ ಹೈದ್ರಾಬಾದ್ ತಂಡದ ಕೇನ್ ವಿಲಿಯಮ್ಸನ್‌ರನ್ನ ಉಳಿಸಿಕೊಳ್ಳಲು ಎಸ್‌ಆರ್‌ಎಚ್ ಮನಸ್ಸು ಮಾಡಿಲ್ಲ.
ನ್ಯೂಜಿಲೆಂಡ್ ತಂಡದ ನಾಯಕನಾಗಿರುವ ಕೇನ್ ವಿಲಿಯಮ್ಸನ್ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ತಂಡವನ್ನ ಸೆಮಿಫೈನಲ್‌ವರೆಗೆ ತೆಗೆದುಕೊಂಡು ಹೋಗಿದ್ದಾರೆ. ಆದ್ರೆ ವೈಯಕ್ತಿಕವಾಗಿ ವಿಲಿಯಮ್ಸನ್ ಮಿಂಚುವಲ್ಲಿ ವಿಫಲಗೊಂಡರು. ಹೀಗಾಗಿ ಎಸ್‌ಆರ್‌ಎಚ್, ಕೇನ್ ವಿಲಿಯಮ್ಸನ್ ಮೇಲಿನ ವಿಶ್ವಾಸ ಕಳೆದುಕೊಂಡಿದೆ.

ಮಯಾಂಕ್ ಅಗರ್ವಾಲ್
ಐಪಿಎಲ್ ಫ್ರಾಂಚೈಸಿ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವವನ್ನು ಬದಲಾವಣೆ ಮಾಡಿದ್ದರ ಜೊತೆಗೆ, ಕಳೆದ ಸೀಸನ್ ನಾಯಕನಾಗಿದ್ದ ಮಯಾಂಕ್ ಅಗರ್ವಾಲ್‌ರನ್ನ ರಿಲೀಸ್ ಮಾಡಿದೆ. ಟೀಂ ಇಂಡಿಯಾ ಓಪನರ್ ಶಿಖರ್ ಧವನ್‌ಗೆ ನಾಯಕತ್ವ ಪಟ್ಟ ಕಟ್ಟಿರುವ ಎಸ್‌ಆರ್‌ಎಚ್ ಮಯಾಂಕ್ ಪ್ರದರ್ಶನ ನೋಡಿ ಬೇಸತ್ತಿದ್ದು, ಹರಾಜಿಗೆ ಬಿಟ್ಟಿದೆ.
ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ ಪಾಯಿಂಟ್ಸ್ ಟೇಬಲ್‌ನಲ್ಲಿ ಆರನೇ ಸ್ಥಾನದಲ್ಲಿ ಕೊನೆಗೊಳಿಸಿತು. ಕೆ.ಎಲ್ ರಾಹುಲ್ ತಂಡವನ್ನು ತೊರೆದ ಹಿನ್ನಲೆಯಲ್ಲಿ ಮಯಾಂಕ್ ಅಗರ್ವಾಲ್‌ಗೆ ಬರೋಬ್ಬರಿ 14 ಕೋಟಿ ನೀಡಿ ಎಸ್‌ಆರ್‌ಎಚ್ ರೀಟೈನ್ ಮಾಡಿಕೊಂಡಿತ್ತು.
ಆದ್ರೆ ಮಯಾಂಕ್ ಅಗರ್ವಾಲ್ ನಾಯಕತ್ವದಲ್ಲಿ ಪಂಜಾಬ್ ಕಿಂಗ್ಸ್ 14 ಪಂದ್ಯಗಳಲ್ಲಿ 7 ಪಂದ್ಯ ಜಯಿಸಿ ಪಾಯಿಂಟ್ಸ್ ಟೇಬಲ್‌ನಲ್ಲಿ 6ನೇ ಸ್ಥಾನದಲ್ಲಿ ಐಪಿಎಲ್ 2022ರ ಸೀಸನ್ ಅಂತ್ಯಗೊಳಿಸಿತು. ನಾಯಕತ್ವದ ಒತ್ತಡವು ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ ಮೇಲೆ ಪ್ರಭಾವ ಬೀರಿತು. 13 ಪಂದ್ಯಗಳಲ್ಲಿ ಮಯಾಂಕ್ ಅಗರ್ವಾಲ್ 122.50 ಸ್ಟ್ರೈಕ್‌ರೇಟ್‌ನಲ್ಲಿ ಗಳಿಸಿದ್ದು ಕೇವಲ 196 ರನ್‌ಗಳು.
ಶಿಖರ್ ಧವನ್ ಮತ್ತು ಜಾನಿ ಬೈಸ್ಟ್ರೋವ್ ಓಪನರ್ ಆಗಿ ಕಣಕ್ಕಿಳಿದ ಪರಿಣಾಮ ಮಯಾಂಕ್ ಸ್ವತಃ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಶುರು ಮಾಡಿ ವಿಫಲಗೊಂಡರು.
CSK ತಂಡದಲ್ಲೇ ಉಳಿದ ರವೀಂದ್ರ ಜಡೇಜಾ: 3 ಪದದ ಟ್ವೀಟ್‌ನಲ್ಲಿ, ಧೋನಿಗೆ ಧನ್ಯವಾದ ತಿಳಿಸಿದ ಜಡ್ಡು

ನಿಕೋಲಸ್ ಪೂರನ್
ಸನ್‌ರೈಸರ್ಸ್ ಹೈದ್ರಾಬಾದ್ ರಿಲೀಸ್ ಮಾಡಿದ ಮತ್ತೊಬ್ಬ ದುಬಾರಿ ಆಟಗಾರ ನಿಕೋಲಸ್ ಪೂರನ್ ಆಗಿದ್ದಾರೆ. ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಹೆಸರಾದವರು. ಆದ್ರೆ ಇತ್ತೀಚೆಗೆ ಟಿ20 ವಿಶ್ವಕಪ್ ಸೂಪರ್ 12 ಹಂತವನ್ನೂ ಪ್ರವೇಶಿಸಲು ಸಾಧ್ಯವಾಗದೇ ಪೂರನ್ ನಾಯಕತ್ವದ ವೆಸ್ಟ್ ಇಂಡೀಸ್ ಭಾರೀ ಮುಖಭಂಗ ಎದುರಿಸಿತು.
ಇನ್ನು ಐಪಿಎಲ್ ವಿಚಾರಕ್ಕೆ ಬಂದ್ರೆ 2022ರ ಸೀಸನ್‌ನಲ್ಲಿ 14 ಪಂದ್ಯಗಳಲ್ಲಿ 144.34ರ ಸ್ಟ್ರೈಕ್‌ರೇಟ್‌ನಲ್ಲಿ 306 ರನ್ ಕಲೆಹಾಕಿದರು. ಆದ್ರೆ ತದನಂತರ ನಡೆದ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಪೂರನ್ 10 ಪಂದ್ಯಗಳಲ್ಲಿ ಗಳಿಸಿದ್ದು 108 ರನ್‌ಗಳು ಮಾತ್ರ. ಇವರ ಕೆಟ್ಟ ಪ್ರದರ್ಶನ ಟಿ20 ವಿಶ್ವಕಪ್‌ನಲ್ಲೂ ಮುಂದುವರಿದಿದ್ದಲ್ಲದೆ ಕೇವಲ 25 ರನ್ ಕಲೆಹಾಕಿದರು.
ಹೀಗಾಗಿ ಎಸ್‌ಆರ್‌ಎಚ್ 10.75 ಕೋಟಿ ಕೊಟ್ಟು ಖರೀದಿಸಿದ್ದ ಪೂರನ್‌ರನ್ನ ರಿಲೀಸ್ ಮಾಡುವ ಮೂಲಕ ಅತಿ ಹೆಚ್ಚು ಪರ್ಸ್ ಮೌಲ್ಯವನ್ನು ಹೊಂದುವ ಮೂಲಕ ಹರಾಜಿಗೆ ತೆರಳಿದೆ. ಗಮನಿಸಬೇಕಾದ ವಿಷಯವೇನೆಂದರೆ ನಿಕೋಲಸ್ ಪೂರನ್ ಅತಿ ಹೆಚ್ಚು ಮೊತ್ತಕ್ಕೆ ಹರಾಜಾಗಿದ್ದ ವೆಸ್ಟ್ ಇಂಡೀಸ್ ಆಟಗಾರನಾಗಿದ್ದರು.
IPL 2023: ಕ್ಯಾಪ್ಟನ್ ಕೇನ್ ವಿಲಿಯಮ್ಸನ್ SRH ತಂಡದಿಂದ ಔಟ್: ತಂಡದಲ್ಲಿ ಉಳಿದ ಆಟಗಾರರ ಪಟ್ಟಿ

ಜೇಸನ್ ಹೋಲ್ಡರ್
ಲಕ್ನೋ ಸೂಪರ್ ಜೈಂಟ್ಸ್ ತಂಡದ ಅತ್ಯಂತ ಆಶ್ಚರ್ಯಕರ ನಿರ್ಧಾರವೆಂದ್ರೆ ವಿಂಡೀಸ್ ಆಲ್‌ರೌಂಡರ್ ಜೇಸನ್ ಹೋಲ್ಡರ್ ರಿಲೀಸ್ ಮಾಡಿರುವುದು. 8.75 ಕೋಟಿ ರೂಪಾಯಿಗೆ ಲಕ್ನೋ ತಂಡವನ್ನ ಸೇರಿದ್ದ ಹೋಲ್ಡರ್ ಅನ್ನು ಹೊರಹಾಕುವ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ಹರಾಜಿನಲ್ಲಿ ಬೇರೊಬ್ಬ ಆಟಗಾರನನ್ನು ಪಡೆಯಲು ಗುರಿ ನೆಟ್ಟಿದೆ.
ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ಮೆಂಟರ್ ಆಗಿರುವ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಕೆ.ಎಲ್ ರಾಹುಲ್ ಮುನ್ನಡೆಸುತ್ತಿದ್ದಾರೆ.

ರೊಮಾರಿಯೊ ಶೆಫರ್ಡ್
ಸನ್‌ರೈಸರ್ಸ್ ಹೈದ್ರಾಬಾದ್ ಫ್ರಾಂಚೈಸಿ ರಿಲೀಸ್ ಮಾಡಿರುವ ಮೂರನೇ ದುಬಾರಿ ಆಟಗಾರ ರೊಮಾರಿಯೊ ಶೆಫರ್ಡ್. ವೇಗದ ಬೌಲಿಂಗ್ ಜೊತೆಗೆ ಸ್ಫೋಟಕ ಆಟವಾಡುವ ಸಾಮರ್ಥ್ಯ ಹೊಂದಿರುವ ರೊಮಾರಿಯೊ ಶೆಫರ್ಡ್, 7.75 ಕೋಟಿ ರೂಪಾಯಿಗೆ ಸನ್‌ರೈಸರ್ಸ್ ಹೈದ್ರಾಬಾದ್ ತೆಕ್ಕೆಗೆ ಬಿದ್ದಿದ್ರು. ಆದ್ರೆ ಎಸ್‌ಆರ್‌ಎಚ್ ಈ ಆಟಗಾರನನ್ನು ಉಳಿಸಿಕೊಳ್ಳಲು ಇಚ್ಚಿಸಲಿಲ್ಲ. ಹೀಗಾಗಿ ಒಟ್ಟು ಮೂವರು ದುಬಾರಿ ಆಟಗಾರರನ್ನ ಸನ್‌ರೈಸರ್ಸ್ ಹೈದ್ರಾಬಾದ್ ರಿಲೀಸ್ ಮಾಡಿದೆ. ಜೊತೆಗೆ ಬರೋಬ್ಬರಿ 42.25 ಕೋಟಿ ರೂ. ಪರ್ಸ್ ವ್ಯಾಲ್ಯೂ ಜೊತೆಗೆ ಮಿನಿ ಹರಾಜು ಪ್ರವೇಶಿಸಿದೆ.