For Quick Alerts
ALLOW NOTIFICATIONS  
For Daily Alerts
 

Ind vs SA: ಕೆ.ಎಲ್ ರಾಹುಲ್ ಮತ್ತು ರಾಹುಲ್ ದ್ರಾವಿಡ್ ಮುಂದಿರುವ ಮೂರು ಸವಾಲುಗಳು

KL Rahul And Rahul Dravid
ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಓಪನರ್ ಸ್ಥಾನ ಯಾರಿಗೆ? ದ್ರಾವಿಡ್ & ರಾಹುಲ್ ಗೆ ಟೆನ್ಶನ್ | OneIndia Kannada

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಗೆ ದಿನಗಣನೆ ಆರಂಭಗೊಂಡಿದ್ದು, ಐಪಿಎಲ್ ಬಳಿಕ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪುನರಾರಂಭದ ಸರಣಿಯಾಗಿದೆ. ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತದ ಮುಂದಿನ ಸರಣಿ ತಯಾರಿಯಲ್ಲಿದೆ. ಹೀಗಾಗಿ ಪ್ರತಿಯೊಂದು ಸರಣಿಯನ್ನು ಭಾರತ ಗಂಭೀರವಾಗಿ ಪರಿಗಣಿಸಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿದೆ. ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ರವೀಂದ್ರ ಜಡೇಜಾ ಅವರಂತಹ ಪ್ರಮುಖ ಆಟಗಾರರೂ ತಂಡದಿಂದ ಹೊರಗುಳಿದಿದ್ದಾರೆ. ಈ ಸರಣಿಯಲ್ಲಿ ಕೆ.ಎಲ್ ರಾಹುಲ್ ಭಾರತವನ್ನು ಮುನ್ನಡೆಸಲಿದ್ದಾರೆ. ರಾಹುಲ್ ಈ ಹಿಂದೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತವನ್ನು ಒಂದು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳಿಗೆ ಮುನ್ನಡೆಸಿದ್ದರು. ಇವೆಲ್ಲದರಲ್ಲೂ ಭಾರತ ಸೋತಿದೆ.

ಹೀಗಾಗಿ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ನಾಯಕ ರಾಹುಲ್ ಮತ್ತು ಕೋಚ್ ರಾಹುಲ್ ದ್ರಾವಿಡ್ ಕೆಲವು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ. ಅವುಗಳು ಯಾವುವು ಎಂದು ಈ ಕೆಳಗೆ ತಿಳಿಯಿರಿ.

ಹಾರ್ದಿಕ್ ಪಾಂಡ್ಯಗೆ ನೀಡಬೇಕಾದ ಬ್ಯಾಟಿಂಗ್ ಸ್ಥಾನ

ಹಾರ್ದಿಕ್ ಪಾಂಡ್ಯಗೆ ನೀಡಬೇಕಾದ ಬ್ಯಾಟಿಂಗ್ ಸ್ಥಾನ

ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ವಿರಾಮದ ನಂತರ ಭಾರತ ತಂಡಕ್ಕೆ ಮರಳಲಿದ್ದಾರೆ. ಕಳೆದ ವರ್ಷದ ಟಿ20 ವಿಶ್ವಕಪ್ ಬಳಿಕ ಅವರು ಭಾರತ ಪರ ಆಡಿಲ್ಲ. ಐಪಿಎಲ್‌ನ ಹೊಸ ಫ್ರಾಂಚೈಸಿಯಾದ ಗುಜರಾತ್ ಟೈಟಾನ್ಸ್‌ನೊಂದಿಗೆ ಹಾರ್ದಿಕ್ ಕ್ರಿಕೆಟ್‌ಗೆ ಮರಳಿದ್ದಾರೆ. ಅವರು ಗುಜರಾತ್ ಟೈಟನ್ಸ್ ತಂಡವನ್ನ ಚಾಂಪಿಯನ್ ಪಟ್ಟಕ್ಕೂ ಏರಿಸಿದ್ರು.

ನಾಯಕತ್ವದ ಜೊತೆಗೆ ಅವರು 487 ರನ್‌ಗಳೊಂದಿಗೆ ಟೂರ್ನಿಯಲ್ಲಿ ಟೈಟಾನ್ಸ್‌ನ ಗರಿಷ್ಠ ಸ್ಕೋರರ್ ಆಗಿದ್ದರು. ಹಾರ್ದಿಕ್ ತಂಡಕ್ಕೆ ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದರು. ಇದರೊಂದಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಈತನಿಗೆ ಯಾವ ಸ್ಥಾನ ನೀಡಬೇಕು ಎಂಬುದು ನಾಯಕ ರಾಹುಲ್ ಮತ್ತು ಕೋಚ್ ದ್ರಾವಿಡ್ ಅವರಿಗೆ ಖಂಡಿತಾ ತಲೆನೋವಾಗಿ ಪರಿಣಮಿಸಲಿದೆ.

ರಾಹುಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಮತ್ತು ರಿಷಭ್ ಪಂತ್ ಅಗ್ರ ನಾಲ್ಕರಲ್ಲಿ ಆಡುವ ಸಾಧ್ಯತೆ ಇದೆ. ಆ ಸಂದರ್ಭದಲ್ಲಿ, ಹಾರ್ದಿಕ್ ಮಧ್ಯಮ ಕ್ರಮಾಂಕದಲ್ಲಿ ಆಡಬಲ್ಲರೇ ಅಥವಾ ಫಿನಿಶರ್ ಪಾತ್ರದಲ್ಲಿ ಅವರು ತಮ್ಮ ಪಾತ್ರವನ್ನು ಪುನರಾವರ್ತಿಸಬಹುದೇ ಎಂಬುದು ಪ್ರಶ್ನೆ.

ಅರ್ಜುನ್ ತೆಂಡೂಲ್ಕರ್‌ನನ್ನು MI ಆಡುವ 11ರ ಬಳಗಕ್ಕೆ ಆಯ್ಕೆಯಾಗದ ಬಗ್ಗೆ ತುಟಿಬಿಚ್ಚಿದ ಬೌಲಿಂಗ್ ಕೋಚ್

ಕೆ.ಎಲ್ ರಾಹುಲ್ ಜೊತೆಗೆ ಓಪನರ್ ಯಾರು?

ಕೆ.ಎಲ್ ರಾಹುಲ್ ಜೊತೆಗೆ ಓಪನರ್ ಯಾರು?

ನಾಯಕ ಕೆ.ಎಲ್ ರಾಹುಲ್ ಅವರ ಆರಂಭಿಕ ಪಾಲುದಾರರು ಯಾರು ಎಂಬುದು ಎರಡನೇ ಪ್ರಶ್ನೆ. ಪ್ರಸ್ತುತ, ಯುವ ಆಟಗಾರರಾದ ಇಶಾನ್ ಕಿಶನ್ ಮತ್ತು ರುತುರಾಜ್ ಗಾಯಕ್ವಾಡ್ ಆರಂಭಿಕ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಇಬ್ಬರೂ ಉತ್ತಮ ಫಾರ್ಮ್‌ನಲ್ಲಿ ಇಲ್ಲದಿರುವುದು ಆಯ್ಕೆಯನ್ನು ಕಷ್ಟಕರವಾಗಿಸುತ್ತದೆ. ಕಳೆದ ಐಪಿಎಲ್ ಇಶಾನ್ ಮತ್ತು ರುತ್ ರಾಜ್‌ಗೆ ಅಷ್ಟು ಚೆನ್ನಾಗಿರಲಿಲ್ಲ. ಇಬ್ಬರೂ ಸಾಧಾರಣ ಪ್ರದರ್ಶನ ನೀಡಿದರು.

2021ರ ಐಪಿಎಲ್‌ನ ಆರೆಂಜ್ ಕ್ಯಾಪ್‌ನ ವಿಜೇತ ರುತುರಾಜ್ ಚೆನ್ನೈ ಸೂಪರ್ ಕಿಂಗ್ಸ್ ಪರ 368 ರನ್ ಗಳಿಸಿದ್ದರು. 26.28ರ ಸರಾಸರಿಯೊಂದಿಗೆ 126.46 ಸ್ಟ್ರೈಕ್ ರೇಟ್ ಹೊಂದಿತ್ತು. ಆದರೆ ಮುಂಬೈ ಇಂಡಿಯನ್ಸ್ ಪರ ಇಶಾಂತ್ 32.15ರ ಸರಾಸರಿಯಲ್ಲಿ 418 ರನ್ ಗಳಿಸಿದ್ದಾರೆ. ಸ್ಟ್ರೈಕ್ ರೇಟ್ 120.11. ಇಶಾನ್ ಲೆಫ್ಟ್ ರೈಟ್ ಕಾಂಬಿನೇಷನ್ ಪಡೆಯುವುದರಿಂದ ಮೇಲುಗೈ ಪಡೆಯುವ ಸಾಧ್ಯತೆ ಇದೆ.

IPL 2022: ಟೂರ್ನಿಯ 12 ಬೆಸ್ಟ್ ಆಟಗಾರರನ್ನು ಹೆಸರಿಸಿದ ಹರ್ಭಜನ್; ಆರ್‌ಸಿಬಿಯ ಇಬ್ಬರಿಗೆ ಸ್ಥಾನ

ಪೇಸ್ ಬೌಲಿಂಗ್ ಸಂಯೋಜನೆ

ಪೇಸ್ ಬೌಲಿಂಗ್ ಸಂಯೋಜನೆ

ದಕ್ಷಿಣ ಆಫ್ರಿಕಾಕ್ಕೆ ಸವಾಲೊಡ್ಡುವ ಬಲಿಷ್ಠ ಪೇಸ್ ಲೈನ್ ಅಪ್ ಗೆ ಜಸ್ ಪ್ರೀತ್ ಬುಮ್ರಾ ಸೇರಿದಂತೆ ಹಿರಿಯ ವೇಗಿಗಳ ಕೊರತೆ ಮೂರನೇ ತಲೆನೋವಾಗಿದೆ. ಯುಜವೇಂದ್ರ ಚಹಾಲ್ ಮತ್ತು ಕುಲದೀಪ್ ಯಾದವ್ ಸ್ಪಿನ್ ಜೋಡಿಯಾಗಿ ಆಡಬಹುದು. ಕುಲ್-ಚಾ ಜೋಡಿ ಬಹಳ ಸಮಯದ ಬಳಿಕ ಒಟ್ಟಿಗೆ ಸರಣಿ ಆಡುತ್ತಿರುವುದು ಇದೇ ಮೊದಲು. ಚಹಾಲ್ ಮತ್ತು ಕುಲದೀಪ್ ಐಪಿಎಲ್‌ನಲ್ಲಿ ತಮ್ಮ ಫ್ರಾಂಚೈಸಿಗಳಿಗೆ ಅದ್ಭುತ ಪ್ರದರ್ಶನ ನೀಡಿದ್ದರು. ಚಹಾಲ್ ಪರ್ಪಲ್ ಕ್ಯಾಪ್ ವಿನ್ನರ್ ಕೂಡ ಆಗಿದ್ದಾರೆ.

ಅದೇ ಸಮಯದಲ್ಲಿ, ಭಾರತವು ಪೇಸ್ ಬೌಲಿಂಗ್ ಸಂಯೋಜನೆಯ ಬಗ್ಗೆ ಗೊಂದಲದಲ್ಲಿದೆ. ಅನುಭವಿ ಭುವನೇಶ್ವರ್ ಕುಮಾರ್ ವೇಗಿಗಳ ದಾಳಿಯ ಚುಕ್ಕಾಣಿ ಹಿಡಿಯುವ ಸಾಧ್ಯತೆ ಇದೆ. ಹರ್ಷಲ್ ಪಟೇಲ್, ಅವೇಶ್ ಖಾನ್, ಯುವ ಬೌಲರ್ ಉಮ್ರಾನ್ ಮಲಿಕ್ ಮತ್ತು ಅರ್ಷದೀಪ್ ಸಿಂಗ್ ಇತರ ವೇಗದ ಬೌಲಿಂಗ್ ಆಯ್ಕೆಗಳು.

ಆವೇಶ್ ಮತ್ತು ಉಮ್ರಾನ್ ಸಾಕಷ್ಟು ವಿಕೆಟ್ ಪಡೆದರು ಆದರೆ ಎಕಾನಮಿ ರೇಟ್ ಕೆಟ್ಟದಾಗಿದೆ. ಮತ್ತೊಂದೆಡೆ ಅರ್ಷದೀಪ ರನ್ ಬಿಟ್ಟುಕೊಡುವ ಸಾಧ್ಯತೆ ಕಡಿಮೆಯಾದರೂ ಹೆಚ್ಚು ವಿಕೆಟ್ ಪಡೆಯಲಿಲ್ಲ. ಹೀಗಾಗಿ ಇವರಲ್ಲಿ ಯಾರನ್ನು ಭಾರತದ ಆಡುವ ಪ್ಲೇಯಿಂಗ್ ಇಲೆವೆನ್‌ಗೆ ಸೇರಿಸಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ20 ಸ್ಕ್ವಾಡ್‌

ಭಾರತ ಮತ್ತು ದಕ್ಷಿಣ ಆಫ್ರಿಕಾ ಟಿ20 ಸ್ಕ್ವಾಡ್‌

ದಕ್ಷಿಣ ಆಫ್ರಿಕಾ ತಂಡ: ತೆಂಬಾ ಬವುಮಾ(ನಾಯಕ), ಡಿ ಕಾಕ್‌, ಹೆಂಡ್ರಿಕ್ಸ್‌, ಕ್ಲಾಸೆನ್‌, ಮಹಾರಾಜ್‌, ಮಾರ್ಕ್ರಮ್‌, ಮಿಲ್ಲರ್‌, ಎನ್‌ಗಿಡಿ, ನೋಕಿಯಾ, ಪಾರ್ನೆಲ್‌, ಪ್ರಿಟೋರಿಯಸ್‌, ರಬಾಡ, ಶಮ್ಸಿ, ಸ್ಟಬ್ಸ್‌, ಡುಸ್ಸೆನ್‌, ಯಾನ್ಸನ್‌.


ಟಿಂ ಇಂಡಿಯಾ ಸ್ಕ್ವಾಡ್‌
ಕೆಎಲ್ ರಾಹುಲ್(ನಾಯಕ), ರುತುರಾಜ್ ಗಾಯಕ್ವಾಡ್, ಇಶಾನ್ ಕಿಶಾನ್, ದೀಪಕ್ ಹೂಡ, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯಜುವೇಂದ್ರ ಚಹಾಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಶ್ನೋಯ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಶದೀಪ್ ಸಿಂಗ್, ಉಮ್ರಾನ್ ಮಲಿಕ್

Story first published: Friday, June 3, 2022, 18:05 [IST]
Other articles published on Jun 3, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+