ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಖ್ಯಾತ ಟೆನಿಸ್ ತಾರೆ ನೊವಾಕ್‌ ಜೊಕೊವಿಕ್‌ಗೆ ಪ್ರವೇಶ ನಿರಾಕರಿಸಿದ ಆಸ್ಟ್ರೇಲಿಯಾ: ವೀಸಾ ರದ್ದು!

Novak Djokovic

20 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿಗಳ ಒಡೆಯ, ವಿಶ್ವದ ನಂಬರ್ 1 ಟೆನಿಸ್ ಆಟಗಾರ ನೊವಾಕ್ ಜೊಕೊವಿಕ್‌ಗೆ ಆಸ್ಟ್ರೇಲಿಯಾ ಪ್ರವೇಶ ನಿರಾಕರಿಸಿದ ಘಟನೆ ಮೆಲ್ಬರ್ನ್‌ ಏರ್‌ಪೋರ್ಟ್‌ನಲ್ಲಿ ನಡೆದಿದೆ. ಮೆಲ್ಬೋರ್ನ್‌ನ ವಿಮಾನ ನಿಲ್ದಾಣದಲ್ಲಿ ಸುಮಾರು ಒಂಬತ್ತು ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿದ ಟೆನಿಸ್ ಸ್ಟಾರ್‌ಗೆ ಗುರುವಾರ ಬೆಳಿಗ್ಗಿನ ಜಾವದವರೆಗೂ ಪ್ರವೇಶವನ್ನ ನಿರಾಕರಿಸಲಾಗಿತ್ತು. ಹೀಗಾಗಿ ಟೆನಿಸ್ ವಲಯದಲ್ಲಿ ಆಸ್ಟ್ರೇಲಿಯಾದ ವರ್ತನೆಗೆ ಸಾಕಷ್ಟು ಖಂಡನೆ ವ್ಯಕ್ತವಾಗಿದೆ.

ಇದೇ ತಿಂಗಳು ಜನವರಿ 17ರಿಂದ ಆರಂಭಗೊಳ್ಳಲಿರುವ ಆಸ್ಟ್ರೇಲಿಯಾ ಓಪನ್‌ನಲ್ಲಿ ಭಾಗಿಯಾಗಲು ಕಾಂಗರೂ ನಾಡಿಗೆ ಕಾಲಿಟ್ಟಿದ್ದ ಜೊಕೊವಿಕ್ ತಮ್ಮ ವಿಶ್ವದಾಖಲೆಯ 21ನೇ ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆಲ್ಲಲು ಗುರಿಯಿಟ್ಟಿಕೊಂಡಿದ್ದರು. ಆದ್ರೆ ಆಸ್ಟ್ರೇಲಿಯಾಗೆ ಕಾಲಿಡುತ್ತಿದ್ದಂತೆ ನೊವಾಕ್‌ಗೆ ಶಾಕ್ ಕಾದಿತ್ತು. ಕೋವಿಡ್-19 ಲಸಿಕೆಯನ್ನ ಪಡೆಯದ ಆಟಗಾರರಿಗೆ ಆಸ್ಟ್ರೇಲಿಯಾದಲ್ಲಿ ನಿರ್ಬಂಧವಿದ್ದು, ಸಂಪೂರ್ಣ ಲಸಿಕೆ ಪಡೆಯ ನೊವಾಕ್ ಜೊಕೊವಿಕ್‌ಗೆ ನಿರ್ಬಂಧ ಹೇರಲಾಗಿದೆ.

ಆಸ್ಟ್ರೇಲಿಯಾದ ಕಾನೂನು ಪ್ರಕಾರ ಯಾವುದೇ ವ್ಯಕ್ತಿಯು ದೇಶವನ್ನ ಪ್ರವೇಶಿಸಬೇಕಾದರೆ ಒಂದು ಸಂಪೂರ್ಣ ಲಸಿಕೆ ಪಡೆದಿರಬೇಕು ಇಲ್ಲವೇ ವೈದ್ಯಕೀಯ ವಿನಾಯಿತಿ ಪಡೆದಿರಬೇಕು ಹಾಗಿದ್ದರೆ ಮಾತ್ರ ದೇಶ ಪ್ರವೇಶಕ್ಕೆ ಅನುಮತಿಯಿದೆ.

ಟೆನಿಸ್ ಆಸ್ಟ್ರೇಲಿಯಾದ ಮುಖ್ಯಸ್ಥ ಕ್ರೇಗ್ ಟೈಲೆ ಅವರ ಪ್ರಕಾರ, ಅಸಾಧಾರಣ ಸಂದರ್ಭಗಳಲ್ಲಿ ಕೆಲವು ವ್ಯಕ್ತಿಗಳು ದೇಶವನ್ನು ಪ್ರವೇಶಿಸಲು ಅವಕಾಶ ಮಾಡಿಕೊಡಲಾಗಿದೆ, ಉದಾಹರಣೆಗೆ ಕಳೆದ ಆರು ತಿಂಗಳಲ್ಲಿ ವೈರಸ್‌ನಿಂದ ಚೇತರಿಸಿಕೊಂಡವರು ಅಥವಾ ತೀವ್ರವಾದ ವೈದ್ಯಕೀಯ ಸ್ಥಿತಿಯನ್ನು ಹೊಂದಿದ್ದು, ಲಸಿಕೆ ಪಡೆಯಲು ಸಾಧ್ಯವಾಗದೆ ಇರುವವರು ಮುಂತಾದವರಿಗೆ ವಿನಾಯತಿ ನೀಡಲಾಗಿದೆ.

ವಾಂಡರರ್ಸ್ ಕ್ರೀಡಾಂಗಣದಲ್ಲಿ ರನ್ ಬೆನ್ನಟ್ಟಿದ ದಾಖಲೆ ಹೇಗಿದೆ? ಯಾರಿಗಿದೆ ಗೆಲುವಿನ ಅವಕಾಶ?ವಾಂಡರರ್ಸ್ ಕ್ರೀಡಾಂಗಣದಲ್ಲಿ ರನ್ ಬೆನ್ನಟ್ಟಿದ ದಾಖಲೆ ಹೇಗಿದೆ? ಯಾರಿಗಿದೆ ಗೆಲುವಿನ ಅವಕಾಶ?

ನೊವಾಕ್ ಜೊಕೊವಿಕ್‌ಗೆ ಪ್ರವೇಶ ನಿರ್ಬಂಧ ಕುರಿತು ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್'' ಜೋಕ್‌ವಿಕ್‌ನ ವೀಸಾವನ್ನು ರದ್ದುಗೊಳಿಸಲಾಗಿದೆ. ವಿಶೇಷವಾಗಿ ನಮ್ಮ ಗಡಿಗಳ ವಿಚಾರಕ್ಕೆ ಬಂದಾಗ ನಿಯಮಗಳು ಎಲ್ಲರಿಗೂ ಒಂದೇ ಆಗಿದೆ. ಈ ನಿಯಮಗಳನ್ನ ಯಾರೂ ಮೀರುವುದಿಲ್ಲ. ಕೋವಿಡ್‌ನಿಂದ ವಿಶ್ವದ ಅತ್ಯಂತ ಕಡಿಮೆ ಸಾವಿನ ಪ್ರಮಾಣವನ್ನು ಹೊಂದಿರುವ ಆಸ್ಟ್ರೇಲಿಯಾಕ್ಕೆ ನಮ್ಮ ಬಲವಾದ ಗಡಿ ನೀತಿಗಳು ನಿರ್ಣಾಯಕವಾಗಿವೆ, ನಾವು ಜಾಗರೂಕರಾಗಿರುತ್ತೇವೆ'' ಎಂದು ಮಾರಿಸನ್ ಟ್ವೀಟ್ ಮಾಡಿದ್ದಾರೆ.

ಇನ್ನು ಜೊಕೊವಿಕ್ ವೀಸಾ ರದ್ದತಿ ಕುರಿತಾಗಿ ಸರ್ಬಿಯಾದ ಪ್ರಧಾನಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನಾನು ನೊವಾಕ್ ಜೊಕೊವಿಕ್ ಅವರೊಂದಿಗೆ ನನ್ನ ದೂರವಾಣಿ ಸಂಭಾಷಣೆಯನ್ನು ಮುಗಿಸಿದ್ದೇನೆ" ಎಂದು ಸರ್ಬಿಯಾದ ಅಧ್ಯಕ್ಷ ಅಲೆಕ್ಸಾಂಡರ್ ವುಸಿಕ್ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.

"ನಾನು ನೊವಾಕ್‌ಗೆ ಹೇಳಿದ್ದೇನೆಂದರೆ, ಇಡೀ ಸರ್ಬಿಯಾ ಅವನೊಂದಿಗೆ ಇದೆ ಮತ್ತು ವಿಶ್ವದ ಅತ್ಯುತ್ತಮ ಟೆನಿಸ್ ಆಟಗಾರನ ಕಿರುಕುಳವನ್ನು ತಕ್ಷಣವೇ ಕೊನೆಗೊಳಿಸಲು ನಮ್ಮ ಎಲ್ಲ ಪ್ರಯತ್ನವನ್ನ ಮಾಡುತ್ತಿದೆ'' ಎಂದು ಪೋಸ್ಟ್ ಮಾಡಿದ್ದರು.

ಆದ್ರೆ ಆಸ್ಟ್ರೇಲಿಯಾ ತನ್ನ ಬಿಗಿ ನಿಯಮವನ್ನ ಸಡಿಲಿಸದ ಕಾರಣ ನೊವಾಕ್ ಜೊಕೊವಿಕ್ ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮರಳಿ ತಾಯ್ನಾಡಿಗೆ ತೆರಳುವ ಪರಿಸ್ಥಿತಿ ಎದುರಾಯಿತು.

ಆಸ್ಟ್ರೇಲಿಯನ್ ಓಪನ್‌ನಲ್ಲಿ ದಾಖಲೆ ಮುರಿಯುವ 21ನೇ ಗ್ರ್ಯಾಂಡ್‌ಸ್ಲಾಮ್‌ ಗೆಲುವನ್ನು ಬಯಸುತ್ತಿದ್ದ ಜೊಕೊವಿಕ್‌ ಬುಧವಾರ ರಾತ್ರಿ 11:30ರ ಸುಮಾರಿಗೆ ಮೆಲ್ಬೋರ್ನ್‌ನ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ದುಬೈನಿಂದ 14 ಗಂಟೆಗಳ ಪ್ರಯಾಣದ ನಂತರ ಮೆಲ್ಬರ್ನ್‌ಗೆ ಆಗಮಿಸಿದ ಬಳಿಕ ಈ ತೊಂದರೆ ಅನುಭವಿಸಿದ್ದಾರೆ.

ಜೋಕೋವಿಕ್ ಅವರು ಇತ್ತೀಚೆಗೆ ತಾನು ಲಸಿಕೆ ಪಡೆಯದಿರುವ ಪ್ರತ್ಯೇಕ ವರ್ಗಕ್ಕೆ ಸೇರಿದ್ದೇನೆ ಎಂದು ಹೇಳಿಕೊಂಡಿದ್ದರು. ಜೊತೆಗೆ ವಿಶೇಷ ವಿನಾಯಿತಿ ಅನುಮತಿ ಹೊಂದಲಿದ್ದೇನೆ ಎಂದು ತಿಳಿಸಿದ್ದಾರೆ. ಈ ಕುರಿತಾಗಿ ಜೊಕೊವಿಕ್‌ಗೆ ವಿನಾಯಿತಿ ನೀಡಿ ಮೆಲ್ಬೋರ್ನ್‌ನಲ್ಲಿ ಪ್ರವೇಶಕ್ಕೆ ಅನುಮತಿ ನೀಡಲು ಮುಂದಾಗಿದ್ದ ಆಸ್ಟ್ರೇಲಿಯಾ ಸರ್ಕಾರದ ನಿರ್ಧಾರದ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.

20 ಗ್ರ್ಯಾಂಡ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದಿರುವ ನೊವಾಕ್ ಜೊಕೊವಿಕ್ ಅತಿ ಹೆಚ್ಚು ಬಾರಿ ದಾಖಲೆಯ 9 ಆಸ್ಟ್ರೇಲಿಯಾ ಓಪನ್ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Story first published: Thursday, January 6, 2022, 11:27 [IST]
Other articles published on Jan 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X