ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯಾರಪ್ಪಾ ನೀನು? ಬೌಲಿಂಗ್ ಮಾಡಿದಾಗ್ಲೆಲ್ಲಾ ವಿಕೆಟ್ ಬೀಳುತ್ತಿದ್ಯಲ್ಲಾ: ಶಾರ್ದೂಲ್ ಕುರಿತು ಅಚ್ಚರಿ ಪಟ್ಟ ಅಶ್ವಿನ್

R ashwin and shardul thakur

ಜೋಹಾನ್ಸ್‌ಬರ್ಗ್‌ ವಾಂಡರರ್ಸ್ ಮೈದಾನದಲ್ಲಿ ಧೂಳೆಬ್ಬಿಸಿದ ಬೌಲರ್ ಶಾರ್ದೂಲ್ ಠಾಕೂರ್ ಪರ್ಫಾಮೆನ್ಸ್ ಕುರಿತು ಇಡೀ ಕ್ರಿಕೆಟ್ ಲೋಕವೇ ಬೇಷ್ ಎಂದಿದೆ. ಬೌಲಿಂಗ್‌ಗೆ ಬಂದಾಗಲೆಲ್ಲಾ ವಿಕೆಟ್ ಬೇಟೆಯಾಡುತ್ತಿದ್ದ ಶಾರ್ದೂಲ್ ಠಾಕೂರ್, ದಕ್ಷಿಣ ಆಫ್ರಿಕಾದ ಬ್ಯಾಟಿಂಗ್‌ ಆರ್ಡರ್ ಅನ್ನು ಧ್ವಂಸಗೊಳಿಸಿದ್ರು.

ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ದ್ವಿತೀಯ ಟೆಸ್ಟ್‌ನ ಎರಡನೇ ದಿನದಾಟದಲ್ಲಿ ಮೊದಲ ಸೆಷನ್‌ ಕೊನೆಯವರೆಗೂ ವಿಕೆಟ್ ಪಡೆಯಲು ಹೆಣಗಾಡುತ್ತಿದ್ದ ಟೀಂ ಇಂಡಿಯಾ ಪರ ಶಾರ್ದೂಲ್ ಕೈಗೆ ಚೆಂಡು ಸಿಗುತ್ತಿದ್ದಂತೆ ಪಂದ್ಯದ ಚಿತ್ರಣವೇ ಬದಲಾಗಿ ಹೋಯಿತು.

38ನೇ ಓವರ್‌ವರೆಗೂ ಶಾರ್ದೂಲ್‌ಗೆ ಬೌಲಿಂಗ್ ಸಿಕ್ಕಿರಲಿಲ್ಲ!

38ನೇ ಓವರ್‌ವರೆಗೂ ಶಾರ್ದೂಲ್‌ಗೆ ಬೌಲಿಂಗ್ ಸಿಕ್ಕಿರಲಿಲ್ಲ!

ಹೌದು ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಜೊತೆಗೆ ಮೊಹಮ್ಮದ್ ಸಿರಾಜ್ ದಾಳಿಯ ನಡುವೆ ಶಾರ್ದೂಲ್ ಠಾಕೂರ್‌ಗೆ 38ನೇ ಓವರ್‌ವರೆಗೂ ಬೌಲಿಂಗ್ ಸಿಕ್ಕಿರಲೇ ಇಲ್ಲ ಎಂಬುದು ನಿಜಕ್ಕೂ ಆಶ್ಚರ್ಯ ಪಡಬೇಕಾಗುತ್ತದೆ. ಶಾರ್ದೂಲ್ ಠಾಕೂರ್ ದಾಳಿಗೆ ಇಳಿಯುವವರೆಗೂ ದಕ್ಷಿಣ ಆಫ್ರಿಕಾ ವಿಕೆಟ್ ನಷ್ಟವಿಲ್ಲದೆ ರನ್ ಕಲೆಹಾಕುತ್ತಿತ್ತು. ಕೀಗನ್ ಪೀಟರ್ಸನ್ ಅರ್ಧಶತಕ ಗಡಿದಾಟಿದ್ರೆ, ಡೀನ್ ಎಲ್ಗರ್‌ 120 ಎಸೆತಗಳಲ್ಲಿ 28 ರನ್ ಕಲೆಹಾಕಿದ್ರು.

ಆದ್ರೆ ಶಾರ್ದೂಲ್ ಒಮ್ಮೆ ದಾಳಿಗಿಳಿದ ಬಳಿಕ ದಕ್ಷಿಣ ಆಫ್ರಿಕಾದ ಒಂದೊಂದೇ ವಿಕೆಟ್ ಉರುಳಿತು.

ಶಾರ್ದೂಲ್ ಬೌಲಿಂಗ್ ನೋಡಿ ದಂಗಾದ ಕ್ರಿಕೆಟ್ ಲೋಕ

ಶಾರ್ದೂಲ್ ಬೌಲಿಂಗ್ ನೋಡಿ ದಂಗಾದ ಕ್ರಿಕೆಟ್ ಲೋಕ

ಸ್ಟ್ಯಾಂಡ್ ಇನ್ ಭಾರತೀಯ ನಾಯಕ ಕೆಎಲ್ ರಾಹುಲ್ 2 ನೇ ದಿನದಂದು ಊಟದ ವಿರಾಮಕ್ಕೆ ಕೆಲ ಹೊತ್ತಿನ ಮುಂಚೆ ಶಾರ್ದೂಲ್ ಠಾಕೂರ್ ಬೌಲಿಂಗ್‌ಗೆ ಇಳಿಸಿದ್ರು. ಆದ್ರೆ ಕೆಲ ಓವರ್‌ಗಳಲ್ಲೇ ಶಾರ್ದೂಲ್ ಮೂರು ವಿಕೆಟ್ ಉರುಳಿಸಿಬಿಟ್ರು. ಶಾರ್ದೂಲ್ ಠಾಕೂರ್ ಮೊದಲಿಗೆ ಡೀನ್ ಎಲ್ಗರ್ ವಿಕೆಟ್ ಕಬಳಿಸಿದ್ರು. ಇದ್ರ ಬೆನ್ನಲ್ಲೇ ಕೀಗನ್ ಪೀಟರ್ಸನ್ 62 ರನ್‌ಗಳಿಸಿದ್ದಾಗ ಸ್ಲಿಪ್‌ನಲ್ಲಿದ್ದ ಮಯಾಂಕ್‌ ಅಗರ್ವಾಲ್‌ಗೆ ಕ್ಯಾಚಿತ್ತು ಶಾರ್ದೂಲ್‌ಗೆ ವಿಕೆಟ್ ಒಪ್ಪಿಸಿದ್ರು.

ಮೊದಲೆರಡು ವಿಕೆಟ್ ಪಡೆದ ಶಾರ್ದೂಲ್ ವಿಕೆಟ್ ದಾಹ ಕಡಿಮೆಯಾಗಿದ್ದೇ ಇಲ್ಲ. ಪ್ರತಿಯೊಬ್ಬ ಆಟಗಾರನ ವಿಕೆಟ್ ಬೇಟೆಯಾಡಿದ ಶಾರ್ದೂಲ್ ಠಾಕೂರ್ ಒಂದೊಂದೆ ವಿಕೆಟ್ ಪಡೆಯುತ್ತಾ ಹೋದರು. ವ್ಯಾನ್ ಡರ್ ಡುಸ್ಸೆನ್ ಕೇವಲ 1 ರನ್‌ಗೆ ವಿಕೆಟ್ ಒಪ್ಪಿಸಿದ್ರೆ, ಕೈಲ್ ವೆರ್ರೆನ್ನೆ 21 ರನ್‌ಗಳಿಸಿ ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ರು. ಟೆಂಬಾ ಬವುಮಾ ಕೂಡ ಅರ್ಧಶತಕ ದಾಖಲಿಸಿ ಠಾಕೂರ್‌ಗೆ ವಿಕೆಟ್ ಒಪ್ಪಿಸಿದ್ರು.

ಇಷ್ಟು ಕೆಜಿ ತೂಕ ಇಳಿಸಿದರೆ ಮಾತ್ರ ತಂಡದಲ್ಲಿ ಮತ್ತೆ ಸ್ಥಾನ; ರೋಹಿತ್‌ಗೆ ಬಂತು ಖಡಕ್ ಎಚ್ಚರಿಕೆ!

ಶಾರ್ದೂಲ್ ಬೌಲಿಂಗ್ ನೋಡಿ ಯಾರು ನೀನು? ಎಂದು ಪ್ರಶ್ನಿಸಿದ ಆರ್‌.ಅಶ್ವಿನ್

ಕ್ರಿಕೆಟ್ ಅಭಿಮಾನಿಗಳಷ್ಟೇ ಶಾರ್ದೂಲ್ ಠಾಕೂರ್‌ ಬೌಲಿಂಗ್ ದಂಗಾಗಿಲ್ಲ, ಬಂದ ಟೀಂ ಇಂಡಿಯಾ ಲೆಜೆಂಡರಿ ಸ್ಪಿನ್ನರ್ ಆರ್‌. ಅಶ್ವಿನ್ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಶಾರ್ದೂಲ್ ಠಾಕೂರ್ ಯಾವಾಗ ತನ್ನ ನಾಲ್ಕನೇ ವಿಕೆಟ್ ಆಗಿ ವ್ಯಾನ್ ಡರ್ ಡುಸ್ಸೆನ್ ಅವರನ್ನ ಔಟ್ ಮಾಡಿದ್ರೂ, ಈ ವೇಳೆಯಲ್ಲಿ ಆಶ್ಚರ್ಯ ವ್ಯಕ್ತಪಡಿಸಿದ ಅಶ್ವಿನ್, ತಮ್ಮ ಲೋಕಲ್ ಭಾಷೆ ತಮಿಳಿನಲ್ಲಿ
"ಯಾರ್ರಾ ನೀ, ಎಂಗೇಂದು ದ ಪುಡಿಚಂಗ ಉಣ್ಣಾ? ನೀ ಬಾಲ್ ಪೊಟಾಲೆ ವಿಕೆಟ್ ವಿಝುಂ," ಎಂದು ಹೇಳಿದ್ರು. ಇದರರ್ಥ ಯಾರು ನೀನು? ನೀನು ಬೌಲ್ ಮಾಡಿದ್ರೆ, ವಿಕೆಟ್ ಬೀಳುತ್ತಿದೆಯಲ್ಲಾ! ಎಂದು ಅಚ್ಚರಿಯ ವ್ಯಕ್ತಪಡಿಸಿದ್ದಾರೆ. ಅಶ್ವಿನ್ ಈ ಮಾತುಗಳು ಸ್ಟಂಪ್ ಮೈಕ್‌ನಲ್ಲಿ ರೆಕಾರ್ಡ್ ಆಗಿದೆ.

ಸ್ಕೆಲಿಟನ್ ಜೊತೆಗೆ ಸ್ನೇಹ ಬೆಳೆಸಿದ ರವೀಂದ್ರ ಜಡೇಜಾ: ಡಯಟ್ ಹೆಚ್ಚಾಗಿ ಹೀಗಾದ್ರಂತೆ!

ವಿವಾದಕ್ಕೆ ಕಾರಣವಾಯ್ತು ಪಂತ್ ಹಿಡಿದ ಕ್ಯಾಚ್!!ಅಂಪೈರ್ ಹೇಳಿದ್ದೇನು? | Oneindia Kannada
ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತದ ಬೌಲರ್‌ನ ಮಹತ್ವದ ಸಾಧನೆ

ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತದ ಬೌಲರ್‌ನ ಮಹತ್ವದ ಸಾಧನೆ

61ರನ್‌ಗೆ 7 ವಿಕೆಟ್ ಕಬಳಿಸಿದ ಶಾರ್ದೂಲ್ ಠಾಕೂರ್ ದಕ್ಷಿಣ ಆಫ್ರಿಕಾ ನೆಲದಲ್ಲಿ ಭಾರತದ ಬೌಲರ್ ಓರ್ವನ ಬೆಸ್ಟ್ ಬೌಲಿಂಗ್ ಫಿಗರ್ ಇದಾಗಿದೆ. ಇನ್ನಿಂಗ್ಸ್‌ವೊಂದರಲ್ಲಿ ಈ ಹಿಂದೆ ಹರ್ಭಜನ್ ಸಿಂಗ್ ಏಳು ವಿಕೆಟ್ ಕಬಸಿದ್ದರು. ಇದಲ್ಲದೆ ಇಡೀ ಕ್ರಿಕೆಟ್ ಇತಿಹಾಸದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇನ್ನಿಂಗ್ಸ್‌ವೊಂದರಲ್ಲಿ ಭಾರತದ ಪರ ಬೆಸ್ಟ್ ಬೌಲಿಂಗ್ ಕೂಡ ಇದಾಗಿದೆ

ಹರಿಣಗಳ ನಾಡಲ್ಲಿ ಯಾವೆಲ್ಲಾ ಬೌಲರ್‌ಗಳು ಬೆಸ್ಟ್ ಬೌಲಿಂಗ್ ಮಾಡಿದ್ದಾರೆ ಎಂಬುದನ್ನ ಈ ಕೆಳಗೆ ತಿಳಿಸಲಾಗಿದೆ.

ಶಾದೂಲ್ ಠಾಕೂರ್ 7/61 (2021/22)
ಹರ್ಭಜನ್ ಸಿಂಗ್ 7/120 (2010/11)
ಅನಿಲ್ ಕುಂಬ್ಳೆ 6/53 (1992/93)
ಜಾವಗಲ್ ಶ್ರೀನಾಥ್ 6/76 (2001/02)
ರವೀಂದ್ರ ಜಡೇಜಾ 6/138 (2013/14)

Story first published: Wednesday, January 5, 2022, 15:29 [IST]
Other articles published on Jan 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X