Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs WI 1st T20: ಮಿಂಚಿನ ಹೆಲಿಕಾಪ್ಟರ್ ಶಾಟ್ ಹೊಡೆದ ಸೂರ್ಯಕುಮಾರ್ ಯಾದವ್

Suryakumar yadav

ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ-ವೆಸ್ಟ್ ಇಂಡೀಸ್ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಬೃಹತ್ ಮೊತ್ತ ಕಲೆಹಾಕಿದೆ. ಟಾಸ್‌ ಸೋತು ಮೊದಲು ಬ್ಯಾಟಿಂಗ್ ಮಾಡಿದ ರೋಹಿತ್ ಶರ್ಮಾ ಭರ್ಜರಿ ಅರ್ಧಶತಕದ ಜೊತೆಗೆ ದಿನೇಶ್ ಕಾರ್ತಿಕ್ ಸ್ಪೆಷಲ್ ಇನ್ನಿಂಗ್ಸ್‌ನಿಂದಾಗಿ 190ರನ್ ಕಲೆಹಾಕಿತು.

ಟಾಸ್ ಗೆದ್ದು ಪ್ರವಾಸಿಗರನ್ನ ಬ್ಯಾಟಿಂಗ್‌ಗೆ ಆಹ್ವಾನಿಸಿದ ವಿಂಡೀಸ್ ತಂಡವು ಭಾರತೀಯ ಬ್ಯಾಟರ್‌ಗಳನ್ನ ಕಡಿಮೆ ಮೊತ್ತಕ್ಕೆ ಕಟ್ಟಿಹಾಕುವ ಲೆಕ್ಕಾಚಾರ ಹೊಂದಿತ್ತು. ಆದ್ರೆ ಓಪನಿಂಗ್‌ ಜೋಡಿಯಾಗಿ ಕಣಕ್ಕಿಳಿದ ನಾಯಕ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಉತ್ತಮ ಆರಂಭ ನೀಡಿದ್ರು.

ಟ್ರೇಡ್‌ಮಾರ್ಕ್ ಶಾಟ್ ಹೊಡೆತ ಸೂರ್ಯಕುಮಾರ್ ಯಾದವ್

ಟ್ರೇಡ್‌ಮಾರ್ಕ್ ಶಾಟ್ ಹೊಡೆತ ಸೂರ್ಯಕುಮಾರ್ ಯಾದವ್

ಅಲ್ಜಾರಿ ಜೋಸೆಫ್ ಬೌಲಿಂಗ್‌ನಲ್ಲಿ ಸೂರ್ಯಕುಮಾರ್ ಯಾದವ್‌ ತನ್ನ ಟ್ರೇಡ್‌ಮಾರ್ಕ್ ಶಾಟ್ ಹೊಡೆಯುವ ಮೂಲಕ ಅಭಿಮಾನಿಗಳನ್ನ ರಂಜಿಸಿದರು. ಮೊದಲ ಎರಡು ಓವರ್‌ಗಳಲ್ಲಿ 20 ರನ್ ಕಲೆಹಾಕಿದ್ದ ಟೀಂ ಇಂಡಿಯಾ ಪರ ಅಗ್ರೆಸ್ಸಿವ್ ಬ್ಯಾಟಿಂಗ್ ಮಾಡಿದ ಸೂರ್ಯಕುಮಾರ್ ಯಾದವ್‌ ಮಿಂಚಿನ ಆಟವಾಡಿದ್ರು.

ಮುಂಬೈ ಇಂಡಿಯನ್ಸ್‌ ಪರ ಚೊಚ್ಚಲ ಐಪಿಎಲ್ ಪಂದ್ಯದಲ್ಲಿ ಆರುವ ವಿಕೆಟ್ ಉರುಳಿಸಿದ್ದ ಅಲ್ಜಾರಿ ಜೋಸೆಫ್‌ಗೆ, ಸಹ ಆಟಗಾರ ಸೂರ್ಯಕುಮಾರ್‌ ಯಾದವ್ ಭರ್ಜರಿ ಸಿಕ್ಸರ್ ಸಿಡಿಸಿದರು. ಅಲ್ಜಾರಿಯ ಮೊದಲ ಎಸೆತದಲ್ಲೇ ಎರಡು ರನ್ ಕಲೆಹಾಕಿದ ಅಲ್ಜಾರಿ ಜೋಸೆಫ್, ಎರಡನೇ ಎಸೆತದಲ್ಲೇ ಲಾಂಗ್ ಲೆಗ್‌ ಕಡೆಗೆ ಭರ್ಜರಿ ಸಿಕ್ಸರ್ ಸಿಡಿಸಿದ್ರು.

ಕಾಮನ್‌ವೆಲ್ತ್‌ ಗೇಮ್ಸ್‌ 2022: ಭಾರತದ ಅತ್ಯಂತ ಕಿರಿಯ ಅಥ್ಲೀಟ್ ಅನಾಹತ್ ಸಿಂಗ್

ಹೆಲಿಕಾಪ್ಟರ್ ಶಾಟ್ ಹೊಡೆದ ಸೂರ್ಯ

ಅಲ್ಜಾರಿ ಜೋಸೆಫ್‌ನ ಎರಡನೇ ಎಸೆತದಲ್ಲಿಯೇ ಸೂರ್ಯಕುಮಾರ್ ಯಾದವ್ ಲಾಂಗ್ ಲೆಗ್‌ ಕಡೆಗೆ ಸೊಗಸಾದ ಹೆಲಿಕಾಪ್ಟರ್ ಶಾಟ್ ಹೊಡೆಯುವ ಮೂಲಕ ವೀಕ್ಷಕರನ್ನ ದಂಗು ಬಡಿಸಿದರು. ಸೂರ್ಯಕುಮಾರ್ ಹೊಡೆದ ಶಾಟ್ ನೋಡಿ ಕೇವಲ ಪ್ರೇಕ್ಷಕರಲ್ಲೇ ದಂಗಾಗಲಿಲ್ಲ, ಕಾಮೆಂಟೇಟರ್ಸ್‌ ಕೂಡ ಸೂರ್ಯನ ಆಟಕ್ಕೆ ಹೊಗಳಿಸಿದ್ರು.

ಸೂರ್ಯಕುಮಾರ್ ಹೆಲಿಕಾಪ್ಟರ್‌ ಶಾಟ್‌ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಾಕಷ್ಟು ವೈರಲ್ ಆಗಿದೆ.

190 ರನ್ ಕಲೆಹಾಕಿದ ಟೀಂ ಇಂಡಿಯಾ

190 ರನ್ ಕಲೆಹಾಕಿದ ಟೀಂ ಇಂಡಿಯಾ

ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರು ವಿಕೆಟ್ ನಷ್ಟಕ್ಕೆ 190 ರನ್ ಕಲೆಹಾಕಿತು. ಸೂರ್ಯಕುಮಾರ್ ಯಾದವ್ 15 ಎಸೆತಗಳಲ್ಲಿ 24ರನ್ ಕಲೆಹಾಕಿ ಔಟಾದ್ರು. ಇದ್ರ ಬೆನ್ನಲ್ಲೇ ಶ್ರೇಯಸ್ ಅಯ್ಯರ್ ನಂತರದ ಓವರ್‌ನಲ್ಲಿಯೇ ಒಬೆದ್ ಮೆಕಾಯ್‌ಗೆ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು.

ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ ಆಟ 14ರನ್‌ಗೆ ಕೊನೆಗೊಂಡ್ರೆ, ಹಾರ್ದಿಕ್ ಪಾಂಡ್ಯ 1ರನ್‌ಗೆ ಇನ್ನಿಂಗ್ಸ್‌ ಮುಗಿಸಿದ್ರು. ಒಂದೆಡೆ ಭರ್ಜರಿ ಆಟವಾಡಿದ ನಾಯಕ ರೋಹಿತ್ ಶರ್ಮಾ 44 ಎಸೆತಗಳಲ್ಲಿ 64ರನ್ ಸಿಡಿಸಿ ಜೇಸನ್ ಹೋಲ್ಡರ್‌ ಬೌಲಿಂಗ್‌ನಲ್ಲಿ ಔಟಾದ್ರು.

ರವೀಂದ್ರ ಜಡೇಜಾ ಆಟ 16ರನ್‌ಗೆ ಕೊನೆಗೊಂಡ ಬಳಿಕ ಅಬ್ಬರಿಸಿದ ದಿನೇಶ್ ಕಾರ್ತಿಕ್ ಅದ್ಭುತ ಆಟವಾಡುವ ಮೂಲಕ ತಂಡದ ಸ್ಕೋರ್ ಹೆಚ್ಚಿಸಿದ್ರು. 19 ಎಸೆತಗಳಲ್ಲಿ ಅಜೇಯ 41ರನ್ ಸಿಡಿಸಿದ ಕಾರ್ತಿಕ್ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್‌ ಒಳಗೊಂಡಿತ್ತು. ಅಶ್ವಿನ್ ಒಂದು ಸಿಕ್ಸರ್ ಸಹಿತ ಅಜೇಯ 13ರನ್ ಕಲೆಹಾಕಿದರು.

ಇದಕ್ಕುತ್ತರಾಗಿ ಬ್ಯಾಟಿಂಗ್ ಮಾಡಿದ ವಿಂಡೀಸ್ ಭಾರತದ ತ್ರಿವಳಿ ಸ್ಪಿನ್‌ ದಾಳಿಗೆ ತತ್ತರಿಸಿ ಹೋಯಿತು. ಮೊದಲ ಟಿ20 ಪಂದ್ಯದಲ್ಲಿ ಹಿನ್ನಡೆ ಅನುಭವಿಸಿತು.

ನಮ್ಮೂರ ಪ್ರತಿಭೆ: ಲಾಂಗ್ ಜಂಪ್, ಹೆಪ್ಟಾಥ್ಲಾನ್ ಚಾಂಪಿಯನ್ ಬೆಂಗಳೂರಿನ ರೀತ್ ಅಬ್ರಹಾಂ

Dinesh Karthik ಹೆಸರೇಳಿದ ಅಭಿಮಾನಿಗೆ ಹೊಡೆಯೋದಕ್ಕೆ ಫೀಲ್ಡಿಂಗ್ ಬಿಟ್ಟು ಆಚೆ ಬಂದ ಮರಳಿ ವಿಜಯ್ *Cricket |Oneindia
ಭಾರತ ಮತ್ತು ವೆಸ್ಟ್ ಇಂಡೀಸ್ ಪ್ಲೇಯಿಂಗ್ ಇಲೆವೆನ್

ಭಾರತ ಮತ್ತು ವೆಸ್ಟ್ ಇಂಡೀಸ್ ಪ್ಲೇಯಿಂಗ್ ಇಲೆವೆನ್

ವೆಸ್ಟ್ ಇಂಡೀಸ್ : ಶಮರ್ಹ್ ಬ್ರೂಕ್ಸ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ನಿಕೋಲಸ್ ಪೂರನ್ (ನಾಯಕ/ವಿಕೆಟ್ ಕೀಪರ್), ಕೈಲ್ ಮೇಯರ್ಸ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಓಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್, ಕೀಮೋ ಪಾಲ್


ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ರವಿ ಬಿಷ್ಣೋಯಿ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್

Story first published: Friday, July 29, 2022, 23:31 [IST]
Other articles published on Jul 29, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+