Ind vs WI 2nd ODI: ಪ್ರಿವ್ಯೂ, ಪ್ಲೇಯಿಂಗ್ 11, ಡ್ರೀಂ ಟೀಂ, ಪಿಚ್ ರಿಪೋರ್ಟ್

ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಎರಡನೇ ಏಕದಿನ ಪಂದ್ಯದಲ್ಲಿ ಮುಖಾಮುಖಿಗೆ ಸಜ್ಜಾಗಿದ್ದು, ಭಾನುವಾರ (ಜು. 24) ಟ್ರಿನಿಡಾಡ್‌ನ ಕ್ವೀನ್ ಪಾರ್ಕ್ ಓವಲ್ ಮೈದಾನದಲ್ಲಿ ಅಖಾಡಕ್ಕಿಳಿಯಲಿದೆ. ಈಗಾಗಲೇ ಮೊದಲ ಪಂದ್ಯದಲ್ಲಿ ಗೆದ್ದು ಭಾರತ 1-0 ಮುನ್ನಡೆ ಸಾಧಿಸಿರುವ ಪರಿಣಾಮ, ಆತಿಥೇಯ ವೆಸ್ಟ್ ಇಂಡೀಸ್ ಸರಣಿ ಜೀವಂತವಾಗಿರಿಸಲು ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮೂರು ರನ್‌ಗಳ ರೋಚಕ ಗೆಲುವು ಸಾಧಿಸಿತು. 308ರನ್ ಕಲೆಹಾಕಿದ ಟೀಂ ಇಂಡಿಯಾ ಪರ ನಾಯಕ ಶಿಖರ್ ಧವನ್ 97, ಶುಭಮನ್ ಗಿಲ್ 64, ಶ್ರೇಯಸ್ ಅಯ್ಯರ್ 54 ರನ್ ಕಲೆಹಾಕುವ ಮೂಲಕ ಮಿಂಚಿನ ಆಟವಾಡಿದರು. 309ರನ್‌ಗಳ ಗುರಿ ಬೆನ್ನತ್ತಿದ ವಿಂಡೀಸ್ ಕೊನೆಯ ಓವರ್‌ನಲ್ಲಿ 15ರನ್ ಕಲೆಹಾಕಲು ಸಾಧ್ಯವಾಗದೇ ಮೂರು ರನ್‌ಗಳಿಂದ ಸೋಲನ್ನ ಒಪ್ಪಿಕೊಂಡಿತು.
ಪಂದ್ಯವು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಪ್ರಾರಂಭವಾಗಲಿದ್ದು, ಡಿಡಿ ಸ್ಪೋರ್ಟ್ಸ್‌ನಲ್ಲಿ ನೇರ ಪ್ರಸಾರವನ್ನು ವೀಕ್ಷಿಸಬಹುದು.

ಪಿಚ್ ರಿಪೋರ್ಟ್ ಮತ್ತು ಹವಾಮಾನ
ಕ್ವೀನ್ಸ್ ಪಾರ್ಕ್ ಓವಲ್ ಮೈದಾನವು ಬ್ಯಾಟಿಂಗ್ ಸ್ನೇಹಿ ಪಿಚ್ ಆಗಿದ್ದು, ಮತ್ತೊಮ್ಮೆ ಬ್ಯಾಟರ್ಸ್ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. ಪಂದ್ಯದ ಅರ್ಧ ಅವಧಿಯ ಬಳಿಕ ಪೇಸರ್‌ಗಳಿಗೆ ಪಿಚ್ ನೆರವಾಗಲಿದ್ದು, ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಪ್ರಮುಖ ಪಾತ್ರವಹಿಸಲಿದ್ದಾರೆ.
ಇಲ್ಲಿನ ಹವಾಮಾನವು 28 ಡಿಗ್ರಿ ಸೆಲ್ಸಿಯಸ್‌ನಷ್ಟಿರಲಿದ್ದು, ಶೇಕಡಾ 77ರಷ್ಟು ಹ್ಯುಮಿಡಿಟಿ ಇರಲಿದೆ. ಗಾಳಿಯ ವೇಗ ಗಂಟೆಗೆ 13 km ವೇಗದಲ್ಲಿ ಬೀಸಲಿದೆ. ಮಳೆ ಬರುವ ಸಾಧ್ಯತೆಯು ಕಡಿಮೆಯಿದೆ. ಇನ್ನು ಈ ಪಿಚ್‌ನಲ್ಲಿ ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್ 290ರನ್‌ಗಳಷ್ಟಿದೆ.
ಇನ್ನು ಇಲ್ಲಿ ಎರಡನೇ ಬಾರಿಗೆ ಬ್ಯಾಟಿಂಗ್ ಮಾಡುವ ತಂಡಕ್ಕೆ ಹೆಚ್ಚಿನ ಅನುಕೂಲತೆಯಿದ್ದು, ಅಂಕಿ-ಅಂಶಗಳ ಪ್ರಕಾರ ಶೇಕಡಾ 60ರಷ್ಟು ಗೆಲುವಿನ ಸರಾಸರಿಯನ್ನ ಹೊಂದಿದೆ.

ಉಭಯ ತಂಡಗಳ ಪ್ಲೇಯಿಂಗ್ 11
ಭಾರತ: ಶಿಖರ್ ಧವನ್ (ನಾಯಕ), ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಯುಜ್ವೇಂದ್ರ ಚಾಹಲ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ
ವೆಸ್ಟ್ ಇಂಡೀಸ್: ಶಾಯ್ ಹೋಪ್ (ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಶಮರ್ ಬ್ರೂಕ್ಸ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ನಾಯಕ), ರೋವ್‌ಮನ್ ಪೊವೆಲ್, ಅಕೇಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಅಲ್ಜಾರಿ ಜೋಸೆಫ್, ಗುಡಕೇಶ್ ಮೋಟಿ, ಜೇಡನ್ ಸೀಲ್ಸ್
ಟೆಸ್ಟ್ ಕ್ರಿಕೆಟ್ ಗುಣಮಟ್ಟ ಉಳಿಸಿಕೊಳ್ಳಲು, ತಂಡಗಳ ಸಂಖ್ಯೆಯನ್ನ ತಗ್ಗಿಸಬೇಕು: ರವಿಶಾಸ್ತ್ರಿ

ಫ್ಯಾಂಟೆಸಿ ಡ್ರೀಂ ಟೀಂ
ಭಾರತ ಮತ್ತು ವೆಸ್ಟ್ ಇಂಡೀಸ್ ಎರಡನೇ ಏಕದಿನ ಪಂದ್ಯದಲ್ಲಿ ಫ್ಯಾಂಟೆಸಿ ಡ್ರೀಂ ಇಲೆವೆನ್ ಟೀಂ ಹಾಗೂ ನಾಯಕ ಮತ್ತು ಉಪನಾಯಕ ಸಲಹೆ ಈ ಕೆಳಗಿದೆ.
ಡ್ರೀಂ ಟೀಂ 1
ನಾಯಕ- ಶ್ರೇಯಸ್ ಅಯ್ಯರ್, ಯುಜುವೇಂದ್ರ ಚಾಹಲ್
ಉಪನಾಯಕ - ನಿಕೋಲಸ್ ಪೂರನ್, ಶಾಯ್ ಹೋಪ್
ಕೀಪರ್ - ಶಾಯ್ ಹೋಪ್
ಬ್ಯಾಟ್ಸ್‌ಮನ್‌ಗಳು - ಶಿಖರ್ ಧವನ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ (ನಾಯಕ), ನಿಕೋಲಸ್ ಪೂರನ್ (ಉಪನಾಯಕ)
ಆಲ್ ರೌಂಡರ್ಸ್ - ಕೈಲ್ ಮೇಯರ್ಸ್, ರೊಮಾರಿಯೋ ಶೆಫರ್ಡ್, ದೀಪಕ್ ಹೂಡಾ
ಬೌಲರ್‌ಗಳು - ಯುಜವೇಂದ್ರ ಚಹಾಲ್, ಶಾರ್ದೂಲ್ ಠಾಕೂರ್, ಅಲ್ಜಾರಿ ಜೋಸೆಫ್
ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದ್ದ 25 ವರ್ಷಗಳ ಹಳೆಯ ದಾಖಲೆ ಮುರಿದ ಶುಭಮನ್ ಗಿಲ್

ಡ್ರೀಂ ಟೀಂ 2
ಕೀಪರ್ - ಶಾಯ್ ಹೋಪ್ (ಉಪನಾಯಕ)
ಬ್ಯಾಟ್ಸ್‌ಮನ್‌ಗಳು - ಶಿಖರ್ ಧವನ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ನಿಕೋಲಸ್ ಪೂರನ್, ಸೂರ್ಯಕುಮಾರ್ ಯಾದವ್
ಆಲ್ ರೌಂಡರ್ಸ್ - ಕೈಲ್ ಮೇಯರ್ಸ್
ಬೌಲರ್‌ಗಳು - ಯುಜವೇಂದ್ರ ಚಹಾಲ್ (ನಾಯಕ), ಶಾರ್ದೂಲ್ ಠಾಕೂರ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಸಿರಾಜ್
ಶ್ರೇಯಸ್ ಅಯ್ಯರ್ ಉತ್ತಮ ನಾಯಕತ್ವದ ಆಯ್ಕೆಯಾಗಲಿದ್ದಾರೆ. ಯುಜುವೇಂದ್ರ ಚಹಾಲ್ ಗ್ರ್ಯಾಂಡ್ ಲೀಗ್‌ಗಳಿಗೆ ಉತ್ತಮ ಆಯ್ಕೆಗಳಲ್ಲಿ ಒಬ್ಬರಾಗಿದ್ದು, ಸೂರ್ಯಕುಮಾರ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಇಲ್ಲಿ ಪ್ರಮುಖ ಆಯ್ಕೆ ಆಗಿದ್ದಾರೆ. ಈ ಆಟಕ್ಕೆ ಅತ್ಯುತ್ತಮವಾಗಿ ಸೂಚಿಸಲಾದ ಫ್ಯಾಂಟಸಿ/Dream11 ಸಂಯೋಜನೆಯು 1-4-3-3 ಆಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications