Ind vs SA 2nd ODI: ಟಾಸ್ ಕಾಯಿನ್ ನೀಡದೆ ಟ್ರೋಲ್ ಆದ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್

ರಾಂಚಿಯ ಜೆಎಸ್‌ಸಿಎ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದಿರುವ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ದಕ್ಷಿಣ ಆಫ್ರಿಕಾ ತಂಡವನ್ನ ಟೆಂಬಾ ಬವುಮಾ ಬದಲು ಕೇಶವ್ ಮಹಾರಾಜ್ ಮುನ್ನಡೆಸುತ್ತಿದ್ದು, ಉಭಯ ತಂಡಗಳಲ್ಲಿ ಎರಡು ಬದಲಾವಣೆ ಮಾಡಲಾಗಿದೆ.
ಟಾಸ್ ವೇಳೆಯಲ್ಲಿ ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಎಡವಟ್ಟು ಮಾಡಿ ನಗೆಪಾಟಲಿಗೆ ಗುರಿಯಾದ ಸಂಗತಿ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗೆ ಕಾರಣವಾಗಿದೆ. ಟಾಸ್‌ಗಾಗಿ ಉಭಯ ತಂಡದ ನಾಯಕರು ಉಪಸ್ಥಿತರಿದ್ದಾಗ, ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಕಾಯಿನ್ ನೀಡದೇ ಮರೆತಿರುವುದು ಲೈವ್‌ನಲ್ಲಿ ಪ್ರಸಾರವಾಗಿದ್ದು, ಎರಡೂ ತಂಡದ ನಾಯಕರು ಪರಸ್ಪರ ಮುಖ ನೋಡಿಕೊಳ್ಳುವ ಪರಿಸ್ಥಿತಿ ಎದುರಾಗಿತ್ತು.
ಟಾಸ್ ಕಾಯಿನ್ ನೀಡದೆ ಮರೆತಿದ್ದ ಜಾವಗಲ್ ಶ್ರೀನಾಥ್
ಭಾರತೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ಟಾಸ್ ನಿಗದಿಯಾಗಿತ್ತು. ಟೀಂ ಇಂಡಿಯಾ ನಾಯಕ ಶಿಖರ್ ಧವನ್ ಮತ್ತು ದಕ್ಷಿಣ ಆಫ್ರಿಕಾ ನಾಯಕ ಕೇಶವ್ ಮಹಾರಾಜ್ ಪರಸ್ಪರ ಪ್ಲೇಯಿಂಗ್ ಇಲೆವೆನ್ ಆಟಗಾರರ ಲೆಟರ್ ಅನ್ನು ಬದಲಾಯಿಸಿಕೊಂಡರು. ಬಳಿಕ ನಿರೂಪಕ ಸಂಜಯ್ ಮಂಜ್ರೇಕರ್ ಟಾಸ್ ನಿರೂಪಣೆ ಮಾಡುವ ವೇಳೆಯಲ್ಲಿ ಟಾಸ್ ಯಾರ ಬಳಿಯಲ್ಲಿದೆ ಎಂದು ಕೇಳಿದ್ದಾರೆ. ಆದ್ರೆ ಶಿಖರ್ ಧವನ್ ಹಾಗೂ ಕೇಶವ್ ಮಹಾರಾಜ್‌ಗೆ ಕಾಯಿನ್ ನೀಡಲು ಮ್ಯಾಚ್ ರೆಫರಿ ಜಾವಗಲ್ ಶ್ರೀನಾಥ್ ಮರೆತಿದ್ದು, ತನ್ನ ಜೇಬಿನಲ್ಲೇ ಕಾಯಿನ್ ಇಟ್ಟುಕೊಂಡು ನಗೆ ಪಾಟಲಿಗೆ ಗುರಿಯಾದರು.
ಈ ವೇಳೆಯಲ್ಲಿ ಶಿಖರ್ ಧವನ್ ಹಾಗೂ ಕೇಶವ್ ಮಹಾರಾಜ್ ಒಮ್ಮೆ ಗೊಂದಲಕ್ಕೆ ಒಳಗಾಗಿ ನಗುತ್ತಾ ಕಾಯಿನ್ ಜಾವಗಲ್ ಶ್ರೀನಾಥ್ ಬಳಿಯಲ್ಲಿಯೇ ಇದೆ ಎಂದು ಸನ್ಹೆ ಮಾಡಿದಾಗ, ಶ್ರೀನಾಥ್ ನಗುತ್ತಾ ಕಾಯಿನ್ ಅನ್ನು ಧವನ್‌ಗೆ ನೀಡಿದ್ರು. ಈ ವೇಳೆಯಲ್ಲಿ ಉಭಯ ತಂಡದ ನಾಯಕರು ಪರಸ್ಪರ ಮುಖ ನೋಡಿಕೊಂಡು ನಗುತ್ತಾ ಟಾಸ್ ಆಯ್ಕೆಯನ್ನ ಹೇಳಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ತಕ್ಷಣವೇ ಹರಿದಾಡಿದ್ದು, ಟ್ರೋಲ್‌ಗೆ ಕಾರಣವಾಗಿದೆ.
ಧೋನಿ ನಾಯಕರಾಗಿದ್ದಾಗ ಭಾರತಕ್ಕೆ ಪಾಕಿಸ್ತಾನ ಲೆಕ್ಕಕ್ಕೇ ಇರಲಿಲ್ಲ ಎಂದ ಶಾಹಿದ್ ಅಫ್ರಿದಿ
ಉಭಯ ತಂಡಗಳಲ್ಲಿ ಎರಡು ಬದಲಾವಣೆ, ಟೆಂಬಾ ಬವುಮಾ ಅನುಪಸ್ಥಿತಿ
ದಕ್ಷಿಣ ಆಫ್ರಿಕಾ ತಂಡದಲ್ಲಿ ಎರಡು ಬದಲಾವಣೆ ಮಾಡಲಾಗಿದ್ದು, ಟೆಂಬಾ ಬವುಮಾ ಜೊತೆಗೆ ತಬ್ರೈಜ್ ಶಮ್ಸಿ ಕೂಡ ಪ್ಲೇಯಿಂಗ್ ಇಲೆವೆನ್‌ನಿಂದ ಹೊರಬಿದ್ದಿದ್ದು, ಅವರ ಬದಲು ರೀಜಾ ಹೆಂಡ್ರಿಕ್ಸ್ ಮತ್ತು ಬಿಜಾನ್ ಫಾರ್ಚುನ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ. ನಾಯಕ ಟೆಂಬಾ ಬವುಮಾಗೆ ಅನಾರೋಗ್ಯ ಹಿನ್ನಲೆಯಲ್ಲಿ ಕೇಶವ್ ಮಹಾರಾಜ್ ಹರಿಣಗಳ ತಂಡವನ್ನ ಮುನ್ನಡೆಸಲಿದ್ದಾರೆ.
ಇನ್ನು ಭಾರತ ತಂಡದಲ್ಲಿಯೂ ಇಬ್ಬರು ಆಟಗಾರರ ಬದಲಾವಣೆ ಆಗಿದ್ದು ರುತುರಾಜ್ ಗಾಯಕ್ವಾಡ್ ಮತ್ತು ರವಿ ಬಿಷ್ಣೋಯಿ ಬದಲಾಗಿ ವಾಷಿಂಗ್ಟನ್ ಸುಂದರ್ ಮತ್ತು ಶಹಬಾಜ್ ಅಹಮದ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ನೀಡಲಾಗಿದೆ. ಇದು ಶಹಬಾಜ್ ಅಹಮದ್‌ಗೆ ಚೊಚ್ಚಲ ಏಕದಿನ ಪಂದ್ಯವಾಗಿದೆ.
ಒಂದೇ ದಿನದಲ್ಲಿ 3 ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಮಾಡಿದ ವಿಸ್ಪಿ ಖರಾಡಿ: ಭಾರತದ ಉಕ್ಕಿನ ಮನುಷ್ಯ!

ಭಾರತ ಮತ್ತು ದಕ್ಷಿಣ ಆಫ್ರಿಕಾ ಪ್ಲೇಯಿಂಗ್ 11
ಶಿಖರ್ ಧವನ್(ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅವೇಶ್ ಖಾನ್
ಬೆಂಚ್: ರುತುರಾಜ್ ಗಾಯಕ್ವಾಡ್, ರವಿ ಬಿಷ್ಣೋಯ್, ರಾಹುಲ್ ತ್ರಿಪಾಠಿ, ರಜತ್ ಪಾಟಿದಾರ್, ಮುಖೇಶ್ ಕುಮಾರ್
ದಕ್ಷಿಣ ಆಫ್ರಿಕಾ ಪ್ಲೇಯಿಂಗ್ ಇಲೆವೆನ್
ಜನ್ನೆಮನ್ ಮಲನ್, ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಏಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್(ನಾಯಕ), ಜಾರ್ನ್ ಫೋರ್ಚುಯಿನ್, ಕಗಿಸೊ ರಬಾಡ, ಎನ್ರಿಕ್ ನೊರ್ಕಿಯಾ
ಬೆಂಚ್: ಟೆಂಬಾ ಬವುಮಾ, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ, ಮಾರ್ಕೊ ಜಾನ್ಸೆನ್, ಆಂಡಿಲೆ ಫೆಹ್ಲುಕ್ವಾಯೊ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications