Ind Vs Pak: ಯುಜ್ವೇಂದ್ರ ಚಹಾಲ್‌ಗೆ ರಿವರ್ಸ್ ಸ್ವೀಪ್ ಹೊಡೆದ ವಿರಾಟ್ ಕೊಹ್ಲಿ, ಜನರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

2022ರ ಐಸಿಸಿ ಟಿ20 ವಿಶ್ವಕಪ್‌ನ ಭಾರತದ ಆರಂಭಿಕ ಪಂದ್ಯವು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (ಎಂಸಿಜಿ) ಪಾಕಿಸ್ತಾನದ ವಿರುದ್ಧ ನಡೆಯಲಿದೆ. ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಶನಿವಾರ ಭರ್ಜರಿ ಅಭ್ಯಾಸ ನಡೆಸಿತು. ತಂಡದ ಎಲ್ಲಾ ಆಟಗಾರರು ನೆಟ್ಸ್‌ನಲ್ಲಿ ಬೆವರಿಳಿಸಿದರು. ಈ ಕ್ಷಣದಲ್ಲಿ ಅಭಿಮಾನಿಗಳು ವಂದೇ ಮಾತರಂ ಗೀತೆ ಹಾಡುವ ಮೂಲಕ ಭಾರತದ ಆಟಗಾರರನ್ನು ಹುರಿದುಂಬಿಸಿದರು.
ನೆಟ್ಸ್‌ನಲ್ಲಿ ಭಾರತ ತಂಡದ ಅಭ್ಯಾಸವನ್ನು ವೀಕ್ಷಿಸಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಕೊಹ್ಲಿ ನೆಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ವೇಳೆ ಕೂಗುವ ಮೂಲಕ ಅವರಿಗೆ ಬೆಂಬಲ ವ್ಯಕ್ತಪಡಿಸಿದರು. ಭಾರತ ತಂಡದ ಅಭ್ಯಾಸವನ್ನು ವೀಕ್ಷಿಸಲು ಪ್ರೇಕ್ಷಕರು ಆಗಮಿಸಿದ್ದರಿಂದ, ಸ್ಟಾರ್ ಭಾರತೀಯ ಬ್ಯಾಟರ್ ವಿರಾಟ್ ಕೊಹ್ಲಿ ತರಬೇತಿಯಲ್ಲಿ ಶ್ರಮಿಸಿದಾಗ ಅಭಿಮಾನಿಗಳು ಸಂತೋಷಪಟ್ಟರು.
ಯುಜುವೇಂದ್ರ ಚಹಾಲ್ ಬೌಲಿಂಗ್‌ನಲ್ಲಿ ಕೊಹ್ಲಿ ಬ್ಯಾಟಿಂಗ್ ಮಾಡಿದ ರೀತಿ ಆಸಕ್ತಿದಾಯಕವಾಗಿತ್ತು. ವಂದೇ ಮಾತರಂ ಹಾಡುವ ಮೂಲಕ ಪ್ರೇಕ್ಷಕರು ಭಾರತ ತಂಡವನ್ನು ಹುರಿದುಂಬಿಸುತ್ತಿದ್ದಾಗ, ವಿರಾಟ್ ಚಹಾಲ್ ಎಸೆತದಲ್ಲಿ ಅದ್ಭುತ ರಿವರ್ಸ್ ಸ್ವೀಪ್ ಮಾಡಿದರು. ಈ ವಿಶೇಷ ಹೊಡೆತವು ತಮ್ಮ ತುತ್ತೂರಿ ಮತ್ತು ಶಿಳ್ಳೆಗಳೊಂದಿಗೆ ಸಾಕಷ್ಟು ಸದ್ದು ಮಾಡಲು ಪ್ರೇಕ್ಷಕರನ್ನು ಪ್ರೇರೇಪಿಸಿತು.

ಪಾಕಿಸ್ತಾನ ವಿರುದ್ಧ ಅತ್ಯುತ್ತಮ ದಾಖಲೆ
ರಿವರ್ಸ್ ಸ್ವೀಪ್ ನಂತರ ಕೊಹ್ಲಿ ರಕ್ಷಣಾತ್ಮಕ ಹೊಡೆತಗಳನ್ನು ಆಡಲು ಆರಂಭಿಸಿದರು. 2022ರ ಏಷ್ಯಾಕಪ್ ನಂತರ ವಿರಾಟ್ ಕೊಹ್ಲಿ ಅತ್ಯುತ್ತಮವಾದ ಫಾರ್ಮ್‌ನಲ್ಲಿದ್ದಾರೆ. ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಮಾಡಿದ್ದರು.
ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಬೇಕಾದರೆ, ಕೊಹ್ಲಿ ಅತ್ಯುತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಅಲ್ಲದೆ, ಹಿಂದಿನ ಆವೃತ್ತಿಯ ಭಾರತ-ಪಾಕಿಸ್ತಾನದ ಹಣಾಹಣಿಯಲ್ಲಿ ಕೊಹ್ಲಿ ಏಕಾಂಗಿ ಯೋಧರಾಗಿದ್ದರು. ಆಗ ಅವರು ದಿಟ್ಟ ಅರ್ಧಶತಕ ಗಳಿಸಿದ್ದರು. ಪಾಕಿಸ್ತಾನದ ವಿರುದ್ಧ ಅವರು ಉತ್ತಮ ದಾಖಲೆಯನ್ನು ಹೊಂದಿರುವ ಕೊಹ್ಲಿ, ಭಾನುವಾರದ ಪಂದ್ಯದಲ್ಲಿ ಕೂಡ ಅದನ್ನು ಮುಂದುವರೆಸುವ ಉತ್ಸಾಹದಲ್ಲಿದ್ದಾರೆ.
T20 ವಿಶ್ವಕಪ್: ಅಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್‌ಗೆ ಪ್ರಯಾಸದ ಗೆಲುವು, 5 ವಿಕೆಟ್ ಪಡೆದು ಮಿಂಚಿದ ಸ್ಯಾಮ್ ಕರನ್

ಯುಜುವೇಂದ್ರ ಚಹಾಲ್ ಮೇಲಿದೆ ಒತ್ತಡ
ಈ ನಡುವೆ ಯುಜುವೇಂದ್ರ ಚಾಹಲ್ ಮೇಲೂ ಉತ್ತಮ ಪ್ರದರ್ಶನ ನೀಡಬೇಕಾದ ಒತ್ತಡ ಹೆಚ್ಚಿದೆ. ಲೆಗ್ ಸ್ಪಿನ್ನರ್ ಮಧ್ಯಮ ಓವರ್‌ಗಳಲ್ಲಿ ವಿಕೆಟ್‌ಗಳನ್ನು ಪಡೆಯುವ ನಿರೀಕ್ಷೆಯಿದೆ. ಎಂಸಿಜಿಯ ದೊಡ್ಡ ಮೈದಾನವನ್ನು ಪರಿಗಣಿಸಿ ಚಹಾಲ್ ಆಡುವ ಬಳಗದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ.
ಅದರಲ್ಲೂ, ಪಾಕಿಸ್ತಾನದ ವಿರುದ್ಧದ ಮಹತ್ವದ ಪಂದ್ಯದಲ್ಲಿ ಅವರು ಅತ್ಯುತ್ತಮ ಪ್ರದರ್ಶನ ನೀಡಬೇಕಿದೆ. ದೊಡ್ಡ ಮೈದಾನಗಳು ಅವರಿಗೆ ವಿಕೆಟ್ ತೆಗೆಯಲು ಅನುಕೂಲಕರವಾಗಿರುತ್ತವೆ.

ಪ್ಲೇಯಿಂಗ್ XI ಬಗ್ಗೆ ರೋಹಿತ್ ಶರ್ಮಾ ಅಭಿಪ್ರಾಯ
ಟೀಮ್ ಕಾಂಬಿನೇಷನ್‌ಗೆ ಸಂಬಂಧಿಸಿದಂತೆ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದು ಇದೇ ವಿಷಯದ ಮೇಲೆ ಬೆಳಕು ಚೆಲ್ಲಿದೆ. ಮುಂದೆ, ಅವರು ಪ್ರತಿ ಪಂದ್ಯದಲ್ಲೂ XI ಅನ್ನು ಬದಲಾಯಿಸಲು ಮುಕ್ತರಾಗಿದ್ದಾರೆ ಎಂದು ಹೇಳಿದರು.
"ನಾನು ಖಂಡಿತವಾಗಿಯೂ ಆಡುವ ಹನ್ನೊಂದರ ಬಳಗದ ಬಗ್ಗೆ ನನ್ನ ಮನಸ್ಸನ್ನು ತೆರೆದಿಡಲು ಬಯಸುತ್ತೇನೆ. ನಾವು ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ಮಾಡಲು ಮುಕ್ತವಾಗಿರುತ್ತೇವೆ. ಪ್ರತಿ ಪಂದ್ಯದಲ್ಲೂ ಒಬ್ಬರು ಅಥವಾ ಇಬ್ಬರು ಆಟಗಾರರನ್ನು ಬದಲಾಯಿಸಬೇಕಾದರೆ, ನಾವು ಅದಕ್ಕೆ ಸಿದ್ಧರಾಗಿರಬೇಕು. ನಾವು ನಮ್ಮ ಎಲ್ಲ ಹುಡುಗರನ್ನು ಅದೇ ರೀತಿ ಸಿದ್ಧಪಡಿಸಿದ್ದೇವೆ," ಎಂದು ರೋಹಿತ್ ಶರ್ಮಾ ಹೇಳಿದರು.
"ನಾವು ಯಾವ ರೀತಿಯ ಪರಿಸ್ಥಿತಿಯಲ್ಲಿ ಆಡುತ್ತಿದ್ದೇವೆ ಎಂಬುದಕ್ಕೆ ನಾವು ಒಬ್ಬರು ಅಥವಾ ಇಬ್ಬರು ಆಟಗಾರರನ್ನು ಮ್ಯಾಚ್-ಅಪ್‌ಗಳಿಗೆ ಬದಲಾಯಿಸಬೇಕಾದರೆ, ಹುಡುಗರು ಅದಕ್ಕೆ ಸಿದ್ಧರಾಗಬೇಕು ಎನ್ನುವ ಸಂದೇಶವನ್ನು ನಾವು ಇಲ್ಲಿಗೆ ಬರುವ ಮೊದಲೇ ನೀಡಲಾಗಿತ್ತು. ಆದ್ದರಿಂದ, ನಾವು ಆಟಗಾರರನ್ನು ಬದಲಾಯಿಸುವ ಕೊನೆಯ ಕ್ಷಣದ ವಿಷಯವಲ್ಲ. ಇದು ತಂಡದಲ್ಲಿ ಬಹಳ ಹಿಂದೆಯೇ ನಡೆದಿರುವ ಮಾತು, ಮತ್ತು ಹುಡುಗರು ಇದಕ್ಕೆ ಸಿದ್ಧರಾಗಿದ್ದಾರೆ" ಎಂದು ರೋಹಿತ್ ಶರ್ಮಾ ಮಾಧ್ಯಮ ಸಂವಾದದಲ್ಲಿ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications