ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅರ್ಜುನ್ ತೆಂಡೂಲ್ಕರ್‌ನನ್ನು MI ಆಡುವ 11ರ ಬಳಗಕ್ಕೆ ಆಯ್ಕೆಯಾಗದ ಬಗ್ಗೆ ತುಟಿಬಿಚ್ಚಿದ ಬೌಲಿಂಗ್ ಕೋಚ್

Bowling Coach Shane Bond Reacted on Arjun Tendulkars No-selection In MI Playing 11

ಭಾರತದ ದಿಗ್ಗಜ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತೊಮ್ಮೆ ನಿರಾಶೆಗೊಂಡಿದ್ದಾರೆ. ಐಪಿಎಲ್ 2022ರ 15ನೇ ಸೀಸನ್‌ನಲ್ಲಿ ಒಂದೂ ಪಂದ್ಯವಾಡದೆ ಬೆಂಚ್ ಕಾಯಿಸಬೇಕಾಯಿತು.

ಇದರ ಬೆನ್ನಲ್ಲೇ ಇದೇ ತಿಂಗಳಿನಲ್ಲಿ ನಡೆಯಲಿರುವ ರಣಜಿ ಟ್ರೋಫಿ ನಾಕೌಟ್ ಪಂದ್ಯಗಳಲ್ಲಿ ಅರ್ಜುನ್ ತೆಂಡೂಲ್ಕರ್‌ರನ್ನು ಮುಂಬೈ ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ. ಪೃಥ್ವಿ ಶಾ ಮುಂಬೈ ತಂಡವನ್ನು ಮುನ್ನಡೆಸಲಿದ್ದು, ಯಶಸ್ವಿ ಜೈಸ್ವಾಲ್, ಧವಳ್ ಕುಲಕರ್ಣಿ ಮತ್ತು ತುಷಾರ್ ದೇಶಪಾಂಡೆ ಅವಕಾಶ ಪಡೆದಿದ್ದಾರೆ.

ಐಪಿಎಲ್ ಆಯ್ತು, ಈಗ ಮುಂಬೈ ರಣಜಿ ತಂಡದಲ್ಲೂ ತೆಂಡೂಲ್ಕರ್ ಪುತ್ರನಿಗೆ ಅವಕಾಶವಿಲ್ಲಐಪಿಎಲ್ ಆಯ್ತು, ಈಗ ಮುಂಬೈ ರಣಜಿ ತಂಡದಲ್ಲೂ ತೆಂಡೂಲ್ಕರ್ ಪುತ್ರನಿಗೆ ಅವಕಾಶವಿಲ್ಲ

ಈ ಐಪಿಎಲ್ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಸತತ ಎಂಟು ಪಂದ್ಯಗಳಲ್ಲಿ ಸೋಲನುಭವಿಸಿತು. ಕೊನೆಯ ಪಂದ್ಯಗಳನ್ನಾಡುವ ವೇಳೆ ಅರ್ಜುನ್‌ಗೆ ಅವಕಾಶ ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಮುಂಬೈ ಇಂಡಿಯನ್ಸ್ ಮ್ಯಾನೇಜ್‌ಮೆಂಟ್ ಒಂದೇ ಒಂದು ಪಂದ್ಯದಲ್ಲಿ ಅವರನ್ನು ಆಡಿಸಲಿಲ್ಲ.

ಸರ್ಫರಾಜ್ ಖಾನ್ ಮತ್ತು ಸಹೋದರ ಮುಶೀರ್‌ಗೆ ಸ್ಥಾನ

ಸರ್ಫರಾಜ್ ಖಾನ್ ಮತ್ತು ಸಹೋದರ ಮುಶೀರ್‌ಗೆ ಸ್ಥಾನ

ಇನ್ನು ಮುಂಬೈ ರಣಜಿ ತಂಡದಲ್ಲಿ ಸರ್ಫರಾಜ್ ಖಾನ್ ಮತ್ತು ಅವರ ಸಹೋದರ ಮುಶೀರ್ ಸ್ಥಾನ ಪಡೆದರು. ಕೂಚ್ ಬೆಹರ್ ಟ್ರೋಫಿಯಲ್ಲಿ ಮುಶೀರ್ ಮಿಂಚಿದ್ದರು. ವಾಸಿಂ ಜಾಫರ್ ಅವರ ಅಳಿಯ ಅರ್ಮಾನ್ ಜಾಫರ್ ಅವರಿಗೂ ಅವಕಾಶ ಸಿಕ್ಕಿತು. ಆದರೆ ಅರ್ಜುನ್‌ಗೆ ಅವಕಾಶ ನೀಡದ ಮುಂಬೈ ವಿರುದ್ಧ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಐಪಿಎಲ್ 2022ರ ಮೆಗಾ ಹರಾಜಿನಲ್ಲಿ ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯು ಮೂಲ ಬೆಲೆಗಿಂತ (10 ಲಕ್ಷ ರೂಪಾಯಿ) ಹೆಚ್ಚಿನ ಮೊತ್ತಕ್ಕೆ (30 ಲಕ್ಷ) ಖರೀದಿಸುವ ಮೂಲಕ ಎರಡನೇ ಬಾರಿಗೆ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಸಿಕೊಂಡರು. ಆದರೆ ಕಳೆದ ಸೀಸನ್‌ನಂತೆ ಐಪಿಎಲ್ 15ನೇ ಸೀಸನ್‌ನಲ್ಲೂ ಅರ್ಜುನ್ ತೆಂಡೂಲ್ಕರ್‌ಗೆ ಅವಕಾಶ ನೀಡದೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು.

ಬೌಲಿಂಗ್ ಕೋಚ್ ಶೇನ್ ಬಾಂಡ್ ಪ್ರತಿಕ್ರಿಯೆ

ಬೌಲಿಂಗ್ ಕೋಚ್ ಶೇನ್ ಬಾಂಡ್ ಪ್ರತಿಕ್ರಿಯೆ

ಐಪಿಎಲ್ ಮುಗಿದ ಒಂದು ವಾರದ ಬಳಿಕ ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್ ಶೇನ್ ಬಾಂಡ್ ಅವರು ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್‌ನ ಪ್ಲೇಯಿಂಗ್ 11ರಲ್ಲಿ ಆಯ್ಕೆ ಮಾಡದಿರುವ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ""ಯುವ ಆಲ್‌ರೌಂಡರ್, ಅವರ ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಇನ್ನೂ ಕೆಲವು ಕೆಲಸಗಳನ್ನು ಮಾಡಬೇಕಾಗಿದೆ,'' ಎಂದು ಹೇಳಿದರು.

2021ರ ಐಪಿಎಲ್ ಹರಾಜಿನಲ್ಲಿ ಅವರನ್ನು ಮುಂಬೈ ಮೂಲದ ಫ್ರಾಂಚೈಸಿ ಖರೀದಿಸಿತು. ಹಿಂದಿನ ಆವೃತ್ತಿಯಲ್ಲಿ ಅರ್ಜುನ್ ಪಂದ್ಯವನ್ನು ಪಡೆಯಲಿಲ್ಲ ಆದರೂ, ಐದು ಬಾರಿಯ ಚಾಂಪಿಯನ್ ಅರ್ಜುನ್ ತೆಂಡೂಲ್ಕರ್ ಅವರನ್ನು ಮತ್ತೆ 2022ರ ತಂಡಕ್ಕೆ ಸೇರಿಸಿಕೊಂಡರು.

ಪ್ಲೇಯಿಂಗ್ 11ಗೆ ಪ್ರವೇಶಿಸುವುದು ಒಂದು ಸಾಹಸ

ಪ್ಲೇಯಿಂಗ್ 11ಗೆ ಪ್ರವೇಶಿಸುವುದು ಒಂದು ಸಾಹಸ

"ಅರ್ಜುನ್ ಇನ್ನೂ ಸ್ವಲ್ಪ ಕೆಲಸ ಮಾಡಬೇಕಿದೆ. ನೀವು ಮುಂಬೈಯಂತಹ ತಂಡಕ್ಕಾಗಿ ಆಡುತ್ತಿರುವಾಗ ತಂಡವನ್ನು ಮಾಡುವುದು ಒಂದು ವಿಷಯ, ಆದರೆ ಪ್ಲೇಯಿಂಗ್ 11ಗೆ ಪ್ರವೇಶಿಸುವುದು ಇನ್ನೊಂದು ವಿಷಯ. ಅವನಿಗೆ ಇನ್ನೂ ಸಾಕಷ್ಟು ಕಠಿಣ ಪರಿಶ್ರಮದ ಅಗತ್ಯ ಇದೆ," ಎಂದು ಶೇನ್ ಬಾಂಡ್ ತಿಳಿಸಿದರು.

"ನೀವು ಮುಂಬೈ ತಂಡದಲ್ಲಿ ಆಡುವಾಗ ಉತ್ತಮ ಮಟ್ಟದಲ್ಲಿ ಆಡಿ ನಿಮ್ಮ ಸ್ಥಾನವನ್ನು ಗಳಿಸಬೇಕು. ತಂಡದಲ್ಲಿ ಸ್ಥಾನ ಪಡೆಯುವ ಮೊದಲು ಅರ್ಜುನ್ ತೆಂಡೂಲ್ಕರ್ ಅವರು ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಕೆಲಸ ಮಾಡಬೇಕಾಗುತ್ತದೆ. ಆಶಾದಾಯಕವಾಗಿ ಅವರು ಆ ಪ್ರಗತಿಯನ್ನು ಸಾಧಿಸಬಹುದು ಮತ್ತು ತಂಡದಲ್ಲಿ ಸ್ಥಾನ ಗಳಿಸಬಹುದು," ಎಂದು ಶೇನ್ ಬಾಂಡ್ ಹೇಳಿದರು.

ಪಂಜಾಬ್ ಕಿಂಗ್ಸ್ ಬೌಲರ್ ಗೆ ಟೀಮ್ ಇಂಡಿಯಾದಲ್ಲಿ ಅವಕಾಶ | OneIndia Kannada
ಸಹ ಆಟಗಾರನ ಸ್ಟಂಪ್‌ಗಳನ್ನು ಬೀಳಿಸಿದ ಅರ್ಜುನ್ ತೆಂಡೂಲ್ಕರ್

ಸಹ ಆಟಗಾರನ ಸ್ಟಂಪ್‌ಗಳನ್ನು ಬೀಳಿಸಿದ ಅರ್ಜುನ್ ತೆಂಡೂಲ್ಕರ್

ಇದಕ್ಕೂ ಮೊದಲು ಮುಂಬೈ ಇಂಡಿಯನ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿತ್ತು. ಇದರಲ್ಲಿ ಅರ್ಜುನ್ ತೆಂಡೂಲ್ಕರ್ ಅವರು ತನ್ನ ಸಹ ಆಟಗಾರನ ಸ್ಟಂಪ್‌ಗಳನ್ನು ಬೀಳಿಸುವುದನ್ನು ಕಾಣಬಹುದು. ಜಹೀರ್ ಖಾನ್ ಅವರು ಜೂನಿಯರ್ ತೆಂಡೂಲ್ಕರ್‌ಗೆ ಕಲಿಯಲು ಸಾಕಷ್ಟು ಹಸಿವನ್ನು ಹೊಂದಿದ್ದಾರೆ ಮತ್ತು ಕೋಚಿಂಗ್ ಸ್ಟಾಫ್‌ನಿಂದ ವಿಷಯಗಳನ್ನು ತ್ವರಿತವಾಗಿ ತೆಗೆದುಕೊಳ್ಳುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅರ್ಜುನ್ ತೆಂಡೂಲ್ಕರ್‌ ಈ ವರ್ಷದ ಜನವರಿಯಲ್ಲಿ ಮುಂಬೈಗಾಗಿ ಆಡುವಾಗ ಹರಿಯಾಣ ವಿರುದ್ಧ ಟಿ20ಗೆ ಪಾದಾರ್ಪಣೆ ಮಾಡಿದ್ದರು ಮತ್ತು ಅವರ ಮುಂದಿನ ಟಿ20 ಪಂದ್ಯವು ಪುದುಚೇರಿ ವಿರುದ್ಧವಾಗಿತ್ತು. ಐಪಿಎಲ್ 2022ರಲ್ಲಿ ಮುಂಬೈ ಇಂಡಿಯನ್ಸ್ ಪಾಯಿಂಟ್ ಟೇಬಲ್‌ನಲ್ಲಿ ಕೊನೆಯ ಸ್ಥಾನದಲ್ಲಿ ಕೊನೆಗೊಳಿಸಿತು.

Story first published: Friday, June 3, 2022, 17:01 [IST]
Other articles published on Jun 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X