Ind vs SA Test: ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು, ದಾಖಲೆ ಬರೆದ ಟೀಂ ಇಂಡಿಯಾ

ಸೆಂಚುರಿಯನ್ ಸೂಪರ್ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ಸಾಧಿಸಿದ್ದು, ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಭಾರತ ನೀಡಿದ 305ರನ್‌ಗಳ ಕಠಿಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ನಲ್ಲಿ 191ರನ್‌ಗಳಿಗೆ ಆಲೌಟ್ ಆಗುವ ಮೂಲಕ 113ರನ್‌ಗಳ ಹೀನಾಯ ಸೋಲು ಕಂಡಿದೆ. ಅಂತಿಮ ದಿನದಾಟದಲ್ಲಿ ಭಾರತದ ಗೆಲುವಿಗೆ 6 ವಿಕೆಟ್‌ಗಳ ಅವಶ್ಯಕತೆಯಿತ್ತು. ದಕ್ಷಿಣ ಆಫ್ರಿಕಾ ಗೆಲುವಿಗೆ 211ರನ್‌ಗಳು ಬೇಕಾಗಿತ್ತು.
ನಾಲ್ಕನೇ ದಿನದಾಟದಂತ್ಯದಲ್ಲಿ ದಕ್ಷಿಣ ಆಫ್ರಿಕಾ 4 ವಿಕೆಟ್ ನಷ್ಟಕ್ಕೆ 94 ರನ್ ಕಲೆಹಾಕಿತ್ತು. ಅಂತಿಮ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ ನಾಯಕ ಡೀನ್ ಎಲ್ಗರ್ ತಂಡವನ್ನ ಗೆಲುವಿನ ದಡದತ್ತ ಮುಟ್ಟಿಸುವ ಜವಾಬ್ದಾರಿ ಹೊತ್ತಿದ್ದರು.

ಒಂದು ಜೀವದಾನ ಪಡೆದ್ರೂ, ತಂಡವನ್ನ ಗೆಲುವಿನ ದಡ ಮುಟ್ಟಿಸದ ಎಲ್ಗರ್
63 ರನ್‌ಗಳಿಸಿದ್ದ ಡೀನ್ ಎಲ್ಗರ್ ಶಮಿ ಬೌಲಿಂಗ್‌ನಲ್ಲಿ ಒಂದು ಜೀವದಾನ ಪಡೆದರು. ಕಾಟನ್ ಬೌಲ್ಡ್ ಆಗುವುದ್ರಲ್ಲಿ ಮಿಸ್ ಆದ್ರು. ಆದ್ರೆ 77ರನ್‌ಗಳಿಸಿದ್ದಾಗ ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ರು.
ರಿವೀವ್ ಮೂಲಕ ತಮ್ಮ ವಿಕೆಟ್ ಉಳಿಸಿಕೊಳ್ಳುವ ಪ್ರಯತ್ನ ನಡೆಸಿದಾದ್ರೂ ಎಲ್ಗರ್ ಪೆವಿಲಿಯನ್‌ಗೆ ತೆರಳಬೇಕಾಯ್ತು. ಈ ಮೂಲಕ ದಕ್ಷಿಣ ಆಫ್ರಿಕಾದ ವಿಕೆಟ್ ಪತನ ಪ್ರಾರಂಭವಾಯಿತು.
ಇದಾದ ಬಳಿಕ 21ರನ್‌ಗಳಿಸಿ ಉತ್ತಮವಾಗಿ ಆಡ್ತಿದ್ದ ಕ್ವಿಂಟನ್ ಡಿಕಾಕ್ ಸಿರಾಜ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದ್ರು.
ಬಿಗ್ ಇನ್ನಿಂಗ್ಸ್ ಆಡಲು ವಿಫಲಗೊಂಡಿರುವ ವಿರಾಟ್‌ಗೆ, ಉತ್ತಮ ಸಲಹೆ ನೀಡಿದ ಬ್ಯಾಟಿಂಗ್ ಕೋಚ್

ದಕ್ಷಿಣ ಆಫ್ರಿಕಾಗೆ ಆಧಾರವಾಗದ ಮಿಡಲ್ ಆರ್ಡರ್ ಬ್ಯಾಟ್ಸ್‌ಮನ್‌ಗಳು
ಕ್ಯಾಪ್ಟನ್ ಡೀನ್ ಎಲ್ಗರ್ ಔಟಾದ ಬಳಿಕ ದಕ್ಷಿಣ ಆಫ್ರಿಕಾವನ್ನ ಸೋಲಿನ ದವಡೆಯಿಂದ ತಪ್ಪಿಸಲು ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಹಾಗೂ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾದ್ರು. ಕ್ವಿಂಟರ್ ಡಿಕಾಕ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದ್ರೆ, ವಿಯಾನ್ ಮುಲ್ಡರ್ ಕೇವಲ 1ರನ್‌ಗೆ ಶಮಿ ಬೌಲಿಂಗ್‌ನಲ್ಲಿ ಔಟಾದ್ರು. ಮಾರ್ಕೊ ಜಾನ್ಸನ್ 13ರನ್‌ಗಳಿಸಿದ್ದಾಗ ಶಮಿಗೆ ವಿಕೆಟ್ ಒಪ್ಪಿಸಿದರು.
ಭಾರತ vs ದ.ಆಫ್ರಿಕಾ: ಪೂಜಾರ, ರಹಾನೆ ಬೆಂಬಲಕ್ಕೆ ನಿಂತ ಬ್ಯಾಟಿಂಗ್ ಕೋಚ್

ಊಟದ ವಿರಾಮದ ಬಳಿಕ ಸುಲಭವಾಗಿ ಸೋಲೊಪ್ಪಿಕೊಂಡ ಆತಿಥೇಯರು
ದಕ್ಷಿಣ ಆಫ್ರಿಕಾ ಊಟದ ವಿರಾಮದ ಹೊತ್ತಿಗೆ ಮೂರು ವಿಕೆಟ್ ಉಳಿಸಿಕೊಂಡು ಗೆಲುವಿಗೆ 123ರನ್‌ಗಳು ಬೇಕಿತ್ತು. ಆದ್ರೆ ವಿರಾಮದ ಬಳಿಕ ಪ್ರಬಲ ದಾಳಿ ನಡೆಸಿ ಶಮಿ ಮಾರ್ಕೊ ಜಾನ್ಸೆನ್ ವಿಕೆಟ್ ಕಬಳಿಸಿದ್ರೆ, 68 ಓವರ್‌ನ ಕೊನೆಯ ಎರಡು ಎಸೆತಗಳಲ್ಲಿ ಕಗಿಸೊ ರಬಾಡ ಮತ್ತು ಲುಂಗಿ ಎನ್‌ಗಿಡಿ ಸತತ ಎರಡು ಎಸೆತಗಳಲ್ಲಿ ಅಶ್ವಿನ್‌ಗೆ ವಿಕೆಟ್ ಒಪ್ಪಿಸುವ ಮೂಲಕ ಸಂಪೂರ್ಣವಾಗಿ ಸೋಲೊಪ್ಪಿಕೊಂಡ್ರು. ಇಡೀ ಪಂದ್ಯದಲ್ಲಿ ವಿಕೆಟ್ ಪಡೆಯದ ಅಶ್ವಿನ್ ಕೊನೆಯಲ್ಲಿ ಎರಡು ವಿಕೆಟ್ ಕಬಳಿಸಿ ನಗುವಿನ ಮುಗದೊಂದಿಗೆ ಪೆವಿಲಿಯನ್‌ನತ್ತ ಹೆಜ್ಜೆ ಇಟ್ಟರು.
ಕೊನೆಗೆ ಭಾರತ 113ರನ್‌ಗಳ ಗೆಲುವಿನೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದಾರೆ.
ದ.ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟವಾಗುವ ದಿನಾಂಕ ನಿಗದಿ: ರೋಹಿತ್ ಅನುಮಾನ!

ದಕ್ಷಿಣ ಆಫ್ರಿಕಾ ವಿರುದ್ಧ 17ನೇ ಟೆಸ್ಟ್ ಪಂದ್ಯ ಗೆದ್ದ ವಿರಾಟ್
ದಕ್ಷಿಣ ಆಪ್ರಿಕಾ ವಿರುದ್ಧ ಅತಿ ಹೆಚ್ಚು ಟೆಸ್ಟ ಪಂದ್ಯ ಗೆದ್ದ ಭಾರತದ ನಾಯಕ ಎಂಬ ಹೆಗ್ಗಳಿಕೆಗೆ ವಿರಾಟ್ ಪಾತ್ರರಾಗಿದ್ದು, ಧೋನಿ ದಾಖಲೆ ಸರಿಗಟ್ಟಿದ್ದಾರೆ. ಹರಿಣಗಳ ವಿರುದ್ಧ 17ನೇ ಟೆಸ್ಟ್ ಪಂದ್ಯ ಗೆದ್ದ ಕೊಹ್ಲಿ ಎರಡು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಗೆದ್ದ ಮೊದಲ ನಾಯಕರಾಗಿದ್ದಾರೆ. ಜೊತೆಗೆ ಸೆಂಚುರಿಯನ್ ಮೈದಾನದಲ್ಲಿ ಟೆಸ್ಟ್ ಪಂದ್ಯ ಗೆದ್ದ ಏಷ್ಯಾದ ಮೊದಲ ನಾಯಕ ಎಂಬ ಸಾಧನೆ ಮಾಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications