Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs WA XI 1st T20: ಟಾಸ್ ಗೆದ್ದ ಟೀಂ ಇಂಡಿಯಾ ಬ್ಯಾಟಿಂಗ್‌ ಆಯ್ಕೆ, ಪ್ಲೇಯಿಂಗ್ 11

India team

ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಕಾಂಗರೂ ನಾಡಿಗೆ ಕಾಲಿಟ್ಟಿರುವ ಟೀಂ ಇಂಡಿಯಾ, ವೆಸ್ಟ್ರನ್ ಆಸ್ಟ್ರೇಲಿಯಾ ಇಲೆವೆನ್ ವಿರುದ್ಧ ನಾಲ್ಕು ಟಿ20 ಅಭ್ಯಾಸ ಪಂದ್ಯಗಳನ್ನ ಆಡಲಿದ್ದು, ಪರ್ತ್‌ನಲ್ಲಿ ಇಂದು (ಸೋಮವಾರ) ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ.

ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಮತ್ತು ರಿಷಭ್ ಪಂತ್ ಓಪನಿಂಗ್ ಬ್ಯಾಟಿಂಗ್ ಮಾಡಲಿದ್ದು, ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ ಮತ್ತು ರವಿಚಂದ್ರನ್ ಅಶ್ವಿನ್‌ಗೆ ವಿಶ್ರಾಂತಿ ನೀಡಲಾಗಿದೆ. ಟಿ20 ವಿಶ್ವಕಪ್ ದೃಷ್ಟಿಯಿಂದ ಈ ಅಭ್ಯಾಸ ಪಂದ್ಯಗಳು ಟೀಂ ಇಂಡಿಯಾಗೆ ಬಹು ಮುಖ್ಯವಾಗಿದೆ.

ಮೂವರು ಆಲ್‌ರೌಂಡರ್ಸ್‌, ಇಬ್ಬರು ಬೌಲರ್‌ಗೆ ಸ್ಥಾನ

ಮೂವರು ಆಲ್‌ರೌಂಡರ್ಸ್‌, ಇಬ್ಬರು ಬೌಲರ್‌ಗೆ ಸ್ಥಾನ

ಟೀಂ ಇಂಡಿಯಾ ಮೊದಲ ಅಭ್ಯಾಸ ಪಂದ್ಯದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಮೂವರು ಆಲ್‌ರೌಂಡರ್‌ಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ನೀಡಲಾಗಿದೆ. ದಕ್ಷಿಣ ಆಫ್ರಿಕಾ ಏಕದಿನ ಸರಣಿಯಿಂದ ಹೊರಗುಳಿದಿದ್ದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಫಿಟ್ನೆಸ್ ಸಮಸ್ಯೆಯಿಂದಾಗಿ ತಂಡದ ಹೊರಬಿದ್ದಿದ್ದ ದೀಪಕ್ ಹೂಡಾ ಜೊತೆಗೆ ಭರ್ಜರಿ ಫಾರ್ಮ್‌ನಲ್ಲಿರುವ ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದಾರೆ.

ಇನ್ನು ಬೌಲರ್‌ಗಳ ಖೋಟಾದಲ್ಲಿ ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್ ಹಾಗೂ ಅರ್ಷ್‌ದೀಪ್ ಸಿಂಗ್‌ ಸ್ಥಾನ ಪಡೆದಿದ್ದು, ಸ್ಪಿನ್ನರ್ ಯುಜವೇಂದ್ರ ಚಹಾಲ್‌ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್ ಹಾಗೂ ಆ್ಯಶ್ಟನ್ ಟರ್ನರ್ ನಾಯಕತ್ವದ ವೆಸ್ಟ್ರನ್ ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್‌ ಅನ್ನು ಈ ಕೆಳಗೆ ಕಾಣಬಹುದು.

ಸಚಿನ್ ಮತ್ತು ದ್ರಾವಿಡ್‌ ದಾಖಲೆಯನ್ನ ಬ್ರೇಕ್ ಮಾಡಿದ ಶ್ರೇಯಸ್-ಕಿಶನ್ ಜೋಡಿ

ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್

ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್

ರೋಹಿತ್ ಶರ್ಮಾ (ನಾಯಕ), ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅರ್ಷ್‌ದೀಪ್ ಸಿಂಗ್, ಯುಜವೇಂದ್ರ ಚಹಾಲ್

ಬೆಂಚ್: ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ರವಿಚಂದ್ರನ್ ಅಶ್ವಿನ್

ಭಾರತ vs ದ. ಆಫ್ರಿಕಾ: ಟೀಮ್ ಇಂಡಿಯಾದ ಭರ್ಜರಿ ಚೇಸಿಂಗ್ ವೇಳೆ ಪುಡಿಪುಡಿಯಾದ 3 ದಾಖಲೆಗಳು

ವೆಸ್ಟ್ರನ್ ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್

ವೆಸ್ಟ್ರನ್ ಆಸ್ಟ್ರೇಲಿಯಾ ಪ್ಲೇಯಿಂಗ್ ಇಲೆವೆನ್

ಡಿ ಆರ್ಸಿ ಶಾರ್ಟ್, ಆರನ್ ಹಾರ್ಡಿ, ಕ್ಯಾಮರೂನ್ ಬ್ಯಾಂಕ್ರಾಫ್ಟ್(ವಿಕೆಟ್ ಕೀಪರ್), ಆಷ್ಟನ್ ಟರ್ನರ್(ನಾಯಕ), ಸ್ಯಾಮ್ ಫಾನ್ನಿಂಗ್, ಹ್ಯಾಮಿಶ್ ಮೆಕೆಂಜಿ, ಝೈ ರಿಚರ್ಡ್ಸನ್, ಆಂಡ್ರ್ಯೂ ಟೈ, ಜೇಸನ್ ಬೆಹ್ರೆಂಡಾರ್ಫ್, ಮ್ಯಾಥ್ಯೂ ಕೆಲ್ಲಿ, ನಿಕ್ ಹಾಬ್ಸನ್

Story first published: Monday, October 10, 2022, 16:40 [IST]
Other articles published on Oct 10, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+