ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಂ ಇಂಡಿಯಾ ವಿರುದ್ಧ ಆಸ್ಟ್ರೇಲಿಯಾ ಸೋಲಿಗೆ ಪ್ರಮುಖ ಕಾರಣ ತಿಳಿಸಿದ ಆ್ಯರೋನ್ ಫಿಂಚ್

Aaron finch

ಹೈದರಾಬಾದ್‌ನ ಉಪ್ಪಲ್ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಸ್ಮರಣೀಯ ಗೆಲುವು ಸಾಧಿಸಿದೆ. ಭಾರತವು ಆಸೀಸ್ ವಿರುದ್ಧ 2-1 ಅಂತರದಿಂದ ಸರಣಿಯನ್ನು ಗೆದ್ದುಕೊಂಡಿತು. ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌ನಂತಹ ಬಲಿಷ್ಟ ತಂಡವನ್ನು ಸೋಲಿಸುವುದು ಭಾರತ ತಂಡದ ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸುವುದು ಖಚಿತ.

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು 186 ರನ್‌ಗಳಿಗೆ ಕಟ್ಟಿಹಾಕಿತು. ಆಸ್ಟ್ರೇಲಿಯಾ ಪರ ಕ್ಯಾಮರೂನ್ ಗ್ರೀನ್ ಅಬ್ಬರ (21 ಎಸೆತ, 52 ರನ್) ಹಾಗೂ ಕೊನೆಯಲ್ಲಿ ಟಿಮ್ ಡೇವಿಡ್ ಸ್ಪೋಟಕ ಬ್ಯಾಟಿಂಗ್ (27 ಎಸೆತ, 54 ರನ್) ಜೊತೆಗೆ ಡೇನಿಯಲ್ ಸ್ಯಾಮ್‌ 28 ರನ್‌ಗಳ ಕೊಡುಗೆಯಿಂದ ಆಸಿಸ್ 7 ವಿಕೆಟ್ ಕಳೆದುಕೊಂಡು 186ರನ್ ಕಲೆಹಾಕಿತು.

ಹೀಗೆ ಆಸ್ಟ್ರೇಲಿಯಾ ನೀಡಿದ್ದ 187 ರನ್ ಗಳ ಬೃಹತ್ ಗುರಿಯೊಂದಿಗೆ ಕಣಕ್ಕೆ ಇಳಿದ ಭಾರತ 19.5 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಕಿಂಗ್ ಕೊಹ್ಲಿ 33ನೇ ಟಿ20 ಅರ್ಧಶತಕ ದಾಖಲಿಸುವುದರ ಜೊತೆಗೆ ಸೂರ್ಯಕುಮಾರ್ ಅಬ್ಬರದಿಂದಾಗಿ ಭಾರತ ಗೆಲುವಿನ ಗುರಿ ತಲುಪಿತು.

ಭಾರತದ ಮಿಸ್ಟರ್ 360 ಸೂರ್ಯಕುಮಾರ್ ಯಾದವ್

ಭಾರತದ ಮಿಸ್ಟರ್ 360 ಸೂರ್ಯಕುಮಾರ್ ಯಾದವ್

ಹೌದು, ಟೀಂ ಇಂಡಿಯಾದ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ 36 ಎಸೆತಗಳಲ್ಲಿ 69 ರನ್ ಚಚ್ಚಿದರು. ಇವರ ಇನ್ನಿಂಗ್ಸ್ 5 ಬೌಂಡರಿ ಜೊತೆಗೆ ಭರ್ಜರಿ ಸಿಕ್ಸರ್ ಕೂಡ ಒಳಗೊಂಡಿತ್ತು. ಸೂರ್ಯ ಜೊತೆಗೆ ಅಮೋಘ ಇನ್ನಿಂಗ್ಸ್ ಆಡಿದ ವಿರಾಟ್ ಕೊಹ್ಲಿ 48 ಎಸೆತಗಳಲ್ಲಿ 63 ರನ್ ಸಿಡಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ 4 ಸಿಕ್ಸರ್ ಕೂಡ ಒಳಗೊಂಡಿತ್ತು.

ಸೂರ್ಯಕುಮಾರ್ ಔಟಾದ ಬಳಿಕ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ 25ರನ್ ಕಲೆಹಾಕಿ ನಿರ್ಣಾಯಕ ಇನ್ನಿಂಗ್ಸ್‌ ಆಡಿದರು. ಭಾರತ ಒಂದು ಎಸೆತ ಬಾಕಿ ಇರುವಂತೆ ಗೆಲುವಿನ ದಡ ತಲುಪಿತು. ಮತ್ತೊಂದೆಡೆ ಪಂದ್ಯದ ನಂತರ ಆಸೀಸ್ ನಾಯಕ ಆ್ಯರೋನ್ ಫಿಂಚ್ ತಮ್ಮ ಸೋಲಿಗೆ ಕಾರಣಗಳನ್ನು ವಿಶ್ಲೇಷಿಸಿದ್ದಾರೆ.

Ind Vs Aus T20: ರಾಹುಲ್ ದ್ರಾವಿಡ್ ದಾಖಲೆಯನ್ನು ಮುರಿದ ವಿರಾಟ್ ಕೊಹ್ಲಿ

ಒಂದು ಹಂತದಲ್ಲಿ ಗೆಲುವು ನಮ್ಮದಾಗಿತ್ತು!

ಒಂದು ಹಂತದಲ್ಲಿ ಗೆಲುವು ನಮ್ಮದಾಗಿತ್ತು!

ಪಂದ್ಯದ ನಂತರ ಸಮಾರೋಪ ಸಮಯದಲ್ಲಿ ಮಾತನಾಡಿದ ಆ್ಯರೋನ್ ಫಿಂಚ್, ''ಇದು ನಿಜವಾಗಿಯೂ ಉತ್ತಮ ಸರಣಿಯಾಗಿದೆ. ಪಂದ್ಯದ ಒಂದು ಹಂತದಲ್ಲಿ ಹಿಂದೆ ಹೋದ ನಂತರ ನಾವು ಹೋರಾಡಿದ ರೀತಿ ಅದ್ಭುತವಾಗಿತ್ತು. ಈ ಪಂದ್ಯದಲ್ಲಿ ಕ್ಯಾಮರೂನ್ ಗ್ರೀನ್ ಅವರಂತಹ ಯುವ ಆಟಗಾರನ ಪ್ರಭಾವವನ್ನು ನಾವು ನೋಡಿದ್ದೇವೆ. ಆದರೆ ಇನ್ನೆರಡು ಮೂರು ವಿಕೆಟ್ ಕಬಳಿಸಬೇಕಿತ್ತು ಎಂಬುದೇ ನಮ್ಮ ಸೋಲಿಗೆ ಕಾರಣ. ಚೆಂಡುಗಳನ್ನು ಡಾಟ್ ಮಾಡುವ ಮೂಲಕ ನೀವು ಭಾರತದಂತಹ ತಂಡದ ವಿರುದ್ಧ ಗೆಲ್ಲಲು ಸಾಧ್ಯವಿಲ್ಲ. ವಿಕೆಟ್ ಕಬಳಿಸುವ ಮೂಲಕ ಮಾತ್ರ ಗೆಲುವು ಸಾಧ್ಯ'' ಎಂದರು.

Ind vs Aus T20: ಟೀಂ ಇಂಡಿಯಾ ಗೆದ್ದ ನಂತರ ಒಟ್ಟಿಗೆ ಸಂಭ್ರಮಿಸಿದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ

ವಿಕೆಟ್ ಪಡೆಯುವಲ್ಲಿ ವಿಫಲರಾದೆವು!

ವಿಕೆಟ್ ಪಡೆಯುವಲ್ಲಿ ವಿಫಲರಾದೆವು!

''ವಿಕೆಟ್ ಪಡೆಯದಿರುವುದು ನಮಗೆ ನೋವು ತಂದಿದೆ. ಏಕೆಂದರೆ ಭಾರತ ವಿಶ್ವ ದರ್ಜೆಯ ತಂಡವಾಗಿದೆ. ಒಂದಿಬ್ಬರು ಬ್ಯಾಟ್ಸ್‌ಮನ್‌ಗಳು ಕೊನೆಯ ಹಂತ ತಲುಪಿದರೂ ಆ ತಂಡದ ಗೆಲುವು ನಿಶ್ಚಿತ. ಬ್ಯಾಟಿಂಗ್ ಸಮಯದಲ್ಲಿ ನಾವು ಸ್ವಲ್ಪ ಸೋಮಾರಿತನವನ್ನು ತೋರಿಸಿದ್ದೇವೆ. ಫೀಲ್ಡಿಂಗ್ ವಿಷಯದಲ್ಲಿ ಕೊಂಚ ಸೋಮಾರಿತನ ತೋರಿದ್ದೇವೆ. ಆದರೆ, ಭಾರತದಂತಹ ವಿಶ್ವದರ್ಜೆಯ ತಂಡದ ವಿರುದ್ಧ ಇಂತಹ ಬಿಗಿಯಾದ ಸರಣಿ ಆಡುವುದರಿಂದ ನಮ್ಮ ಆಟಗಾರರಿಗೆ ಉತ್ತಮ ಅಭ್ಯಾಸ ಸಿಗಲಿದೆ. ಗ್ರೀನ್ ತನ್ನ ಅಲ್ಟ್ರಾ-ಆಕ್ರಮಣಕಾರಿ ವಿಧಾನದೊಂದಿಗೆ ಆಟವನ್ನು ತೆಗೆದುಕೊಂಡ ರೀತಿಯಲ್ಲಿ ನಾನು ವಿಶೇಷವಾಗಿ ಸಂತಸಗೊಂಡಿದ್ದೇನೆ'' ಎಂದು ಫಿಂಚ್ ಕ್ಯಾಮರೂನ್ ಗ್ರೀನ್‌ರನ್ನ ಕೊಂಡಾಡಿದ್ದಾರೆ.

ದೀಪ್ತಿ ಶರ್ಮಾ ರನ್ ಔಟ್ ವಿವಾದ: MCCಯಿಂದ ಹೊರಬಿತ್ತು ಮಹತ್ವದ ಹೇಳಿಕೆ; ಇಂಗ್ಲೆಂಡ್‌ಗೆ ಮುಖಭಂಗ

ಸರಣಿ ಸೋತರು ಆಸಿಸ್ ಕ್ಯಾಮರೂನ್ ಗ್ರೀನ್, ಟಿಮ್ ಡೇವಿಡ್ ಸಂಪಾದಿಸಿದೆ!

ಸರಣಿ ಸೋತರು ಆಸಿಸ್ ಕ್ಯಾಮರೂನ್ ಗ್ರೀನ್, ಟಿಮ್ ಡೇವಿಡ್ ಸಂಪಾದಿಸಿದೆ!

ಈ ಪಂದ್ಯದಲ್ಲಿ ಆಸೀಸ್ ಯುವ ಬ್ಯಾಟ್ಸ್ ಮನ್ ಗಳಾದ ಕ್ಯಾಮರೂನ್ ಗ್ರೀನ್ (21 ಎಸೆತ, 7 ಬೌಂಡರಿ, 3 ಸಿಕ್ಸರ್ 52 ರನ್) ಹಾಗೂ ಟಿಮ್ ಡೇವಿಡ್ (27 ಎಸೆತ, 2 ಬೌಂಡರಿ, 4 ಸಿಕ್ಸರ್ 54) ಅರ್ಧಶತಕ ಗಳಿಸಿದರು. ಡೇನಿಯಲ್ ಸಾಮ್ಸ್ (20 ಎಸೆತಗಳಲ್ಲಿ 28 ರನ್, 1 ಬೌಂಡರಿ, 2 ಸಿಕ್ಸರ್) ಟಿಮ್ ಡೇವಿಡ್ ಜೊತೆಗೂಡಿ ಕೊನೆಯಲ್ಲಿ ಉತ್ತಮ ಕೊಡುಗೆ ನೀಡಿದರು. ಹೀಗಾಗಿ ಆಸಿಸ್ ಸರಣಿ ಸೋತರು ಇಬ್ಬರು ಸ್ಫೋಟಕ ಆಟಗಾರರನ್ನ ಸಂಪಾದಿಸಿದೆ.

ಇವರಿಬ್ಬರು 7ನೇ ವಿಕೆಟ್‌ಗೆ 68 ರನ್‌ಗಳ ಜೊತೆಯಾಟವಾಡಿದರು. ಆದರೆ ಈ ಪಂದ್ಯದಲ್ಲಿ ಅಗ್ರ ಆಟಗಾರರಾದ ಸ್ಮಿತ್, ಫಿಂಚ್, ಮ್ಯಾಕ್ಸಿ ಮತ್ತು ವೇಡ್ ವಿಫಲರಾಗಿ ಆಸೀಸ್ ಸ್ಕೋರ್ 186ಕ್ಕೆ ಸೀಮಿತವಾಯಿತು. ಇಲ್ಲದಿದ್ದರೆ ಸ್ಕೋರ್ ಸುಲಭವಾಗಿ 200 ದಾಟುತ್ತಿತ್ತು. ಅಕ್ಷರ್ ಪಟೇಲ್ ಸತತ ಮೂರು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಮೂರನೇ ಟಿ20ಯಲ್ಲಿ 4 ಓವರ್ ಗಳಲ್ಲಿ 3 ವಿಕೆಟ್ ಪಡೆದು 22 ರನ್ ಮಾತ್ರ ನೀಡಿದರು.

Story first published: Monday, September 26, 2022, 19:17 [IST]
Other articles published on Sep 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X