
ಭಾರತದ ಬೌಲರ್‌ಗಳ ಸಂಘಟಿತ ಪ್ರಯತ್ನಕ್ಕೆ, ಅಂಪೈರ್ ಪರದಾಟ!
ಭಾರತದ ಬೌಲರ್‌ಗಳ ದಾಳಿಗೂ, ಅಂಪೈರ್ ಪರದಾಟಕ್ಕೂ ಎಂತಹ ಸಂಬಂಧ ಎಂದೆನಿಸಬಹುದು. ಆದ್ರೆ ಎರಡನೇ ಟೆಸ್ಟ್‌ನ ಆನ್‌ಫೀಲ್ಡ್ ಅಂಪೈರ್ ಮರೈಸ್ ಎರಾಸ್ಮಸ್ ಭಾರತದ ಬೌಲಿಂಗ್ ದಾಳಿಯಿಂದಾಗಿ ಒತ್ತಡಕ್ಕೆ ಒಳಗಾಗಿದ್ದಾರಂತೆ. ಅದ್ರಲ್ಲೂ ಭಾರತದ ಪ್ರತಿ ಓವರ್ ಬೌಲಿಂಗ್‌ನಲ್ಲೂ ಹೃದಯಾಘಾತವಾದಂತೆ ಭಾಸವಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಖ್ಯಾತ ಟೆನಿಸ್ ತಾರೆ ನೊವಾಕ್ ಜೊಕೊವಿಕ್‌ಗೆ ಪ್ರವೇಶ ನಿರಾಕರಿಸಿದ ಆಸ್ಟ್ರೇಲಿಯಾ: ವೀಸಾ ರದ್ದು!

ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಹೆಚ್ಚಿದ ಬೌಲಿಂಗ್ ತೀವ್ರತೆ
ಪಂದ್ಯದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಭಾರತದ ಬೌಲರ್‌ಗಳ ವಿಕೆಟ್ ದಾಹ ಪ್ರತಿ ಓವರ್‌ನಲ್ಲೂ ಹೆಚ್ಚಾದಂತೆ ಕಾಣುತ್ತಿತ್ತು. ಮೊದಲ ಇನ್ನಿಂಗ್ಸ್‌ನಲ್ಲಿ ಏಳು ವಿಕೆಟ್ ಕಬಳಿಸಿದ್ದ ಮುಂಬೈ ಕ್ರಿಕೆಟರ್ ಶಾರ್ದೂಲ್ ಠಾಕೂರ್ , ಎರಡನೇ ಇನ್ನಿಂಗ್ಸ್‌ನಲ್ಲೂ ತಮ್ಮ ಮೊದಲ ಬಲಿ ಪಡೆದರು. ಓಪನರ್ ಏಡನ್ ಮಕ್ರಾಮ್‌ಗೆ ಪೆವಿಲಿಯನ್ ಹಾದಿ ತೋರಿಸಿದ ಠಾಕೂರ್, ಪ್ರತಿ ಓವರ್‌ನಲ್ಲೂ ವಿಕೆಟ್ ಪಡೆಯಲು ಸಾಕಷ್ಟು ಪ್ರಯತ್ನ ನಡೆಸಿದ್ರು. ಜೊತೆಗೆ ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ ಸಹ ವಿಕೆಟ್ ಪಡೆಯಲು ಸಾಕಷ್ಟು ಬೆವರು ಸುರಿಸಿದ್ರು.

ಠಾಕೂರ್ ಬೌಲಿಂಗ್‌ನಲ್ಲಿ ಹೆಚ್ಚು ಒತ್ತಡಕ್ಕೆ ಒಳಗಾಗಿದ್ರಂತೆ ಅಂಪೈರ್!
ಏಡೆನ್ ಮಕ್ರಾಮ್‌ರನ್ನ ಎಲ್‌ಬಿಡಬ್ಲೂ ಬಲೆಗೆ ಬೀಳಿಸಿದ ಶಾರ್ದೂಲ್ ಠಾಕೂರ್ ಜೊತೆಗೆ ಆಟಗಾರರೆಲ್ಲಾ ಒಟ್ಟಾಗಿ ಎಲ್‌ಬಿಡಬ್ಲ್ಯೂಗೆ ಮನವಿ ಮಾಡಿದಾಗಿ ಅಂಪೈರ್ ಒತ್ತಡಕ್ಕೆ ಒಳಗಾಗಿದ್ರಂತೆ. ಇದರ ಜೊತೆಗೆ ಠಾಕೂರ್ ಎರಡು ಬಾರಿ ಎಲ್‌ಬಿಡ್ಬ್ಯೂಗೆ ಔಟ್‌ಗೆ ಮನವಿ ಮಾಡಿದ್ರು. ಇದರ ನಂತರ ಡೀನ್ ಎಲ್ಗರ್ ಬ್ಯಾಟಿಂಗ್ ವೇಳೆಯಲ್ಲೂ ಇದೇ ರೀತಿಯ ಸನ್ನಿವೇಶ ಒದಗಿ ಬಂದಿತು.
ಪ್ರತಿ ಓವರ್‌ನಲ್ಲೂ ಒಂದಲ್ಲಾ ಒಂದು ಮನವಿ ಮಾಡುತ್ತಿದ್ದ ಭಾರತದ ಆಟಗಾರರು ಜೋರಾಗಿ ಕೂಗಿಕೊಂಡು ಅರಚುವಿಕೆಯು ಅಂಪೈರ್ ಅನ್ನು ತಬ್ಬಿಬ್ಬುಗೊಳಿಸಿದೆಯಂತೆ. ಈಗಾಗಲೇ ಕೋವಿಡ್ ಕಾರಣಗಳಿಂದಾಗಿ ಸ್ಟೇಡಿಯಂನಲ್ಲಿ ಅಭಿಮಾನಿಗಳಿಗೆ ಪಂದ್ಯ ವೀಕ್ಷಿಸಲು ಅನುಮತಿಯಿಲ್ಲ. ಹೀಗಾಗಿ ಮೈದಾನದಲ್ಲಿ ಹೆಚ್ಚು ನಿಶಬ್ದವಿರುವ ಕಾರಣ ಭಾರತದ ಬೌಲರ್‌ಗಳ ಜೊತೆಗೆ ಆಟಗಾರರು ಜೋರಾಗಿ ಔಟ್ ಎಂದು ಅರಚಿದಾಗಲೆಲ್ಲಾ ತನಗೆ ಹೃದಯಾಘಾತ ವಾಗುವಂತಿದೆ ಎಂದು ಆನ್‌ಫೀಲ್ಡ್ ಅಂಪೈರ್ ಮರೈಸ್ ಎರಾಸ್ಮಸ್ ಹೇಳಿರುವ ಮಾತು ಸ್ಟಂಪ್ ಮೈಕ್‌ನಲ್ಲಿ ರೆಕಾರ್ಡ್ ಆಗಿದೆ.
ವಾಂಡರರ್ಸ್ ಕ್ರೀಡಾಂಗಣದಲ್ಲಿ ರನ್ ಬೆನ್ನಟ್ಟಿದ ದಾಖಲೆ ಹೇಗಿದೆ? ಯಾರಿಗಿದೆ ಗೆಲುವಿನ ಅವಕಾಶ?

266ರನ್‌ಗಳಿಗೆ ಆಲೌಟ್ ಆಗಿರುವ ಭಾರತ
ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 266 ರನ್‌ಗಳಿಗೆ ಆಲೌಟ್ ಆಗುವ ಮೂಲಕ ದಕ್ಷಿಣ ಆಫ್ರಿಕಾಗೆ 240 ರನ್‌ಗಳ ಗುರಿ ನೀಡಿದೆ. ಎರಡನೇ ದಿನದಾಟದಂತ್ಯಕ್ಕೆ ಭಾರತ 85 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡು ಮೂರನೇ ದಿನಕ್ಕೆ ಆಟವನ್ನು ಕಾಯ್ದಿರಿಸಿತ್ತು. ಮೂರನೇ ದಿನದಾಟದಲ್ಲಿ ಚೇತೇಶ್ವರ ಪೂಜಾರ ಮತ್ತು ರಹಾನೆಯ ಟಾಪ್ ಕ್ಲಾಸ್ ಅರ್ಧಶತಕ ಹಾಗೂ ಹನುಮ ವಿಹಾರಿಯ ತಾಳ್ಮೆಯ ಬ್ಯಾಟಿಂಗ್ ಜೊತೆಗೆ ಠಾಕೂರ್ ಅಬ್ಬರದಿಂದಾಗಿ 266ರನ್‌ಗಳಿಸಲು ಶಕ್ತವಾಯಿತು.
ಟೀಂ ಇಂಡಿಯಾದ 240ರನ್ ಗುರಿ ಬೆನ್ನತ್ತಿದ ಹರಿಣಗಳು 2 ವಿಕೆಟ್ ನಷ್ಟಕ್ಕೆ 118ರನ್ ಕಲೆಹಾಕಿದ್ದು, ಗೆಲುವಿಗೆ 122ರನ್‌ಗಳು ಬಾಕಿ ಉಳಿದಿದೆ.


Click it and Unblock the Notifications
