T20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಮತ್ತೊಂದು ಆಘಾತ, ದ.ಆಫ್ರಿಕಾ ಸರಣಿಯಿಂದ ದೀಪಕ್ ಚಹಾರ್ ಔಟ್

ಟಿ20 ವಿಶ್ವಕಪ್‌ಗೂ ಮುನ್ನವೇ ಟೀಂ ಇಂಡಿಯಾ ಪ್ರಮುಖ ಆಟಗಾರರೆಲ್ಲಾ ಇಂಜ್ಯುರಿಗೆ ಮನೆ ಸೇರುತ್ತಿರುವುದು ಟೀಂ ಇಂಡಿಯಾ ಮ್ಯಾನೇಜ್‌ಮೆಂಟ್‌ಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಈ ಪಟ್ಟಿಗೆ ಇದೀಗ ಪ್ರಮುಖ ಬೌಲರ್ ದೀಪಕ್ ಚಹಾರ್ ಸೇರ್ಪಡೆಗೊಂಡಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಉಳಿದ ಎರಡು ಏಕದಿನ ಪಂದ್ಯಗಳಿಂದ ಹೊರಬಿದ್ದಿದ್ದಾರೆ.
ಈಗಾಗಲೇ ಟಿ20 ವಿಶ್ವಕಪ್ ಸ್ಕ್ವಾಡ್‌ನಲ್ಲಿ ಸ್ಥಾನ ಪಡೆದಿರುವ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ವಿಶ್ವಕಪ್‌ನಿಂದಲೇ ಹೊರಬಿದ್ದಿದ್ದು, ಅವರ ಸ್ಥಾನದಲ್ಲಿ ಮೊಹಮ್ಮದ್ ಶಮಿಯನ್ನು ಆಯ್ಕೆ ಆಗುವ ಸಾಧ್ಯತೆಯಿದೆ. ಅಕ್ಟೋಬರ್ 15ರೊಳಗೆ ಶಮಿ ಫಿಟ್ ಆಗಿಲ್ಲದೇ ಹೋದಲ್ಲಿ, ದೀಪಕ್ ಚಹಾರ್‌ನನ್ನೇ ಆಯ್ಕೆ ಮಾಡುವ ಸಾಧ್ಯತೆ ಇದೆ. ಇನ್ನು ಆಲ್‌ರೌಂಡರ್ ರವೀಂದ್ರ ಜಡೇಜಾ ತಾನೇ ಮಾಡಿಕೊಂಡ ಗಾಯದಿಂದ ಶಸ್ತ್ರಚಿಕಿತ್ಸೆ ಮುಗಿಸಿ ಚೇತರಿಕೆ ಪಡೆಯುತ್ತಿರುವಾಗಲೇ ಸ್ಟ್ಯಾಂಡ್ ಬೈ ಬೌಲರ್ ಆಗಿದ್ದ ದೀಪಕ್ ಚಹಾರ್ ಗಾಯಗೊಂಡಿರುವುದು ಭಾರತದ ತಲೆ ನೋವು ಹೆಚ್ಚಿಸಿದೆ.

ಇದ್ದಕ್ಕಿದ್ದಂತೆ ದೀಪಕ್ ಚಹಾರ್‌ಗೆ ಏನಾಯಿತು?
ಬಿಸಿಸಿಐ ಮೂಲಗಳ ಪ್ರಕಾರ ದೀಪಕ್ ಚಹಾರ್‌ಗೆ ಬೆನ್ನು ನೋವು ಕಾಣಿಸಿಕೊಂಡಿದ್ದು, ಜೊತೆಗೆ ಆ್ಯಂಕಲ್ ಟ್ವಿಸ್ಟ್ ಆಗಿರುವ ಕಾರಣ ಅವರು ಉಳಿದ ಎರಡು ಪಂದ್ಯಗಳಿಂದ ಹೊರಬಿದ್ದಿದ್ದಾರೆ. ಈಗಾಗಲೇ ಅವರು ಬೆಂಗಳೂರಿನ ಎನ್‌ಸಿಎ ಶಿಬಿರಕ್ಕೆ ತೆರಳಿದ್ದು, ಅಕ್ಟೋಬರ್ 16ರಂದು ಮೊಹಮ್ಮದ್ ಶಮಿ ಜೊತೆಗೆ ಆಸ್ಟ್ರೇಲಿಯಾಗೆ ಹೋಗುವ ಸಾಧ್ಯತೆ ಇದೆ. ಆದ್ರೆ ಅವರು ಎಷ್ಟು ಪ್ರಮಾಣದಲ್ಲಿ ಫಿಟ್ ಆಗಿರುತ್ತಾರೆ ಎಂಬುದರ ಆಧಾರದ ಮೇಲೆ ಆಸ್ಟ್ರೇಲಿಯಾ ಫ್ಲೈಟ್ ಹತ್ತಲಿದ್ದಾರೆ.

ಇತ್ತೀಚೆಗಷ್ಟೇ ಟೀಂ ಇಂಡಿಯಾಗೆ ಕಂಬ್ಯಾಕ್ ಮಾಡಿದ್ದ ದೀಪಕ್ ಚಹಾರ್
ಹೌದು, ದೀಪಕ್ ಚಹಾರ್ ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಟೀಂ ಇಂಡಿಯಾಕ್ಕೆ ಮರಳಿದ್ರು. ಇದಕ್ಕೂ ಮುನ್ನ ದೀರ್ಘಕಾಲ ಇಂಜ್ಯುರಿಯಿಂದ ಬಳಲಿದ್ದ ಈ ಬೌಲರ್ ಐಪಿಎಲ್ 2022ರ ಸೀಸನ್ ಕಳೆದುಕೊಂಡ್ರು. ಜೊತೆಗೆ ಏಷ್ಯಾಕಪ್‌ನಲ್ಲಿ ಆಡುವ ಅವಕಾಶ ವಂಚಿತರಾದ್ರು.
ಜಿಂಬಾಬ್ವೆ ವಿರುದ್ಧ ಏಕದಿನ ಸರಣಿಯಲ್ಲಿ ಸ್ಥಾನ ಪಡೆದ್ರೂ ಸಹ ಮೊದಲ ಏಕದಿನ ಪಂದ್ಯವನ್ನಾಡಿದ ಬಳಿಕ ಮತ್ತೆ ತಂಡದಲ್ಲಿ ಅವಕಾಶ ಪಡೆಯದೇ ಹೊರಬಿದ್ರು. ಇದಾದ ಬಳಿಕ ದೀಪಕ್ ಚಹಾರ್ ಆಡಿದ್ದು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ. ಮೊದಲ ಟಿ20 ಪಂದ್ಯದಲ್ಲಿ 24ರನ್‌ಗೆ 2 ವಿಕೆಟ್ ಪಡೆದಿದ್ದ ದೀಪಕ್, ಎರಡನೇ ಟಿ20 ಪಂದ್ಯದಲ್ಲಿ ಅದೇ 24ರನ್ ನೀಡಿ ಯಾವುದೇ ವಿಕೆಟ್ ಪಡೆಯಲಿಲ್ಲ. ಇನ್ನು ಅಂತಿಮ ಹಾಗೂ ಮೂರನೇ ಟಿ20 ಪಂದ್ಯದಲ್ಲಿ 48ರನ್ ನೀಡಿ 1 ವಿಕೆಟ್ ಪಡೆದು ದುಬಾರಿ ಬೌಲರ್ ಆಗಿ ಗುರುತಿಸಿಕೊಂಡ್ರು.
'ಈತನನ್ನು ದೇವರೇ ಕಳಿಸಿದ್ದಾನೆ': ಟಿಮ್ ಡೇವಿಡ್ ಕುರಿತು ಡೇವಿಡ್ ವಾರ್ನರ್ ಶಾಕಿಂಗ್ ಹೇಳಿಕೆ!

ದೀಪಕ್ ಚಹಾರ್ ಬದಲು ಶಹಬಾಜ್ ಅಹ್ಮದ್‌ಗೆ ಅವಕಾಶ ಸಾಧ್ಯತೆ
ದೀಪಕ್ ಚಹಾರ್ ಎರಡು ಪಂದ್ಯಗಳಿಗೆ ಅಲಭ್ಯ ಹಿನ್ನಲೆಯಲ್ಲಿ ರಾಂಚಿಯಲ್ಲಿ ಭಾನುವಾರ ನಡೆಯಲಿರುವ ಎರಡನೇ ಏಕದಿನ ಪಂದ್ಯದಲ್ಲಿ ಆಲ್‌ರೌಂಡರ್ ಶಹಬಾಜ್ ಅಹ್ಮದ್‌ಗೆ ಚೊಚ್ಚಲ ಏಕದಿನ ಪಂದ್ಯವನ್ನಾಡುವ ಅವಕಾಶ ಪಡೆಯುವ ಸಾಧ್ಯತೆಯಿದೆ. ಆರ್‌ಸಿಬಿ ಪರ ಆಲ್‌ರೌಂಡರ್ ಆಗಿ ಮಿಂಚಿರುವ ಶಹಬಾಜ್ ಅಹ್ಮದ್‌ಗೆ ಪ್ರಸಕ್ತ ಏಕದಿನ ಸರಣಿಯಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ಸ್ಕ್ವಾಡ್‌ನಲ್ಲಿ ಅವಕಾಶ ಪಡೆದರು.
IND vs SA ODI: ಟೀಂ ಇಂಡಿಯಾ ಅತ್ಯಂತ ಉತ್ತಮವಾಗಿದೆ ಎಂದು ಹೊಗಳಿದ ಪಾಕಿಸ್ತಾನ ಮಾಜಿ ಬ್ಯಾಟರ್

ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಒಡಿಐ ಸ್ಕ್ವಾಡ್
ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಜತ್ ಪಾಟೀದಾರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್‌ಗೆ, ಶಾರ್ದೂಲ್ ಠಾಕೂರ್, ಕುಲ್‌ದೀಪ್ ಯಾದವ್, ರವಿ ಬಿಷ್ಣೋಯಿ, ಮುಕೇಶ್ ಕುಮಾರ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications