For Quick Alerts
ALLOW NOTIFICATIONS  
For Daily Alerts
 

Ind vs SA 5th T20I: ಐದನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ದಕ್ಷಿಣ ಆಫ್ರಿಕಾ ತಂಡ, ನಾಯಕನೇ ಆಡೋದು ಡೌಟ್!

South africa

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿ ಅಂತಿಮ ಹಂತಕ್ಕೆ ಹೋಗಿ ತಲುಪಿದೆ. ಭಾನುವಾರ (ಜೂ.19) ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಮೈದಾನದಲ್ಲಿ ಅಂತಿಮ ಟಿ20 ಪಂದ್ಯಕ್ಕೆ ವೇದಿಕೆ ಸಜ್ಜಾಗಿದ್ದು, ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ಸಿಗಲಿದೆ.

ಈಗಾಗಲೇ ನಾಲ್ಕು ಪಂದ್ಯಗಳ ಫಲಿತಾಂಶದಲ್ಲಿ ಉಭಯ ತಂಡಗಳು ತಲಾ ಎರಡು ಗೆಲುವು ಸಾಧಿಸಿವೆ. 2 ರಿಂದ 2ರಿಂದ ತಂಡಗಳು ಸಮಬಲ ಸಾಧಿಸಿವೆ. ಇದರಿಂದಾಗಿ ಅಂತಿಮ ಪಂದ್ಯ ಸರಣಿ ನಿರ್ಣಾಯಕವಾಯಿತು. ಈಗಾಗಲೇ ಭರ್ಜರಿ ಫಾರ್ಮ್‌ನಲ್ಲಿರುವ ಟೀಂ ಇಂಡಿಯಾ ಕಳೆದ ಪಂದ್ಯಗಳಲ್ಲಿ ಆಡಿಸಿದ ತಂಡವನ್ನೇ ಬಹುತೇಕ ಮುಂದುವರಿಸುವ ಸಾಧ್ಯತೆಯಿದ್ದು, ಸತತ ಎರಡು ಪಂದ್ಯ ಸೋತಿರುವ ದಕ್ಷಿಣ ಆಫ್ರಿಕಾ ತಂಡದಲ್ಲಿ ಕೊಂಚ ಬದಲಾವಣೆ ಮಾಡುವ ಸಾಧ್ಯತೆಯಿದೆ.

ಅದ್ಭುತವಾಗಿ ಕಂಬ್ಯಾಕ್ ಮಾಡಿದೆ ಟೀಂ ಇಂಡಿಯಾ

ಅದ್ಭುತವಾಗಿ ಕಂಬ್ಯಾಕ್ ಮಾಡಿದೆ ಟೀಂ ಇಂಡಿಯಾ

ಈ ಸರಣಿಯಲ್ಲಿ ಭಾರತ ತಂಡ ಪುಟಿದೇಳಿರುವ ರೀತಿ ಅದ್ಭುತವಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಸೋತಿದ್ದು, ಕೊನೆಯ ಎರಡರಲ್ಲಿ ಗೆದ್ದಿದೆ. ಈ ಕಾರಣದಿಂದಾಗಿ ಅಂತಿಮ ಪಂದ್ಯದವರೆಗೆ ಸರಣಿಯನ್ನು ಲಾಕ್ ಮಾಡಲು ಸಾಧ್ಯವಾಯಿತು.

ಪಿಚ್‌ ಹೇಗೇ ಇರಲಿ, ವಿಶಾಖಪಟ್ಟಣಂನಲ್ಲಿ ನಡೆದ ಮೂರನೇ ಪಂದ್ಯದ ಮೂಲಕ ಟೀಂ ಇಂಡಿಯಾ ಅದ್ಭುತ ಗೆಲುವು ಸಾಧಿಸಿದೆ. ರಾಜ್‌ಕೋಟ್‌ನಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ ಟೀಂ ಇಂಡಿಯಾ ಹರಿಣಗಳ ವಿರುದ್ಧ ಬೃಹತ್ ಗೆಲುವು ಸಾಧಿಸಿತು.

ದಕ್ಷಿಣ ಆಫ್ರಿಕಾ ವಿರುದ್ಧ 5ನೇ ಟಿ20 ಪಂದ್ಯ ಗೆಲ್ಲಲು, ಭಾರತ ಈ 2 ತಪ್ಪನ್ನು ಸರಿಪಡಿಸಿಕೊಳ್ಳಬೇಕು: ಆಕಾಶ್ ಚೋಪ್ರಾ

ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಇರದು!

ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಇರದು!

ರಿಷಭ್ ಪಂತ್ ನಾಯಕತ್ವದ ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆಗಳಿಲ್ಲದಿರಬಹುದು. ಸರಣಿಯ ಕೊನೆಯ ಎರಡು ಪಂದ್ಯಗಳಲ್ಲಿ ಜಯಗಳಿಸುವ ಮೂಲಕ ರಿಷಭ್ ಪಂತ್ ಸೇನೆ ಭರ್ಜರಿ ಫಾರ್ಮ್‌ನಲ್ಲಿದೆ.. ಹೀಗಾಗಿ ಅಂತಿಮ ಪಂದ್ಯದಲ್ಲೂ ಅದೇ ಲಯವನ್ನ ಮುಂದುವರಿಸುವ ಸಾಧ್ಯತೆಯಿದೆ.

ಈ ಪಂದ್ಯಕ್ಕೆ ಭಾರತ ತಂಡದಲ್ಲಿ ಬದಲಾವಣೆಯಾಗುವ ಸಾಧ್ಯತೆ ಕಡಿಮೆ. ಕಳೆದ ಎರಡು ಪಂದ್ಯಗಳಲ್ಲಿ ಆಡಿದ ಆಟಗಾರರನ್ನು ಮಾತ್ರ ಅಂತಿಮ ತಂಡಕ್ಕೆ ಸೇರಿಸಿಕೊಳ್ಳಬಹುದು. ಆರಂಭಿಕರಾದ ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ವೇಗಿ ಭುವನೇಶ್ವರ್ ಕುಮಾರ್ ತಂಡದ ಪರ ಆಕರ್ಷಕವಾಗಿ ಆಡುತ್ತಿದ್ದಾರೆ.

IND vs SA: 5ನೇ ಟಿ20ಯಲ್ಲಿ ಕಣಕ್ಕಿಳಿಯಲಿರುವ ಭಾರತ ತಂಡ; ಈ ಆಟಗಾರರು ಬೆಂಚ್ ಕಾಯುವುದು ಖಚಿತ!

ದಕ್ಷಿಣ ಆಫ್ರಿಕಾಕ್ಕೆ ಹೊಡೆತ..!

ದಕ್ಷಿಣ ಆಫ್ರಿಕಾಕ್ಕೆ ಹೊಡೆತ..!

ದಕ್ಷಿಣ ಆಫ್ರಿಕಾ ತಂಡದ ಪರಿಸ್ಥಿತಿ ಸಂಪೂರ್ಣವಾಗಿ ವಿಭಿನ್ನವಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಗೆದ್ದು ಚೇತರಿಸಿಕೊಂಡಿದೆ. 3, 4 ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದೆ. ತಂಡ ರಕ್ಷಣಾ ವಿಭಾಗದಲ್ಲಿ ಎಡವಿದೆ. ಬ್ಯಾಟ್ಸ್‌ಮನ್‌ಗಳು ಫಾರ್ಮ್ ಕಳೆದುಕೊಂಡಿದ್ದಾರೆ. ರಾಜ್‌ಕೋಟ್ ಪಂದ್ಯದಲ್ಲಿ 100 ರನ್ ಗಳಿಸಲು ಸಾಧ್ಯವಾಗಲಿಲ್ಲ.

ಮೊದಲೆರಡು ಪಂದ್ಯ ಗೆದ್ದು ಸರಣಿ ಗೆಲುವಿನ ನಗೆ ಬೀರುವ ಕನಸು ಕಂಡಿದ್ದ ಆಫ್ರಿಕನ್ನರು ಇದೀಗ ಅಂತಿಮ ನಿರ್ಣಾಯಕ ಪಂದ್ಯದಲ್ಲಿ ತಮ್ಮ ಪ್ರದರ್ಶನ ದ್ವಿಗುಣಗೊಳಿಸಿ ಗೆಲ್ಲಬೇಕಿದೆ.

IND vs ENG: ಶಾಪಿಂಗ್ ತೆರಳಿದ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜತೆ ಸೆಲ್ಫಿ ಕ್ಲಿಕ್ಕಿಸಿದ ಅಭಿಮಾನಿಗಳು

ಹರಿಣಗಳ ನಾಯಕ ತೆಂಬಾ ಬವುಮಾ ಆಡುವುದು ಅನುಮಾನ

ಹರಿಣಗಳ ನಾಯಕ ತೆಂಬಾ ಬವುಮಾ ಆಡುವುದು ಅನುಮಾನ

ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬಾವುಮಾ, ಕೊನೆಯ ಪಂದ್ಯ ಆಡುವುದು ಅನುಮಾನ ಮೂಡಿಸಿದೆ. ಗಾಯದ ಕಾರಣದಿಂದ ಅವರು ಪ್ಲೇಯಿಂಗ್ ಇಲೆವೆನ್‌ನಿಂದ ತಪ್ಪಿಸಿಕೊಳ್ಳುವ ಸಾಧ್ಯತೆಗಳಿವೆ. ನಾಲ್ಕನೇ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ತೆಂಬಾ ಬವುಮಾ ಗಾಯಗೊಂಡು ರಿಟೈರ್ಡ್ ಹರ್ಟ್‌ ಆಗಿ ಹೊರಗುಳಿದರು. ಮತ್ತೆ ತೆಂಬಾ ಬ್ಯಾಟಿಂಗ್ ಬರದೇ ಇರುವುದು ಗಾಯದ ಪ್ರಮಾಣವನ್ನ ತೋರಿಸಿತು.

ತೆಂಬಾ ಬವುಮಾ ಕೈ ಊತ ಇನ್ನೂ ಕಡಿಮೆಯಾಗಿಲ್ಲ ಎಂದು ವರದಿಯಾಗಿದೆ. ಹೀಗಾಗಿ ಅಂತಿಮ ಪಂದ್ಯದಲ್ಲಿ ತೆಂಬಾ ಬದಲು ರೀಜಾ ಹೆಂಡ್ರಿಕ್ಸ್‌ ಕಣಕ್ಕಿಳಿಯಬಹುದಾಗಿದ್ದು, ಕ್ವಿಂಟನ್ ಡಿಕಾಕ್ ತಂಡವನ್ನ ಮುನ್ನಡೆಸುವ ಸಾಧ್ಯತೆ ಇದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ಸಂಭಾವ್ಯ ಪ್ಲೇಯಿಂಗ್ 11

ಭಾರತ ಮತ್ತು ದಕ್ಷಿಣ ಆಫ್ರಿಕಾ ಸಂಭಾವ್ಯ ಪ್ಲೇಯಿಂಗ್ 11

ಟೀಂ ಇಂಡಿಯಾ
ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಬ್ ಪಂತ್ (ನಾಯಕ, ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಅವೇಶ್ ಖಾನ್, ಭುವನೇಶ್ವರ್ ಕುಮಾರ್ ಮತ್ತು ಯುಜವೇಂದ್ರ ಚಾಹಲ್

ದಕ್ಷಿಣ ಆಫ್ರಿಕಾ
ಕ್ವಿಂಟನ್ ಡಿ ಕಾಕ್(ವಿಕೆಟ್ ಕೀಪರ್), ರೀಜಾ ಹೆಂಡ್ರಿಕ್ಸ್‌/ ಟೆಂಬಾ ಬಾವುಮಾ (ನಾಯಕ) ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಯಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಎನ್ರಿಕ್ ನೊರ್ಕಿಯಾ, ತಬ್ರೈಜ್ ಶಮ್ಸಿ, ಲುಂಗಿ ಎನ್‌ಗಿಡಿ

Story first published: Sunday, June 19, 2022, 15:23 [IST]
Other articles published on Jun 19, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+