
ಚೊಚ್ಚಲ ಪಂದ್ಯದಲ್ಲಿ ಚೊಚ್ಚಲ ವಿಕೆಟ್ ಪಡೆದ ಶಹಬಾಜ್ ಅಹಮದ್
ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಪಂದ್ಯದಲ್ಲಿ ಶಹಬಾಜ್ ಅಹಮದ್ 10 ಓವರ್ ಬೌಲಿಂಗ್ ಮಾಡಿ 54ರನ್ ನೀಡಿ 1 ಪ್ರಮುಖ ವಿಕೆಟ್ ಪಡೆದರು. ಓಪನಿಂಗ್ ಬ್ಯಾಟರ್ ಜನ್ನೆಮನ್ ಮಲನ್‌ರನ್ನ ಎಲ್‌ಬಿಡಬ್ಲ್ಯೂ ಬಲೆಗೆ ಕೆಡವಿದ್ರು. ಅಂಪೈರ್ ತೀರ್ಪನ್ನು ನಾಟೌಟ್ ನೀಡಿದಾಗ, ರಿವ್ಯೂ ತೆಗೆದುಕೊಂಡು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು.

ಭಾರತದ ಬೌಲರ್‌ಗಳನ್ನ ಕಾಡಿದ ರೀಜಾ ಹೆಂಡ್ರಿಕ್ಸ್ ಮತ್ತು ಮರ್ಕ್ರಾಮ್
ಇನ್ನು 40ರನ್‌ಗೆ ಎರಡು ವಿಕೆಟ್ ಕಳೆದುಕೊಂಡ ದಕ್ಷಿಣ ಆಫ್ರಿಕಾಗೆ ಆಧಾರವಾಗಿದ್ದು ರೀಜಾ ಹೆಂಡ್ರಿಕ್ಸ್ ಮತ್ತು ಏಡೆನ್ ಮಕ್ರಾಮ್. ಮೂರನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಈ ಜೋಡಿ ವೈಯಕ್ತಿಕ ಅರ್ಧಶತಕ ದಾಖಲಿಸಿ ತಂಡದ ಸ್ಕೋರನ್ನು 150ರ ಗಡಿದಾಟಿಸಿದ್ರು. ಒಂದೆಡೆ ಉತ್ತಮವಾಗಿ ಆಡ್ತಿದ್ದ ರೀಜಾ ಹೆಂಡ್ರಿಕ್ಸ್ 76 ಎಸೆತಗಳಲ್ಲಿ 74ರನ್‌ಗಳಿಸಿದ್ದಾಗ ಮೊಹಮ್ಮದ್ ಸಿರಾಜ್‌ಗೆ ವಿಕೆಟ್ ಒಪ್ಪಿಸಿದ್ರು. ಈ ಮೂಲಕ ಆರಂಭಿಕ ವಿಕೆಟ್ ಪಡೆದಿದ್ದ ಸಿರಾಜ್ ಕಠಿಣವಾಗಿದ್ದ ಜೋಡಿಯನ್ನ ಬೇರ್ಪಡಿಸಿದ್ರು.
ಹೆಂಡ್ರಿಕ್ಸ್ ಔಟಾದ ಬಳಿಕ ಹೆನ್ರಿಚ್ ಕ್ಲಾಸ್ (30) ಉತ್ತಮವಾಗೇ ಆಡುತ್ತಿದ್ದ ವೇಳೆ ಕುಲ್‌ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದ್ರು. 89 ಎಸೆತಗಳಲ್ಲಿ 79ರನ್ ಕಲೆಹಾಕಿದ್ದ ಏಡೆನ್ ಮಕ್ರಾಮ್ ಇನ್ನಿಂಗ್ಸ್‌ಗೆ ವಾಷಿಂಗ್ಟನ್ ಸುಂದರ್ ತೆರೆ ಎಳೆದರು. ವೇಯ್ನೆ ಪರ್ನೆಲ್ 16ರನ್‌ಗಳಿಸಿ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ಔಟಾದರು. ಅಂತಿಮ ಓವರ್‌ನಲ್ಲಿ ಕೇವಲ 3 ರನ್ ನೀಡಿ ಕೇಶವ್ ಮಹಾರಾಜ್(5) ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್ ಭಾರತದ ಪರ ಹೀರೋ ಆಗಿ ಮಿಂಚಿದ್ರು.
ಟಿ20 ವಿಶ್ವಕಪ್ ಗೆಲ್ಲಬಲ್ಲ 2 ತಂಡವನ್ನ ಹೆಸರಿಸಿದ ಹರ್ಷ ಬೋಗ್ಲೆ: ಟೀಂ ಇಂಡಿಯಾ ಹೆಸರಿಲ್ಲ!

ಬೊಂಬಾಟ್ ಬೌಲಿಂಗ್ ಮಾಡಿದ ಮೊಹಮ್ಮದ್ ಸಿರಾಜ್
ಭಾರತದ ಪರ ಸಿರಾಜ್ 10 ಓವರ್‌ಗೆ 1 ಮೇಡನ್ ಸಹಿತ 38ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದರು. ಕೇವಲ 3.80 ಎಕಾನಮಿ ದರದಲ್ಲಿ ಬೌಲಿಂಗ್ ಮಾಡಿದ್ದು ಅವರ ಶ್ರೇಷ್ಟ ಬೌಲಿಂಗ್‌ಗೆ ಸಾಕ್ಷಿಯಾಯಿತು. ಇನ್ನುಳಿದಂತೆ ಶಾರ್ದೂಲ್ ಠಾಕೂರ್, ಶಹಬಾಜ್ ಅಹಮದ್, ವಾಷಿಂಗ್ಟನ್ ಸುಂದರ್ ಮತ್ತು ಕುಲ್‌ದೀಪ್ ಯಾದವ್ ತಲಾ 1 ವಿಕೆಟ್ ಪಡೆದರು. ದಕ್ಷಿಣ ಆಫ್ರಿಕಾ 7 ವಿಕೆಟ್ ನಷ್ಟಕ್ಕೆ 278ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿತು.
IND Vs SA ODI: ಗಾಯದಿಂದ ಚೇತರಿಸಿಕೊಂಡ ಮೇಲೆ ಲಯ ಕಂಡುಕೊಂಡಿದ್ದೇನೆ ಎಂದ ಕುಲ್ದೀಪ್ ಯಾದವ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್
ಟೀಂ ಇಂಡಿಯಾ: ಶಿಖರ್ ಧವನ್(ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅವೇಶ್ ಖಾನ್
ಬೆಂಚ್: ರುತುರಾಜ್ ಗಾಯಕ್ವಾಡ್, ರವಿ ಬಿಷ್ಣೋಯ್, ರಾಹುಲ್ ತ್ರಿಪಾಠಿ, ರಜತ್ ಪಾಟಿದಾರ್, ಮುಖೇಶ್ ಕುಮಾರ್
ದಕ್ಷಿಣ ಆಫ್ರಿಕಾ : ಜನ್ನೆಮನ್ ಮಲನ್, ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್, ಏಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್(ನಾಯಕ), ಜಾರ್ನ್ ಫೋರ್ಚುಯಿನ್, ಕಗಿಸೊ ರಬಾಡ, ಎನ್ರಿಕ್ ನೊರ್ಕಿಯಾ
ಬೆಂಚ್: ಟೆಂಬಾ ಬವುಮಾ, ಲುಂಗಿ ಎನ್‌ಗಿಡಿ, ತಬ್ರೈಜ್ ಶಮ್ಸಿ, ಮಾರ್ಕೊ ಜಾನ್ಸೆನ್, ಆಂಡಿಲೆ ಫೆಹ್ಲುಕ್ವಾಯೊ


Click it and Unblock the Notifications
