ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IND vs SA ODI: ಟೀಂ ಇಂಡಿಯಾ ಅತ್ಯಂತ ಉತ್ತಮವಾಗಿದೆ ಎಂದು ಹೊಗಳಿದ ಪಾಕಿಸ್ತಾನ ಮಾಜಿ ಬ್ಯಾಟರ್

Pakistan Former Cricketer Kamran Akmal Praises Team India Bench Strength

ಪಾಕಿಸ್ತಾನದ ಕೀಪರ್-ಬ್ಯಾಟರ್ ಕಮ್ರಾನ್ ಅಕ್ಮಲ್ ಭಾರತವು ತಮ್ಮ ಆಟಗಾರರಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿಯಮಿತವಾಗಿ ಅವಕಾಶಗಳನ್ನು ನೀಡುವ ಮೂಲಕ ಅವರನ್ನು ಉತ್ತಮ ಆಟಗಾರರನ್ನಾಗಿ ಮಾಡಿತ್ತಿದೆ ಎಂದು ಶ್ಲಾಘಿಸಿದ್ದಾರೆ.

ಟೀಂ ಇಂಡಿಯಾ ಎರಡು ಪ್ರತ್ಯೇಕ ತಂಡಗಳನ್ನು ಅತ್ಯುನ್ನತ ಮಟ್ಟದಲ್ಲಿ ಕಣಕ್ಕಿಳಿಸುವಷ್ಟು ಬಲವಾದ ಬೆಂಚ್ ಶಕ್ತಿಯನ್ನು ಸೃಷ್ಟಿಸಿದ್ದಾರೆ ಎಂದು ಕಮ್ರಾನ್ ಅಕ್ಮಲ್ ಹೇಳಿದ್ದಾರೆ. ಟಿ20 ವಿಶ್ವಕಪ್ 2022 ಗಾಗಿ ಆಸ್ಟ್ರೇಲಿಯಕ್ಕೆ ಎಲ್ಲಾ ಪ್ರಮುಖ ಆಟಗಾರರು ತೆರಳಿದ್ದರೂ ಸಹ ಆತಿಥೇಯರು ಏಕದಿನ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಹೇಗೆ ಸ್ಪರ್ಧಿಸುತ್ತಿದ್ದಾರೆ ಎನ್ನುವುದರ ಬಗ್ಗೆ ಅಕ್ಮಲ್ ಮಾತನಾಡಿದ್ದಾರೆ.

ಬೂಮ್ರಾಗೆ ಈತನೇ ಸೂಕ್ತ ಬದಲಿ ಆಟಗಾರ: ಆಸಿಸ್ ನೆಲದಲ್ಲಿ ಮಿಂಚಬಲ್ಲ ವೇಗಿಯನ್ನು ಹೆಸರಿಸಿದ ರವಿ ಶಾಸ್ತ್ರಿಬೂಮ್ರಾಗೆ ಈತನೇ ಸೂಕ್ತ ಬದಲಿ ಆಟಗಾರ: ಆಸಿಸ್ ನೆಲದಲ್ಲಿ ಮಿಂಚಬಲ್ಲ ವೇಗಿಯನ್ನು ಹೆಸರಿಸಿದ ರವಿ ಶಾಸ್ತ್ರಿ

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಆತಿಥೇಯ ತಂಡವು ಎರಡನೇ ಸರಣಿಯ ತಂಡವನ್ನು ಹೆಸರಿಸಿದೆ. ಶಿಖರ್ ಧವನ್ ಅವರನ್ನು ನಾಯಕರನ್ನಾಗಿ ನೇಮಕ ಮಾಡಲಾಗಿದ್ದು, ಶ್ರೇಯಸ್ ಅಯ್ಯರ್ ಅವರ ಉಪನಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ರೋಹಿತ್ ಶರ್ಮಾ, ಇತರ ಟಿ20 ವಿಶ್ವಕಪ್-ಬೌಂಡ್ ಆಟಗಾರರೊಂದಿಗೆ, ವಿಶ್ವಕಪ್‌ ಟೂರ್ನಿಗೆ ಮುಂಚಿತವಾಗಿ ಆಸ್ಟ್ರೇಲಿಯಾವನ್ನು ತಲುಪಿದ್ದಾರೆ ಮತ್ತು ಅಭ್ಯಾಸ ಆಟಗಳೊಂದಿಗೆ ಶೀಘ್ರದಲ್ಲೇ ತಮ್ಮ ಸಿದ್ಧತೆಗಳನ್ನು ಪ್ರಾರಂಭಿಸುತ್ತಾರೆ.

ಉತ್ತಮ ಗುಣಮಟ್ಟದ ಆಟಗಾರರನ್ನು ಹೊಂದಿದೆ

ಉತ್ತಮ ಗುಣಮಟ್ಟದ ಆಟಗಾರರನ್ನು ಹೊಂದಿದೆ

ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಕ್ಮಲ್, "ಭಾರತಕ್ಕೆ ಎರಡು ತಂಡಗಳು ಸಿದ್ಧವಾಗಿರುವುದು ಉತ್ತಮ ಸಂಕೇತವಾಗಿದೆ. ಒಂದು ತಂಡವು ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಸರಣಿಯನ್ನು ಆಡುತ್ತಿದೆ, ಮತ್ತು ಇನ್ನೊಂದು ತಂಡವು ಟಿ 20 ವಿಶ್ವಕಪ್‌ಗಾಗಿ ಆಸ್ಟ್ರೇಲಿಯಾವನ್ನು ತಲುಪಿದೆ." ಎಂದು ಹೇಳಿದ್ದಾರೆ.

"ಇದು ಕೇವಲ ವೈಟ್-ಬಾಲ್ ಕ್ರಿಕೆಟ್ ಅಲ್ಲ, ಅವರು ಟೆಸ್ಟ್ ಕ್ರಿಕೆಟ್‌ಗೂ ಸಿದ್ಧ ಆಟಗಾರರನ್ನು ಹೊಂದಿದ್ದಾರೆ. ಅವರು ಉತ್ತಮ ನೀತಿಯನ್ನು ಹೊಂದಿದ್ದಾರೆ ಮತ್ತು ಅವರ ದೇಶೀಯ ವ್ಯವಸ್ಥೆಗೆ ನಾವು ಮನ್ನಣೆ ನೀಡಬೇಕು. ಅವರು ಎಷ್ಟು ದೊಡ್ಡ ಪ್ರತಿಭೆ ಗುಂಪನ್ನು ರಚಿಸಿ, ನಿರ್ವಹಿಸಿದ್ದಾರೆ ಎಂಬುದನ್ನು ನೋಡಿದರೆ ಆಶ್ಚರ್ಯವಾಗುತ್ತದೆ." ಎಂದು ಅಕ್ಮಲ್ ಹೇಳಿದ್ದಾರೆ.

IND vs SA ODI: ದೀಪಕ್ ಚಾಹರ್ ಗಾಯದ ಸಮಸ್ಯೆ: ಉಳಿದ ಎರಡು ಪಂದ್ಯಗಳಿಗೆ ಅಲಭ್ಯವಾಗುವ ಸಾಧ್ಯತೆ

ಮುಖ್ಯ ಆಟಗಾರರಿದ್ದರೆ ಗೆಲ್ಲುವ ಅವಕಾಶ ಇತ್ತು

ಮುಖ್ಯ ಆಟಗಾರರಿದ್ದರೆ ಗೆಲ್ಲುವ ಅವಕಾಶ ಇತ್ತು

ದಕ್ಷಿಣ ಆಫ್ರಿಕಾ ವಿರುದ್ಧ 9 ರನ್‌ಗಳ ಸೋತ ಬಗ್ಗೆ ಮಾತನಾಡಿರುವ ಕಮ್ರಾನ್ ಅಕ್ಮಲ್, ಭಾರತದ ಎರಡನೇ ಸ್ಟ್ರಿಂಗ್ ತಂಡವು ದಕ್ಷಿಣ ಆಫ್ರಿಕಾದ ಪೂರ್ಣ ಶಕ್ತಿ ತಂಡಕ್ಕೆ ಕಠಿಣ ಸ್ಪರ್ಧೆಯನ್ನು ನೀಡಿತು ಎಂದು ಹೇಳಿದರು.

ಮಳೆಯಿಂದ ಮೊಟಕುಗೊಳಿಸಿದ 40 ಓವರ್‌ಗಳ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ 249 ರನ್‌ಗಳ ಮೊತ್ತವನ್ನು ಬೆನ್ನಟ್ಟಲು ಆತಿಥೇಯರು ವಿಫಲರಾದರು. ಆದಾಗ್ಯೂ, ಭಾರತ ತಂಡದಲ್ಲಿ ಪ್ರಮುಖ ಆಟಗಾರರು ಇದ್ದಿದ್ದರೆ ಪಂದ್ಯದಲ್ಲಿ ಗೆಲುವು ಸಾಧಿಸುತ್ತಿದ್ದರು ಎಂದು ಅಕ್ಮಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾಗೆ ಕಠಿಣ ಸ್ಪರ್ಧೆ ನೀಡಿದರು

ದಕ್ಷಿಣ ಆಫ್ರಿಕಾಗೆ ಕಠಿಣ ಸ್ಪರ್ಧೆ ನೀಡಿದರು

"ದಕ್ಷಿಣ ಆಫ್ರಿಕಾವು ಒಂಬತ್ತು ರನ್‌ಗಳಿಂದ ಪಂದ್ಯವನ್ನು ಗೆದ್ದಿತು. ಪಂದ್ಯವನ್ನು ಗೆಲ್ಲುವುದು ದಕ್ಷಿಣ ಆಫ್ರಿಕಾ ತಂಡಕ್ಕೆ ಸುಲಭವಾಗಿರಲಿಲ್ಲ. ಮಳೆಯಿಂದಾಗಿ ಪರಿಸ್ಥಿತಿಗಳು ಕಷ್ಟಕರವಾಗಿದ್ದವು. ಅವರು ತಮ್ಮ ಪೂರ್ಣ ಸಾಮರ್ಥ್ಯದ ತಂಡವನ್ನು ಹೊಂದಿರುವುದರಿಂದ ಮತ್ತು ಅವರ ಎಲ್ಲಾ ಪ್ರಮುಖ ಆಟಗಾರರು ಸರಣಿಯಲ್ಲಿ ಆಡುತ್ತಿರುವುದರಿಂದ ಅವರು ಗೆಲ್ಲಲು ಸಾಧ್ಯವಾಯಿತು" ಎಂದು ಹೇಳಿದ್ದಾರೆ.

"ಅವರು ಭಾರತದ ಎರಡನೇ ತಂಡದ ವಿರುದ್ಧ ಸೆಣಸಾಡುತ್ತಿದ್ದಾಗ, ಭಾರತದ ಪ್ರಮುಖ ತಂಡದ ವಿರುದ್ಧದಂತೆಯೇ ಗೆಲುವಿಗಾಗಿ ತುಂಬಾ ಶ್ರಮಿಸಬೇಕಾಗಿತ್ತು. ಭಾರತದ ಪ್ರಮುಖ ಆಟಗಾರರು ಅಲ್ಲಿದ್ದರೆ, ಅವರು ಈ ಗುರಿಯನ್ನು ಬೆನ್ನಟ್ಟುತ್ತಿದ್ದರು" ಎಂದು ಹೇಳಿದರು.

ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ನಡೆಯಲಿರುವ ಸರಣಿಯ ಎರಡನೇ ಏಕದಿನ ಪಂದ್ಯ ಭಾನುವಾರ, ಅಕ್ಟೋಬರ್ 9 ರಂದು ನಡೆಯಲಿದೆ.

Story first published: Friday, October 7, 2022, 23:19 [IST]
Other articles published on Oct 7, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X