For Quick Alerts
ALLOW NOTIFICATIONS  
For Daily Alerts
 

T20 ವಿಶ್ವಕಪ್: ಅಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್‌ಗೆ ಪ್ರಯಾಸದ ಗೆಲುವು, 5 ವಿಕೆಟ್ ಪಡೆದು ಮಿಂಚಿದ ಸ್ಯಾಮ್ ಕರನ್

England vs Afghanistan

ಪರ್ತ್‌ ಸ್ಟೇಡಿಯಂನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಸೂಪರ್ 12ನೇ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್ 5 ವಿಕೆಟ್‌ಗಳ ಗೆಲುವು ಸಾಧಿಸಿದೆ. ಅಫ್ಘಾನಿಸ್ತಾನ ನೀಡಿದ್ದ 113ರನ್‌ಗಳ ಗುರಿಯನ್ನ ಅತ್ಯಂತ ಪ್ರಯಾಸದಲ್ಲಿ ತಲುಪಿದ ಜಾಸ್ ಬಟ್ಲರ್ ಪಡೆ ಐದು ವಿಕೆಟ್‌ಗಳ ಜಯ ಸಂಪಾದಿಸುವ ಮೂಲಕ ವಿಶ್ವಕಪ್‌ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ.

ಕಡಿಮೆ ಮೊತ್ತದ ಸ್ಕೋರ್ ಅನ್ನು ಬೆನ್ನಟ್ಟಿದ ಇಂಗ್ಲೆಂಡ್ ಪರ ಟಾಪ್ ಆರ್ಡರ್‌ ವೈಫಲ್ಯದ ಬೆನ್ನಲ್ಲೂ ಸ್ಫೋಟಕ ಬ್ಯಾಟರ್ ಲಿಯಾಮ್ ಲಿವಿಂಗ್‌ಸ್ಟೋನ್ ಎಚ್ಚರಿಕೆಯ ಆಟವಾಡುವ ಮೂಲಕ ತಂಡವನ್ನು ಗೆಲುವಿನ ದಡ ತಲುಪಿಸಿದ್ದಾರೆ.

ಇಂಗ್ಲೆಂಡ್‌ಗೆ ಕಾಡಿದ ಅಫ್ಘಾನಿಸ್ತಾನದ ಸ್ಪಿನ್ನರ್ಸ್

ಇಂಗ್ಲೆಂಡ್‌ಗೆ ಕಾಡಿದ ಅಫ್ಘಾನಿಸ್ತಾನದ ಸ್ಪಿನ್ನರ್ಸ್

ಇಂಗ್ಲೆಂಡ್ ಪರ ಟಾಪ್‌ ಆರ್ಡರ್ ಬ್ಯಾಟರ್‌ಗಳಾದ ನಾಯಕ ಜಾಸ್ ಬಟ್ಲರ್ 18 ರನ್‌ಗಳಿಸಿ ಮೊದಲಿಗೆ ವಿಕೆಟ್ ಒಪ್ಪಿಸಿದ್ರೆ, ಇದ್ರ ಬೆನ್ನಲ್ಲೇ ಅಲೆಕ್ಸ್ ಹೇಲ್ಸ್‌ 19ರನ್‌ಗೆ ಇನ್ನಿಂಗ್ಸ್‌ ಮುಗಿಸಿದ್ರು. ಅದ್ರಲ್ಲೂ ಡೇವಿಡ್ ಮಲನ್ ಆಮೆಗತಿಯ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ 30 ಎಸೆತಗಳಲ್ಲಿ 18ರನ್‌ಗಳಿಸಿದ್ದು ತಂಡಕ್ಕೆ ಹಿನ್ನಡೆಯಾಯಿತು.

ಡೇವಿಡ್ ಮಲನ್ ಮುಜೀಬ್ ಉರ್ ರಹಮಾನ್‌ಗೆ ವಿಕೆಟ್‌ ಒಪ್ಪಿಸುವ ಮೊದಲೇ, ಆಲ್‌ರೌಂಡರ್‌ ಬೆನ್‌ಸ್ಟೋಕ್ಸ್ 2ರನ್‌ಗೆ ಮೊಹಮ್ಮದ್ ನಬಿಗೆ ವಿಕೆಟ್ ಒಪ್ಪಿಸಿದ್ರು. ಇದ್ರ ಬೆನ್ನಲ್ಲೇ ಹ್ಯಾರಿ ಬ್ರೂಕ್‌ ಮ್ಯಾಜಿಕ್ ಸ್ಪಿನ್ನರ್ ರಶೀದ್‌ ಖಾನ್‌ಗೆ ವಿಕೆಟ್‌ ಒಪ್ಪಿಸುವ ಮೂಲಕ ಪೆವಿಲಿಯನ್‌ ಸೇರಿಕೊಂಡ್ರು.

113ರನ್‌ಗಳ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಡಬಡಾಯಿಸಿಕೊಂಡು ಗೆಲುವಿನ ಗೆರೆ ದಾಟಿದ್ದು, 18.1 ಓವರ್‌ಗಳಲ್ಲಿ 5 ವಿಕೆಟ್‌ಗಳ ಗೆಲುವು ಸಂಪಾದಿಸಿದೆ. ಅಫ್ಘಾನಿಸ್ತಾನ ಪರ ಫಾರೂಕಿ, ಮುಜೀಬ್ ಉರ್ ರಹಮಾನ್, ರಶೀದ್ ಖಾನ್ ಮತ್ತು ಫರೀದ್ ಅಹಮದ್ ಮಲ್ಲಿಕ್ ತಲಾ 1 ವಿಕೆಟ್ ಪಡೆದರು.

ಹಾಲಿ ಚಾಂಪಿಯನ್ನರಿಗೆ ಮೊದಲ ಪಂದ್ಯದಲ್ಲಿಯೇ ಮುಖಭಂಗ: ಕಿವೀಸ್ ವಿರುದ್ಧ ಹೀನಾಯವಾಗಿ ಸೋತ ಆಸ್ಟ್ರೇಲಿಯಾ

ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದ ಅಫ್ಘಾನಿಸ್ತಾನ

ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿದ ಅಫ್ಘಾನಿಸ್ತಾನ

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನಗೆ ಬ್ಯಾಟ್ಸ್‌ಮನ್‌ಗಳು ಸಾಥ್ ನೀಡಲಿಲ್ಲ. ಮೊದಲಿಗೆ ಮಾರ್ಕ್‌ವುಡ್ ಬೌಲಿಂಗ್‌ನಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಹಮಾನುಲ್ಲಾ ಗುರ್ಬಾಜ್ 10ರನ್‌ಗಳಿಸಿ ಔಟಾದ ಬಳಿಕ ಅಫ್ಘಾನಿಸ್ತಾನದ ಪೆವಿಲಿಯನ್ ಪರೇಡ್ ಶುರುವಾಯಿತು.

ಆಲ್‌ರೌಂಡರ್ ಬೆನ್‌ಸ್ಟೋಕ್ಸ್ 7ರನ್‌ಗಳಿಸಿದ್ದ ಹಜರತುಲ್ಲಾ ಝಜೈ ವಿಕೆಟ್ ಕಬಳಿಸಿದ್ರು. ಉತ್ತಮವಾಗೇ 32ರನ್‌ಗಳಿಸಿ ಆಡುತ್ತಿದ್ದ ಇಬ್ರಾಹಿಂ ಜರ್ದಾನ್ ಸ್ಯಾಮ್ ಕರನ್‌ನ ಮೊದಲ ವಿಕೆಟ್ ಬಲಿಯಾದ್ರು. ಆನಂತರ ನಡೆದಿದ್ದು ಸ್ಯಾಮ್ ಕರನ್ ಮ್ಯಾಜಿಕ್‌ ಸ್ಪೆಲ್.

ಅಫ್ಘಾನಿಸ್ತಾ ತಂಡಕ್ಕೆ ಎಲ್ಲಿಯೂ ಚೇತರಿಸಿಕೊಳ್ಳಲು ಇಂಗ್ಲೆಂಡ್ ಅವಕಾಶ ನೀಡಲಿಲ್ಲ. ನಜೀಬುಲ್ಲಾ ಝದ್ರಾನ್ 13, ನಾಯಕ ಮೊಹಮ್ಮದ್ ನಬಿ 3, ಅಜ್ಮತುಲ್ಲಾ ಒಮರ್ಜಾಯ್ 8, ರಶೀದ್ ಖಾನ್ 0, ಮುಜೀಬ್ ಉರ್ ರಹಮಾನ್ 0, ಉಸ್ಮಾನ್ ಘನಿ 30 ಎಸೆತಗಳಲ್ಲಿ 30 ರನ್‌ಗಳಿಸಿ ಔಟಾದರು. ಅಂತಿಮ ವಿಕೆಟ್ ಆಗಿ ಫಜಲ್ಹಕ್ ಫಾರೂಕಿ ಶೂನ್ಯಕ್ಕೆ ಔಟಾದರು. ಈ ಮೂಲಕ ಮೂವರು ಆಟಗಾರರು ಖಾತೆ ತೆರೆಯದೇ ಔಟಾದ ಪರಿಣಾಮ ಅಫ್ಘಾನಿಸ್ತಾನ ಇನ್ನೂ 2 ಎಸೆತ ಬಾಕಿ ಇರುವಂತೆಯೇ 112ರನ್‌ಗಳಿಗೆ ಆಲೌಟ್ ಆಗಿ ಸೋಲಿಗೆ ನಾಂದಿ ಹಾಡಿತು.

ಅಬ್ಬಾ..! ಈತ ಡೇಂಜರಸ್ ಬೌಲರ್: ಅಭ್ಯಾಸದ ವೇಳೆಯಲ್ಲಿ ರೋಹಿತ್ ಶರ್ಮಾ ಉದ್ಗಾರ!

10 ರನ್ ನೀಡಿ 5 ವಿಕೆಟ್ ಕಬಳಿಸಿದ ಸ್ಯಾಮ್ ಕರ್ರನ್

ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅದ್ರಲ್ಲೂ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೆಸ್ಟ್ ಬೌಲಿಂಗ್ ಮಾಡಿದ ಸ್ಯಾಮ್ ಕರನ್ ಅಫ್ಘಾನಿಸ್ತಾನದ ಬ್ಯಾಟಿಂಗ್ ಬೆನ್ನಲುಬು ಮುರಿದರು. ಅಂತಿಮ ಓವರ್‌ನಲ್ಲಿ 2 ವಿಕೆಟ್ ಸೇರಿದಂತೆ ಸ್ಯಾಮ್ ಕರನ್ 3.4 ಓವರ್‌ನಲ್ಲಿ ಕೇವಲ 10 ರನ್ ನೀಡಿ 5 ವಿಕೆಟ್ ಕಬಳಿಸಿ ತಂಡದ ಪರ ಹೀರೋ ಆಗಿ ಮಿಂಚಿದ್ರು.

ಇಂಗ್ಲೆಂಡ್ ಪರ ಟಿ20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ಬೆಸ್ಟ್ ಬೌಲಿಂಗ್ ಫಿಗರ್ ಆಗಿದ್ದು, ಇದಕ್ಕೂ ಮುನ್ನ ಆದಿಲ್ ರಶೀದ್ ವೆಸ್ಟ್ ಇಂಡೀಸ್ ವಿರುದ್ಧ 2021ರಲ್ಲಿ ಕೇವಲ 2ರನ್ ನೀಡಿ 4 ವಿಕೆಟ್ ಕಬಳಿಸಿದ್ರು.

ಉಭಯ ತಂಡಗಳ ಪ್ಲೇಯಿಂಗ್ 11

ಉಭಯ ತಂಡಗಳ ಪ್ಲೇಯಿಂಗ್ 11

ಇಂಗ್ಲೆಂಡ್ ತಂಡದ ಪ್ಲೇಯಿಂಗ್ 11
ಜಾಸ್ ಬಟ್ಲರ್ (ನಾಯಕ ಮತ್ತು ವಿಕೆಟ್ ಕೀಪರ್), ಅಲೆಕ್ಸ್ ಹೇಲ್ಸ್, ಡೇವಿಡ್ ಮಲನ್, ಬೆನ್ ಸ್ಟೋಕ್ಸ್, ಹ್ಯಾರಿ ಬ್ರೂಕ್, ಮೊಯಿನ್ ಅಲಿ, ಲಿಯಾಮ್ ಲಿವಿಂಗ್‌ಸ್ಟೋನ್, ಸ್ಯಾಮ್ ಕರ್ರಾನ್, ಕ್ರಿಸ್ ವೋಕ್ಸ್, ಆದಿಲ್ ರಶೀದ್, ಮಾರ್ಕ್ ವುಡ್

ಬೆಂಚ್: ಡೇವಿಡ್ ವಿಲ್ಲಿ, ಕ್ರಿಸ್ ಜೋರ್ಡಾನ್, ಟೈಮಲ್ ಮಿಲ್ಸ್, ಫಿಲಿಪ್ ಸಾಲ್ಟ್


ಅಫ್ಘಾನಿಸ್ತಾನ ತಂಡದ ಪ್ಲೇಯಿಂಗ್ 11
ಹಜರತುಲ್ಲಾ ಝಜೈ, ರಹಮಾನುಲ್ಲಾ ಗುರ್ಬಾಜ್ (ವಿಕೆಟ್ ಕೀಪರ್), ಇಬ್ರಾಹಿಂ ಝದ್ರಾನ್, ಉಸ್ಮಾನ್ ಘನಿ, ನಜೀಬುಲ್ಲಾ ಝದ್ರಾನ್, ಮೊಹಮ್ಮದ್ ನಬಿ (ನಾಯಕ), ಅಜ್ಮತುಲ್ಲಾ ಒಮರ್ಜಾಯ್, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫರೀದ್ ಅಹ್ಮದ್ ಮಲಿಕ್, ಫಜಲ್ಹಕ್ ಫಾರೂಕಿ

ಬೆಂಚ್: ದರ್ವಿಶ್ ರಸೂಲಿ, ನವೀನ್-ಉಲ್-ಹಕ್, ಕೈಸ್ ಅಹ್ಮದ್, ಮೊಹಮ್ಮದ್ ಸಲೀಮ್ ಸಫಿ

Story first published: Saturday, October 22, 2022, 20:23 [IST]
Other articles published on Oct 22, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+