Ind vs WI 1st T20: ಟೀಂ ಇಂಡಿಯಾಗೆ ಆರು ವಿಕೆಟ್‌ಗಳ ಭರ್ಜರಿ ಜಯ

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ರೋಹಿತ್ ಶರ್ಮಾ ಬಳಗ, ವಿಂಡೀಸ್ ನೀಡಿದ 158 ರನ್‌ಗಳ ಮೊತ್ತವನ್ನ ಇನ್ನೊಂದು ಓವರ್ ಬಾಕಿ ಇರುವಂತೆಯೇ ಬೆನ್ನತ್ತಿದೆ.

ಸ್ಫೋಟಕ ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ
ವೆಸ್ಟ್ ಇಂಡೀಸ್ ನೀಡಿದ 158 ರನ್‌ಗಳ ಗುರಿ ಬೆನ್ನತ್ತಿದ ಟೀಂ ಇಂಡಿಯಾ ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ನಾಯಕ ರೋಹಿತ್ ಶರ್ಮಾ ಮತ್ತು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಪವರ್‌ಪ್ಲೇ ಓವರ್‌ಗಳಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ರು.
ತನ್ನ ಫೇವರಿಟ್ ಫಿಚ್‌ಗಳಲ್ಲಿ ಒಂದಾದ ಈಡನ್ ಗಾರ್ಡನ್ ಮೈದಾನದಲ್ಲಿ ಬೌಂಡರಿ, ಸಿಕ್ಸರ್‌ಗಳ ಬೇಟೆಯಾಡಿದ ನಾಯಕ ರೋಹಿತ್ ಶರ್ಮಾ ಮಿಂಚಿನ ಆಟವಾಡುವ ಮೂಲಕ ಮಿಂಚಿದ್ರು. ಕೇವಲ 19 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಭರ್ಜರಿ ಸಿಕ್ಸರ್ ಸಿಡಿಸಿದ ರೋಹಿತ್ ಪವರ್‌ಪ್ಲೇನಲ್ಲಿ ತಂಡದ ಮೊತ್ತವು 50ರ ಗಡಿದಾಟುವಲ್ಲಿ ಪ್ರಮುಖ ಕೊಡುಗೆ ನೀಡಿದ್ರು.

ರೋಹಿತ್ ಮಿಂಚು, ಕೊಹ್ಲಿ ಫ್ಲಾಪ್ ಶೋ
ಒಂದೆಡೆ ರೋಹಿತ್ ಮಿಂಚಿನ ಆಟವಾಡಿ ಪೆವಿಲಿಯನ್ ಸೇರಿಕೊಂಡ ಬಳಿಕ ಮಾಜಿ ನಾಯಕ ವಿರಾಟ್ ಕೊಹ್ಲಿ ತನ್ನ ಫ್ಲಾಪ್ ಶೋ ಮುಂದುವರಿಸಿದ್ರು. 13 ಎಸೆತಗಳಲ್ಲಿ 17 ರನ್‌ಗೆ ವಿಕೆಟ್ ಒಪ್ಪಿಸಿದ ಕೊಹ್ಲಿ ಮತ್ತೊಮ್ಮೆ ನಿರಾಸೆ ಮೂಡಿಸಿದ್ರು. ಇದಕ್ಕೂ ಮೊದಲು ಉತ್ತಮವಾಗಿ ಆಡ್ತಿದ್ದ ಇಶನ್ ಕಿಶನ್ 35 ರನ್‌ಗೆ ಸ್ಪಿನ್ನರ್ ರೋಸ್ಟನ್ ಚೇಸ್‌ಗೆ ವಿಕೆಟ್ ಒಪ್ಪಿಸಿದ್ರು.
ರಿಷಭ್ ಪಂತ್ ಜವಾಬ್ದಾರಿಯುತ ಆಟವಾಡುವಲ್ಲಿ ವಿಫಲಗೊಂಡ ಪರಿಣಾಮ ಕೇವಲ 8 ರನ್‌ಗೆ ಇನ್ನಿಂಗ್ಸ್ ಮುಗಿಸಿದ್ರು. ಕೊನೆಯಲ್ಲಿ ಸೂರ್ಯಕುಮಾರ್ ಯಾದವ್ ಅಜೇಯ 34 ರನ್, ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಅಜೇಯ 24 ರನ್ ಕಲೆಹಾಕುವ ಮೂಲಕ ತಂಡಕ್ಕೆ ಗೆಲುವಿನ ಮಾಲೆ ತೊಡಿಸಿದ್ರು. ಸೂರ್ಯಕುಮಾರ್ ಇನ್ನಿಂಗ್ಸ್‌ನಲ್ಲಿ ಐದು ಸೊಗಸಾದ ಬೌಂಡರಿ ಮತ್ತು ಒಂದು ಸಿಕ್ಸರ್ ಒಳಗೊಂಡಿತು. ಅಯ್ಯರ್ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿದ್ರು.

ಉತ್ತಮ ಆರಂಭ ಪಡೆಯುವಲ್ಲಿ ವಿಂಡೀಸ್ ವಿಫಲ
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್, ಭಾರತದ ರೀತಿಯಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಭುವನೇಶ್ವರ್ ಕುಮಾರ್ ಬೌಲಿಂಗ್‌ನ ಮೊದಲ ಓವರ್‌ನ ಐದನೇ ಎಸೆತದಲ್ಲೇ ಓಪನಿಂಗ್ ಬ್ಯಾಟ್ಸ್‌ಮನ್ ಬ್ರಾಂಡನ್ ಕಿಂಗ್ ಕೇವಲ 4ರನ್‌ಗೆ ಸೂರ್ಯಕುಮಾರ್ ಯಾದವ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು.
ಆದ್ರೆ ಎರಡನೇ ವಿಕೆಟ್‌ಗೆ ಜೊತೆಯಾದ ಕೈಲ್ ಮೇಯರ್ಸ್ ಮತ್ತು ವಿಕೆಟ್ ಕೀಪರ್ ನಿಕೋಲಸ್ ಪೂರನ್ ಆರಂಭಿಕ ಒತ್ತಡವನ್ನ ಮೆಟ್ಟಿ ನಿಂತರು. ಟೀಂ ಇಂಡಿಯಾ ಬೌಲರ್‌ಗಳಿಗೆ ಸಮರ್ಪಕವಾಗಿ ಉತ್ತರ ನೀಡುವ ಮೂಲಕ ಅರ್ಧಶತಕದ ಜೊತೆಯಾಟಕ್ಕೆ ಸಾಕ್ಷಿಯಾದ್ರು.

ಚಹಾಲ್ -ಬಿಷ್ಣೋಯಿ ಸ್ಪಿನ್ ಮೋಡಿ
ಒಂದು ಹಂತದಲ್ಲಿ ಈ ಜೋಡಿ ಅಪಾಯಕಾರಿ ಆಗಿ ಗುರುತಿಸಿಕೊಂಡ ವೇಳೆಯಲ್ಲಿ ಭಾರತ ಸಿಕ್ಕ ಅವಕಾಶ ಕೈ ಚೆಲ್ಲಿತು. ಯುಜವೇಂದ್ರ ಚಹಾಲ್‌ರ ಮೊದಲ ಓವರ್‌ನ ಮೊದಲ ಎಸೆತದಲ್ಲೇ ನಿಕೋಲಸ್ ಪೂರನ್ ಸಿಕ್ಸರ್ ಸಿಡಿಸುವ ಪ್ರಯತ್ನ ನಡೆಸಿದ್ರು. ಈ ವೇಳೆ ಬೌಂಡರಿ ಲೈನ್ ಬಳಿಕ ಚೊಚ್ಚಲ ಪಂದ್ಯವನ್ನಾಡುತ್ತಿರುವ ಕ್ಯಾಚ್ ಹಿಡಿದಿದ್ರೂ ಸಹ ಬೌಂಡರಿ ಲೈನ್ ತುಳಿಯುವ ಮೂಲಕ ವಿಕೆಟ್ ಕೈ ಚೆಲ್ಲಿದ್ರು.
ಆದ್ರೆ ಅದೇ ಓವರ್‌ನಲ್ಲೇ ಚಹಾಲ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು. 31 ರನ್‌ಗಳಿಸಿ ಉತ್ತಮವಾಗಿ ಆಡ್ತಿದ್ದ ಕೈಲ್ ಮೇಯರ್ಸ್ ಎಲ್‌ಬಿಡಬ್ಲ್ಯೂ ಬಲೆಗೆ ಬೀಳುವ ಮೂಲಕ ವಿಕೆಟ್ ಒಪ್ಪಿಸಿದ್ರು. ಒಂದೆಡೆ ನಿಕೋಲಸ್ ಉತ್ತಮ ಆಟವಾಡ್ತಿದ್ರೆ, ಭಾರತದ ಲೆಗ್ ಸ್ಪಿನ್ನರ್ಸ್ ದಾಳಿಗೆ ನಲುಗಿದ ವಿಂಡೀಸ್ ಒಂದೊಂದೇ ವಿಕೆಟ್ ಕೈ ಚೆಲ್ಲಿತು.

ಚೊಚ್ಚಲ ಪಂದ್ಯದಲ್ಲಿ ಎರಡು ವಿಕೆಟ್ ಕಬಳಿಸಿದ ರವಿ ಬಿಷ್ಣೋಯಿ
ರೋಸ್ಟನ್ ಚೇಸ್ ಕೇವಲ ನಾಲ್ಕು ರನ್‌ಗೆ ರವಿ ಬಿಷ್ಣೋಯಿಗೆ ಚೊಚ್ಚಲ ಅಂತರಾಷ್ಟ್ರೀಯ ವಿಕೆಟ್ ಆಗಿ ಬಲಿಯಾದ್ರೆ, ರೋವ್‌ಮನ್ ಪೊವೆಲ್ ಕೂಡ ಕೇವಲ ಎರಡು ರನ್‌ಗೆ ಬಿಷ್ಣೋಯಿಗೆ ವಿಕೆಟ್ ನೀಡಿದ್ರು. ಇದಾದ ಬಳಿಕ ಅಕೆಲ್ ಹೊಸೈನ್ ಆಟಕ್ಕೆ ದೀಪಕ್ ಚಹಾರ್ ಬ್ರೇಕ್ ಹಾಕಿದ್ರು.
12 ಎಸೆತಗಳಳ್ಲಿ 10 ರನ್‌ಗಳಿಸಿ ಆಡುತ್ತಿದ್ದ ಅಕೇಲ್ ಹೊಸೈನ್ ದೀಪಕ್ ಚಹಾರ್ ಎಸೆತವನ್ನ ಅಂದಾಜಿಸದೇ ಕಾಟನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡ್ರು. ಇದಾದ ಬಳಿಕ ವಿಂಡೀಸ್ ಪರ ತಂಡದ ಮೊತ್ತವನ್ನ 150ರ ಗಡಿದಾಟುವಲ್ಲಿ ನೆರವಾದ ನಿಕೋಲಸ್ ಪೂರನ್ ಹರ್ಷಲ್ ಪಟೇಲ್ ವಿಕೆಟ್ ಒಪ್ಪಿಸಿದ್ರು.
43 ಎಸೆತಗಳಲ್ಲಿ 61 ರನ್ ಸಿಡಿಸಿದ ಪೂರನ್ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಐದು ಭರ್ಜರಿ ಸಿಕ್ಸರ್‌ಗಳಿದ್ದವು. 141.86ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಎಡಗೈ ದಾಂಡಿಗ ವಿರಾಟ್ ಕೊಹ್ಲಿಗೆ ಕ್ಯಾಚಿತ್ತು ನಿರಾಸೆಯಿಂದ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ರು.

ನಡೆಯಲಿಲ್ಲ ಪೊಲಾರ್ಡ್-ಸ್ಮಿತ್ ಆಟ
ಏಕದಿನ ಸರಣಿಯಲ್ಲಿ ಕೆಳಕ್ರಮಾಂಕದಲ್ಲಿ ಅಬ್ಬರಿಸಿದ್ದ ಓಡಿಯನ್ ಸ್ಮಿತ್ ಆಟ ಕೂಡ ಹೆಚ್ಚು ಹೊತ್ತು ನಡೆಯಲಿಲ್ಲ. ಕೇವಲ ನಾಲ್ಕು ರನ್‌ಗೆ ಹರ್ಷಲ್ ಪಟೇಲ್ ಪೆವಿಲಿಯನ್ ಹಾದಿ ತೋರಿಸಿದ್ರು. ಇನ್ನು ಭಾರತದ ಪ್ರಬಲ ಬೌಲಿಂಗ್ ದಾಳಿ ನಡುವೆ ನಾಯಕ ಕಿರಾನ್ ಪೊಲಾರ್ಡ್ ಅಬ್ಬರದ ಆಟ ನಡೆಯಲಿಲ್ಲ. 19 ಎಸೆತಗಳಲ್ಲಿ ಅಜೇಯ 24 ರನ್ ದಾಖಲಿಸಿದ ಪೊಲಾರ್ಡ್ ಕೊನೆಯ ಓವರ್‌ನಲ್ಲಿ ಹರ್ಷಲ್ ಪಟೇಲ್ ಬೌಲಿಂಗ್‌ನಲ್ಲಿ ಬೌಂಡರಿ ಸಿಡಿಸಲು ಪರದಾಡಿದರು.
ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಓಡಿಯನ್ ಸ್ಮಿತ್ ವಿಕೆಟ್ ಒಪ್ಪಿಸುವ ಮೂಲಕ ವಿಂಡೀಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 157 ರನ್‌ಗಳಿಸಲಷ್ಟೇ ಶಕ್ತವಾಯಿತು. 158ರನ್‌ಗಳ ಗುರಿಯನ್ನ ಯಶಸ್ವಿಯಾಗಿ ಬೆನ್ನತ್ತಿದ ಭಾರತ 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications