ದಕ್ಷಿಣ ಆಫ್ರಿಕಾ ಆಟಗಾರರ ಮೋಸಕ್ಕೆ, ಬೈಯುತ್ತಾ ಪೆವಿಲಿಯನ್ ಕಡೆಗೆ ಸಾಗಿದ ಕೆ.ಎಲ್ ರಾಹುಲ್!

ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಮೈದಾನದಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ ಪಂದ್ಯದಲ್ಲಿ ಶಾರ್ದೂಲ್ ಠಾಕೂರ್ ದಾಳಿ ನಡೆದ ಬಳಿಕ ಪಂದ್ಯದ ಚಿತ್ರಣವೇ ಬದಲಾಗಿ ಹೋಗಿದೆ. ಎರಡನೇ ದಿನದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸಿದ ದಕ್ಷಿಣ ಆಫ್ರಿಕಾಗೆ ಭಾರತದ ಆಲ್‌ರೌಂಡರ್ ಶಾರ್ದೂಲ್ ಸರಿಯಾದ ಪೆಟ್ಟು ನೀಡಿದ್ದಾರೆ.
ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾವನ್ನ ಮುನ್ನಡೆಸುತ್ತಿರುವ ಕೆ.ಎಲ್ ರಾಹುಲ್ ಟೀಂ ಇಂಡಿಯಾವನ್ನ ಉತ್ತಮ ಹಂತದತ್ತ ಮುನ್ನೆಡೆಸುವ ಜವಾಬ್ದಾರಿ ಹೊತ್ತಿದ್ದಾರೆ. ಹೀಗಿರುವಾಗ ಅವರು ಉತ್ತಮ ಬ್ಯಾಟಿಂಗ್ ಪ್ರದರ್ಶಿಸುವುದು ಅನಿವಾರ್ಯವಾಗಿತ್ತು. ಆದ್ರೆ ಕೆ.ಎಲ್ ರಾಹುಲ್ ಅಂದುಕೊಂಡಂತೆ ಎಲ್ಲವೂ ಸಾಧ್ಯವಾಗ್ಲಿಲ್ಲ.
8 ರನ್‌ಗಳಿಸಿದ್ದ ಕೆ.ಎಲ್ ರಾಹುಲ್ ಮಾರ್ಕೊ ಜಾನ್ಸನ್ ಬೌಲಿಂಗ್‌ನಲ್ಲಿ ಸ್ಲಿಪ್‌ನಲ್ಲಿದ್ದ ಏಡನ್ ಮಕ್ರಾಮ್‌ಗೆ ಕ್ಯಾಚಿತ್ತರು. ಆದ್ರೆ ಈ ಕ್ಯಾಚ್ ಕ್ಲೀನ್ ಆಗಿ ತೆಗೆದುಕೊಂಡಿಲ್ಲದಿದ್ದರೂ ಔಟ್ ನೀಡಲಾಯ್ತು ಎಂಬ ಚರ್ಚೆಗೂ ಕಾರಣವಾಯ್ತು. ಥರ್ಡ್ ಅಂಪೈರ್ ವೀಡಿಯೋ ವೀಕ್ಷಿಸಿದ ಬಳಿಕ ಔಟ್ ಎಂದು ತೀರ್ಪು ನೀಡಿದರು. ಈ ವೇಳೆ ಫಲಿತಾಂಶದಿಂದ ಬೇಸತ್ತ ಕೆ.ಎಲ್ ರಾಹುಲ್ ಪೆವಿಲಿಯನ್ ಕಡೆಗೆ ತೆರಳುತ್ತಿದ್ದಂತೆ ದಕ್ಷಿಣ ಆಫ್ರಿಕಾ ಆಟಗಾರರು ರಾಹುಲ್‌ರನ್ನ ಕಿಚಾಯಿಸಿದ್ದಾರೆ.

ದಕ್ಷಿಣ ಆಫ್ರಿಕಾ ಆಟಗಾರರಿಗೆ ಸರಿಯಾದ ಉತ್ತರ ನೀಡಿ ಪೆವಿಲಿಯನ್‌ಗೆ ತೆರಳಿದ ಕೆ.ಎಲ್ ರಾಹುಲ್
ಥರ್ಡ್ ಅಂಪೈರ್ ಕೆ.ಎಲ್ ರಾಹುಲ್‌ರನ್ನ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಕೆ.ಎಲ್ ರಾಹುಲ್ ಬೇಸರದಿಂದ ಪೆವಿಲಿಯನ್ ಕಡೆಗೆ ಹೊರಟಿದ್ದರು. ಆದ್ರೆ ಈ ವೇಳೆ ಸುಮ್ಮನೆ ನಿಲ್ಲಲಾಗದ ದಕ್ಷಿಣ ಆಫ್ರಿಕಾದ ಆಟಗಾರರು ಕೆ.ಎಲ್ ರಾಹುಲ್‌ರನ್ನ ಕೆಣಕಿದ್ದಾರೆ. ಹೀಗಾಗಿ ಯಾವಾಗಲೂ ಸಂಯಮದಿಂದ ವರ್ತಿಸುವ ಕೆ.ಎಲ್ ರಾಹುಲ್ ದಕ್ಷಿಣ ಆಫ್ರಿಕಾದ ಆಟಗಾರರಿಗೆ ಸರಿಯಾದ ಉತ್ತರ ನೀಡಿ ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದ್ರು.
ಯಾರಪ್ಪಾ ನೀನು? ಬೌಲಿಂಗ್ ಮಾಡಿದಾಗ್ಲೆಲ್ಲಾ ವಿಕೆಟ್ ಬೀಳುತ್ತಿದ್ಯಲ್ಲಾ: ಶಾರ್ದೂಲ್ ಕುರಿತು ಅಚ್ಚರಿ ಪಟ್ಟ ಅಶ್ವಿನ್
ವಿವಾದಾತ್ಮಕ ತೀರ್ಪಿನಂತೆ ಕಂಡ ಕೆ.ಎಲ್ ರಾಹುಲ್ ವಿಕೆಟ್
ಮಾರ್ಕೊ ಜಾನ್ಸೆನ್ ಅವರ ಎಸೆತವನ್ನು ಏಡೆನ್ ಮಾರ್ಕ್ರಾಮ್ ಕ್ಯಾಚ್ ನೀಡಿದ ಕೆ.ಎಲ್ ರಾಹುಲ್ ವಿಕೆಟ್ ಕುರಿತಾಗಿ ಮೊದಲು ಆನ್‌ಫೀಲ್ಡ್ ಅಂಪೈರ್‌ಸ್ ಸಾಫ್ಟ್ ಸಿಗ್ನಲ್ ಆಗಿ ಔಟ್ ಎಂದು ನೀಡಿದ್ರು. ಆದ್ರೂ ಅವರು ಟಿವಿ ಅಂಪೈರ್‌ನ ಸಹಾಯವನ್ನು ಪಡೆದರು. ಈ ವೇಳೆಯಲ್ಲಿ ಒಂದು ಆ್ಯಂಗಲ್‌ನಲ್ಲಿ ಚೆಂಡು ಸೀದಾ ಮಕ್ರಾಮ್ ಕೈಗೆ ಸೇರುವಂತೆ ಕಾಣುತ್ತಿತ್ತು. ಆದ್ರೆ ಇನ್ನೊಂದು ಬದಿಯಿಂದ ವೀಕ್ಷಿಸಿದಾಗ ಚೆಂಡು ನೆಲಕ್ಕೆ ತಾಗಿ ಆನಂತರ ಏಡೆನ್ ಮಕ್ರಾಮ್ ಕೈ ಸೇರಿತು. ಇದರಿಂದಾಗಿ ಕೆಲವು ಕ್ಷಣ ತಬ್ಬಿಬ್ಬಾದ ಟಿವಿ ಅಂಪೈರ್ ಕೆಲ ಹೊತ್ತು ಪರೀಕ್ಷಿಸಿದ ಬಳಿಕ ಔಟ್ ಎಂದು ತೀರ್ಪು ನೀಡಿದರು. ಇದರಿಂದ ಬೇಸತ್ತ ಕೆ.ಎಲ್ ರಾಹುಲ್ ಬೇಸರಿಂದ ಪೆವಿಲಿಯನ್ ಕಡೆಗೆ ಸಾಗಿದರು. ಈ ವೇಳೆಯಲ್ಲಿ ರಾಹುಲ್ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರ ನಡುವೆ ವಾಗ್ವಾದ ನಡೆಯಿತು.
ನಿರ್ಣಾಯಕ ಪುರಾವೆಗಳಿಲ್ಲದೆ ಥರ್ಡ್ ಅಂಪೈರ್ ಕೆ.ಎಲ್ ರಾಹುಲ್‌ರನ್ನ ಔಟ್ ಎಂದು ತೀರ್ಪು ನೀಡುತ್ತಿದ್ದಂತೆ ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ರು. ಏಕೆಂದರೆ ಕ್ಯಾಮೆರಾದಲ್ಲಿ ಒಂದು ಬದಿಯಲ್ಲಿ ಚೆಂಡನ್ನು ಸರಿಯಾಗಿ ಕ್ಯಾಚ್ ಹಿಡಿದಿಲ್ಲ ಎಂಬಂತೆ ಗೋಚರಿಸುತ್ತಿತ್ತು.

ರಿಷಭ್ ಪಂತ್ ಹಿಡಿದ ಕ್ಯಾಚ್ ಕೂಡ ಅನುಮಾನ ಮೂಡಿಸಿತ್ತು
ಕೆ.ಎಲ್ ರಾಹುಲ್ ಔಟ್ ಒಂದೆಡೆಯಾದ್ರೆ, ದಕ್ಷಿಣ ಆಫ್ರಿಕಾದ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ವೇಳೆ ಶಾರ್ದೂಲ್ ಠಾಕೂರ್ ಬೌಲಿಂಗ್‌ನಲ್ಲಿ ವ್ಯಾನ್ ಡರ್ ಡುಸ್ಸೆನ್ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದ್ರು. ಈ ವೇಳೆ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಹಿಡಿದ ಕ್ಯಾಚ್ ಕೂಡ ಕೆಲವು ಕ್ಷಣ ರಾಹುಲ್ ಔಟ್ ರೀತಿಯಲ್ಲೇ ಅನುಮಾನ ಮೂಡಿಸಿತ್ತು. ಆದ್ರೆ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಯಾವುದೇ ರಿವೀವ್ ತೆಗೆದುಕೊಳ್ಳದೆ ಮೈದಾನದಿಂದ ಹೊರನಡೆದ್ರು.
ಇದೇ ರೀತಿಯಲ್ಲಿ ಕೆ.ಎಲ್ ರಾಹುಲ್ ವಿಕೆಟ್ ಕುರಿತಾಗಿ ಥರ್ಡ್ ಅಂಪೈರ್ ಪರಿಶೀಲಿಸಿದ್ರು ಸಹ ಯಾವುದೇ ಸಮಂಜವಾದ ಪುರಾವೆಗಳಿಲ್ಲ ಎಂದು ಹೇಳುವ ಮೂಲಕ ಔಟ್ ನೀಡಲಾಯಿತು.
ಇದರ ನಡುವೆ 61ರನ್‌ಗೆ 7 ವಿಕೆಟ್ ಕಬಳಿಸಿದ ಶಾರ್ದೂಲ್ ಠಾಕೂರ್ ದಕ್ಷಿಣ ಆಫ್ರಿಕಾ ನೆಲದಲ್ಲಿ ಬೆಸ್ಟ್ ಬೌಲಿಂಗ್ ಪ್ರದರ್ಶಿಸಿದ ಭಾರತದ ಬೌಲರ್ ಎಂಬ ಸಾಧನೆ ಮಾಡಿದ್ರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications