ರಿಷಭ್ ಪಂತ್ ನಾಯಕತ್ವದ ಕುರಿತು ಬೊಟ್ಟು ಮಾಡಿ ತೋರಿಸಿದ ಜಹೀರ್ ಖಾನ್

ಟೀಂ ಇಂಡಿಯಾ ಮಾಜಿ ಆಟಗಾರ ಜಹೀರ್ ಖಾನ್, ರಿಷಭ್ ಪಂತ್ ನಾಯಕತ್ವದಲ್ಲಿ ಮಾಡಿದ ತಪ್ಪುಗಳ ಬಗ್ಗೆ ಮಾತನಾಡಿದ್ದಾರೆ. ಭಾರತ-ದಕ್ಷಿಣ ಆಫ್ರಿಕಾ ನಡುವಿನ ಐದನೇ ಟಿ20 ಪಂದ್ಯವು ರೋಚಕತೆ ಮೂಡಿಸಿದ್ದು, ಬೆಂಗಳೂರಿನಲ್ಲಿ ಭಾನುವಾರ ನಡೆಯಲಿರುವ ಪಂದ್ಯ ನಿರ್ಣಾಯಕವಾಗಿದೆ.
ಐದು ಪಂದ್ಯಗಳ ಟಿ20 ಸರಣಿಯಲ್ಲಿ ಅಚಾನಕ್ ನಾಯಕನಾಗಿ ತಂಡವನ್ನ ಎರಡು ಸೋಲು ಮತ್ತು ಎರಡು ಗೆಲುವಿನಲ್ಲಿ ಮುನ್ನಡೆಸಿರುವ ಪಂತ್ ನಾಯಕತ್ವದ ಜೊತೆಗೆ ಬ್ಯಾಟಿಂಗ್‌ನಲ್ಲೂ ಮುಗ್ಗರಿಸಿದ್ದಾರೆ. ಆದ್ರೆ ಅಂತಿಮ ಪಂದ್ಯದಲ್ಲಿ ರಿಷಭ್ ಉತ್ತಮ ಪ್ರದರ್ಶನ ನೀಡುವುದು ಅನಿವಾರ್ಯವಾಗಿದೆ.

ಭಾರತ ಎರಡು ಪಂದ್ಯ ಗೆದ್ದರೂ, ರಿಷಭ್ ಪಂತ್ ವಿರುದ್ಧ ನಿಲ್ಲದ ಟೀಕೆ
ಮೊದಲ 2 ಪಂದ್ಯಗಳಲ್ಲಿ ಸೋತಿದ್ದ ಭಾರತ ತಂಡ ಮುಂದಿನ 2 ಪಂದ್ಯಗಳಲ್ಲಿ ಭರ್ಜರಿ ತಿರುಗೇಟು ನೀಡಿದೆ. ಹೀಗಾಗಿ ರಿಷಭ್ ಪಂತ್ ವಿರುದ್ಧ ನಿರಂತರ ಟೀಕೆ ನಡೆಯುತ್ತಲೇ ಇದೆ. ಇದಕ್ಕೆ ಕಾರಣ ತಂಡದ ನಾಯಕ ರಿಷಬ್ ಪಂತ್‌ರ ಕೆಲವು ಎಡವಟ್ಟುಗಳು.
ಪ್ರಸಕ್ತ ಸರಣಿಯಲ್ಲಿ ರಿಷಬ್ ಪಂತ್ ಬ್ಯಾಟಿಂಗ್‌ನಲ್ಲಿ ಚೆನ್ನಾಗಿ ಆಡಿಲ್ಲ. ಜೊತೆಗೆ ಅಕ್ಷರ್ ಮತ್ತು ದಿನೇಶ್ ಕಾರ್ತಿಕ್ ಮೊದಲ 2 ಪಂದ್ಯಗಳಲ್ಲಿ ಅಗ್ರ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿಲ್ಲ. ಬೌಲರ್‌ಗಳು ಸರಿಯಾಗಿ ರೊಟೇಟ್ ಮಾಡಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು.
Ind vs SA 5th T20I: ಐದನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವ ದಕ್ಷಿಣ ಆಫ್ರಿಕಾ ತಂಡ, ನಾಯಕನೇ ಆಡೋದು ಡೌಟ್!

ರಿಷಭ್ ಪಂತ್ ಕುರಿತು ಜಹೀರ್ ಖಾನ್ ಬ್ಯಾಟಿಂಗ್
ರಿಷಭ್ ಪಂತ್ ಮಾಡಿರುವ ತಪ್ಪಿನ ಕುರಿತು ಮಾಜಿ ವೇಗಿ ಜಹೀರ್ ಮಾತನಾಡಿದ್ದಾರೆ. ಅದರಲ್ಲಿ ರಿಷಬ್ ಪಂತ್ ರನ್ ಹೊಡೆದಾಗ ಅಭಿಮಾನಿಗಳು ಅವರ ಬಗ್ಗೆ ಚೆನ್ನಾಗಿ ಮಾತನಾಡಿದ್ದಾರೆ. ರನ್ ಹೊಡೆಯದಿದ್ದರೂ ಕೂಡ ಮಾತನಾಡಿದ್ದಾರೆ. ನಾವು ಅವನಿಗೆ ಸ್ವಲ್ಪ ಸಮಯ ನೀಡಬೇಕು. ಏಕೆಂದರೆ ಅವರ ನಾಯಕತ್ವವೇ ಬೇರೆ ರೀತಿಯದ್ದು ಎಂದು ಜಹೀರ್ ಖಾನ್ ತಿಳಿಸಿದ್ದಾರೆ.
ಯಾವಾಗಲೂ ವೈಡ್ ಬಾಲ್ ಚೇಸ್ ಮಾಡಲು ಹೋಗಿ ಕ್ಯಾಚಿತ್ತು ಪೆವಿಲಿಯನ್ ಸೇರಿದ್ದೇ ಹೆಚ್ಚು. ಮೊದಲ ಮೂರು ಪಂದ್ಯಗಳಲ್ಲಿ ಎಂತಹ ತಪ್ಪುಗಳನ್ನು ಮಾಡಿದ್ದಾರೋ, ನಾಲ್ಕನೇ ಪಂದ್ಯದಲ್ಲೂ ಅದನ್ನೇ ಪುನರಾವರ್ತಿಸಿದ್ದಾರ. ಹಾಗಾಗಿ ಆತ ತಂತ್ರಗಳಿಗಿಂತ ಹೆಚ್ಚಾಗಿ ತನ್ನ ಪ್ರವೃತ್ತಿಯನ್ನು ಅನುಸರಿಸುತ್ತಾನೆ. ಇದಕ್ಕಾಗಿ ಅನೇಕ ಅಪಾಯಗಳನ್ನು ತೆಗೆದುಕೊಳ್ಳಲಾಗುತ್ತದೆ. ರಿಸ್ಕ್ ತೆಗೆದುಕೊಂಡಾಗಲೆಲ್ಲ ಪಂತ್ ಅದನ್ನು ಸರಿಪಡಿಸುವ ಪ್ಲಾನ್ ಮಾಡದೇ ಇರುವುದು ಅವರಿಗಿರುವ ಒಂದೇ ಸಮಸ್ಯೆ. ಅದನ್ನು ಸರಿಪಡಿಸಬೇಕಿದೆ ಎಂದು ಜಹೀರ್ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ 5ನೇ ಟಿ20 ಪಂದ್ಯ ಗೆಲ್ಲಲು, ಭಾರತ ಈ 2 ತಪ್ಪನ್ನು ಸರಿಪಡಿಸಿಕೊಳ್ಳಬೇಕು: ಆಕಾಶ್ ಚೋಪ್ರಾ

4 ಪಂದ್ಯಗಳಿಂದ ಗಳಿಸಿದ್ದು 57 ರನ್ ಮಾತ್ರ
ರಿಷಭ್ ಪಂತ್ ಬ್ಯಾಟಿಂಗ್ ಕೂಡ ಅತ್ಯಂತ ಕೆಟ್ಟದಾಗಿದೆ. ಕಳೆದ 4 ಪಂದ್ಯಗಳಲ್ಲಿ ಕೇವಲ 29, 5, 6, 17 ರನ್ ಗಳಿಸಿದ್ದಾರೆ. ಇದು ಟಿ20 ಸರಣಿಯಿಂದ ರಿಷಭ್ ಪಂತ್ ಅವರನ್ನು ತೆಗೆದುಹಾಕಬೇಕೆಂಬ ಕೂಗಿಗೆ ಕಾರಣವಾಗಿದೆ. ಹಾಗಾಗಿ ಇಂದಿನ ಪೈಪೋಟಿಯಲ್ಲಿ ಬೆಂಗಳೂರಿನಲ್ಲಿ ಪಂತ್ ಉತ್ತಮ ಪ್ರದರ್ಶನ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications