
ಭಾರತ ತಂಡವು ತಮ್ಮ 2022ರ ಏಷ್ಯಾ ಕಪ್ ಅಭಿಯಾನವನ್ನು ಇಂದು (ಆಗಸ್ಟ್ 28ರ ಭಾನುವಾರ) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯದೊಂದಿಗೆ ಪ್ರಾರಂಭಿಸಿದೆ.
ಭಾರತ ಮತ್ತು ಪಾಕಿಸ್ತಾನ ನಡುವಿನ ಭಾನುವಾರದ ಏಷ್ಯಾ ಕಪ್ ಬಹು ನಿರೀಕ್ಷಿತ ಪಂದ್ಯದ ಕಾಯುವಿಕೆ ಅಂತ್ಯಗೊಂಡಿದೆ. ಇಬ್ಬರೂ ಸಾಂಪ್ರದಾಯಿಕ ಎದುರಾಳಿಗಳು ಟಿ20 ವಿಶ್ವಕಪ್ ನಂತರ ಮೊದಲ ಬಾರಿಗೆ ಸೆಣಸುತ್ತಿವೆ.
ಭಾರತವು 2021ರ ಟಿ20 ವಿಶ್ವಕಪ್ ಲೀಗ್ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಳ್ಳಲು ಎದುರು ನೋಡುತ್ತಿರುವಾಗ, ಬಾಬರ್ ಅಜಂ ನಾಯಕತ್ವದ ಪಾಕಿಸ್ತಾನ ತಂಡವು ತಮ್ಮ ಅದ್ಭುತ ಫಾರ್ಮ್ ಅನ್ನು ಮುಂದುವರಿಸಲು ನೋಡುತ್ತಿದೆ.

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಭಾನುವಾರ ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ 2022 ಪಂದ್ಯದ ಟಾಸ್‌ನಲ್ಲಿ ದಿನೇಶ್ ಕಾರ್ತಿಕ್ ಅವರು ಕಾಯಂ ವಿಕೆಟ್‌ಕೀಪರ್ ರಿಷಭ್ ಪಂತ್‌ಗಿಂತ ಮುಂಚಿತವಾಗಿ ಆಡುವ 11ರ ಬಳಗದಲ್ಲಿ ಇರಲಿದ್ದಾರೆ ಎಂದು ಘೋಷಿಸಿದಾಗ ದೊಡ್ಡ ಆಶ್ಚರ್ಯವನ್ನುಂಟು ಮಾಡಿತು.
"ಕೆಲವು ವರ್ಷಗಳಿಂದ ಇಲ್ಲಿ (ದುಬೈ) ಆಡಿರುವುದರಿಂದ, ನಮ್ಮ ಮುಂದೆ ಸ್ಕೋರ್ ಇದ್ದರೆ, ಉತ್ತಮ ಆಯ್ಕೆಯಾಗಿದೆ ಎಂದು ನಾವು ಭಾವಿಸಿದೆವು. ಸ್ವಲ್ಪ ಹುಲ್ಲಿನ ಹೊದಿಕೆ ಇದೆ ಮತ್ತು ನಾವು ಅದನ್ನು ಬಳಸಿಕೊಳ್ಳಲು ಬಯಸುತ್ತೇವೆ. ರಿಷಭ್ ಪಂತ್ ದುರದೃಷ್ಟವಶಾತ್ ಈ ಪಂದ್ಯದಿಂದ ತಪ್ಪಿಸಿಕೊಳ್ಳುತ್ತಾರೆ, ನಾವು ದಿನೇಶ್ ಕಾರ್ತಿಕ್ ಜೊತೆ ಹೋಗುತ್ತಿದ್ದೇವೆ. ಅವೇಶ್ ಖಾನ್ ಮೂರನೇ ಸೀಮರ್ ಆಗಿರಲಿದ್ದಾರೆ," ಎಂದು ಟಾಸ್‌ನಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದರು.

ಯುವ ವೇಗಿ ನಸೀಮ್ ಶಾಗೆ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಕ್ಯಾಪ್ ನೀಡಿದ ಪಾಕಿಸ್ತಾನದ ವಿರುದ್ಧ ರೋಹಿತ್ ಶರ್ಮಾ ಬೌಲಿಂಗ್ ಮಾಡಲು ನಿರ್ಧರಿಸಿದರು.
"ನಾವು ಕೂಡ ಮೊದಲು ಬೌಲಿಂಗ್ ಮಾಡುತ್ತಿದ್ದೆವು, ಆದರೆ ಇದು ಟಾಸ್ ನಮ್ಮ ಕೈಯಲ್ಲಿಲ್ಲ. ನಾವು ದೊಡ್ಡ ಸ್ಕೋರ್ ಮಾಡಲು ನೋಡುತ್ತೇವೆ ಮತ್ತು ಪ್ರಯತ್ನಸುತ್ತೇವೆ. ಮೂವರು ವೇಗದ ಬೌಲರ್‌ಗಳು, ಇಬ್ಬರು ಸ್ಪಿನ್ನರ್‌ಗಳು ಮತ್ತು ನಸೀಮ್ ಶಾಗೆ ಇದು ಚೊಚ್ಚಲ ಪಂದ್ಯ. ಕೆಲವು ಹೊಸ ಮುಖಗಳಿವೆ, ಮತ್ತು ಕೆಲವರು ಆ ಭಾರತೀಯ ತಂಡದಲ್ಲಿ ಹಳೆಯ ಮುಖಗಳಿವೆ. ನಾವು ಇಲ್ಲಿ ಅತ್ಯುತ್ತಮವಾದುದನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ," ಎಂದು ಪಾಕಿಸ್ತಾನದ ನಾಯಕ ಬಾಬರ್ ಅಜಂ ತಿಳಿಸಿದರು.
ಭಾರತ ಮತ್ತು ಪಾಕಿಸ್ತಾನ ತಂಡಗಳ ಆಡುವ 11ರ ಬಳಗ
ಭಾರತ: 1 ರೋಹಿತ್ ಶರ್ಮಾ(ನಾಯಕ), 2 ಕೆಎಲ್ ರಾಹುಲ್ (ಉಪನಾಯಕ), 3 ವಿರಾಟ್ ಕೊಹ್ಲಿ, 4 ಸೂರ್ಯಕುಮಾರ್ ಯಾದವ್, 5 ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), 6 ಹಾರ್ದಿಕ್ ಪಾಂಡ್ಯ, 7 ರವೀಂದ್ರ ಜಡೇಜಾ, 8 ಭುವನೇಶ್ವರ್ ಕುಮಾರ್, 9 ಅವೇಶ್ ಖಾನ್, 10 ಯುಜ್ವೇಂದ್ರ ಚಾಹಲ್, 11 ಅರ್ಷದೀಪ್ ಸಿಂಗ್
ಪಾಕಿಸ್ತಾನ: 1 ಬಾಬರ್ ಅಜಮ್ (ನಾಯಕ), 2 ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್) 3, ಫಖರ್ ಜಮಾನ್, 4 ಇಫ್ತಿಕರ್ ಅಹ್ಮದ್, 5 ಖುಷ್ದಿಲ್ ಶಾ, 6 ಆಸಿಫ್ ಅಲಿ, 7 ಶಾದಾಬ್ ಖಾನ್, 8 ಮೊಹಮ್ಮದ್ ನವಾಜ್, 9 ನಸೀಮ್ ಶಾ, 10 ಹರಿಸ್ ರೌಫ್, 11 ಶಾನವಾಜ್ ದಹಾನಿ