
ಹನೀಫ್ ಮೊಹಮ್ಮದ್
ಪಾಕಿಸ್ತಾನದ ಮಾಜಿ ಅಂತಾರಾಷ್ಟ್ರೀಯ ಆಟಗಾರ ಹನೀಫ್ ಮೊಹಮ್ಮದ್ ಭಾರತದ ಮೂಲದವರಾಗಿದ್ದು, 1934 ರಲ್ಲಿ ಭಾರತದಲ್ಲಿ ಜನಿಸಿದರು. ಭಾರತ-ಪಾಕಿಸ್ತಾನ ವಿಭಜನೆಯ ಸಮಯದಲ್ಲಿ ಹನೀಫ್ ಮೊಹಮ್ಮದ್ ಕುಟುಂಬವು ಪಾಕಿಸ್ತಾನಕ್ಕೆ ತೆರಳಿದರು. ಪಾಕಿಸ್ತಾನ ಕ್ರಿಕೆಟ್‌ನ ಮೊದಲ ಸೂಪರ್‌ಸ್ಟಾರ್‌ಗಳಲ್ಲಿ ಹನೀಫ್ ಕೂಡ ಒಬ್ಬರು. 1952 ರಲ್ಲಿ, ಅವರು ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದಾಗ ಅವರು ಪಾಕಿಸ್ತಾನ ತಂಡದ ಭಾಗವಾಗಿದ್ದರು.
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ನಲ್ಲಿ 337 ರನ್ ಗಳಿಸಿದ ನಂತರ ಹನೀಫ್ ಸ್ಟಾರ್ ಪಟ್ಟಕ್ಕೆ ಏರಿದರು. ನಂತರ, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 499 ರನ್‌ಗಳ ಮತ್ತೊಂದು ವಿಶ್ವ ದಾಖಲೆಯ ಸ್ಕೋರ್ ಗಳಿಸಿದ ಹನೀಫ್ ಸೂಪರ್‌ಸ್ಟಾರ್ ಆದರು.
ಜಸ್ಪ್ರೀತ್ ಬುಮ್ರಾ ಬೌಲಿಂಗ್ ಆ್ಯಕ್ಷನ್ ಅನುಕರಿಸಿದ ಹಾರ್ದಿಕ್ ಪಾಂಡ್ಯ: ಬುಮ್ರಾ ಪ್ರತಿಕ್ರಿಯೆ

ಆಸಿಫ್ ಇಕ್ಬಾಲ್
ಮತ್ತೊಬ್ಬ ಮಾಜಿ ಸೂಪರ್‌ಸ್ಟಾರ್ ಮತ್ತು ಪಾಕಿಸ್ತಾನದ ಮಾಜಿ ನಾಯಕ ಆಸಿಫ್ ಇಕ್ಬಾಲ್ ಕೂಡ ಭಾರತದ ಸಂಬಂಧವನ್ನ ಹೊಂದಿದ್ದಾರೆ. ಅವರು 1934 ರಲ್ಲಿ ಹೈದರಾಬಾದ್‌ನಲ್ಲಿ ಜನಿಸಿದರು. ಆಸಿಫ್ ದೇಶೀಯ ಕ್ರಿಕೆಟ್‌ನಲ್ಲಿ ಹೈದರಾಬಾದ್ ಪರ ಕೂಡ ಆಡಿದ್ದಾರೆ. ಆದರೆ 1961 ರಲ್ಲಿ ಅವರ ಕುಟುಂಬ ಪಾಕಿಸ್ತಾನಕ್ಕೆ ಸ್ಥಳಾಂತರಗೊಂಡಿತು.
ಆಸಿಫ್ 1975 ಮತ್ತು 1979 ರಲ್ಲಿ ಮೊದಲ ಎರಡು ICC ವಿಶ್ವಕಪ್‌ಗಳಲ್ಲಿ ಪಾಕಿಸ್ತಾನವನ್ನು ಮುನ್ನಡೆಸಿದರು. ಆಸಿಫ್ ತಂಡದ ಅತ್ಯುತ್ತಮ ಆಲ್ ರೌಂಡರ್ ಎಂದೂ ಕರೆಯಲಾಗುತ್ತಿತ್ತು. ಭಾರತದ ಟೆನಿಸ್ ಸೂಪರ್ ಸ್ಟಾರ್ ಸಾನಿಯಾ ಮಿರ್ಜಾ ಮತ್ತು ಭಾರತದ ಮಾಜಿ ಆಟಗಾರ ಗುಲಾಮ್ ಅಹ್ಮದ್ ಕೂಡ ಆಸಿಫ್ ಅವರ ಸಂಬಂಧಿಕರು.

ಮಜೀದ್ ಖಾನ್
ಈ ಪಟ್ಟಿಯಲ್ಲಿ ಮೂರನೇ ಮತ್ತು ಕೊನೆಯ ಸ್ಟಾರ್ ಮಜೀದ್ ಖಾನ್. ಅವರು 1947 ರಲ್ಲಿ ಪಂಜಾಬ್‌ನ ಲುಧಿಯಾನದಲ್ಲಿ ಜನಿಸಿದರು. ಶೀಘ್ರದಲ್ಲೇ ಮಜೀದ್ ಕುಟುಂಬ ಪಾಕಿಸ್ತಾನಕ್ಕೆ ಸ್ಥಳಾಂತರಗೊಂಡಿತು. ಮಜೀದ್ 1964 ರಲ್ಲಿ ಪಾಕಿಸ್ತಾನ ಪರ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದರು. ಟೆಸ್ಟ್ ಪಂದ್ಯದ ಮೊದಲ ದಿನದ ಊಟದ ವಿರಾಮಕ್ಕೂ ಮೊದಲು ಶತಕ ಗಳಿಸಿದ ನಾಲ್ವರು ಕ್ರಿಕೆಟಿಗರಲ್ಲಿ ಮಜೀದ್ ಕೂಡ ಒಬ್ಬರು. 1976ರಲ್ಲಿ ನ್ಯೂಜಿಲೆಂಡ್ ವಿರುದ್ಧ ಅವರು ಈ ಸಾಧನೆ ಮಾಡಿದ್ದಾರೆ.
ಮಜೀದ್, ಪಾಕಿಸ್ತಾನದ ತಂಡದ ಮಾಜಿ ನಾಯಕ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಂಬಂಧಿಯೂ ಹೌದು. ಇಮ್ರಾನ್ ಪಾಕಿಸ್ತಾನಕ್ಕೆ ವಿಶ್ವಕಪ್ ಗೆದ್ದ ಏಕೈಕ ನಾಯಕ. 1992 ರ ವಿಶ್ವಕಪ್‌ನಲ್ಲಿ ಇಮ್ರಾನ್ ನೇತೃತ್ವದಲ್ಲಿ ಪಾಕಿಸ್ತಾನವು ವಿಶ್ವಕಪ್ ಗೆದ್ದಿತು.


Click it and Unblock the Notifications












