Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯಿ

Ravi bishnoi
ಮಿಸ್ಟೇಕ್ ಮಾಡಿದ್ರೂ ಲೆಗ್ ಬ್ರೇಕ್ ಬೌಲಿಂಗ್ ಮಾಡಿ ವಿಂಡೀಸ್ ಗೆ ಬ್ರೇಕ್ ಹಾಕಿದ ಬಿಷ್ಣೋಯ್ | Oneindia Kannada

ಭಾರತದ ಯುವ ಲೆಗ್‌ ಸ್ಪಿನ್ನರ್‌ ರವಿ ಬಿಷ್ಣೋಯಿ ಟೀಂ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದಾರೆ. ಜೋಧ್‌ಪುರ ಮೂಲದ 21 ವರ್ಷದ ಬಲಗೈ ಲೆಗ್‌ ಸ್ಪಿನ್ನರ್ ರವಿ ಬಿಷ್ಣೋಯಿಗೆ ಬಿಸಿಸಿಐ, ಮತ್ತು ಐಸಿಸಿ ಶುಭ ಹಾರೈಸಿದೆ.

ಪೃಥ್ವಿ ಶಾ ನೇತೃತ್ವದಲ್ಲಿ 2018ರಲ್ಲಿ ಗೆಲುವು ಸಾಧಿಸಿದ ಭಾರತ ಅಂಡರ್-19 ವಿಶ್ವಕಪ್ ತಂಡದಲ್ಲಿ ಪ್ರಮುಖ ಬೌಲರ್ ಆಗಿದ್ದ ಬಿಷ್ಣೋಯಿ ಅಲ್ಲಿಂದ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಮನೋರಂಜನ್ ಕಾ ಬಾಪ್ ಐಪಿಎಲ್‌ನಲ್ಲಿ ರಾಜಸ್ತಾನ್ ರಾಯಲ್ಸ್ ತಂಡದ ಟ್ರಂಪ್‌ ಕಾರ್ಡ್‌ ಸ್ಪಿನ್ನರ್ ಆಗಿ ಕಣಕ್ಕಿಳಿದಿದ್ದ ಈತ 2020 ರಿಂದ 23 ಪಂದ್ಯಗಳಲ್ಲಿ 24 ವಿಕೆಟ್ ಕಬಳಿಸಿದ್ದಾನೆ.

6.92 ಎಕಾನಮಿಯಲ್ಲಿ ಬೌಲಿಂಗ್ ಮಾಡಿರುವ ಬಿಷ್ಣೋಯಿ ಟಿ20 ಕ್ರಿಕೆಟ್‌ನ ಬೆಸ್ಟ್ ಬೌಲಿಂಗ್ ಫಿಗರ್ 4/15 ಆಗಿದೆ. ಇದೀಗ ಟೀಂ ಇಂಡಿಯಾ ಪರ ಚೊಚ್ಚಲ ಪಂದ್ಯವನ್ನಾಡುತ್ತಿರುವ ಈ ಯುವ ಜೋಧ್‌ಪುರ ಸ್ಪಿನ್ನರ್ , ಹಿರಿಯ ಸ್ಪಿನ್ನರ್ ಯುಜವೇಂದ್ರ ಚಹಾಲ್ ರಿಂದ ಟೀಂ ಇಂಡಿಯಾ ಕ್ಯಾಪ್ ಅನ್ನು ಸ್ವೀಕರಿಸಿದ್ದಾರೆ.

ಲಿಸ್ಟ್ ಎ ಟಿ20 ಕ್ರಿಕೆಟ್‌ನಲ್ಲಿ 42 ಪಂದ್ಯಗಳನ್ನಾಡಿರುವ ಲೆಗ್ ಸ್ಪಿನ್ನರ್ 49 ವಿಕೆಟ್ ಕಬಳಿಸಿ ಭಾರತ ತಂಡದ ಕದ ತಟ್ಟಿದ್ದಾರೆ.

"ಇದೊಂದು ಅದ್ಭುತ ಪಯಣ. ಭಾರತದ ಜರ್ಸಿ ಧರಿಸುವುದಕ್ಕೆ ಗೌರವವಿದೆ. ಇದೊಂದು ನನಗೆ ಹೆಮ್ಮೆಯ ಕ್ಷಣವಾಗಿದೆ ಮತ್ತು ಕನಸು ನನಸಾಗುವುದನ್ನು ನೋಡಲು ತುಂಬಾ ಸಂತೋಷವಾಗಿದೆ. ನನ್ನ ಅವಕಾಶಕ್ಕಾಗಿ ನಾನು ಕಾಯುತ್ತಿದ್ದೆ. ದೊಡ್ಡ ಟೂರ್ನಮೆಂಟ್​​ಗೆ ನನ್ನನ್ನು ನಾನು ಸಜ್ಜು ಮಾಡಿಕೊಳ್ಳುತ್ತಿದ್ದೆ. ನನಗೆ ಯಾವುದೇ ಅವಕಾಶ ಸಿಕ್ಕರೂ ಅಲ್ಲಿ ಶೇ. 100 ರಷ್ಟು ಪ್ರಯತ್ನ ಪಡುತ್ತೇನೆ '' ಎಂದು ಬಿಷ್ಟೋಯಿ ಹೇಳಿದ್ದಾರೆ.

ಭಾರತ ಪರ ಇಬ್ಬರು ಸ್ಪಿನ್ನರ್‌ಗಳು ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದಿದ್ರೆ, ವಿಂಡೀಸ್ ಪರ ಜೇಸನ್‌ ಹೋಲ್ಡ್‌ನ್ ಅಭ್ಯಾಸದ ವೇಳೆ ಗಾಯಗೊಂಡ ಪರಿಣಾಮ ರೋಸ್ಟನ್ ಚೇಸ್ ಅವಕಾಶವನ್ನು ಪಡೆದಿದ್ದಾರೆ.

ಟೀಂ ಇಂಡಿಯಾ ಪ್ಲೇಯಿಂಗ್ 11
ಇಶಾನ್ ಕಿಶನ್, ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್ (ವಿಕೆಟ್ ಕೀಪರ್), ವೆಂಕಟೇಶ್ ಅಯ್ಯರ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ರವಿ ಬಿಷ್ಣೋಯ್, ಯುಜವೇಂದ್ರ ಚಹಾಲ್

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11
ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೋವ್‌ಮನ್ ಪೊವೆಲ್, ಕೀರಾನ್ ಪೊಲಾರ್ಡ್ (ನಾಯಕ), ರೋಸ್ಟನ್ ಚೇಸ್, ರೊಮಾರಿಯೊ ಶೆಫರ್ಡ್, ಅಕೆಲ್ ಹೊಸೈನ್, ಓಡಿಯನ್ ಸ್ಮಿತ್, ಫ್ಯಾಬಿಯನ್ ಅಲೆನ್, ಶೆಲ್ಡನ್ ಕಾಟ್ರೆಲ್

Story first published: Thursday, February 17, 2022, 9:50 [IST]
Other articles published on Feb 17, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+