For Quick Alerts
ALLOW NOTIFICATIONS  
For Daily Alerts

ಒಂದೇ ದಿನದಲ್ಲಿ 3 ಗಿನ್ನಿಸ್ ವರ್ಲ್ಡ್‌ ರೆಕಾರ್ಡ್ ಮಾಡಿದ ವಿಸ್ಪಿ ಖರಾಡಿ: ಭಾರತದ ಉಕ್ಕಿನ ಮನುಷ್ಯ!

Vispy kharadi

ಹಲವಾರು ಗಿನ್ನೆಸ್ ದಾಖಲೆಗಳನ್ನು ಸ್ಥಾಪಿಸಿರುವ ಮತ್ತು ದೇಶದ ಅತ್ಯಂತ ಪ್ರಸಿದ್ಧ ಮಾರ್ಷಲ್ ಆರ್ಟ್ಸ್ ಮಾಸ್ಟರ್‌ಗಳಲ್ಲಿ ಒಬ್ಬರಾದ, ಭಾರತವನ್ನು ಜಾಗತಿಕ ಖ್ಯಾತಿಗೆ ತಂದ ವಿಸ್ಪಿ ಖಾರಾಡಿ ಈಗ ಒಂದಲ್ಲ ಎರಡಲ್ಲ ಮೂರು ಗಿನ್ನೆಸ್ ವಿಶ್ವ ದಾಖಲೆಗಳೊಂದಿಗೆ ಒಂದೇ ದಿನದಲ್ಲಿ ದಾಖಲಿಸಿದ್ದಾರೆ.

ಮೊದಲಿಗೆ, ವಿಸ್ಪಿ ಬುಧವಾರ ಸೂರತ್‌ನ ಸರ್ಸಾನಾ ಗುಂಬದ್‌ನಲ್ಲಿ 11 ವರ್ಷಗಳ ಹಿಂದಿನ ಗಿನ್ನೆಸ್ ವಿಶ್ವ ದಾಖಲೆಯನ್ನು ಮುರಿದರು ಮತ್ತು ನಂತರ ಮತ್ತೆರಡು ವಿಶ್ವ ದಾಖಲೆಗಳನ್ನು ನಿರ್ಮಿಸಿದರು.

ವಿಸ್ಪಿ ಖರಾಡಿ ಅಪಾಯಕಾರಿ ಸಾಹಸ ಪ್ರದರ್ಶನಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಈಗಾಗಲೇ ಏಳು ಗಿನ್ನಿಸ್ ದಾಖಲೆಗಳನ್ನು ಹೊಂದಿದ್ದು, ಈಗ ಅವರು ಒಂದೇ ದಿನದಲ್ಲಿ ಮೂರು ಗಿನ್ನೆಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದಾರೆ.

ಒಂದೇ ದಿನ ಮೂರು ಗಿನ್ನಿಸ್ ವರ್ಲ್ಡ್‌ ರೆಕಾರ್ಡ್

ಒಂದೇ ದಿನ ಮೂರು ಗಿನ್ನಿಸ್ ವರ್ಲ್ಡ್‌ ರೆಕಾರ್ಡ್

ಒಂದು ನಿಮಿಷದಲ್ಲಿ ಗರಿಷ್ಠ ಸಂಖ್ಯೆಯ ಕುಡಿಯುವ ಕ್ಯಾನ್‌ಗಳನ್ನು ತನ್ನ ಕೈಗಳಿಂದ (84) ಟಿನ್ ಕ್ಯಾನ್‌ಗಳನ್ನು ಪುಡಿಮಾಡಿದ ಅವರು ಮೊದಲ ವಿಶ್ವ ದಾಖಲೆಯನ್ನು ಸ್ಥಾಪಿಸಿದರು. 2011ರಲ್ಲಿ ಒಂದು ನಿಮಿಷದಲ್ಲಿ 74 ಟಿನ್‌ಗಳನ್ನು ತನ್ನ ಕೈಗಳಿಂದ ಪುಡಿಮಾಡಿದ ಮೊಹಮದ್ ಕಹ್ರಿಮನೋವಿಕ್ ಅವರ ಹೆಸರಿನಲ್ಲಿ ಹಿಂದಿನ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದ್ದರು. ಆದ್ರೆ ವಿಕ್ಕಿ ಒಂದು ದಶಕದ ಬಳಿಕ ಆ ದಾಖಲೆಯನ್ನ ಮುರಿದಿದ್ದಾರೆ.

ಇನ್ನು ಒಂದು ನಿಮಿಷದಲ್ಲಿ ಹೆಚ್ಚಿನ ಕಾಂಕ್ರೀಟ್ ಬ್ಲಾಕ್‌ಗಳನ್ನು ಮುರಿದು ಎರಡನೇ ಗಿನ್ನೆಸ್ ವಿಶ್ವ ದಾಖಲೆಯಾಗಿದೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸ್ಥಾಪಿಸಿದಂತೆ ಕನಿಷ್ಠ 51 ಸಾಂದ್ರತೆ ಮತ್ತು ಗಾತ್ರದ ಕಾಂಕ್ರೀಟ್ ಬ್ಲಾಕ್‌ಗಳನ್ನು ಒಡೆಯಲು ಮೊಣಕೈಯನ್ನು ಬಳಸಿ, ವಿಸ್ಪಿ ಖಾರಾಡಿ ಈ ಸಾಧನೆಯನ್ನು ದಾಟಿ ವಿಶ್ವದಾಖಲೆ ಮಾಡಿದರು. ವಿಸ್ಪಿ ಮೂರನೇ ಗಿನ್ನಿಸ್ ದಾಖಲೆಯನ್ನೂ ಮಾಡಿದೆ.

ಮೂರನೇ ಗಿನ್ನೆಸ್ ವಿಶ್ವ ದಾಖಲೆಯು ನೇಲ್ಸ್ ಸ್ಯಾಂಡ್‌ವಿಚ್‌ನ ಹಾಸಿಗೆಯ ಮೇಲೆ ಒಡೆದ ಅತ್ಯಂತ ಭಾರವಾದ ಕಾಂಕ್ರೀಟ್ ಬ್ಲಾಕ್‌ಗಳಿಗಾಗಿ ಆಗಿತ್ತು. ವಿಕ್ಕಿ ಇದರಲ್ಲೂ ವಿಶ್ವದಾಖಲೆ ಮಾಡಿ ಮೂರು ದಾಖಲೆಗಳನ್ನ ತಮ್ಮದಾಗಿಸಿಕೊಂಡಿದ್ದಾರೆ. ಇದು ಅತ್ಯಂತ ಅಪಾಯಕಾರಿ ಸಾಹಸವಾಗಿದ್ದು, ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ವಿಸ್ಪಿ ಅವರ ದೈಹಿಕ ಗಟ್ಟಿತನವನ್ನು ನೋಡುವ ಮೂಲಕ ಸಾಹಸಕ್ಕೆ ಅನುಮತಿ ನೀಡಿದೆ.

Ind vs SA 2nd ODI: ಟಾಸ್ ಗೆದ್ದ ದ. ಆಫ್ರಿಕಾ ಬ್ಯಾಟಿಂಗ್ ಆಯ್ಕೆ, ಪ್ಲೇಯಿಂಗ್ 11 ಜೊತೆಗೆ LIVE SCORE

ಭಾರತದ ಉಕ್ಕಿನ ಮನುಷ್ಯ ಎಂಬ ಬಿರುದು ಪಡೆದ ವಿಸ್ಪಿ ಖರಾಡಿ

ಭಾರತದ ಉಕ್ಕಿನ ಮನುಷ್ಯ ಎಂಬ ಬಿರುದು ಪಡೆದ ವಿಸ್ಪಿ ಖರಾಡಿ

ಹೀಗೆ ಮೂರು ಹೊಸ ವಿಶ್ವದಾಖಲೆಗಳನ್ನು ಸ್ಥಾಪಿಸಿರುವ ವಿಸ್ಪಿ, ಡಿವೈನ್ ನ್ಯೂಟ್ರಿಷನ್ ಮಾಲೀಕ ಹಿರೇನ್ ದೇಸಾಯಿ, ಫಾರೂಕ್ ಪಟೇಲ್ ಮತ್ತು ಕೆಪಿ ಗ್ರೂಪ್ ನ ಸಿಎಂಡಿ ಸಾಹಿಲ್ ಖಾನ್ ಅವರಿಗೆ ಧನ್ಯವಾದ ಅರ್ಪಿಸಿದರು. ಆ ಮೂವರು ಗಣ್ಯರು ವಿಸ್ಪಿಗೆ ಭಾರತದ ಉಕ್ಕಿನ ಮನುಷ್ಯ ಎಂಬ ಬಿರುದು ನೀಡಿ ಗೌರವಿಸಿದರು.

ಸಾಹಿಲ್ ಖಾನ್ ಒಬ್ಬ ನಟ, ಫಿಟ್‌ನೆಸ್ ತರಬೇತುದಾರ ಮತ್ತು ಫಿಟ್‌ನೆಸ್ ಕ್ಷೇತ್ರದಲ್ಲಿ ಅನೇಕ ಪ್ರಶಸ್ತಿಗಳನ್ನು ಗೆದ್ದಿರುವ ಉದ್ಯಮಿ ಆಗಿದ್ಆರೆ. ಅವರು ಜನಪ್ರಿಯ ಯೂಟ್ಯೂಬರ್ ಕೂಡ ಆಗಿದ್ದಾರೆ ಮತ್ತು 2.8 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ.

IND vs SA ODI: ಪುಟ್ಟ ಅಭಿಮಾನಿ ಸಾವಿಗೆ ಕಂಬನಿ ಮಿಡಿದ ಡೇವಿಡ್ ಮಿಲ್ಲರ್

ವಿಸ್ಪಿ ಖರಾಡಿ ಹಲವು ಸಮರ ಕಲೆಗಳಲ್ಲಿ ಬ್ಲಾಕ್‌ ಬೆಲ್ಟ್‌ ಪಡೆದಿದ್ದಾರೆ!

ವಿಸ್ಪಿ ಖರಾಡಿ ಹಲವು ಸಮರ ಕಲೆಗಳಲ್ಲಿ ಬ್ಲಾಕ್‌ ಬೆಲ್ಟ್‌ ಪಡೆದಿದ್ದಾರೆ!

ಅದೇ ಸಮಯದಲ್ಲಿ, ವಿಸ್ಪಿ ಖರಾಡಿ ಸಮರ ಕಲೆ ಮತ್ತು ಕುಡೋದಲ್ಲಿ ಪರಿಣತಿಯನ್ನು ಪಡೆದಿದ್ದಾರೆ. ಅವರು ವಿವಿಧ ಸಮರ ಕಲೆಗಳಲ್ಲಿ ಬ್ಲ್ಯಾಕ್ ಬೆಲ್ಟ್‌ ಹೊಂದಿದ್ದಾರೆ ಮತ್ತು ಕ್ರಾವ್ ಮಗಾದಲ್ಲಿ ಪರಿಣತರಾಗಿದ್ದಾರೆ. ಅವರು ಕ್ರಾವ್ ಮಗಾ ಬೋಧಕರಾಗಿ ಬಿಎಸ್ಎಫ್ ಮತ್ತು ಎನ್ಎಸ್‌ಜಿ ಕಮಾಂಡೋಗಳಿಗೆ ಫಿಟ್ನೆಸ್ ಮತ್ತು ಶಕ್ತಿ ತರಬೇತಿಯನ್ನು ನೀಡಿದ್ದಾರೆ.

ಏಷ್ಯಾದಲ್ಲಿ ಅತಿ ಹೆಚ್ಚು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಜೊತೆಗೆ ಓದಿನಲ್ಲೂ ಮುಂದಿದ್ದಾರೆ!

ಏಷ್ಯಾದಲ್ಲಿ ಅತಿ ಹೆಚ್ಚು ಗಿನ್ನಿಸ್ ವರ್ಲ್ಡ್ ರೆಕಾರ್ಡ್ ಜೊತೆಗೆ ಓದಿನಲ್ಲೂ ಮುಂದಿದ್ದಾರೆ!

ಅತಿ ಹೆಚ್ಚು ಗಿನ್ನಿಸ್ ವಿಶ್ವ ದಾಖಲೆಗಳನ್ನ ಹೊಂದಿರುವ ಏಷ್ಯಾದ ಮಾರ್ಷಿಯಲ್ ಪಟು ಆಗಿರುವ ವಿಕ್ಕಿ ಓದಿನಲ್ಲೂ ಕೂಡ ಹಿಂದೆ ಬಿದ್ದಿಲ್ಲ. ಗುಜರಾತ್ ವಿಶ್ವವಿದ್ಯಾನಿಲಯದಿಂದ ಮಾರ್ಕೆಟಿಂಗ್‌ನಲ್ಲಿ ಎಂಬಿಎ ಪದವಿಯನ್ನು ಹೊಂದಿದ್ದಾರೆ ಮತ್ತು IIM ಬೆಂಗಳೂರಿನಲ್ಲಿ ಅತ್ಯುತ್ತಮ ಶ್ರೇಣಿಯೊಂದಿಗೆ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ.

ಅವರ ಸಾಧನೆಗಳು ಇಲ್ಲಿಗೆ ಕೊನೆಗೊಳ್ಳುವುದಿಲ್ಲ, ಅವರು 10 ವರ್ಷಗಳ ಕಾಲ ಕೋಟಕ್ ಮಹೀಂದ್ರಾ ಬ್ಯಾಂಕ್‌ಗೆ ಶಾಖಾ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

T20 World Cup 2022: ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯವಿರುವ ಐವರು ಆಟಗಾರರು ಇವರು

ಭಾರತಕ್ಕೆ ಬಂದ ವಿವಿಐಪಿಗಳಿಗೆ ಇವರೇ ಬಾಡಿ ಗಾರ್ಡ್‌!

ಭಾರತಕ್ಕೆ ಬಂದ ವಿವಿಐಪಿಗಳಿಗೆ ಇವರೇ ಬಾಡಿ ಗಾರ್ಡ್‌!

ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಇವರು ಭಾರತ ಹಾಗೂ ವಿದೇಶದಿಂದ ಭಾರತಕ್ಕೆ ಬರುವ ವಿವಿಐಪಿಗಳಿಗೆ ಬಾಡಿ ಗಾರ್ಡ್‌ ಆಗಿ ಕಾಣಿಸಿಕೊಂಡಿದ್ದಾರೆ. ಬಿಲ್‌ ಗೇಟ್ಸ್‌, ಡಿಜೆ ಟೈಸ್ಟೊ, ಆದಿತ್ಯ ಠಾಕ್ರೆ, ಅಕ್ಷಯ್ ಕುಮಾರ್, ಡಿಜೆ ಸ್ವೀಡಿಷ್ ಹೌಸ್ ಮಾಫಿಯಾ ಇನ್ನಿತರ ಜನಪ್ರಿಯ ಜನರಿಗೆ ಬಾಡಿ ಗಾರ್ಡ್‌ ಆಗಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.

ಪ್ರಸ್ತುತ ಪೂರ್ಣ ಸಮಯದ ಫಿಟ್‌ನೆಸ್ ಮತ್ತು ಮಾರ್ಷಲ್ ಆರ್ಟ್ ಬೋಧಕರಾಗಿರುವ ಇವರು, ಕ್ರೀಡಾ ಪೌಷ್ಟಿಕತಜ್ಞ ಮತ್ತು ಶಕ್ತಿ ತರಬೇತುದಾರರಾಗಿದ್ದಾರೆ. ಅವರು ಸ್ಪಾರ್ಟನ್-ವಿಸ್ಪಿಯ ಮಾರ್ಷಲ್ ಆರ್ಟ್ಸ್ ಅಕಾಡೆಮಿಯನ್ನು ತೆರೆದಿದ್ದಾರೆ. ಅಲ್ಲಿ ಅವರು ವ್ಯಕ್ತಿಗಳಿಗೆ ತರಬೇತಿ ನೀಡುತ್ತಾರೆ. ನವಸಾರಿಯ ವಿಸ್ಪಿ ಕಸದ್ ಜೊತೆಗೆ ಖರಾಡಿ ಅವರು ವಿಶ್ವದ ಅತ್ಯಂತ ಜನಪ್ರಿಯ ರಿಯಾಲಿಟಿ ಟಿವಿ ಶೋ ಅಮೇರಿಕಾಸ್ ಗಾಟ್ ಟ್ಯಾಲೆಂಟ್‌ನಲ್ಲಿ ಪ್ರದರ್ಶನ ನೀಡಿದ್ದಾರೆ. ಅವರು ಈ ಪ್ರದರ್ಶನಕ್ಕೆ ಆಹ್ವಾನಿಸಲ್ಪಟ್ಟ ಮೊದಲ ಭಾರತೀಯ ಎಂಬುದು ಗಮನಾರ್ಹ.

Story first published: Sunday, October 9, 2022, 14:04 [IST]
Other articles published on Oct 9, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+