ರಿಷಭ್ ಪಂತ್ ಟಿ20 ವಿಶ್ವಕಪ್ ತಂಡದ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುವುದು ಅನುಮಾನ: ವಾಸಿಂ ಜಾಫರ್

ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಟಿ20 ಸರಣಿಯು 2-2ರಲ್ಲಿ ಸಮಬಲಗೊಂಡು ಅಂತ್ಯಗೊಂಡಿದೆ. ಅಂತಿಮ ಪಂದ್ಯವು ಮಳೆಯಿಂದಾಗಿ ಯಾವುದೇ ಫಲಿತಾಂಶವಿಲ್ಲದೆ ಕೊನೆಗೊಂಡಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಈ ಸರಣಿಯ ವಿಶೇಷ ಅಂದ್ರೆ ದಿನೇಶ್ ಕಾರ್ತಿಕ್ ಫಿನಿಷಿಂಗ್ ಮೂಲಕ ಅಬ್ಬರಿಸಿದ್ದಾರೆ.
ಈ ಸರಣಿಯಲ್ಲಿ ಬೇಸರದ ಸಂಗತಿಯೆಂದರೆ ನಾಯಕ ರಿಷಬ್ ಪಂತ್ ಕಳಪೆ ಫಾರ್ಮ್ ತೋರಿಸುತ್ತಿದ್ದಾರೆ. ಬ್ಯಾಟಿಂಗ್ ಕ್ರಮಾಂಕದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರು ಇಲ್ಲದೆ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯನ್ನು ಆಡಿತು. ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಗಾಯದ ಕಾರಣ ಸರಣಿಯಿಂದ ಹೊರಗುಳಿದರು.

ರಿಷಭ್ ಪಂತ್ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡುವುದು ಅನುಮಾನ!
ಈ ವರ್ಷದ ಅಕ್ಟೋಬರ್-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ, ರೋಹಿತ್, ಸೂರ್ಯಕುಮಾರ್ , ಬುಮ್ರಾ ಈ ನಾಲ್ವರು ಆಟಗಾರರು ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾರ್ದಿಕ್ ಪಾಂಡ್ಯ ಮತ್ತು ದಿನೇಶ್ ಕಾರ್ತಿಕ್ ಕೂಡ ತಮ್ಮ ಇತ್ತೀಚಿನ ಪ್ರದರ್ಶನಗಳಿಂದ ಪ್ರಭಾವಿತರಾಗಿದ್ದಾರೆ.
ಹೀಗಾಗಿ ಈ ಆಟಗಾರರೆಲ್ಲ ಐಸಿಸಿ 11 ನೇ ಟಿ20 ವಿಶ್ವಕಪ್ ತಂಡದಲ್ಲಿ ಆಡುವ ಸಾಧ್ಯತೆಯಿದೆ. ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಅವರ ಪ್ರಕಾರ ಪ್ರಸ್ತುತ ನಾಯಕರಾಗಿರುವ ರಿಷಬ್ ಪಂತ್ ಅವರು ಪ್ಲೇಯಿಂಗ್ 11 ರಲ್ಲಿರುವುದು ಕಷ್ಟ ಎಂದು ಅಭಿಪ್ರಾಯಪಟ್ಟಿದ್ದಾರೆ.
Ind vs SA 5ನೇ ಟಿ20: ಮಳೆಗಾಹುತಿಯಾದ ನಿರ್ಣಾಯಕ ಪಂದ್ಯ; ಸರಣಿ ಸಮಬಲ

ದಿನೇಶ್ ಕಾರ್ತಿಕ್ ಕಡೆಗೆ ಹೆಚ್ಚಿದ ಒಲವು
ಮುಂದಿನ ಟಿ20 ವಿಶ್ವಕಪ್ ತಂಡವನ್ನು ಆಯ್ಕೆ ಮಾಡಿದರೆ ಡಿಕೆ ಫೈನಲ್ ಆಡುವ 11ರಲ್ಲಿ ಖಂಡಿತಾ ಇರುತ್ತಾರೆ ಎಂದು ಜಾಫರ್ ಹೇಳಿದ್ದಾರೆ. ಅದರಲ್ಲಿ ಯಾವುದೇ ಸಂಶಯವಿಲ್ಲ. ಅವರು ಫಿಟ್ ಆಗಿದ್ದರೆ ಕೆಎಲ್ ರಾಹುಲ್ ಮತ್ತೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಆಡಲಿದ್ದಾರೆ. ಇವರೊಂದಿಗೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಕೂಡ ಆಡುವ 11ರಲ್ಲಿ ಇರಲಿದ್ದಾರೆ. ಹಾಗಾಗಿ ರಿಷಬ್ ಪಂತ್ ಅಂತಿಮ ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟ ಎಂದು ನಾನು ಭಾವಿಸುತ್ತೇನೆ, "ಎಂದು ಜಾಫರ್ ಇಎಸ್‌ಪಿಎನ್‌ಕ್ರಿಕ್‌ಇನ್‌ಫೋಗೆ ತಿಳಿಸಿದರು.
ನನ್ನ ಪ್ರಕಾರ ದಿನೇಶ್ ಕಾರ್ತಿಕ್ ರಿಷಬ್ ಪಂತ್ ಅವರಿಗಿಂತ ಉತ್ತಮ ಎಂಬುದು ಅವರ ಫಾರ್ಮ್‌ನಿಂದ ಬಹಿರಂಗವಾಗಿದೆ. ಮುಂದೆ ಏನಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಸದ್ಯಕ್ಕೆ ರಿಷಬ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಇಬ್ಬರಲ್ಲಿ ಯಾರೆಂದು ಕೇಳಿದರೆ ಖಂಡಿತ ದಿನೇಶ್ ಕಾರ್ತಿಕ್ ಆಯ್ಕೆ ಮಾಡುತ್ತಾರೆ ಎಂದು ಜಾಫರ್ ಹೇಳಿದ್ದಾರೆ.
ರಿಷಭ್ ಪಂತ್ ನಾಯಕತ್ವದ ಕುರಿತು ಬೊಟ್ಟು ಮಾಡಿ ತೋರಿಸಿದ ಜಹೀರ್ ಖಾನ್

ಬ್ಯಾಟಿಂಗ್‌ನಲ್ಲಿ ಮುಗ್ಗರಿಸಿರುವ ರಿಷಭ್ ಪಂತ್
ರಿಷಭ್ ಪಂತ್ ಮೊದಲ ಪಂದ್ಯದಲ್ಲಿ ಮಿಂಚಿದ್ದರು. ಆದರೆ ಸರಣಿಯ ಮೊದಲ ಪಂದ್ಯದಲ್ಲಿ 16 ಎಸೆತಗಳಲ್ಲಿ 29 ರನ್ ಗಳಿಸಿದ ಬಳಿಕ ನಂತರದ ಮೂರು ಪಂದ್ಯಗಳಲ್ಲಿ 5, 6, 17ರನ್‌ಗಳಿಂದ ಪ್ರಭಾವಿತರಾಗಲಿಲ್ಲ. ಭಾನುವಾರ ಬೆಂಗಳೂರಿನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಒಂದು ಎಸೆತ ಎದುರಿಸಿ ಒಂದು ರನ್ ಕಲೆಹಾಕಿದ್ದು, ಮಳೆಯಿಂದಾಗಿ ಪಂದ್ಯ ರದ್ದಾಯಿತು. ಹೀಗಾಗಿ ಸರಣಿ 2-2ರಲ್ಲಿ ಸಮವಾಗಿ ಕೊನೆಗೊಂಡಿದೆ.
ಆದ್ರೆ ಇಡೀ ಸರಣಿಯಲ್ಲಿ ಕಳೆದ 4 ಪಂದ್ಯಗಳಲ್ಲಿ ಕೇವಲ 29, 5, 6, 17 ರನ್ ಗಳಿಸಿದ್ದಾರೆ. ಇದು ಟಿ20 ಸರಣಿಯಿಂದ ರಿಷಭ್ ಪಂತ್ ಅವರನ್ನು ತೆಗೆದುಹಾಕಬೇಕೆಂಬ ಕೂಗಿಗೆ ಕಾರಣವಾಗಿದೆ.

ರಿಷಭ್ ಪಂತ್ ಬೆಂಚ್ ಆಟಗಾರನಾಗಿ ಉಳಿಯಬಹುದು
ವಾಸಿಂ ಜಾಫರ್ ಪ್ರಕಾರ, ಟಿ 20 ವಿಶ್ವಕಪ್ ತಂಡದಲ್ಲಿ ರಿಷಬ್ ಪಂತ್ ಏಕೈಕ ಬೆಂಚ್ ಪ್ಲೇಯರ್ ಆಗಿರುತ್ತಾರೆ. ಟೀಂ ಇಂಡಿಯಾ ನಾಯಕನ ಪಟ್ಟ ಅಲಂಕರಿಸಿದ ಆಟಗಾರ ಬೆಂಚ್ ಪ್ಲೇಯರ್ ಆಗಲು ಹೊರಟಿರುವುದು ಅವರ ಆತ್ಮವಿಶ್ವಾಸಕ್ಕೆ ಕೊಂಚ ಪೆಟ್ಟು ಬೀಳಬಹುದು. ಹಾಗಾಗಿ ತಂಡದ ಮ್ಯಾನೇಜ್‌ಮೆಂಟ್ ಯಾವ ರೀತಿಯ ಆಯ್ಕೆಯನ್ನು ಮಾಡುತ್ತದೆ ಎಂಬುದು ಬಹಳ ಮುಖ್ಯ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications