Ind vs SA 1st T20: ಮೊಹಮ್ಮದ್ ಶಮಿ ಅಲಭ್ಯ? ಉಮ್ರಾನ್ ಮಲಿಕ್‌ಗೆ ಅವಕಾಶ!

ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ವಶಪಡಿಸಿಕೊಂಡ ಬಳಿಕ ಟೀಂ ಇಂಡಿಯಾ ಮತ್ತೊಂದು ಟಿ20 ಸರಣಿಗೆ ಸಜ್ಜಾಗಿದ್ದು, ಹರಿಣಗಳ ವಿರುದ್ಧ ಮೂರು ಚುಟುಕು ಪಂದ್ಯಗಳಲ್ಲಿ ಭಾರತ ಕಣಕ್ಕಿಳಿಯಲಿದೆ. ಟಿ20 ವಿಶ್ವಕಪ್‌ಗೂ ಮುನ್ನ ಭಾರತ ಆಡಲಿರುವ ಕೊನೆಯ ಸರಣಿ ಇದಾಗಿರೋದ್ರಿಂದ ಆಟಗಾರರಿಗೆ ಉತ್ತಮ ಅಭ್ಯಾಸ ಸಿಗಲಿದೆ.
ಟಿ20 ವಿಶ್ವಕಪ್ ಸರಣಿಗೆ ಭಾರತ ತಂಡದಲ್ಲಿ ಅನಿರೀಕ್ಷಿತ ಹೊಸ ಆಟಗಾರ ಸೇರ್ಪಡೆಯಾಗಲಿದ್ದಾರೆ ಎಂದು ವರದಿಯಾಗಿದೆ. ಏಕೆಂದರೆ ಅಸಾಧಾರಣ ಬ್ಯಾಟಿಂಗ್ ಲೈನ್ ಅಪ್ ಇದ್ದರೂ ಭಾರತ ತಂಡದ ಬೌಲಿಂಗ್ ಮಾತ್ರ ಇನ್ನೂ ಕಳಪೆಯಾಗಿದೆ.

ಡೆತ್ ಓವರ್‌ಗಳಲ್ಲಿ ಮುಗಿಯದ ಸಮಸ್ಯೆ
ಕೊನೆಯ ಕೆಲವು ಓವರ್‌ಗಳಲ್ಲಿ ಭುವನೇಶ್ವರ್ ಕುಮಾರ್ ರನ್ ನೀಡುತ್ತಿದ್ದಾರೆ ಎಂಬ ದೂರುಗಳು ಬಂದಿದ್ದವು. ಆದರೆ ಗಾಯದಿಂದ ಚೇತರಿಸಿಕೊಂಡಿರುವ ಬೌಲರ್‌ಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಹೆಚ್ಚಿನ ಪ್ರಭಾವ ಬೀರಲಿಲ್ಲ. ಆಸ್ಟ್ರೇಲಿಯ ವಿರುದ್ಧದ 3ನೇ ಟಿ20ಯಲ್ಲೂ 117 ರನ್‌ಗೆ 6 ವಿಕೆಟ್ ಕಳೆದುಕೊಂಡಿದ್ದ ಭಾರತ, ನಂತರ 185 ರನ್ ಗಳಿಸಿತು.
ಇದು ಡೆತ್ ಓವರ್‌ಗಳಲ್ಲಿ ಟೀಂ ಇಂಡಿಯಾದ ಪ್ರಮುಖ ಸಮಸ್ಯೆಯನ್ನ ಎತ್ತಿ ತೋರಿಸುತ್ತಿದೆ. ಬುಮ್ರಾ ಮತ್ತು ಹರ್ಷಲ್ ಬಂದ್ರೂ ಸಹ ಅಂತಿಮ ಓವರ್‌ಗಳಲ್ಲಿ ರನ್ ಬಿಟ್ಟುಕೊಡುವುದರ ಜೊತೆಗೆ ವಿಕೆಟ್ ಪಡೆಯುವಲ್ಲಿ ಬೌಲರ್‌ಗಳು ಎಡವಿದ್ದಾರೆ.
Ind vs SA 1st T20: ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ 11, ಸವಾಲುಗಳು

ಟಿ20 ವಿಶ್ವಕಪ್‌ಗೆ ಫಿಟ್ ಆಗಿರಲು ಶಮಿಗೆ ಸೂಚನೆ
ಟೀ ಇಂಡಿಯಾ ಪ್ರಮುಖ ಬೌಲರ್‌ಗಳೇ ಹೀಗೆ ಆಡುತ್ತಿರುವ ಹಿನ್ನೆಲೆಯಲ್ಲಿ ಮೊಹಮ್ಮದ್ ಶಮಿಗೆ ಸ್ಕ್ವಾಡ್‌ನಲ್ಲಿ ಅವಕಾಶ ನೀಡುವ ಕುರಿತಾಗಿ ಬಿಸಿಸಿಐ ಆಟಗಾರರ ಆಯ್ಕೆ ಸಮಿತಿ ಸಮಾಲೋಚನೆ ನಡೆಸುತ್ತಿದೆ. ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಶಮಿ ಫಿಟ್ ಆಗಲಿದ್ದಾರೆ. ಇದಕ್ಕಾಗಿ ಅವರು ಬ್ಯಾಕ್ ಅಪ್ ಆಟಗಾರರಾಗಿ ಆಯ್ಕೆಯಾದರು. ಆದರೆ ಆಸ್ಟ್ರೇಲಿಯಾ ಸರಣಿಗೂ ಮುನ್ನ ಕೊರೊನಾ ಸೋಂಕಿಗೆ ಒಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಸೋಲಿಗೆ ಪ್ರಮುಖ ಕಾರಣ ತಿಳಿಸಿದ ಆ್ಯರೋನ್ ಫಿಂಚ್

ಉಮ್ರಾನ್ ಮಲಿಕ್ ಸೇರ್ಪಡೆ ಸಾಧ್ಯತೆ
ಮುಂದಿನ ದಕ್ಷಿಣ ಆಫ್ರಿಕಾ ಸರಣಿಯ ವೇಳೆಗೆ ಸಂಪೂರ್ಣ ಫಿಟ್ ಆಗಿದ್ದರೆ ಮಾತ್ರ ಶಮಿ ಟಿ20 ವಿಶ್ವಕಪ್‌ಗೆ ಹೋಗಬಹುದು. ಆದರೆ ಆತನಿಗೆ ತಯಾರಾಗಲು ಇನ್ನೂ ಹಲವು ದಿನಗಳು ಬೇಕಾಗುವಂತಿದೆ. ಇದರಿಂದಾಗಿ ಯುವ ಆಟಗಾರ ಉಮ್ರಾನ್ ಮಲಿಕ್ ಸೇರ್ಪಡೆಗೆ ಮಾತುಕತೆ ನಡೆಯುತ್ತಿದೆ.
ಉಮ್ರಾನ್ ಮಲಿಕ್ ಭಾರತ ತಂಡದ ಅತ್ಯುತ್ತಮ ಬೌಲರ್ ಆಗಿದ್ದು ಅವರು ಗಂಟೆಗೆ 150+ ಕಿಮೀ ವೇಗದಲ್ಲಿ ಬೌಲಿಂಗ್ ಮಾಡಬಲ್ಲರು. ಆಸ್ಟ್ರೇಲಿಯದ ಪಿಚ್‌ಗಳಲ್ಲಿ ವೇಗಿ ಮತ್ತು ಬೌನ್ಸ್ ಉತ್ತಮವಾಗಿರುವುದರಿಂದ ಉಮ್ರಾನ್ ಮಲಿಕ್ ಅವರನ್ನು ಬಳಸಿಕೊಳ್ಳಬಹುದು. ಹಾಗಾಗಿ ಶಮಿ ಬದಲಿಗೆ ಉಮ್ರಾನ್ ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿದೆ.

ದಕ್ಷಿಣ ಆಫ್ರಿಕಾ ಟಿ20 ಸರಣಿಗೆ ಭಾರತ ತಂಡ:
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್-ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್-ಕೀಪರ್), ಆರ್. ಅಶ್ವಿನ್, ಯುಜವೇಂದ್ರ ಚಹಾಲ್, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಮೊಹಮ್ಮದ್. ಶಮಿ, ಹರ್ಷಲ್ ಪಟೇಲ್, ದೀಪಕ್ ಚಹಾರ್, ಜಸ್ಪ್ರೀತ್ ಬುಮ್ರಾ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications