ಭಾರತ ವಿರುದ್ಧದ ಏಕದಿನ ಸರಣಿಗೆ ದಕ್ಷಿಣ ಆಫ್ರಿಕಾ ತಂಡ ಘೋಷಣೆ: ಮಾರ್ಕೊ ಜಾನ್ಸೆನ್ ಅವಕಾಶ
ಟೆಸ್ಟ್ ಸರಣಿಯಲ್ಲಿ ಈಗಾಗಲೇ 1-0 ಅಂತರದಲ್ಲಿ ಮುನ್ನಡೆ ಸಾಧಿಸಿರುವ ಟೀಂ ಇಂಡಿಯಾ ವಿರುದ್ಧ ಮುಂಬರುವ ಏಕದಿನ ಸರಣಿಯ ಹಣಾಹಣಿಗೆ ದಕ್ಷಿಣ ಆಫ್ರಿಕಾ ತಂಡವನ್ನ ಪ್ರಕಟಿಸಿದೆ. 17 ಸದಸ್ಯರನ್ನೊಳಗೊಂಡ ತಂಡವನ್ನ ಪ್ರಕಟಿಸಿರುವ ಸಿಎಸ್‌ಎ ಬ್ಯಾಟ್ಸ್‌ಮನ್ ಟೆಂಬಾ ಬವುಮಾಗೆ ನಾಯಕತ್ವ ಪಟ್ಟ ಕಟ್ಟಿದೆ.
ಪ್ರವಾಸಿ ಭಾರತ ತಂಡವು ಸೆಂಚುರಿಯನ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಈಗಾಗಲೇ ಐತಿಹಾಸಿಕ ಗೆಲುವು ಸಾಧಿಸಿ ಆತಿಥೇಯರಿಗೆ ಶಾಕ್ ನೀಡಿದೆ. ಇದರ ನಡುವೆ ಇಂದಿನಿಂದ ವಾಂಡರರ್ಸ್ ಮೈದಾನದಲ್ಲಿ ಉಭಯ ತಂಡಗಳು ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿವೆ.
ದಕ್ಷಿಣ ಆಫ್ರಿಕಾದ ಗೆಲುವಿನ ಪಿಚ್ ಆಗಿದ್ದ ಸೆಂಚುರಿಯನ್ ಅಂಗಳದಲ್ಲಿ ಯಾವೊಂದು ಏಷ್ಯಾ ತಂಡವು ಮಾಡದ ಸಾಧನೆಯನ್ನ ವಿರಾಟ್ ಕೊಹ್ಲಿ ಟೀಂ ಮಾಡಿದ್ದು, ಮೊದಲ ಟೆಸ್ಟ ಪಂದ್ಯದ ಗೆಲುವಿನ ಮೂಲಕ ತನ್ನ ಸಾಮರ್ಥ್ಯ ಪ್ರದರ್ಶಿಸಿದೆ. ಹೀಗಾಗಿ ಕ್ರಿಕೆಟ್ ಸೌತ್ ಆಫ್ರಿಕಾ ಮುಂಬರುವ ಏಕದಿನ ಸರಣಿಗೂ ಬಲಿಷ್ಠ ತಂಡದ ಆಯ್ಕೆಯನ್ನ ಮಾಡಿದ್ದು, ಗಾಯಾಳು ಕೊರತೆ ಜೊತೆಗೆ ಅನುಭವಿಗಳ ಕೊರತೆ ದಕ್ಷಿಣ ಆಫ್ರಿಕಾಗೆ ಕಾಡಿದೆ.

ಏಕದಿನ ಸರಣಿಯಲ್ಲೂ ಆಡೋದಿಲ್ಲ ಅನ್ರಿಚ್ ನಾರ್ಟ್ಜೆ
ಈಗಾಗಲೇ ಗಾಯಾಳುವಾಗಿ ಭಾರತ ವಿರುದ್ಧದ ಟೆಸ್ಟ್ ಸರಣಿಗೆ ಅಲಭ್ಯರಾಗಿರುವ ಪ್ರಮುಖ ವೇಗದ ಬೌಲರ್ ಅನ್ರಿಚ್ ನಾರ್ಟ್ಜೆ, ದಕ್ಷಿಣ ಆಫ್ರಿಕಾದ 17 ಸದಸ್ಯರ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಅನ್ರಿಚ್ ತಮ್ಮ ಗಾಯದಿಂದ ಇನ್ನೂ ಚೇತರಿಸಿಕೊಳ್ಳುತ್ತಿದ್ದು, ಟೆಸ್ಟ್ ಸರಣಿಯಂತೆ ಏಕದಿನ ಸರಣಿಗೂ ಭಾಗವಹಿಸುತ್ತಿಲ್ಲ ಎಂದು ಸಿಎಸ್‌ಕೆ ತಿಳಿಸಿದೆ.
ಭಾರತ vs ದ. ಆಫ್ರಿಕಾ: 2ನೇ ಟೆಸ್ಟ್ ಪಂದ್ಯ: ವಾಂಡರರ್ಸ್ ಪಿಚ್ ರಿಪೋರ್ಟ್, ದಾಖಲೆ, ಹವಾಮಾನ ವರದಿ

ಟೆಂಬಾ ಬವುಮಾಗೆ ನಾಯಕತ್ವ
ದಕ್ಷಿಣ ಆಫ್ರಿಕಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಟೆಂಬಾ ಬವುಮಾ ದಕ್ಷಿಣ ಆಫ್ರಿಕಾ ಏಕದಿನ ಫಾರ್ಮೆಟ್‌ನಲ್ಲಿ ತಂಡವನ್ನ ಮುನ್ನಡೆಸಲಿದ್ದಾರೆ.. ಯುವಕರನ್ನ ಒಳಗೊಂಡ ಹೊಸ ತಂಡದ ಜೊತೆಗೆ ಟೆಂಬಾ ಬವುಮಾ ನಾಯಕತ್ವವು ದಕ್ಷಿಣ ಆಫ್ರಿಕಾ ತಂಡಕ್ಕೆ ಹೊಸ ಹುರುಪು ನೀಡಿದೆ. ದಕ್ಷಿಣ ಆಫ್ರಿಕಾದ ಕೋಚ್ ಮಾರ್ಕ್ ಬೌಚರ್ ಮತ್ತು ಟೆಂಬಾ ಬವುಮಾ ಕಾಂಬಿನೇಷನ್‌ನಲ್ಲಿ ಹರಿಣಗಳ ಪ್ರದರ್ಶನ ಹೇಗಿರಲಿದೆ ಎಂಬುದು ಕುತೂಹಲಕ್ಕೆ ಎಡೆಮಾಡಿದೆ.
ಭಾರತ vs ದ. ಆಫ್ರಿಕಾ: ನೆಚ್ಚಿನ ಕ್ರೀಡಾಂಗಣದಲ್ಲಿ ದಾಖಲೆ ಬರೆಯಲು ವಿರಾಟ್ ಕೊಹ್ಲಿ ಸಜ್ಜು

ದಕ್ಷಿಣ ಆಫ್ರಿಕಾ ತಂಡದಲ್ಲಿನ ಪ್ರಮುಖ ಬದಲಾವಣೆಗಳು
ಕೋವಿಡ್-19 ರೂಪಾಂತರ ಓಮಿಕ್ರಾನ್ ಸ್ಫೋಟಕದಿಂದಾಗಿ ಮೊಟಕುಗೊಂಡಿದ್ದ ನೆದರ್ಲೆಂಡ್ಸ್ ವಿರುದ್ಧದ ಏಕದಿನ ಸರಣಿಯಲ್ಲಿ ಆಯ್ಕೆಗೊಂಡಿದ್ದ ವೇಯ್ನ್ ಪಾರ್ನೆಲ್, ರಿಯಾನ್ ರಿಕೆಲ್ಟನ್, ಸಿಸಂಡಾ ಮಗಾಲಾ ಮತ್ತು ಜುಬೇರ್ ಹಮ್ಜಾ ತಂಡದಲ್ಲಿ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಆಲ್ರೌಂಡರ್ ಡ್ವೈನ್ ಪ್ರಿಟೋರಿಯಸ್ ತಂಡಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಜೊತೆಗೆ ಚೊಚ್ಚಲ ಟೆಸ್ಟ್ ಪಂದ್ಯವನ್ನಾಡಿದ ಮಾರ್ಕೊ ಜಾನ್ಸೆನ್‌ಗೆ ಏಕದಿನ ತಂಡದಲ್ಲಿ ಮೊದಲ ಬಾರಿಗೆ ಅವಕಾಶ ನೀಡಲಾಗಿದೆ.
ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ICC ಕ್ರಿಕೆಟ್ ವಿಶ್ವಕಪ್ ಸೂಪರ್ ಲೀಗ್‌ನ ಭಾಗವಾಗಿದೆ. ಭಾರತ 49 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ 39 ಅಂಕಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ. ಪ್ರತಿ ತಂಡವು ಪಂದ್ಯ ಗೆದ್ದಿದ್ದಕ್ಕಾಗಿ ಹತ್ತು ಅಂಕಗಳನ್ನು ಪಡೆಯುತ್ತದೆ. ಒಂದು ವೇಳೆ ಪಂದ್ಯ ಟೈ ಅಥವಾ ಯಾವುದೇ ಫಲಿತಾಂಶ ಬರದಿದ್ದರೆ ಐದು ಅಂಕಗಳನ್ನ ನೀಡಲಾಗುತ್ತದೆ.

ದಕ್ಷಿಣ ಆಫ್ರಿಕಾದ ಏಕದಿನ ಫಾರ್ಮೆಟ್ ಸ್ಕ್ವಾಡ್
ತೆಂಬಾ ಬವುಮಾ (ನಾಯಕ), ಕೇಶವ್ ಮಹಾರಾಜ್ (ಉಪನಾಯಕ), ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಜುಬೇರ್ ಹಮ್ಜಾ, ಮಾರ್ಕೊ ಜಾನ್ಸೆನ್, ಜಾನ್ನೆಮನ್ ಮಲನ್, ಸಿಸಂದಾ ಮಾಗಲಾ, ಏಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ವೇಯ್ನ್ ಪಾರ್ನೆಲ್, ಆಂಡಿಲೆ ಫೆಹ್ಲುಕ್ವೇಟೋರಿಯಸ್, ಪ್ರೀನೆಟೋರಿಯಸ್ , ಕಗಿಸೊ ರಬಾಡ, ತಬ್ರೈಜ್ ಶಮ್ಸಿ, ರಾಸ್ಸಿ ವಾನ್ ಡೆರ್ ಡಸ್ಸೆನ್ ಮತ್ತು ಕೈಲ್ ವೆರ್ರೆನ್ನೆ.

ದಕ್ಷಿಣ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಏಕದಿನ ತಂಡ:
ಕೆ.ಎಲ್ ರಾಹುಲ್ (ಸಿ), ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಇಶನ್ ಕಿಶನ್ (ವಿಕೆಟ್ ಕೀಪರ್), ಯುಜವೇಂದ್ರ ಚಾಹಲ್, ಆರ್. ಅಶ್ವಿನ್, ವಾಷಿಂಗ್ಟನ್ ಸುಂದರ್, ಜಸ್ಪ್ರೀತ್ ಬುಮ್ರಾ (ಉಪನಾಯಕ) , ಭುವನೇಶ್ವರ್ ಕುಮಾರ್, ದೀಪಕ್ ಚಹಾರ್, ಪ್ರಸಿದ್ಧ ಕೃಷ್ಣ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್

ಏಕದಿನ ಸರಣಿ ವೇಳಾಪಟ್ಟಿ
ಭಾರತವು ಮೂರು ಏಕದಿನ ಪಂದ್ಯಗಳನ್ನು ಸಹ ಆಡುತ್ತದೆ. ಆದರೆ ಬಿಸಿಸಿಐ ಮೊದಲೇ ಘೋಷಿಸಿದಂತೆ ನಾಲ್ಕು ಪಂದ್ಯಗಳ ಟಿ20 ಸರಣಿಯನ್ನು ಮತ್ತೆ ನಿಗದಿಪಡಿಸಲಾಗುತ್ತದೆ.
ಮೊದಲ ಏಕದಿನ: ಜನವರಿ 19 , ಬೆಟ್ವೇ, ಸಮಯ - 2.00 PM
ಎರಡನೇ ಏಕದಿನ: ಜನವರಿ 21, ಪಾರ್ಕ್, ಪಾರ್ಲ್, ಸಮಯ - 2.00 PM
ಮೂರನೇ ಏಕದಿನ: ಜನವರಿ 23, ನ್ಯೂಲ್ಯಾಂಡ್ಸ್, ಕೇಪ್ ಟೌನ್, ಸಮಯ - 2.00 PM
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications