IND vs WI 1st T20: ಭಾರತದ ಗೆಲುವಿಗೆ 158 ರನ್‌ಗಳ ಗುರಿ

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಭಾರತ-ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ವಿಂಡೀಸ್ ಭಾರತಕ್ಕೆ 158 ರನ್‌ಗಳ ಟಾರ್ಗೆಟ್ ನೀಡಿದೆ.
ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಭಾರತ ಎದುರಾಳಿ ತಂಡಕ್ಕೆ ಮೊದಲ ಓವರ್‌ನಲ್ಲೇ ಆಘಾತ ನೀಡುವಲ್ಲಿ ಯಶಸ್ವಿಯಾಯಿತು. ಭುವನೇಶ್ವರ್ ಕುಮಾರ್ ಬೌಲಿಂಗ್‌ನಲ್ಲಿ ಐದನೇ ಎಸೆತದಲ್ಲೇ ಓಪನಿಂಗ್ ಬ್ಯಾಟ್ಸ್‌ಮನ್ ಬ್ರಾಂಡನ್ ಕಿಂಗ್ ಕೇವಲ 4ರನ್‌ಗೆ ಸೂರ್ಯಕುಮಾರ್ ಯಾದವ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡ್ರು.
ಆದ್ರೆ ಎರಡನೇ ವಿಕೆಟ್‌ಗೆ ಜೊತೆಯಾದ ಕೈಲ್ ಮೇಯರ್ಸ್ ಮತ್ತು ವಿಕೆಟ್ ಕೀಪರ್ ನಿಕೋಲಸ್ ಪೂರನ್ ಆರಂಭಿಕ ಒತ್ತಡವನ್ನ ಮೆಟ್ಟಿ ನಿಂತರು. ಟೀಂ ಇಂಡಿಯಾ ಬೌಲರ್‌ಗಳಿಗೆ ಸಮರ್ಪಕವಾಗಿ ಉತ್ತರ ನೀಡುವ ಮೂಲಕ ಅರ್ಧಶತಕದ ಜೊತೆಯಾಟಕ್ಕೆ ಸಾಕ್ಷಿಯಾದ್ರು.
ಒಂದು ಹಂತದಲ್ಲಿ ಈ ಜೋಡಿ ಅಪಾಯಕಾರಿ ಆಗಿ ಗುರುತಿಸಿಕೊಂಡ ವೇಳೆಯಲ್ಲಿ ಭಾರತ ಸಿಕ್ಕ ಅವಕಾಶ ಕೈ ಚೆಲ್ಲಿತು. ಯುಜವೇಂದ್ರ ಚಹಾಲ್‌ರ ಮೊದಲ ಓವರ್‌ನ ಮೊದಲ ಎಸೆತದಲ್ಲೇ ನಿಕೋಲಸ್ ಪೂರನ್ ಸಿಕ್ಸರ್ ಸಿಡಿಸುವ ಪ್ರಯತ್ನ ನಡೆಸಿದ್ರು. ಈ ವೇಳೆ ಬೌಂಡರಿ ಲೈನ್ ಬಳಿಕ ಚೊಚ್ಚಲ ಪಂದ್ಯವನ್ನಾಡುತ್ತಿರುವ ಕ್ಯಾಚ್ ಹಿಡಿದಿದ್ರೂ ಸಹ ಬೌಂಡರಿ ಲೈನ್ ತುಳಿಯುವ ಮೂಲಕ ವಿಕೆಟ್ ಕೈ ಚೆಲ್ಲಿದ್ರು.
ಆದ್ರೆ ಅದೇ ಓವರ್‌ನಲ್ಲೇ ಚಹಾಲ್ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು. 31 ರನ್‌ಗಳಿಸಿ ಉತ್ತಮವಾಗಿ ಆಡ್ತಿದ್ದ ಕೈಲ್ ಮೇಯರ್ಸ್ ಎಲ್‌ಬಿಡಬ್ಲ್ಯೂ ಬಲೆಗೆ ಬೀಳುವ ಮೂಲಕ ವಿಕೆಟ್ ಒಪ್ಪಿಸಿದ್ರು. ಒಂದೆಡೆ ನಿಕೋಲಸ್ ಉತ್ತಮ ಆಟವಾಡ್ತಿದ್ರೆ, ಭಾರತದ ಲೆಗ್ ಸ್ಪಿನ್ನರ್ಸ್ ದಾಳಿಗೆ ನಲುಗಿದ ವಿಂಡೀಸ್ ಒಂದೊಂದೇ ವಿಕೆಟ್ ಕೈ ಚೆಲ್ಲಿತು.
ರೋಸ್ಟನ್ ಚೇಸ್ ಕೇವಲ ನಾಲ್ಕು ರನ್‌ಗೆ ರವಿ ಬಿಷ್ಣೋಯಿಗೆ ಚೊಚ್ಚಲ ಅಂತರಾಷ್ಟ್ರೀಯ ವಿಕೆಟ್ ಆಗಿ ಬಲಿಯಾದ್ರೆ, ರೋವ್‌ಮನ್ ಪೊವೆಲ್ ಕೂಡ ಕೇವಲ ಎರಡು ರನ್‌ಗೆ ಬಿಷ್ಣೋಯಿಗೆ ವಿಕೆಟ್ ನೀಡಿದ್ರು. ಇದಾದ ಬಳಿಕ ಅಕೆಲ್ ಹೊಸೈನ್ ಆಟಕ್ಕೆ ದೀಪಕ್ ಚಹಾರ್ ಬ್ರೇಕ್ ಹಾಕಿದ್ರು.
12 ಎಸೆತಗಳಳ್ಲಿ 10 ರನ್‌ಗಳಿಸಿ ಆಡುತ್ತಿದ್ದ ಅಕೇಲ್ ಹೊಸೈನ್ ದೀಪಕ್ ಚಹಾರ್ ಎಸೆತವನ್ನ ಅಂದಾಜಿಸದೇ ಕಾಟನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡ್ರು. ಇದಾದ ಬಳಿಕ ವಿಂಡೀಸ್ ಪರ ತಂಡದ ಮೊತ್ತವನ್ನ 150ರ ಗಡಿದಾಟುವಲ್ಲಿ ನೆರವಾದ ನಿಕೋಲಸ್ ಪೂರನ್ ಹರ್ಷಲ್ ಪಟೇಲ್ ವಿಕೆಟ್ ಒಪ್ಪಿಸಿದ್ರು.
43 ಎಸೆತಗಳಲ್ಲಿ 61 ರನ್ ಸಿಡಿಸಿದ ಪೂರನ್ ಇನ್ನಿಂಗ್ಸ್‌ನಲ್ಲಿ ನಾಲ್ಕು ಬೌಂಡರಿ ಮತ್ತು ಐದು ಭರ್ಜರಿ ಸಿಕ್ಸರ್‌ಗಳಿದ್ದವು. 141.86ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಎಡಗೈ ದಾಂಡಿಗ ವಿರಾಟ್ ಕೊಹ್ಲಿಗೆ ಕ್ಯಾಚಿತ್ತು ನಿರಾಸೆಯಿಂದ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ರು.
ಏಕದಿನ ಸರಣಿಯಲ್ಲಿ ಕೆಳಕ್ರಮಾಂಕದಲ್ಲಿ ಅಬ್ಬರಿಸಿದ್ದ ಓಡಿಯನ್ ಸ್ಮಿತ್ ಆಟ ಕೂಡ ಹೆಚ್ಚು ಹೊತ್ತು ನಡೆಯಲಿಲ್ಲ. ಕೇವಲ ನಾಲ್ಕು ರನ್‌ಗೆ ಹರ್ಷಲ್ ಪಟೇಲ್ ಪೆವಿಲಿಯನ್ ಹಾದಿ ತೋರಿಸಿದ್ರು. ಇನ್ನು ಭಾರತದ ಪ್ರಬಲ ಬೌಲಿಂಗ್ ದಾಳಿ ನಡುವೆ ನಾಯಕ ಕಿರಾನ್ ಪೊಲಾರ್ಡ್ ಅಬ್ಬರದ ಆಟ ನಡೆಯಲಿಲ್ಲ. 19 ಎಸೆತಗಳಲ್ಲಿ ಅಜೇಯ 24 ರನ್ ದಾಖಲಿಸಿದ ಪೊಲಾರ್ಡ್ ಕೊನೆಯ ಓವರ್‌ನಲ್ಲಿ ಹರ್ಷಲ್ ಪಟೇಲ್ ಬೌಲಿಂಗ್‌ನಲ್ಲಿ ಬೌಂಡರಿ ಸಿಡಿಸಲು ಪರದಾಡಿದರು.
ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಓಡಿಯನ್ ಸ್ಮಿತ್ ವಿಕೆಟ್ ಒಪ್ಪಿಸುವ ಮೂಲಕ ವಿಂಡೀಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 157 ರನ್‌ಗಳಿಸಲಷ್ಟೇ ಶಕ್ತವಾಯಿತು. ಭಾರತದ ಗೆಲುವಿಗೆ 158ರನ್‌ಗಳ ಗುರಿ ನೀಡಿದೆ.
ಟೀಂ ಇಂಡಿಯಾ ಪರ ಹರ್ಷಲ್ ಪಟೇಲ್ ಹಾಗೂ ರವಿ ಬಿಷ್ಣೋಯಿ ತಲಾ 2 ವಿಕೆಟ್ ಪಡೆದ್ರೆ, ಭುವನೇಶ್ವರ್ ಕುಮಾರ್ , ದೀಫಕ್ ಚಹಾರ್ ಮತ್ತು ಯುಜವೇಂದ್ರ ಚಹಾಲ್ ತಲಾ 1 ವಿಕೆಟ್ ಪಡೆದ್ರು. ಫೀಲ್ಡಿಂಗ್ ವೇಳೆಯಲ್ಲಿ ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ ಮತ್ತು ದೀಪಕ್ ಚಹಾರ್ ಗಾಯಗೊಂಡು ಪೆವಿಲಿಯನ್ ಸೇರಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications